ಬಿಜೆಪಿ ಸರ್ಕಾರಕ್ಕೆ ಬಿಸಿ ತುಪ್ಪವಾಗ್ತಿದೆಯಾ “ಯೋಗ ವಿವಿ” ಸ್ಥಾಪನೆ?!?! “ಎಡ-ಬಲ” ಫೈಟ್ ಗೆ “ಅಖಾಡ”ವಾದ ವಿವಾದ..!!??

0

ಬೆಂಗಳೂರು:ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆ ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿ ಅವರನ್ನು ಮೆಚ್ಚಿಸುವ ಏಕೈಕ ಉದ್ದೇಶಕ್ಕೆ ಪ್ರತಿಷ್ಟೆಯನ್ನಾಗಿಸಿಕೊಂ ಡಿರುವ ಯೋಗ ವಿಶ್ವವಿದ್ಯಾಲಯ ಮತ್ತೆ ಸುದ್ದಿಯಲ್ಲಿದೆ.ಇದಕ್ಕೆ ಕಾರಣ ಮತ್ತೆ ಬಲಪಂಥೀಯರು ಹಾಗೂ ವಿಚಾರವಾದಿ,ಎಡಪಂಥೀಯರ ನಡುವೆ ಹುಟ್ಟಿಕೊಂಡಿರುವ ತಮ್ಮದೇ ಆದ ರೀತಿಯ ವ್ಯಾಖ್ಯಾನ-ವಿಶ್ಲೇಷಣೆ-ತರ್ಕ-ಟೀಕೆಗಳು.ಯೆಸ್..ಎಡಪಂಥೀಯರು ಹಾಗೂ ಬಲಪಂಥೀಯರ ನಡುವೆ ವಾಕ್ಸಮರಕ್ಕೆ ಮತ್ತೊಂ ದು ವೇದಿಕೆ ಸೃಷ್ಟಿಸಿಕೊಟ್ಟಿದೆ.ಕನ್ನಡ ಫ್ಲಾಶ್ ನ್ಯೂಸ್ ಗೆ ಸಿಕ್ಕಿರೋ EXCLUSIVE ಮಾಹಿತಿಗಳ ಸ್ಟೋರಿ ನಿಮಗಾಗಿ..

ಕೆಲವು ಮೂಲಗಳ ಪ್ರಕಾರ,ಬೆಂಗಳೂರು ವಿವಿಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ಪಕ್ಕದಲ್ಲೇ 100-150 ಎಕ್ರೆ ಪ್ರದೇಶವನ್ನು ಯೋಗ ವಿವಿಗೆ ಮೀಸಲಿಡೊಕ್ಕೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದ್ದ ಮಾತುಕತೆ ನಿರ್ಣಾಯಕ ಹಂತ ತಲುಪಿದೆಯಂತೆ. ಯೋಗ ದ  ಮೂಲ ಭಾರತದ್ದು ಅದರ ಉಳಿವು-ಬೆಳವಣಿಗೆ ಹಾಗು ಪುನರುಜ್ಜೀವನಕ್ಕೆ ಯೋಗ ವಿವಿ ಸ್ಥಾಪನೆ ಅನಿವಾರ್ಯ ಎನ್ನು ವುದು ಸರ್ಕಾರ ಮತ್ತು ಬಲಪಂಥೀಯರ ನಿಲುವಾದ್ರೆ,ಯೋಗದ ಹೆಸರಲ್ಲಿ ಜಾತ್ಯಾತೀತ ಜೀವಂತವಾಗಿರುವ ವಿವಿ ಕ್ಯಾಂಪಸ್ ನಲ್ಲಿ  ಆರ್ ಎಸ್ ಎಸ್ ಸಿದ್ಧಾಂತ ಬಿತ್ತಿ ಬೆಳೆಯೋ ದುರುದ್ದೇಶವೇ ವಿವಿಯ ಸ್ಥಾಪನೆ ಎನ್ನುವುದು ಎಡಪಂಥೀಯರ ವಾದ.

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಮೇಲೆ ನೇಪಥ್ಯಕ್ಕೆ ಸರಿದಿದ್ದ ಯೋಗಕ್ಕೆ ಎಲ್ಲಿಲ್ಲದ ಬೆಲೆ-ನೆಲೆ-ಪ್ರಾಶಸ್ತ್ಯ ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ. ಯೋಗದ ಮಹತ್ವವನ್ನು ಜಾಗತಿಕವಾಗಿ ಪಸರಿಸಿದ್ದಷ್ಟೇ ಅಲ್ಲ,ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಣೆಗೆ ತಂದ ಹೆಗ್ಗಳಿಕೆನೂ ಮೋದಿ ಅವರಿಗೆ ಸಲ್ಲುತ್ತದೆ.ಯೋಗ ನಮ್ಮ ಭಾರತೀಯ ಸಂಸ್ಕ್ರತಿ,ಸಂಸ್ಕಾರದ ಧ್ಯೋತಕ.ಅದು ಕೇವಲ ಒಂದು ವಿಜ್ಞಾನವಲ್ಲ,ಬದುಕಿನ ಭಾಗ,ಮನಸು ಹಾಗೂ ದೇಹವನ್ನು ಸಮತೋಲನದಲ್ಲಿಡಲು ಸಹಕಾರಿ ಎನ್ನುವುದೆಲ್ಲಾ ನಿರ್ವಿವಾದ.ಅದಕ್ಕೆ ಯಾರೊಬ್ಬರ ವಿರೋಧವೂ ಇಲ್ಲ..

ಆದ್ರೆ ಯೋಗ ವಿವಿ ಸ್ಥಾಪನೆ ವಿಷಯದಲ್ಲಿ ಆಕ್ಷೇಪ ಎದ್ದಿರುವುದು ಬೇರೆಯದೇ ಕಾರಣಕ್ಕೆ ಎನ್ನೋದನ್ನು ಗಮನಿಸಬೇಕಾಗ್ತದೆ .ಯೋಗವನ್ನು ಗೌರವಿಸುವ-ಪ್ರೀತಿಸುವ ಅದು ನಮ್ಮ ಹೆಮ್ಮೆ ಎಂದೆಲ್ಲಾ ಹೇಳುವ ವಿಚಾರವಾದಿಗಳು,ಎಡಪಂಥೀಯರು ಯೋಗ ವಿವಿಯನ್ನು ವಿರೋಧಿಸ್ಲಿಕ್ಕೆ ಕಾರಣ ಯೋಗ ಬೆಳೆಯಬಾರದು,ಅದರ ಪ್ರಯೋಜನ ಯಾರಿಗೂ ಸಿಗಬಾರದೆನ್ನುವ ಕಾರಣಕ್ಕಲ್ಲ..ಅಂತದ್ದೊಂದು ತಪ್ಪು ಭಾವನೆಯನ್ನು ಸರ್ಕಾರ ಹಾಗೂ ಬಲಪಂಥೀಯರು ಸಾರ್ವಜನಿಕರಲ್ಲಿ ಮೂಡಿಸುವ ಪ್ರಯತ್ನ ಮಾಡುತ್ತಿರುವ ಆರೋಪವಿದೆ.

ಆದ್ರೆ ವಿಚಾರವಾದಿಗಳು ಹಾಗೂ ಎಡಪಂಥೀಯರಿಗೆ ಆತಂಕವಿರುವುದು,ಯೋಗಾ ವಿವಿ ಹೆಸರಲ್ಲಿ ಬೆಂಗಳೂರು ವಿವಿಯ ಜಾತ್ಯಾ ತೀತ ಪರಿಕಲ್ಪನೆಯ ವಾತಾವರಣವನ್ನು ಹಾಳು ಮಾಡುತ್ತಾರೆನ್ನುವುದಂತೆ.ಯೋಗವನ್ನು ಈಗಾಗ್ಲೇ ಬಲಪಂಥೀಯರ ಅರ ಸೊತ್ತಿಗೆ ಎನ್ನುವಂತೆ ಬಿಂಬಿಸಲಾಗಿದೆ.ವಿವಿ ಸ್ಥಾಪನೆಯಾದ್ಮೇಲೆ ಅದನ್ನು ಆರ್ ಎಸ್ ಎಸ್  ಅಧ್ಯಯನ ಹಾಗೂ ತರಬೇತಿ ಕೇಂದ್ರವನ್ನಾಗಿಸಿದ್ರೂ ಆಶ್ಚರ್ಯವಿಲ್ಲ.ಮುಂದೇನಾಗುತ್ತೋ ಗೊತ್ತಿಲ್ಲ,ಆದ್ರೆ ಸಧ್ಯಕ್ಕೆ  ಅಧಿಕಾರದಲ್ಲಿರುವ ಸಂದರ್ಭದಲ್ಲೇ ಯೋಗಾ ವಿವಿ ಸ್ಥಾಪಿಸಿದ್ರೆ ಅದು ಭವಿಷ್ಯದಲ್ಲಿ ತನ್ನನ್ನು ತಾನೇ ಬೆಳೆಸಿಕೊಂಡು ಹೋಗುತ್ತದೆ..ವಿವಿ ಸ್ಥಾಪನೆಯೂ ಆದಂತಾಗು ತ್ತೆ.ಜೊತೆಗೆ ಉದ್ದೇಶವೂ ಈಡೇರಿದಂತಾಗುತ್ತದೆ ಎನ್ನುವುದು ಬಿಜೆಪಿ ಪಕ್ಷ ಹಾಗೂ ಸರ್ಕಾರ ಮತ್ತು ಆರ್ ಎಸ್ ಎಸ್ ಅಜೆಂಡಾ ಎನ್ನುವುದು ಪ್ರಗತಿಪರರ ಆರೋಪ.

ಪ್ರಗತಿಪರರು,ವಿಚಾರವಾದಿಗಳು ಹಾಗೂ ಎಡಪಂಥೀಯರಿಗೆ ಯೋಗಾ ವಿವಿ ಸ್ಥಾಪನೆ ಬಗ್ಗೆ ಯಾವುದೇ ಆಕ್ಷೇಪವಿಲ್ಲ ವಂತೆ.ಆದ್ರೆ ಇದಕ್ಕಾಗಿ ಬೆಂಗಳೂರು ವಿವಿ ಜಾಗವೇ ಬೇಕಾ..ಅಂಬೇಡ್ಕರ್ ಅಧ್ಯಯನ ಕೇಂದ್ರದ ಪಕ್ಕದಲ್ಲೇ ವಿವಿಯನ್ನು ಸ್ಥಾಪಿಸಬೇಕೆನ್ನುವ ಹಠವೇಕೆ..?ಎನ್ನುವ ಪ್ರಶ್ನೆ ಅವರದು.ಬೆಂಗಳೂರಿನಲ್ಲೇ ವಿವಿ ಮಾಡಬೇಕೆನ್ನುವುದಿದ್ದರೆ ನಗರದ ಹೊರವಲಯದಲ್ಲಿರುವ ಖಾಲಿ ಜಾಗದಲ್ಲಿ ಕಟ್ಟಿಸಲಿ..ಹೇಗೂ ಯೋಗಕ್ಕೆ ಪ್ರಶಾಂತವಾದ ವಾತಾವರಣವೇ ಪ್ರಾಶಸ್ತ್ಯದಾಯಕವಲ್ಲವೇ..?ಇದೇನ್  ಸರ್ಕಾರಕ್ಕೆ ಗೊತ್ತಿಲ್ಲವೇ ಎಂದು ಪ್ರಶ್ನಿಸುವ ಪ್ರಗತಿಪರರು ಬೆಂಗಳೂರು ವಿವಿ ಆವರಣದಲ್ಲೇ ಆಗಬೇಕೆನ್ನುವುದರ ಹಿಂದಿನ ಉದ್ದೇಶವೇ ಆರ್ ಎಸ್ ಎಸ್ ಹಾಗೂ ಹಿಂದುತ್ವ ಸ್ಥಾಪನೆ ಹಾಗೂ ಪಸರಣೆ ಎಂದು ಆಪಾದಿಸಲಾರಂಭಿಸಿದ್ದಾರೆ.

ಆದ್ರೆ ಇದು ನಿರಾದಾರವಾದ ಆರೋಪ.ವಿವಿ ಆವರಣದಲ್ಲಿ ವಿಶಾಲವಾದ ಭೂಮಿ ಇದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದ ರಿಂದ ಅಲ್ಲಿ ವಿವಿ ಸ್ಥಾಪಿಸಲು ಯೋಚಿಸಿದ್ದೇವೆ.ಯೋಗದ ಬಗ್ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಸ್ಥಾಪನೆಗೆ ಪೂರಕವಾದ ವ್ಯವಸ್ಥೆ ಮಾಡಿಕೊಳ್ಳಲಾಗ್ತಿದೆ.ಹಾಗೆಂದಾಕ್ಷಣ ಜಾತ್ಯಾತೀತೆಯನ್ನು ನಾಶ ಮಾಡಿ ಹಿಂದುತ್ವ ಪ್ರತಿಷ್ಠಾಪಿಸ ಲಾಗ್ತದೆ ಎಂದು ಭಾವಿಸುವುದು ಮೂರ್ಖತನದ ಪರಮಾವಧಿ ಎನ್ನುತ್ತಾರೆ  ಬಲಪಂಥೀಯರು.ಯೋಗ ಜಾತಿ ವ್ಯವಸ್ಥೆ ಮೀರಿದ ಜೀವನಶೈಲಿ ಅದಕ್ಕೆ ಕಟ್ಟುಪಾಡುಗಳನ್ನು ಹಾಕೊಕ್ಕೆ ಸಾಧ್ಯವಿದೆಯಾ..ಇದನ್ನು ಮೊದಲು ಅರಿಯಬೇಕು..ವಿರೋಧಿಸುವುದನ್ನು ಬಿಟ್ಟು ಯೋಗ ವಿವಿ ಸ್ಥಾಪನೆ ಹಿಂದಿರುವ ಸದುದ್ದೇಶವನ್ನು ಬೆಂಬಲಿಸ್ಬೇಕೆಂದು ಮನವಿ ಮಾಡಿದ್ದಾರೆ.

ಅದೇನೇ ಆಗಲಿ,ಬೆಂಗಳೂರು ವಿವಿ ಕ್ಯಾಂಪಸ್ ನ 100-150 ಎಕ್ರೆ ಪ್ರದೇಶದಲ್ಲಿ ಯೋಗಾ ವಿವಿ ಸ್ಥಾಪನೆ ಆಗುವ ವಿಚಾರಕ್ಕೆ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ.ವಿವಿ ಸ್ಥಾಪಿಸಿಯೇ ಸಿದ್ಧ ಎಂದು ಬಿಜೆಪಿ ಸರ್ಕಾರ ನೀಲನಕ್ಷೆ ಸಿದ್ಧಮಾಡಿಕೊಳ್ತಿದ್ರೆ ಎಡಪಂಥೀಯರು,ಪ್ರಗತಿಪರರು ಹಾಗೂ ವಿಚಾರವಾದಿಗಳು ಅದ್ಹೇಗೆ ಮಾಡ್ತಿರೋ ನಾವೂ ನೋಡ್ತೇವೆ ಎಂದು ಹೋರಾಟದ ಎಚ್ಚರಿಕೆ ನೀಡಿದ್ದಾರೆ..ಕೋರ್ಟ್ ಮೆಟ್ಟಿಲೇರೊಕ್ಕೆ ಕೂಡ ಸಿದ್ಧವಾಗಿದ್ದಾರೆ.ಇದೆಲ್ಲವನ್ನು ನೋಡಿದ್ರೆ ಯೋಗಾ ವಿವಿ ಸ್ಥಾಪನೆ ಸರ್ಕಾರ ಅಂದುಕೊಂಡಷ್ಟು ಸುಲಭ-ಸಲೀಸಾಗಿಲ್ಲ ಎನ್ನೋದಂತೂ ಸತ್ಯ.ಸುಮ್ನೆ ವಿವಾದ ಹುಟ್ಟಿ ಹಾಕೊಕ್ಕೆ ನೂರಾರು ಕೋಟಿ ಖರ್ಚು ಮಾಡಿ ವಿವಿ ಮಾಡುವ ಅಗತ್ಯವಿದೆಯಾ..ಖಂಡಿತಾ ಇಲ್ಲ..ಅಲ್ವಾ..  

Spread the love
Leave A Reply

Your email address will not be published.

Flash News