ಕೋಮುಗಲಭೆಗೆ ನಿಗಿ..ನಿಗಿ “ಕೆಂಡ”ವಾದ ಶಿವಮೊಗ್ಗ:ವಾಹನ ಜಖಂ-ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ.

0

ಶಿವಮೊಗ್ಗ::ಮಲೆನಾಡ ಹೆಬ್ಬಾಗಿಲ ಜಿಲ್ಲೆ ಶಿವಮೊಗ್ಗ ಪ್ರಕ್ಷುಬದ್ಧವಾಗಿದೆ.ಕೋಮುಗಲಭೆಗೆ ಬೆಚ್ಚಿಬಿದ್ದಿದೆ.ಎರಡು ಕೋಮುಗಳ ನಡುವೆ ಶುರುವಾದ ವಾಗ್ವಾದ ಪ್ರಕೋಪಕ್ಕೆ ತಿರುಗಿ ವಾಹನ ಜಖಂಗೊಳ್ಳುವ ಮಟ್ಟ ತಲುಪಿದೆ.ಮುಂಜಾಗ್ರತಾಕ್ರಮವಾಗಿ ಡಿ.3 ರಿಂದ ಡಿ.05 ಬೆಳಗ್ಗೆ 10-00 ಗಂಟೆಯ ವರೆಗೆ ಶಿವಮೊಗ್ಗ ನಗರದಾದ್ಯಂತ  144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.  

ಆಜಾದ್ ನಗರದಲ್ಲಿ ಎರಡು ಗುಂಪುಗಳ ನಡುವೆ ಶುರುವಾದ ಸಣ್ಣ ಗಲಾಟೆ ವಿಕೋಪಕ್ಕೆ ಹೋಗಿದ್ರಿಂದ ಗೊಂದಲದ ವಾತಾವರಣ ಸೃಷ್ಟಿಗೊಂಡಿದೆ. ರಚಿ ವರ್ಮ ಬೀದಿಯಲ್ಲಿ ಗಲಾಟೆ ಆರಂಭಗೊಂಡಿದೆ. ಈ ಸನ್ನಿವೇಶವನ್ನೇ ಮಿಸ್ಯೂಸ್ ಮಾಡಿಕೊಂಡ ಕೆಲ ಕಿಡಿಗೇಡಿಗಳು ಆಟೋ ಹಾಗೂ ವಾಹನಗಳನ್ನ ಜಖಂ ಮಾಡಿರುವ ದೃಶ್ಯಗಳು ಕಂಡುಬಂದಿದೆಅಮೀರ್ ಅಹ್ಮದ್ ಕಾಲೋನಿ ಮತ್ತು ಲಷ್ಕರ್ ಮೊಹಲ್ಲದಲ್ಲಿ ಈಗಾಗಲೇ ಎರಡು ಕೆ.ಎಸ್ ಆರ್ ಪಿ ತುಕಡಿಗಳನ್ನ ಕರೆಸಲಾಗಿದೆ.   ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಿಸಲು ಶ್ರಮವಹಿಸುತ್ತಿದ್ದಾರೆ.

ಗಲಾಟೆಯಲ್ಲಿ ಬಜರಂಗದಳ ಕಾರ್ಯಕರ್ತರಿಗೂ ಬಜಾರ್ ನಲ್ಲಿ ನಡೆದ ಗಲಾಟೆಗೂ ಯಾವ ಸಂಬಂಧವಿಲ್ಲವೆಂದು ಆಗ್ರಹಿಸಿ ಸುಮಾರು ಒಂದು ವರೆಗಂಟೆಯ ಹಿಂದೆ ಜಮಾವಣೆಗೊಂಡಿದ್ದರುಯಾವ ಕಾರ್ಯಕರ್ತರನ್ನು  ಬಂಧಿಸದಂತೆ ಒತ್ತಾಯಿಸಿದ್ದಾರೆ. ಕೋಮುಗಲಭೆ ಹಿನ್ನಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ತಹಶೀಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಬಂದನೆಗಳು:-
1) ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದು (05) ಮತ್ತು ಐದಕ್ಕಿಂತ ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಿದ.
2) ಮೆರವಣಿಗೆ ಅಥವಾ ಸಭೆ, ಸಮಾರಂಭಗಳನ್ನು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕಸಮಾವೇಶಗಳನ್ನು ನಿಷೇಧಿಸಿದೆ.
3) ಶಸ್ತ್ರಗಳನ್ನು ದೊಣ್ಣೆ,ಕತ್ತಿ,ಈಟಿಗದೆಕಲ್ಲು, ಇಟ್ಟಿಗೆ, ಚಾಕು, ಮಾರಕಾಸ್ತ್ರ,ದೈಹಿಕ ಹಿಂಸೆ ಉಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ಶೇಖರಿಸುವುದನ್ನು ನಿಷೇಧಿಸಿದೆ.
4) ಯಾವುದೇ ಸ್ಫೋಟಕ ವಸ್ತುಗಳನ್ನು (ಪಟಾಕಿ/ಸಿಡಿಮದ್ದು) ಬಳಸುವುದು,ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ
ಸಾಧನಗಳನ್ನು/ ಉಪಕರಣಗಳ ಒಯ್ಯುವಿಕೆ ಮತ್ತು ಶೇಖರಿಸುವುದನ್ನು ನಿಷೇಧಿಸಿದೆ.
5) ಯಾವುದೇ ವ್ಯಕ್ತಿಗಳ ಅಥವಾ ಶವಗಳ ಪ್ರತಿಕೃತಿ ಪ್ರದರ್ಶನ ಮಾಡುವುದನ್ನು ಪ್ರಚೋದಿಸಬಹುದಾದಂತಹ ಬಹಿರಂಗ
ಘೋಷಣೆಗಳನ್ನು ಕೂಗುವುದು ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು
ಸಂಕೇತಗಳನ್ನು, ಭಿತ್ತಿಪತ್ರ ಅಥವಾ ಇತರ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿದೆ.
6) ಯಾವುದೇ ಖಾಸಗಿ/ಸಾರ್ವಜನಿಕ ಆಸ್ತಿಗಳನ್ನು ಹಾನಿಗೊಳಿಸುವ ಮತ್ತು ವಿರೂಪಗೊಳಿಸುವ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿಷೇಧಿಸಿದೆ.
7) ಯಾವುದೇ ವ್ಯಕ್ತಿಯ ಜಾತಿ/ಧರ್ಮ/ಕೋಮು/ಪಂಥಗಳಿಗೆ ಅಥವಾ ಸಾರ್ವಜನಿಕ ನೈಜಕತಗೆ ಬಾಧಕ ಉಂಟು
ಮಾಡಬಹುದಾದಂತಹ ಚಟುವಟಿಕೆಗಳನ್ನು ನಿಷೇಧಿಸಿದೆ.
8) ಸರ್ಕಾರಿ ಸಂಸ್ಥೆಗಳು/ಸಂಘಟನೆಗಳು ಹಾಗೂ ಕಾರ್ಯನಿರತ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ನಿಂಧಿಸುವಂತಹ
ಅವಹೇಳನಕಾರಿಯಾದಂತಹ ಯಾವುದೇ ಘೋಷಣೆಗಳು/ ಭಾಷಣಗಳು ಪ್ರಕಟಣೆಗಳು/ ಅವಾಚ್ಯ ಶಬ್ದಗಳ ಬಳಕೆ/
ಪ್ರಚೋದನಾಕಾರಿ ಭಾಷಣ/ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಿದೆ.
9) ಈಗಾಗಲೇ ಸರ್ಕಾರ ಕಾರ್ಯಕ್ರಮಗಳು ನಿಗಧಿಯಾಗಿದಲ್ಲಿ ಕೆಳಕಂಡ ಪ್ರಾಧಿಕಾರದ ಅನುಮತಿ ಇಲ್ಲದೆಮುಂದುವರೆಯತಕ್ಕದ್ದಲ್ಲ.  

ಕೋಮುಗಲಭೆಗೆ ನಿಗಿ..ನಿಗಿ “ಕೆಂಡ”ವಾದ ಶಿವಮೊಗ್ಗ:ವಾಹನ ಜಖಂ-ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ.

Spread the love
Leave A Reply

Your email address will not be published.

Flash News