ಜನವರಿ ಅಂತ್ಯದೊಳಗೆ ಬೆಂಗಳೂರು ಬಹುತೇಕ “ಸ್ಮಾರ್ಟ್ ಸಿಟಿ”.. ದಿನವಿಡೀ ಕಾಮಗಾರಿ ವೀಕ್ಷಿಸಿ ಸೂಚನೆ-ಸಲಹೆ ನೀಡಿದ ಸಚಿವ ಭೈರತಿ ಬಸವರಾಜ್

0

ಬೆಂಗಳೂರು:ಇಂದು ಇದೀ ದಿನ ಸಚಿವ ಭೈರತಿ ಬಸವರಾಜ್ ಫುಲ್ ಆಕ್ಟೀವಾಗಿ ಬೆಂಗಳೂರನ್ನು ಸುತ್ತಾಕಿದ್ರು.ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ಸ್ ನಡೆಯುತ್ತಿರುವ ಸ್ಥಳಗಳಲ್ಲೆಲ್ಲಾ ತಪಾಸಣೆ ನಡೆಸಿದ್ರು.ಮಾಜಿ ಕಾರ್ಪೊರೇಟರ್ ಆಗಿಯೂ ಬೆಂಗಳೂರಿನ ಬಗ್ಗೆ ಮಾಹಿತಿ ಇರುವ ಅವರು ಜನವರಿ ಅಂತ್ಯದೊಳಗೆ ಬೆಂಗಳೂರ್ ಸ್ಮಾರ್ಟ್ ಆಗ್ಲೇಬೇಕು..ಇದು ಸಿಎಂ ಫರ್ಮಾನ್ ಎಂದು ಅಧಿಕಾರಿಗಳನ್ನು ಎಚ್ಚರಿಸಿದ್ರು.

ರಾಜಧಾನಿ ಬೆಂಗಳೂರಿನ ಸೌಂದರ್ಯ ಹಾಗೂ ಅಭಿವೃದ್ಧಿಗೆ ಪೂರಕವಾಗಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಇದಕ್ಕೆ ಪೂರಕವಾಗಿ ನಗರಾಭಿವೃದ್ಧಿ ಸಚಿವ ಬಸವರಾಜ್ ಅವರೇ ಫೀಲ್ಡಿಗಿಳಿದಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳ ಗುಣಮಟ್ಟವನ್ನು ಖುದ್ದು ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರಾಭಿವೃದ್ಧಿ ಸಚಿವರಾದ ಬಳಿಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಿನವಿಡೀ ಕಾಮಗಾರಿಯನ್ನು ಬೆಂಗಳೂರಿನಲ್ಲಿ ವಿಕ್ಷೀಸಿದ್ದು ಇದೇ ಮೊದಲು ಎನಿಸುತ್ತದೆ. ಅಷ್ಟೊಂದು ಗಂಭೀರ ಪ್ರಮಾಣದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಒತ್ತು ನೀಡಿರುವ ಸರ್ಕಾರ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳ ವೇಗ ಮತ್ತು ಅವಧಿಯನ್ನು ಸ್ಮಾರ್ಟ್‌ಗೊಳಿಸುವಂತೆ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ತಪಾಸಣೆಯ ಆರಂಭವನ್ನು ರೇಸ್‌ಕೋರ್ಸ್‌ನಿಂದ ಆರಂಭಿಸಿದ ಸಚಿವರು ಈ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ನಂತರ ಜವಾಹರಲಾಲ್ ತಾರಾಲಯ, ರಾಜಭವನ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ತಪಾಸಣೆ ನಡೆಸಿದರು. ಅಲ್ಲಿಂದ ಮುಂದುವರೆದು ಇನ್‌ಫ್ಯಾಂಟ್ರಿ ರಸ್ತೆಯ ಇಕ್ಕೆಲಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಜನವರಿ ಅಂತ್ಯದೊಳಗೆ ಮುಗಿಸುವಂತೆ ಸೂಚಿಸಿದರು.

ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ನಡೆಯುತ್ತಿರುವ 460ಮೀಟರ್ ಉದ್ದದ ರಸ್ತೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಸಚಿವರು ತಿಳಿಸಿದ ನಂತರ, ಡಿಕೆನ್ಸನ್ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದರು.

ಅಲ್ಲಿಂದ ಹಲಸೂರು ರಸ್ತೆ, ಮಿಲ್ಲರ್‍ಸ್ ರಸ್ತೆ, ಕ್ವೀನ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಮೆಕ್‌ಗ್ರಾತ್ ರಸ್ತೆ, ರಿಯಾನ್ಸ್ ರಸ್ತೆ, ರಾಜಾರಾಂಮೋಹನ್‌ರಾಯ್ ರಸ್ತೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ರಾಜೇಂದ್ರ ಚೋಳನ್, ಮುಖ್ಯ ಅಭಿಯಂತರ ರಂಗನಾಥ ನಾಯಕ್ ಹಾಜರಿದ್ದರು.

Spread the love
Leave A Reply

Your email address will not be published.

Flash News