ಈತ ಸ್ಟೇರಿಂಗ್ ಹಿಡುದ್ರೆ ಡ್ರೈವರ್..ಭಂಗಿ ಹಾಕಿ ಕೂತ್ರೆ ಯೋಗಪಟು.. ಈ ಸಾಧಕ “ಸತೀಶ್” ಬಿಎಂಟಿಸಿ ಪಾಲಿನ ಹೆಮ್ಮೆ:ಸ್ಪರ್ಧೆಗಿಳಿದ್ರೆ ಅಪ್ಪನನ್ನೇ ಮೀರಿಸು ಪೋರಿ ನಿಖಿತಾ.

0

ಬೆಂಗಳೂರು:ಸದಾ ಒತ್ತಡದಲ್ಲೇ ಕೆಲಸ ಮಾಡುವ, ಮೇಲಾಧಿಕಾರಿಗಳು ಕೊಡೋ ಕಿರುಕುಳದಿಂದಾಗುವ ಮಾನಸಿಕ ಕ್ಷೋಭೆಯನ್ನು ಹತ್ತಿಕ್ಕಲು  ಸಾರಿಗೆ ನೌಕರರಿಗೆ ದೇಹ ಮತ್ತು ಮನಸನ್ನು ಸಮತೋಲನದಲ್ಲಿಡೋದು ಅಗತ್ಯದಷ್ಟೇ ಅನಿವಾರ್ಯವೂ ಕೂಡ.ಆದ್ರೆ ಸಾಕಷ್ಟು ನೌಕರರಿಗೆ ಇದಕ್ಕೆಲ್ಲಾ ಪುರುಸೋತ್ತೇ ಇರೊಲ್ಲ.ದಿನವೆಲ್ಲಾ ದುಡಿದ ದೇಹ ನೆಲ ಸಿಕ್ಕರೆ ಸಾಕು ಎಂದು ಪರಿತಪಿಸುತ್ತಿರು ತ್ತದೆ.ಹಾಗಾಗಿಯೇ ಸಾಕಷ್ಟು ಸಿಬ್ಬಂದಿ ನಾನಾ ರೀತಿಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಲೆ ಇರುತ್ತಾರೆ. ಇಂಥಾ ಬೇಸರದ ನಡುವೆಯೇ ಇಲ್ಲೋರ್ವ ಚಾಲಕ, ಇಡೀ ಬಿಎಂಟಿಸಿಗೆ ಬಿಎಂಟಿಸಿನೇ ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುವಂತೆ ಮಾಡಿದ್ದಾನೆ.

ನೀವು ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳ ನೌಕರರನ್ನು ನೀವ್ ಮಾಡ್ತಿರುವ ಕೆಲಸ ನಿಮಗೆ ಖುಷಿ ಕೊಟ್ಟಿದೆಯಾ ಎಂದು ಕೇಳ್ನೋಡಿ,ಬಹುತೇಕರರಿಂದ ಕೇಳಿ ಬರುವ ಉತ್ತರ ನಮ್ಮ ಶತೃವಿಗೂ ಬೇಡ ಸಾರ್..ಈ ಇಲಾಖೆ.ನಾವ್ ಹಿಂದಿನ ಜನ್ಮದಲ್ಲಿ ಅದ್ಯಾವ ಪಾಪ ಮಾಡಿದ್ವಿ ಎಂದು ಆ ಬ್ರಹ್ಮ ನಮ್ಮ ಹಣೆಗಳಲ್ಲಿ  ಈ ಇಲಾಖೆಯಲ್ಲೇ ಕೆಲಸ ಮಾಡಬೇಕೆಂದು ಬರೆದನೋ ಗೊತ್ತಾ ಗ್ತಿಲ್ಲ ಸರ್ ಎಂದೇ ನಿರುತ್ಸಾಹ-ನಿರಾಸಕ್ತಿ-ಬೇಸರದಿಂದ ಮಾತನಾಡುತ್ತಾರೆ. ಕೆಳ ಹಂತದ ಸಿಬ್ಬಂದಿಯನ್ನು ಅಧಿಕಾರಿಗಳು ಗೋಳೋಯ್ದುಕೊಳ್ಳೋದರ ಬಗ್ಗೆ ಕೇಳಿಬರುವ ದೂರುಗಳನ್ನು ಗಮನಿಸಿದಾಗ ಇದು ಬಹುತೇಕ ಸತ್ಯ ಕೂಡ ಎನಿಸುತ್ತೆ.

ಹಾಗೆಂದು ನಾವು ಸದಾ ನಿರುತ್ಸಾಹ-ನಿರಾಸಕ್ತಿಯ ಬಗ್ಗೆಯೇ ಆಲೋಚಿಸಬಾರದು.ಬದುಕಿನ ಹೊಸ ದಿಕ್ಕಿನತ್ತ ನಡೆಯಬೇಕು. ನಮ್ಮ ಆಯಾಸ-ನಿರಾಸಕ್ತಿಗೆ ನಾವೇ ಮದ್ದು ಕಂಡುಕೊಳ್ಳ ಬೇಕು.ಇದಕ್ಕೆ ಯೋಗಾಸನದಷ್ಟು ಪರಿಣಾಮಕಾರಿ ಮದ್ದು ಮತ್ತೊಂದಿ ಲ್ಲ.ಇಂಥಾ ಸತ್ಯವನ್ನು ಮನಗಂಡು ಯೋಗಾಭ್ಯಾಸದ ಮೂಲಕ ಶರೀರ ಮತ್ತು ಅದರ ಆರೋಗ್ಯವನ್ನು ಸುಸ್ಥಿತಿ ಹಾಗೂ ಲವಲವಿಕೆಯಲ್ಲಿಟ್ಟುಕೊಂಡಿರುವ ಸಾರಿಗೆ ನೌಕರನೇ ಸತೀಶ್.ಅವರ ಯೋಗಾಭ್ಯಾಸದ ಆಸನ-ಭಂಗಿಗಳನ್ನು ಗಮನಿಸ್ತಾ ಇದ್ರೆ ನಮ್ಮ ವರನಟ ಡಾ.ರಾಜ್ ಕುಮಾರ್ ಅಭಿನಯದ “ಕಾಮನಬಿಲ್ಲು” ಚಿತ್ರದಲ್ಲಿನ ಅಣ್ಣಾವ್ರು ನೆನಪಾಗ್ತಾರೆಂದ್ರು ತಪ್ಪಾಗಲಿಕ್ಕಿಲ್ಲ.

ಸತೀಶ್ ಡಿಪೋ 4 ರಲ್ಲಿನ ಬಿಎಂಟಿಸಿ ಸಿಬ್ಬಂದಿ.ಒತ್ತಡ-ಸುಸ್ತು-ಆಯಾಸಗಳ ನಡುವೆಯೂ  ದೇಹವನ್ನು ಹುರಿಗಟ್ಟಿಸಿಕೊಂಡಿರುವ ಪರಿಯನ್ನು ಗಮನಿಸಿದ್ರೆ ಅಚ್ಚರಿಯಾಗುತ್ತದೆ. ಯೋಗಾಭ್ಯಾ ಸವೇ ತಮ್ಮನ್ನು ಇಷ್ಟೆಲ್ಲಾ ಟೆನ್ಷನ್ ಗಳ ನಡುವೆಯೂ ಬೆಳಗ್ಗೆಯಿಂದ ರಾತ್ರಿವರೆಗೂ ಲವಲವಿಕೆಯಿಂದ ಇಟ್ಟಿರುತ್ತೆ.ಯೋಗಕ್ಕೆ ಆ ಒಂದು ತಾಕತ್ತಿದೆ.ಅವಕಾಶ ಸಿಕ್ಕಾಗಲೆಲ್ಲಾ ಯೋಗವನ್ನು ಅಭ್ಯಾಸ ಮಾಡುತ್ತೇನೆ.ಸಹಜವಾಗಿ ಮನೆಯಲ್ಲಿ ಮಾಡುತ್ತೇನೆ..ಕೆಲವೊಮ್ಮೆ ಡ್ಯೂಟಿಯಲ್ಲಿದ್ದಾಗ ಬಸ್ ನೊಳಗೇನೆ ಕೆಲ ಕ್ಷಣ ಮಾಡಿ ಕೆಲಸಕ್ಕೆ ಅಣಿಯಾಗುತ್ತೇನೆ..ದಿನವಿಡೀ ಮನಸು ಉಲ್ಲಾಸದಿದಿರುತ್ತೆ.ಮನಸು-ದೇಹವನ್ನು ಸಮತೋಲನದಲ್ಲಿಡುವ ತಾಕತ್ತಿದೆ ಯೋಗಕ್ಕೆ ಎನ್ನುತ್ತಾರೆ ಸತೀಶ್.ಅಷ್ಟೇ ಅಲ್ಲ,ಒತ್ತಡದಲ್ಲಿ ಕೆಲಸ ಮಾಡುವ ನಮ್ಮ  ನಿಗಮ ನೌಕರರಿಗೆ ಯೋಗ ಪರಿಣಾಮಕಾರಿ ಮದ್ದು,ಇದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ,

ಡ್ರೈವರ್ ಕಮ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಸತೀಶ್ ತಮ್ಮ ಒತ್ತಡವನ್ನು ಯೋಗಾದ ಮೂಲಕ ಬಗೆಹರಿಸಿಕೊಳ್ಳು ವುದಾಗಿ ಹೇಳ್ತಾರೆ.ಕೆಲಸದಲ್ಲಿದ್ದಾಗಲಷ್ಟೇ ಅಲ್ಲ,ತಮ್ಮ ವೈಯುಕ್ತಿಕ ಬದುಕನ್ನು ಲವಲವಿಕೆಯಿಂದ ಇಟ್ಟುಕೊಳ್ಳೊಕ್ಕೆ ಯೋಗಾ ಸಹಕಾರಿಯಾಗುತ್ತಿದೆಯಂತೆ.ತಮ್ಮ ಪ್ರತಿಭೆ-ಸಾಮರ್ಥ್ಯವನ್ನು ಗಮನಿಸಿದ ಇಲಾಖೆ ತನಗೆ ಬೇಕಾದ ಎಲ್ಲಾ ಪ್ರೋತ್ಸಾಹವನ್ನು ನೀಡುತ್ತಿದ್ದಾರೆಂದು ಹೇಳುತ್ತಾರೆ.

ಸತೀಶ್ ಅವರ ಯೋಗಾಭ್ಯಾಸಕ್ಕೂ ಕೂಡ ನಿಗಮ ಬೆಂಬಲವಾಗಿ ನಿಂತಿದೆ.ಅವರಿಗೆ ಯೋಗಾಭ್ಯಾಸಕ್ಕೆ ಬೇಕಾದ ಪ್ರೋತ್ಸಾಹ ನೀಡುತ್ತಿದೆ.ಅವರ ಪ್ರತಿಭೆಯನ್ನು ಕಂಡು ಅಗತ್ಯಬಿದ್ದರೆ ಯೋಗ ಕಾಂಪಿಟೇಷನ್ಸ್ ಗೂ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.ಇಂಥಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ರೆ ಬಿಎಂಟಿಸಿ ಹೆಮ್ಮೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಯೋಗೇಶ್ ಗೌಡ.

ಸತೀಶ್ ಅವರ ಕಲೆ ಕೇವಲ ಅವರಿಗಷ್ಟೇ ಸೀಮಿತವಾಗಿಲ್ಲ.ಅವರ ಮಗಳಿಗೂ ಯೋಗಾ ಬಾಲ್ಯತಃ ಸಿದ್ದಿಸಿಬಿಟ್ಟಿದೆ.ಸತೀಶ್ ಅವರನ್ನೇ ಮೀರಿಸುವಷ್ಟರ ಮಟ್ಟಿಗೆ ಅವರ ಮಗಳು ಆರು ವರ್ಷದ ನಿಖಿತಾ ಕೂಡ ಯೋಗವನ್ನು ಕರತಾಲಮಲಕ ಮಾಡಿಕೊಂಡಿದ್ದಾಳೆ.

ತಂದೆಯನ್ನು ನೋಡಿಕೊಂಡೇ,ಅವರಿಂದ ಉತ್ತೇಜಿತಳಾಗೇ ಯೋಗವನ್ನು ಕಲಿಯಲಾರಂಭಿಸಿದ ನಿಖಿತಾ ತನ್ನ ಸಣ್ಣ ವಯಸ್ಸಿನಲ್ಲೇ ಎಲ್ಲರೂ ನಿಬ್ಬೆರಗಾಗಿಸುವ ರೀತಿಯಲ್ಲಿ ಯೋಗ ಮಾಡುತ್ತಾಳೆ.

ಈಕೆಗೆ   ಬಿಎಂಟಿಸಿ ಆಡಳಿತ ಮಂಡಳಿ ಈ ತಂದೆ-ಮಗಳ ಯೋಗಾಭ್ಯಾಸಕ್ಕೆ ಪ್ರೋತ್ಸಾಹ-ನೆರವು ನೀಡಿದ್ದಲ್ಲಿ ,ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

 

ಈತ ಸ್ಟೇರಿಂಗ್ ಹಿಡುದ್ರೆ ಡ್ರೈವರ್..ಭಂಗಿ ಹಾಕಿ ಕೂತ್ರೆ ಯೋಗಪಟು.. ಈ ಸಾಧಕ “ಸತೀಶ್” ಬಿಎಂಟಿಸಿ ಪಾಲಿನ ಹೆಮ್ಮೆ:

ಸ್ಪರ್ಧೆಗಿಳಿದ್ರೆ ಯೋಗಾದಲ್ಲಿ ಅಪ್ಪನನ್ನೇ ಮೀರಿಸುತ್ತಾಳೆ  ಪೋರಿ ನಿಖಿತಾ.

Spread the love
Leave A Reply

Your email address will not be published.

Flash News