ಸಂತೋಷ್ ಆತ್ಮಹತ್ಯೆ ಹಿಂದೆ ಇರೋದು ಎಮ್ಮೆಲ್ಸಿನಾ ಅಥವಾ ಜಮಾನದ “ಆ “ದುಷ್ಮನ್ನಾ..? “ಸಿ.ಡಿ” ವಿಷಯದಲ್ಲೇ ಸಂತೋಷ್ ಗೆ ಹಿಂದೆಯೇ “ಆತ”ನೊಂದಿಗೆ ನಡೆದಿತ್ತು ಕಿರಿಕ್ ..!

0

ಬೆಂಗಳೂರು:ಯಾರು ಆ ಎಂಎಲ್ಸಿ ..?ಯಾವ ಪಕ್ಷಕ್ಕೆ ಸೇರಿದವರು..? ಯಾವ ಕಾರಣಕ್ಕೆ ಸಂತೋಷ್ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು..? ಅಷ್ಟಕ್ಕೂ ಅವರ ಬಳಿ ಇದ್ದಂತಹ ಆ ಸ್ಪೋಟಕ ವಾದಂತಹ ಸಾಕ್ಷ್ಯವಾದರೂ ಏನು ಇಂತಹ ಒಂದಷ್ಟು ಪ್ರಶ್ನೆಗಳು..?ಸಿಎಂ ರಾಜಕೀಯ ಕಾರ್ಯದರ್ಶಿ N.R ಸಂತೋಷ್ ಅವರ ಆತ್ಮಹತ್ಯೆಯ ಸುತ್ತ ಗಿರಕಿ ಹೊಡೆಯುತ್ತಲೇ ಇವೆ.

ನಿಗೂಢ ರೀತಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ- ಸಂಚಲನವನ್ನೇ ಮೂಡಿಸಿದೆ.ಅಲ್ಲದೇ  ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ನಿದ್ರೆ ಮಾತ್ರೆಗಳನ್ನು ಸೇವಿಸಿ ಬದುಕನ್ನೇ ಅಂತ್ಯಗೊಳಿಸಿ ಕೊಲ್ಲುವಂಥ ಗಂಭೀರ ಕಾರಣವಾದರೂ ಏನಿತ್ತು..? ಎನ್ನುವ ಪ್ರಶ್ನೆ ಕಾಡುತ್ತಿದೆ.ಎಂತೆಂತಹದೋ ಸಂಕಷ್ಟಗಳು ಬಂದಾಗಲೂ ಎದೆಗುಂದದ, ಸವಾಲುಗಳು ಎದುರಾದಾಗಲೂ ವಿಚಲಿತವಾಗದೆ ಇದ್ದಂತಹ ಗಟ್ಟಿ ಗುಂಡಿಗೆಯ ಸಂತೋಷ್, ಆತ್ಮಹತ್ಯೆಗೆ ಯತ್ನಿಸುತ್ತಾರೆ ಅಂದರೆ ಅದೇಗೆ ಸಾಧ್ಯ ಎನ್ನುವ ವಿಶ್ಲೇಷಣೆಗಳು ಕೂಡ ರಾಜಕೀಯ ವಲಯದಲ್ಲಿ ನಡೆಯುತ್ತಲೇ ಇವೆ.

ನಿನ್ನೆ ರಾತ್ರಿ ಸುಮಾರು 8ಗಂಟೆಯ ಹೊತ್ತಿಗೆ ಡಾಲರ್ಸ್ ಕಾಲೋನಿಯ ತಮ್ಮ ಮನೆಯಲ್ಲಿ,ಹನ್ನೆರಡು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಸಂತೋಷ್. ಅವರ ಈ ದುಡುಕಿನ ನಿರ್ಧಾರಕ್ಕೆ ಕಾರಣಗಳೇನು ಎನ್ನುವ ಪ್ರಶ್ನೆ ಸುಳಿದಾಡುತ್ತಿರುವಾಗಲೇ “ಸ್ಫೋಟಕ”ಎನ್ನುವಂಥ ಸುದ್ದಿ ಹೊರಬಿದ್ದಿದೆ.ಅದಕ್ಕೆ “ಆ ಎಂಎಲ್ಸಿ” ಹಾಗೂ ಅವರ ಬಳಿಯಿದ್ದ ಸ್ಫೋಟಕ ಸಿಡಿಯೇ  ಕಾರಣ ಎಂದು ರಾಜಕೀಯ ವಲಯ ಮಾತನಾಡಿಕೊಳ್ಳುತ್ತಿದೆ.ಅಂದಹಾಗೆ ಎಂತಹ ಸವಾಲುಗಳು ಬಂದಾಗಲೂ ಅದನ್ನು ಸಲೀಸಾಗಿ ಎದುರಿಸುತ್ತಿದ್ದಂತಹ ಸಂತೋಷ್ ಆತ್ಮಹತ್ಯೆಗೆ, “ಆ” ಎಂಎಲ್ಸಿ ಬಳಿಯಿದ್ದಂತಹ ಸಿಡಿಯೇ ಏನು, ಕಾರಣ ಎನ್ನಲಾಗುತ್ತಿದೆ,ಅಂಥಹ ಗಂಭೀರ ಸಂಗತಿಗಳು ಅದರಲ್ಲಿದ್ದವಾ..ಅದು ಕೂಡ  ಸಂತೋಷ್ ಅವರ ತೀರಾ ಖಾಸಗಿ ಬದುಕಿಗೆ ಸಂಬಂಧಿಸಿದಂಥದ್ದಾ ಎನ್ನುವ ಪ್ರಶ್ನೆ ಚರ್ಚೆಯಾಗುತ್ತಿದೆ.

ಆದರೆ ಇಲ್ಲಿ ಪ್ರಶ್ನೆಯಿರುವುದು ಸಿಡಿಯನ್ನು ಹೊಂದಿದ್ದಂತಹ ಆ ಎಂಎಲ್ಸಿ ಬಿಜೆಪಿ ಪಕ್ಷದವರಾ, ಅಥವಾ ಕಾಂಗ್ರೆಸ್ ,ಜೆಡಿಎಸ್ ನವರಾ ಎನ್ನೋದು. ಏಕೆಂದರೆ ಸಂತೋಷ್ ಸಿಎಂಗೆ ರಾಜಕೀಯ ಕಾರ್ಯದರ್ಶಿಯಾಗಿದ್ದ ರಿಂದ ಸಹಜವಾಗಿಯೇ ಅವರಿಗೆ ತಮ್ ‌ಪಕ್ಷದಲ್ಲಷ್ಟೇ ಅಲ್ಲ ವಿಪಕ್ಷಗಳಲ್ಲೂ  ಸಾಕಷ್ಟು ವಿರೋಧಿಗಳಿದ್ದರು ಎನ್ನುವುದು ಸ್ಪಷ್ಟ.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಕ್ಕಿಂತ ಮುನ್ನ, ಹಾಗೆಯೇ ಮುಖ್ಯಮಂತ್ರಿಯಾದ ನಂತರ ಅವರ ಜೊತೆಗೆ ಮೊದಲಿಂದಲೂ ಇದ್ದಂಥದ್ದು ಸಂತೋಷ್.ಹಾಗೆ ಇದ್ದರೂ ಕೂಡ ಯಾವುದೇ ರೀತಿಯಲ್ಲೂ ಸುದ್ದಿಗೆ ಬರದಿದ್ದ ಅವರು, ಸಚಿವ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಜತೆಗೆ ಮಾಡಿಕೊಂಡ “ಕಿರಿಕ್” ನಿಂದಾಗಿ ಮುನ್ನೆಲೆಗೆ ಬಂದಿದ್ದರು.ತಿಂಗಳುಗಟ್ಟಲೇ ಸುದ್ದಿಯಲ್ಲಿದ್ದರು.

ಆ ಕಿರಿಕ್ಕು ಕೂಡ ಒಂದು ಹುಡುಗಿಯ ಕಾರಣಕ್ಕೆ ಆಗಿತ್ತೆನ್ನು ವುದು ಆ ಸಂದರ್ಭದಲ್ಲಿ ತೀವ್ರವಾಗಿ ಚರ್ಚೆಗೆ ಬಂದಿತ್ತು. ಹುಡುಗಿಯ ವಿಷಯದಲ್ಲಿ ವಿನಯ್ ಹಾಗೂ ಸಂತೋಷ್ ಅವರ ನಡುವೆ ಸಿಕ್ಕಾಪಟ್ಟೆ ಗಲಾಟೆ ಆಗಿತ್ತು. ಆ ಹುಡುಗಿಯ ಜತೆಗಿನ ಸಾಕಷ್ಟು ಗೌಪ್ಯ  ವಿಷಯಗಳು ಕೂಡ ಸೀಡಿಯಲ್ಲಿದ್ದವು.ಆ ಸಿಡಿಯಲ್ಲಿ ಏನಿತ್ತು ಎನ್ನುವುದು ಬಹಿರಂಗವಾಗಿರದಿದ್ದರೂ ಇವರಿಬ್ಬರು ಕಚ್ಚಾಡಿಕೊಂಡ ರೀತಿ ಗಮನಿಸಿದ್ದವರಿಗೆ ಆ ಹುಡುಗಿ ಜೊತೆ ತೀರಾ ನಿಕಟವಾದ ಸಂಪರ್ಕ ಹೊಂದಿದ್ದಕ್ಕೆ ಪೂರಕವಾದ ಸಾಕ್ಷ್ಯಗಳಿದ್ದುದ್ದಂತೂ ಸತ್ಯ ಎಂದು ಮಾತನಾಡಿಕೊಂಡಿದ್ದುಂಟು.

ಆದರೆ ಇವರಿಬ್ಬರ ನಡುವಿನ ವೈಮನಸ್ಯ ಹಾಗೂ ಕಿರಿಕ್ ಪಕ್ಷದ ಮೇಲೆ ಸಾಕಷ್ಟು ರೀತಿಯ ಪರಿಣಾಮ ಉಂಟುಮಾಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಈಶ್ವರಪ್ಪ ಹಾಗೂ ಯಡಿಯೂರಪ್ಪನವರ ನಡುವಿನ ಬಾಂಧವ್ಯಕ್ಕೂ ಕೂಡ ಹುಳಿ ಹಿಂಡುವಂತಹ ಸನ್ನಿವೇಶವನ್ನು ತಂದೊಡ್ಡಿತ್ತು. ವರಿಷ್ಠರ ಸಮ್ಮುಖದಲ್ಲಿ ಇವರಿಬ್ಬರ ನಡುವಿನ ವೈಮನಸ್ಸನ್ನ ಶಾಂತಗೊಳಿಸುವಂತೆ ಕೆಲಸವೂ ಕೂಡ ನಡೆದಿತ್ತು ಆನಂತರ ಇಬ್ಬರೂ ಎಂದೂ ಮುಖಾಮುಖಿ ಯಾಗಿರಲಿಲ್ಲ.ಈ ಕಿರಿಕ್ ಆದ ನಂತರ  ವಿನಯ್ ಸಂಪೂರ್ಣ ನೇಪಥ್ಯಕ್ಕೆ ಸರಿದಿದ್ದರು.ಬಿಡಿಎ ಸೇರಿದಂತೆ ಕೆಲವೆಡೆ ಕಾಣಿಸಿಕೊಂಡಿದ್ದರಷ್ಟೇ ವಿನಯ್.ಆದರೆ ತನ್ನನ್ನು ಅವಮಾನ ಮಾಡಿದ ಬಗ್ಗೆ ಪ್ರತೀಕಾರ ಮಾತನ್ನು ಅನೇಕರ ಮುಂದೆ ಮಾತನ್ನಾಡಿದ್ದರೆಂದು ಹೇಳುವವರಿದ್ದಾರೆ.

ಸಂತೋಷ್ ಬಗ್ಗೆ ಅಸಹನೆ-ಬೇಸರ ಇಟ್ಟುಕೊಂಡೇ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಲ್ಲಿ ಬುಸ್ ಗುಟ್ಟುತ್ತಿದ್ದ ವಿನಯ್, ಬಹುಶಃ ಈ ಪ್ರಕರಣದಲ್ಲಿ ಕೈಯಾಡಿಸುವ ಕೆಲಸ ಮಾಡಿದ್ರಾ..ಇದಕ್ಕಾಗಿ ಆ ಎಮ್ಮೆಲ್ಸಿಯನ್ನು ಅಸ್ತ್ರವಾಗಿ ಬಳಸಿಕೊಂಡ್ರಾ ಗೊತ್ತಾಗುತ್ತಿಲ್ಲ.ಆ ಎಂಎಲ್ ಸಿಯ ಬಳಿಯಿರುವಂಥ ಸಿಡಿ ಕೊಟ್ಟಿರೋದು ವಿನಯ್ ನಾ.. ? ಸದ್ಯಕ್ಕೆ ಕೇಳಿ ಬರುತ್ತಿರುವ ವರ್ತಮಾನಗಳ ಪ್ರಕಾರ ಆ ಎಂಎಲ್ ಸಿ ಯ ಪಾತ್ರ ಈ ಪ್ರಕರಣದಲ್ಲಿ ನೇರವಾಗಿ ಇದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ತನ್ನ ಬಳಿ ಇದ್ದ ಸಿ.ಡಿ ಯನ್ನು ಆ ಎಂಎಲ್ಸಿಗೆ ನೀಡಿರೋದು ವಿನಯ್ ಇರಬಹುದಾ..? ಆ ಎಂಎಲ್ಸಿ ಈ ಸಿಡಿಯನ್ನು ಇಟ್ಟುಕೊಂಡು ಸಂತೋಷ್ ಅವರನ್ನು ಬ್ಲಾಕ್ ಮಾಡುವ ಪ್ರಯತ್ನ ಮಾಡಿದರಾ ಗೊತ್ತಿಲ್ಲ…!ಆದರೆ ಸಿಡಿ ವಿಚಾರದಲ್ಲೇ ಸಂತೋಷ್ ಇಂತದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆಂದ್ರೆ ಅದರ ಹಿಂದೆ ವಿನಯ್ ಪಾತ್ರವನ್ನು ತಳ್ಳಿ ಹಾಕುವಂತಿಲ್ಲ ಎನ್ನುವಂಥ ಮಾತುಗಳೂ ಕೇಳಿಬರುತ್ತಿವೆಯಂತೆ

ಸದ್ಯಕ್ಕಂತೂ ಯಾವುದೂ ಸ್ಪಷ್ಟವಾಗುತ್ತಿಲ್ಲ ಆದರೆ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಂಬಂಧಪಟ್ಟಂತ ಪೊಲೀಸರಿಗೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿ ಪ್ರಕರಣದ ಹಿಂದಿರುವ ಆ ವ್ಯಕ್ತಿಗಳ ಪತ್ತೆಗೆ ಸೂಚನೆ ನೀಡಿದ್ದಾರೆ. ಇದರೊಳಗೆ ಎಂಎಲ್ಸಿ ಪಾತ್ರವಿದೆಯೋ ಅಥವಾ ಎಂಎಲ್ ಸಿಯನ್ನು ಇಟ್ಟುಕೊಂಡು ವಿನಯ್ ಈ ರೀತಿ ಕೆಲಸ ಮಾಡಿದರೋ ಎನ್ನುವ ಪ್ರಶ್ನೆ ಹಾಗೂ ಅನುಮಾನಗಳಿಗೆ ತನಿಖೆಯೇ ಉತ್ತರ ನೀಡಬಹುದೇನೋ..ಆದ್ರೆ ವಿನಯ್ ಪಾತ್ರದ ಬಗ್ಗೆ ಸಾಕಷ್ಟು ಶಂಕೆ ಹೊಗೆಯಾಡುತ್ತಿರುವುದಂತೂ ಸತ್ಯ..

Spread the love
Leave A Reply

Your email address will not be published.

Flash News