KSRTCಯ ಈ ಅಧಿಕಾರಿಗೆ ನೌಕರರೆಲ್ಲಾ BASTERDS…?! ಅಂತೆ.. ರಘುನಾಥ್ ವಿರುದ್ಧ ಎಂಡಿ ಕಳಸದ್ ಗೆ ನೌಕರರ ಫೆಡರೇಷನ್ ದೂರು.

0
ಎಲ್.ಜಿ ರಘುನಾಥ್
ಎಲ್.ಜಿ ರಘುನಾಥ್…

ಬೆಂಗಳೂರು:ವ್ಯಕ್ತಿ ಎಂತದ್ದೇ ಕೆಳಹಂತದ ಕೆಲಸ ಮಾಡುತ್ತಿರಲಿ ಆತನಿಗೆ ಆತನದೇ ವ್ಯಕ್ತಿ ಹಾಗೂ ವೃತ್ತಿ ಗೌರವ ಎನ್ನೋದು ಇರುತ್ತೆ.,ಅದೆಷ್ಟೋ ಅಧಿಕಾರಿಗಳು ತಮ್ಮ ಕೆಳಹಂತದ ನೌಕರರ ಪಾಲಿಗೆ ಹೀರೋಗಳಾಗಿರುತ್ತಾರೆ..

ಆದ್ರೆ ಕೆಎಸ್ ಆರ್ ಟಿಸಿಯಲ್ಲೊಬ್ಬ ಅಧಿಕಾರಿಯ ವರ್ತನೆ ಎಷ್ಟು ಅಹಂನಿಂದ ಕೂಡಿದೆ ಎಂದ್ರೆ ನೌಕರರೆಲ್ಲಾ ಆತನ ಪಾಲಿಗೆ ಬಾಸ್ಟರ್ಡ್ಸ್ ಅಂತೆ..ಹಾಗೆ ಆತನಿಂದ ಬೈಸಿಕೊಂಡು ಮಾನಸಿಕವಾಗಿ ನೊಂದ ಅದೆಷ್ಟೋ ಮಂದಿ ವಾಲೆಂಟ್ರಿ ರಿಟೈರ್ಮೆಂಟ್ ತೆಗೆದುಕೊಳ್ಳಲು ಹೋಗಿದ್ದುಂಟಂತೆ..ಈಗ ಆತನ ವಿರುದ್ಧ ನೌಕರರ ಫೆಡರೇಷನ್ ದೂರೊಂದನ್ನು ಎಂಡಿ ಶಿವಯೋಗಿ ಕಳಸದ್ ಅವರಿಗೆ ನೀಡಿದೆ.

ಎಲ್.ಜಿ ರಘುನಾಥ್, ಬೆಂಗಳೂರು ಪ್ರಾದೇಶಿಕ ಕಾರ್ಯಾಗಾರದಲ್ಲಿ ಕಾರ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಅಧಿಕಾರಿ. ಅವರ ವಿರುದ್ಧ ಅತಿರೇಕದ ವರ್ತನೆ ಹಾಗು ಅದಕ್ಷ ಆಡಳಿತದ ಆರೋಪ ಕೇಳಿಬಂದ ಆರೋಪಕ್ಕೆ ಸಂಬಂಧಿಸಿದಂತೆ  ಕೆಎಸ್‌ಆರ್‌ಟಿಸಿ ವರ್ಕರ್‍ಸ್ ಫೆಡರೇಷನ್ ವ್ಯವಸ್ಥಾಪಕ ನಿರ್ದೇಶಕರಿಗೆ ದೂರನ್ನು ಕೂಡಾ ಸಲ್ಲಿಸಿದೆ. ಕೆಳಹಂತದ ಕಾರ್ಮಿಕರನ್ನು ತುಚ್ಛವಾಗಿ ಕಾಣುವ ಅವರನ್ನು ಮನಸೋಇಚ್ಛೆ ನಿಂದಿಸುವ ಆರೋಪ ರಘುನಾಥ್ ಅವರ ಮೇಲಿದೆ. ಇವರಿಂದಾಗಿ ಕಾರ್ಯಾಗಾರದ ಉತ್ಪಾದನೆ ಕುಸಿಯುತ್ತಿದೆಯಲ್ಲದೆ, ಕಾರ್ಮಿಕರು ಹಾಗೂ ಅಧಿಕಾರಿಗಳ ನಡುವಿನ ಸಂಬಂಧ ಹಳಸಿ ಹೋಗುತ್ತಿದೆ ಎನ್ನುವುದು ಫೆಡರೇಷನ್ ಅಧ್ಯಕ್ಷ ಅನಂತಸುಬ್ಬರಾವ್ ಆರೋಪ.

KSRTC ಎಂಡಿ ಶಿವಯೋಗಿ ಕಳಸದ್
KSRTC ಎಂಡಿ ಶಿವಯೋಗಿ ಕಳಸದ್

ಎಲ್.ಜಿ ರಘುನಾಥ್ತಾನು ಮಾತ್ರ ಉತ್ತಮ, ಉಳಿದವರೆಲ್ಲಾ ಕೆಲಸಕ್ಕೆ ಬಾರದ ನಾಲಾಯಕ್ಕಗಳಂತೆ ಟ್ರೀಟ್ ಮಾಡುವ ರಘುನಾಥ್. ಕೆಲ ತಿಂಗಳ ಹಿಂದೆ ತನ್ನ ಕೆಳ ಅಧಿಕಾರಿಯೋರ್ವರಿಗೆ ಬಾಸ್ಟರ್‍ಡ್ ಎಂದು ನಿಂದಿಸಿದ್ದಾರೆ. ಇದರಿಂದ ತೀವ್ರ ಮಾನಸಿಕವಾಗಿ ನೊಂದ ಅವರು ಸ್ವಯಂ ನಿವೃತ್ತಿಗೂ ಅರ್ಜಿ ಸಲ್ಲಿಸಿದ್ದಾರೆ. ಆದರೆ ಮನವೊಲಿಕೆಯ ನಂತರ ವಾಪಸ್ ಪಡೆದಿದ್ದಾರೆ ಎಂದು ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ಉತ್ಪಾದನೆಗೆ ಬೇಕಾದ ಸಾಮಗ್ರಿಗಳನ್ನು ತರಿಸದೆ ಅನಾವಶ್ಯಕವಾದ ಗೂಡ್ಸನ್ನು ತರಿಸುವ ಕೆಲಸವನ್ನು ರಘುನಾಥ್ ಮಾಡುತ್ತಿದ್ದಾರೆ. ಇದರಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ನಿಗಮಕ್ಕೆ ಮತ್ತಷ್ಟು ಆರ್ಥಿಕ ನಷ್ಟವಾಗುತ್ತಿದೆ. ಅವೈಜ್ಞಾನಿಕವಾದ ಕವಚ ನಿರ್ಮಾಣ ವೆಚ್ಚದಿಂದ ಹಳೆಯ ವಾಹನಗಳು ದುರಸ್ತಿಗಾಗಿ ಕಾರ್ಯಾಗಾರಕ್ಕೆ ಬಾರದಂತೆ ಮಾಡಿದ್ದಾರೆ. ಕೆಲಸಕ್ಕೆ ತಮ್ಮ ಮನಸ್ಸಿಗೆ ಬಂದ ಸಮಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಎಂ.ಡಿ. ಶಿವಯೋಗಿ ಕಳಸದ್ ಅವರಿಗೆ ಬರೆದಿರುವ ಪತ್ರದಲ್ಲಿ ಅನಂತಸುಬ್ಬರಾವ್ ಆಪಾದಿಸಿದ್ದಾರೆ.

ಕಾರ್ಯಾಗಾರದಲ್ಲಿ ಸರ್ವಾಧಿಕಾರಿ ವರ್ತನೆ ಪ್ರದರ್ಶಿಸುತ್ತಿರುವ ರಘುನಾಥ್ ಅವರಿಂದ ನಿಗಮಕ್ಕೆ ನಷ್ಟವಾಗುವುದರ ಜೊತೆಗೆ ಅಧಿಕಾರಿಗಳು ಹಾಗೂ ಕಾರ್ಮಿಕರ ನಡುವಿನ ಸಂಬಂಧ ಹಾಳಾಗುತ್ತಿದೆ. ಮಾತು ಮಾತಿಗೂ ಕಾರ್ಯಾಗಾರವನ್ನೇ ಮುಚ್ಚಿಸಿಬಿಡುತ್ತೇನೆ ಎಂದು ಧಮ್ಕಿ ಹಾಕುತ್ತಿದ್ದಾರೆ. ಇವರಿಂದಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕೆಲಸ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ ಎಂದು ಅನಂತಸುಬ್ಬರಾವ್ ಆಪಾದಿಸಿದ್ದು, ಈ ಕ್ಷಣವೇ ರಘುನಾಥ್ ವಿರುದ್ಧ ಶಿಸ್ತುಬದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಕೆಳ ಹಂತದ ಸಿಬ್ಬಂದಿ ಸಣ್ಣ ತಪ್ಪು ಮಾಡಿದ್ರೆ ಅವರು ಸುಧಾರಿಸಿಕೊಳ್ಳಲಿಕ್ಕಾಗದ ರೀತಿಯಲ್ಲಿ ಶೋಷಿಸುವ ಆಡಳಿತ ಮಂಡಳಿ,ರಘುನಾಥ್ ಅವರಂಥ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಎಷ್ಟೇ ಅಮಾನವೀಯವಾಗಿ ನಡೆದುಕೊಂಡ್ರೂ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗುವಂತದ್ದು ಎಷ್ಟು ಸರಿ..ಕಳಸದ್ ಸಾಹೇಬ್ರೇ ಇದಕ್ಕೆ ರಿಯಾಕ್ಟ್ ಮಾಡಬೇಕು. 

Spread the love
Leave A Reply

Your email address will not be published.

Flash News