ಏನ್ ಅರಣ್ಯ ಸಚಿವ್ರೇ ಇದೆಲ್ಲಾ..ನಿಮ್ ಇಲಾಖೆ ಜೀಪ್ ಮೇಲೆ ಅರೆನಗ್ನ ಫೋಟೋಶೂಟ್…ಇದಕ್ಕೆಲ್ಲಾ ಪರ್ಮಿಷನ್ ಕೊಟ್ಟವರ್ಯಾರು ..?!

0

ಬೆಂಗಳೂರು/ಶಿರಸಿ:ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕೊಂಚವಾದರೂ, ನಾಚಿಕೆ, ಮಾನ, ಮರ್ಯಾದೆ, ಹೇಸಿಗೆ ಅನ್ನೋದು ಇದೆಯಾ..? ಸರ್ಕಾರ ಕೊಡುವ ಸಂಬಳಕ್ಕೆ ನಿಯತ್ತಾಗಿ ದುಡಿಯಬೇಕೆನ್ನೋ ಹೊಣೆಗಾರಿಕೆ-ಜವಾಬ್ದಾರಿ ಇದೆಯೇ..? ಖಂಡಿತಾ ಇಲ್ಲ.. ಇದ್ದಿದ್ದೇ ನಿಜವಾಗಿದ್ರೆ ಇಂತಹದೊಂದು ಅಚಾತುರ್ಯ ನಡೆಯೊಕ್ಕೆ ಬಿರುತ್ತಲೇ ಇರಲಿಲ್ಲ.ಜೊಲ್ಲು ಮನಸ್ಥಿತಿಯ ಅಧಿಕಾರಿಗಳಿದ್ದರೆ ಹೀಗಾಗದೇ ಇರುತ್ತಾ..!

ಅರಣ್ಯ ಇಲಾಖೆ ವಾಹನದ ಮೇಲೆ ರೂಪದರ್ಶಿಯೊಬ್ಬಳು ಅರೆನಗ್ನಳಾಗಿ ಮನಸ್ಸಿಗೆ ಬಂದ ಫೋಸ್ ಕೊಟ್ಕೊಂಡು ಫೋಟೋ ತೆಗೆಸಿರುವಂಥ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಆದರೆ   ಅರಣ್ಯ ಇಲಾಖೆಯ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಕುಳಿತಿ ರುವುದು ನಾಚಿಕೆಗೇಡಿನ ವಿಷಯ.ಅಂದಹಾಗೆ ಇದು ನಡೆದಿದೆ ಎನ್ನಲಾಗುತ್ತಿರುವುದು ಶಿರಸಿ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ. ಅರಣ್ಯ ಇಲಾಖೆಗೆ ಸೇರಿದ ಜೀಪಿ(ಕೆಎ31-ಜಿ-0275)ನ ಮೇಲೆ ರೂಪದರ್ಶಿಯೊಬ್ಬಳು ಕುಳಿತುಕೊಂಡು ತರಹೇವಾರಿ ಭಂಗಿಯಲ್ಲಿ ಫೋಸ್ ಕೊಡ್ತಿದ್ದಾಳೆ. ಇಷ್ಟೆಲ್ಲಾ ಆಗೊಕ್ಕೆ ಅವಕಾಶ ಮಾಡಿಕೊಟ್ಟಿದ್ದೇಕೆ ಎನ್ನುವುದೇ ದೊಡ್ಡ ಪ್ರಶ್ನೆ.

ರೂಪದರ್ಶಿ ಈ ರೀತಿಯ ಭಂಗಿಗಳಲ್ಲಿ ವಾಹನದ ಮೇಲೆ ಕುಳಿತುಕೊಂಡು ಫೋಟೋ ತೆಗೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಪರ್ಮಿಷನ್ ಕೊಡೊಕ್ಕೆ ಬರೋದೇ ಇಲ್ಲ.ಹಾಗಿದ್ದಲ್ಲಿ,ಈ ರೀತಿಯ ಘಟನೆ ನಡೆದಿರುವುದು ನಿಜಕ್ಕೂ ಅಧಿಕಾರಿಗಳು ಕೊಟ್ಟ ಪರ್ಮಿಷನ್ ನಿಂದಲೇ ಎನ್ನುವುದು ಮೆಲ್ನೋಟಕ್ಕೆ ಎದ್ದು ಕಾಣುತ್ತದೆ. ಇಲಾಖೆಯ ವಾಹನದ ಮೇಲೆ ಈ ರೀತಿಯ ಘಟನೆ ನಡೆಯುವುದಕ್ಕೆ ಅವಕಾಶ ನೀಡಿರುವ ಅಧಿಕಾರಿ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ.

ಇಲಾಖೆಯ ವಾಹನಕ್ಕೆ ಅದರದೇ ಆದ ಘನತೆ, ಗೌರವ, ಗಾಂಭೀರ್ಯ ಇರುತ್ತದೆ. ಆದರೆ ಈ ರೀತಿಯಾದಂಥ ಘಟನೆ ನಡೆಯುವುದಕ್ಕೆ ಅರಣ್ಯ ಅಧಿಕಾರಿಗಳು ಕಣ್ಮುಚ್ಚಿ ಅವಕಾಶ ಕೊಟ್ಟಿದ್ದು ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ.ಅಂದಹಾಗೆ ಈ ರೂಪದರ್ಶಿ ಯಾರು..? ಆಕೆಯ ಹಿನ್ನಲೆ..ಏನು..? ಆಕೆ ಯಾವ ಕಾರಣಕ್ಕೆ ಅರಣ್ಯ ಇಲಾಖೆಗೆ ಬಂದಿದ್ಲು..? ಆಕೆಗೆ ಈ ರೀತಿಯ ಫೋಟೋ ಸೆಷನ್ ಗೆ ಅವಕಾಶ ಮಾಡಿಕೊಟ್ಟಿದ್ದು ಯಾರು..? ಎಲ್ಲಕ್ಕಿಂತ ಎಲ್ಲಕ್ಕಿಂತ ಹೆಚ್ಚಾಗಿ ಈ ವಾಹನವನ್ನು ಬಳಸುವುದಕ್ಕೆ ಅವಕಾಶ ಕೊಟ್ಟವರ್ಯಾರು..? ಎನ್ನುವ ಪ್ರಶ್ನೆಗಳು ಶುರುವಾಗಿದೆ.

ಅರಣ್ಯ ಇಲಾಖೆಯ ವಾಹನವನ್ನು ರೂಪದರ್ಶಿಯೊಬ್ಬಳು ಈ ರೀತಿಯಾಗಿದ್ದು ದುರುಪಯೋಗಪಡಿಸಿಕೊಂಡಿರುವುದಕ್ಕೆ ಮೂಡುತ್ತಿರುವಷ್ಟೇ ಆಕ್ರೋಶ, ಇಂತಹದೊಂದು ಘಟನೆ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೂ ವ್ಯಕ್ತವಾಗುತ್ತಿದೆ. ಇಂತಹ ಕೃತ್ಯ ನಡೆಸಿದ ರೂಪದರ್ಶಿಯ ಮೇಲೂ ಕ್ರಮ ಕೈಗೊಳ್ಳಬೇಕು ಇದಕ್ಕೆ ಅವಕಾಶ ಮಾಡಿಕೊಟ್ಟ ಅರಣ್ಯಾಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕಠಿಣಾತಿಕಠಿಣ ಕ್ರಮ ಜರುಗಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಅರಣ್ಯ ಸಚಿವ ಆನಂದ್ ಸಿಂಗ್ ಇತ್ತೀಚೆಗೆ ಅದೇಕೋ ತಮ್ಮ ಇಲಾಖೆಯ ಬಗ್ಗೆ ಮುತುವರ್ಜಿ ಕಾಳಜಿವಹಿಸುವುದನ್ನು ಬಿಟ್ಟಿದ್ದಾರೆ ಅನಿಸುತ್ತದೆ ಏಕೆಂದರೆ ಅವರು ಇಲಾಖೆಯನ್ನು ಸರಿಯಾದ ರೀತಿಯಲ್ಲಿ ಸ್ಟ್ರಿಕ್ಟ್ ಮಾಡಿದ್ದೇ ಆಗಿದ್ದಲ್ಲಿ ಇಂತಹ ಘಟನೆಗಳು ನಡೆಯುವುದಕ್ಕೆ ಆಸ್ಪದ ಇರುವುದಿಲ್ಲ ಅಧಿಕಾರಿಗಳು ಮನಸೋ ಇಚ್ಛೆ ಇಂತಹ ದುರ್ಘಟನೆಗಳು ನಡೆದು ಕ್ಕೂ ಆಸ್ಪದ ಕೊಡುವುದಿಲ್ಲ ಇನ್ನಾದರೂ ಆನಂದ್ ಸಿಂಗ್ ತಳ್ಳಿ ಎಚ್ಚೆತ್ತುಕೊಳ್ಳಲಿ.

Spread the love
Leave A Reply

Your email address will not be published.

Flash News