ಅಪ್ರಾಪ್ತೆಯ ಗ್ಯಾಂಗ್ ರೇಪ್ ಗೆ  ಮೆಗ್ಗಾನ್ ಆಡಳಿತ ಮಂಡಳಿ ವೈಫಲ್ಯ-ಭ್ರಷ್ಟತೆಯೂ ಕಾರಣನಾ..??!!ಔಟ್ ಸೋರ್ಸ್ ಏಜೆನ್ಸಿಗಳ ಕಿಕ್ ಬ್ಯಾಕ್ ಆಸೆಗೆ ಖಾಯಂಸಿಬ್ಬಂದಿ ನಿಯೋಜನೆಯನ್ನೇ ಮರೆತುಬಿಡ್ತಾ ಆಡಳಿತ ಮಂಡಳಿ.!!

0

ಶಿವಮೊಗ್ಗ:ಏನೇ ಕಾರಣ ಕೊಡ್ಲಿ..ಹೇಗೆ ನಿರಾಕರಣೆ ಮಾಡಲಿ..ಮೆಗ್ಗಾನ್ ಆಡಳಿತವೇ ಶಿವಮೊಗ್ಗ ಜಿಲ್ಲೆ ನಾಚಿಕೆ-ಮುಜುಗರದಿಂದ ತಲೆ ತಗ್ಗಿಸುವಂತೆ ಮಾಡಿದ ಅಪ್ರಾಪ್ತೆ ಮೇಲಿನ ಗ್ಯಾಂಗ್ ರೇಪ್ ನ ನೈತಿಕ ಹೊಣೆಯನ್ನು ಮೆಗ್ಗಾನ್ ಆಡಳಿತ ಹೊರಲೇಬೇಕು..ಘಟನೆಯನ್ನು ಸೂಕ್ಮವಾಗಿ ಅವಲೋಕಿಸಿದ್ರೆ ಮೆಗ್ಗಾನ್ ವೈಫಲ್ಯ-ಆಡಳಿತದಲ್ಲಿರುವ ಕೆಲ ಹಣಬಾಕರು-ಭ್ರಷ್ಟರಿಂದಲೇ ಇಂತದ್ದೊಂದು ಅಚಾತುರ್ಯ ನಡೆದೋಗಿದೆ..ಇದು ನಾವ್ ಹೇಳ್ತಿರುವುದಲ್ಲ..ಪ್ರಜ್ಞಾವಂತರ ಬಾಯಿಂದ್ಲೇ ಹೊರಬಂದಿರುವ ಮಾತುಗಳಿವು..

ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ಶಿವಮೊಗ್ಗದ ಮನ ಕಲುಕಿದೆ.ಜಿಲ್ಲೆ ನೂರಾರು ಕ್ರೈಮ್ಸ್ಗಳಿಗೆ ಸಾಕ್ಷಿಯಾಗಿದ್ರೂ ಇಂತದ್ದೊಂದು ಪೈಶಾಚಿಕ ಕೃತ್ಯದ ಕಳಂಕವನ್ನೂ ಹಿಂದೆಂದೂ ಹೊತ್ತುಕೊಂಡಿರಲಿಲ್ಲ.ಆ ಕಾರಣಕ್ಕೆ ಶಿವಮೊಗ್ಗಕ್ಕೆ ಪ್ರಜ್ಞಾವಂತರು ಹಾಗು ಸುಸಂಸ್ಕ್ರತರ ಜಿಲ್ಲೆ ಎನ್ನುವ ಹೆಗ್ಗಳಿಕೆ ಇತ್ತು.ಆದ್ರೆ ಈ ಗ್ಯಾಂಗ್ ರೇಪ್ ಇಷ್ಟು ವರ್ಷ ಕಾಪಾಡಿಕೊಂಡ್ ಬಂದಿದ್ದ ಘನತೆ-ಮಾನ-ಪ್ರತಿಷ್ಟೆಯನ್ನು ಮಣ್ಣುಪಾಲು ಮಾಡಿದೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಹೊರಗುತ್ತಿಗೆ ಕಾಮಾಂಧ ಮನೋಜ್
ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಹೊರಗುತ್ತಿಗೆ ಕಾಮಾಂಧ ಮನೋಜ್

ಶಿವಮೊಗ್ಗ ಜಿಲ್ಲೆಗೆ  ಕಪ್ಪುಚುಕ್ಕೆ ಮೂಡಲು ಕಾರಣವಾದ ಕಾಮಾಂಧರನ್ನು ಗಲ್ಲಿಗೇರಿಸಬೇಕು..ಇದು ಇನ್ನಿತರರಿಗೂ ಪಾಠವಾಗ್ಬೇಕೆ ನ್ನುವ ಕೂಗು ಸಾರ್ವತ್ರಿಕವಾಗಿ ಕೇಳಿಬರುತ್ತಿದೆ.ಇದೆಲ್ಲದರ ನಡುವೆ ಇದೆಲ್ಲಕ್ಕೂ ನೈತಿಕವಾಗಿ ಕಾರಣವಾದ ಮೆಗ್ಗಾನ್ ಆಸ್ಪತ್ರೆ ಆಡಳಿತ ಮಂಡ ಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಊಟಕ್ಕೆ ಸೂಕ್ತ ವ್ಯವಸ್ಥೆ ಇದ್ದಿದ್ದರೆ ಬಾಲಕಿ ಹೊರಗೆ ಹೋಗುತ್ತ ಲೂ ಇರಲಿಲ್ಲ. ಕಾಮಪಿಶಾಚಿಗಳಿಗೆ ಆಹಾರವೂ ಆಗುತ್ತಿರಲಿಲ್ಲ.ಇದೆಲ್ಲಕ್ಕೂ ಕಾರಣವಾದ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ನಡೆದ  ಅಪ್ರಾಪ್ತ ಬಾಲೆಯ ಮೇಲಿನ ಗ್ಯಾಂಗ್ ರೇಪ್ ಶಿವಮೊಗ್ಗದ ಹೆಸರನ್ನು ಮುನ್ನಲೆಗೆ ತಂದುಬಿಟ್ಟಿದೆ.ಸಿಎಂ ತವರಲ್ಲಿನ ಕಾನೂನು ಸುವ್ಯವಸ್ಥೆ-ಸಾಮಾಜಿಕ ವ್ಯವಸ್ಥೆ ಬಗ್ಗೆ ಆಡಿಕೊಂಡು ಮಾತನಾಡುವಂತಾಗಿದೆ.ಜಿಲ್ಲೆಯನ್ನೇ ಚೆನ್ನಾಗಿ ಇಟ್ಟುಕೊಳ್ಳಲಿಕ್ಕಾಗದ ದೊರೆ ನಾಡನ್ನೇಗೆ ನಿಭಾಯಿಸಿಯಾರು ಎಂದು ಟೀಕಾಪ್ರಹಾರ ಕೇಳಿಬರುತ್ತಿದೆ.ಇದೆಲ್ಲದರ ನಡುವೆ ಘಟನೆಗೆ ಕಾರಣವಾದ ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆ-ಅಕ್ರಮದ ವಿರುದ್ಧ ಪ್ರತಿಭಟನೆಯ ದೊಡ್ಡ ಧ್ವನಿ ಮೊಳಗತೊಡಗಿದೆ.

ಶಿವಪ್ಪನಾಯಕ ಮೆಡಿಕಲ್ ಕಾಲೇಜ್ ಡೀನ್ ಡಾ.ಓಡಾ ಸಿದ್ದಾಜರ ಸಿದ್ದಪ್ಪ
ಶಿವಪ್ಪನಾಯಕ ಮೆಡಿಕಲ್ ಕಾಲೇಜ್ ಡೀನ್ ಡಾ.ಓಡಾ ಸಿದ್ದಾಜರ ಸಿದ್ದಪ್ಪ

ಮೆಗ್ಗಾನ್ ಆಸ್ಪತ್ರೆಗೆ ಮೊದಲಿಂದ್ಲು ಅಕ್ರಮ-ಹಗರಣ-ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡೇ ಇದೆ.ಆದರೆ ಸಾಮೂಹಿಕ ಅತ್ಯಾಚಾರಕ್ಕೆ ಕಾರಣವಾದಂಥ ಕೆಟ್ಟ ಅಪವಾದ ತಟ್ಟಿರಲಿಲ್ಲ ಅಷ್ಟೇ..ಕಂಪ್ಲೆಂಟ್ ಕೊಡುವ ಮೂಲಕ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣವನ್ನು ಮುಚ್ಚಾಕುವ ಪ್ರಯತ್ನ ಮಾಡುತ್ತಿರುವ ಮೆಗ್ಗಾನ್ ಆಡಳಿತ ಮಂಡಳಿ ವಿರುದ್ಧವೇ ಕ್ರಮ ಕೈಗೊಳ್ಳಬೇಕೆನ್ನುವ ಮಾತು ಕೇಳಿಬರುತ್ತಿದೆ.ಆಸ್ಪತ್ರೆ ಅಭಿವೃದ್ದಿ-ಮೂಲಭೂತ ಸೌಕರ್ಯದ ನೆವದಲ್ಲಿ ಕೋಟಿ ಕೋಟಿ ಲೂಟಿ ಮಾಡುವ ಮೆಗ್ಗಾನ್ ಆಡಳಿತ ಮಂಡಳಿಗೆ ತನ್ನ ಆಸ್ಪತ್ರೆ ಕ್ಯಾಂಪಸ್ ನಲ್ಲಿ ಮೂಲಭೂತವಾಗಿ ಬೇಕಾದ ಊಟ-ವಸತಿಗೆ ಸೂಕ್ತ ವ್ಯವಸ್ಥೆ ಮಾಡಬೇಕೆನ್ನುವ ದೂರದೃಷ್ಟಿಯಾಗಲಿ,ಕಾಳಜಿಯಾಗಲಿ ಇಲ್ಲದಿರುವುದರಿಂದ್ಲೇ ಇಂತದ್ದೊಂದು ಅಚಾತುರ್ಯ-ಅವಘಢ ಸೃಷ್ಟಿಯಾಯ್ತೆನ್ನುವುದು ಮೆಗ್ಗಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆನ್ನುವವರ ವಾದ.

ಮೆಗ್ಗಾನ್ ನಲ್ಲಿ ಇಷ್ಟೊಂದು ಅವ್ಯವಸ್ಥೆ ತಾಂಡವವಾಡೊಕ್ಕೆ ಕಾರಣವೇ ಆಡಳಿತ ಮಂಡಳಿಯಲ್ಲಿರುವ ಕೆಲವು ಭ್ರಷ್ಟರು. ಆಸ್ಪತ್ರೆ ಗೆ ಮಂಜೂರಾಗುವ  ಸರ್ಕಾರಿ ಯೋಜನೆಗಳ ಹಣವನ್ನು ಲೂಟಿ ಮಾಡೋದೇ ಇವರ ಕಾಯಕವಾಗೋಗಿದ್ರಿಂದ ಆಸ್ಪತ್ರೆ ಅಭಿವೃದ್ಧಿನೂ ಆಗ್ಲಿಲ್ಲ.ಉದ್ದಾರನೂ ಆಗ್ಲಿಲ್ಲ. ಅಕ್ಕಪಕ್ಕದ ಜಿಲ್ಲೆಗಳಿಗೆ ಜೀವದಾಯಿನಿ ಆಗಬೇಕಿದ್ದ ಮೆಗ್ಗಾನ್ ಶತಮಾನ ಕಳೆದಿದ್ದರೂ ಹಾಳುಹಂಪಿಯಂತೆ ಹಾಳುಸುರಿಯುತ್ತಿರುವುದಕ್ಕೆ ಕಾರಣವೇ ಭ್ರಷ್ಟರ ಕೂಟ.ಅದು ಈ ಹೊತ್ತಿನವರೆಗು ಮುಂದುವರೆದಿದೆ ಎನ್ನುವುದು ದುರಂತವಾದ್ರೂ ಅಷ್ಟೇ ಸತ್ಯ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು

ನಿಮಗೆ ಗೊತ್ತಿರಲಿ..ಓದುಗರೇ,ಮೆಗ್ಗಾನ್ ಆಸ್ಪತ್ರೆಯಲ್ಲಿ ಇವತ್ತಿಗೂ ಅಗತ್ಯ ಸಿಬ್ಬಂದಿಯೇ ಇಲ್ಲ..ಸೆಕ್ಯೂರಿಟಿಯಿಂದ ಹಿಡಿದು ಬೋಧಕ-ಬೋಧಕೇತರ ಸಿಬ್ಬಂದಿ ಎಲ್ಲವೂ ಶಾರ್ಟೇಜ್..ಏಕೆ.. ಖಾಲಿ ಹುದ್ದೆಗಳ ಭರ್ತಿಗೆ ಅವಕಾಶವಿಲ್ಲವೇ. ಎಂದು ಕೇಳಿದ್ರೆ ಖಂಡಿತಾ ಇದೆ..ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಅವಕಾಶವೂ ಇದೆ.ಹಾಗಿದ್ದೂ ಏಕೆ ಕೊರತೆ ಕಾಣ್ತಿದೆ ಎಂಬ ಪ್ರಶ್ನೆಗೆ ಉತ್ತರ ಹೊರಗುತ್ತಿಗೆ ಮಾಫಿಯಾ..ನೀವು ನಂಬಲಿಕ್ಕಿಲ್ಲ,ಮೆಗ್ಗಾನ್ ಆಸ್ಪತ್ರೆಗೆ ಮ್ಯಾನ್ ಪವರ್ ನ್ನು ಸಪ್ಲೈ ಮಾಡಲಿಕ್ಕೆಂದೇ ಅನೇಕ ಹೊರಗುತ್ತಿಗೆ ಕಂಪೆನಿಗಳು ಹುಟ್ಟಿಕೊಂಡವು ಎಂದ್ರೆ ನಂಬ್ತಿರಾ..ಮೆಗ್ಗಾನ್ ನಲ್ಲಿ ಹತ್ತಾರು ಮ್ಯಾನ್ ಪವರ್ ಏಜೆನ್ಸಿಗಳದ್ದೇ ದರ್ಬಾರ್..ಆಡಳಿತ ಮಂಡಳಿಯಲ್ಲಿರುವ ಕೆಲ ಭ್ರಷ್ಟರೊಂದಿಗೆ ಪರ್ಸಂಟೇಜ್ ನ್ನು ಫಿಕ್ಸ್ ಮಾಡಿಕೊಂಡು ಸರ್ಕಾರಕ್ಕೆ ಬೇರೆಯದೇ ಲೆಕ್ಕ ಕೊಟ್ಟು ಯಾಮಾರಿಸುತ್ತಿರುವ ಬಗ್ಗೆ ದೂರಿದೆ.

ಈ ಹೊರಗುತ್ತಿಗೆ ಏಜೆನ್ಸಿಗಳಿಗೆ ಬಾಸ್ ಗಳೇ ಸಣ್ಣಪುಟ್ಟ ರಾಜಕಾರಣಿಗಳು.ಪುಡಿ ರೌಡಿಗಳೆಂದ್ರೆ ಆಶ್ಚರ್ಯವಾಗಬಹುದು.ಅವರು ಮೆಗ್ಗಾನ್ ಮ್ಯಾನೇಜ್ಮೆಂಟ್ ಜೊತೆಗೆ ಕುತ್ಕೊಂಡು ಪರ್ಸಂಟೇಜ್ ಫಿಕ್ಸ್ ಮಾಡ್ಕೊಂಡು ಟೆಂಡರ್ ನಲ್ಲಿ ಪಾಲ್ಗೊಳ್ಳುತ್ತಾರೆ.ಇಂತಿಷ್ಟೇ ಜನ ಬೇಕೆಂದು ಡಿಸೈಡ್ ಮಾಡೋದೇ ಮ್ಯಾನ್ ಪವರ್ ಏಜೆನ್ಸಿ ಮಾಲಿಕರೆಂದ್ರೆ ಅವರ ಹಿಡಿತ ಮೆಗ್ಗಾನ್ ಆಡಳಿತ ಮಂಡಳಿ ಮೇಲೆ ಎಷ್ಟರ ಮಟ್ಟಿಗಿದೆ ಎನ್ನೋದನ್ನು ಅರ್ಥ ಮಾಡಿಕೊಳ್ಳಬಹುದು..ಹಾಗಾಗಿನೇ ಮೆಗ್ಗಾನ್ ಒಳ ಹೊಕ್ಕರೆ ಪ್ರತಿ ಹೆಜ್ಜೆಗೂ ಹೊರಗುತ್ತಿಗೆ ಸಿಬ್ಬಂದಿನೇ ಎಡತಾಕುತ್ತಾರೆ.ಅಪ್ರಾಪ್ತೆ ಮೇಲಿನ ಅತ್ಯಾಚಾರ ನಡೆಸಿದ ಮನೋಜ್ ಕೂಡ ಹೊರಗುತ್ತಿಗೆ ಸಿಬ್ಬಂದಿನೇ..

ಹೊರಗುತ್ತಿಗೆ ಏಜೆನ್ಸಿ ಮಾಫಿಯಾದಿಂದ ಎಲ್ಲಿವರೆಗೆ ಮೆಗ್ಗಾನ್ ಆಡಳಿತ ವ್ಯವಸ್ಥೆ ಮುಕ್ತವಾಗುವುದಿಲ್ಲವೋ ಅಲ್ಲಿವರೆಗೆ ಆಸ್ಪತ್ರೆ ಉದ್ದಾರವಾಗೊದಿಲ್ಲ..ಈ ಅವ್ಯವಸ್ಥೆಯಿಂದ್ಲೇ ಇಂಥಾ ಗ್ಯಾಂಗ್ ರೇಪ್ ನಂಥ ದುಷ್ಕ್ರತ್ಯ ನಡೆಯುತ್ತಿರುತ್ವೆ.ಆಡಳಿತ ಮಂಡಳಿಯ ಔಟ್ ಸೋರ್ಸ್ ಮೇಲಿನ ಅತಿಯಾದ ವ್ಯಾಮೋಹಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕ್ಲೇಬೇಕಿದೆ.ಸಿಬ್ಬಂದಿ ಮೇಲಿನ ಚಟುವಟಿಕೆ-ಆಗುಹೋಗುಗಳ ಮೇಲೆ ಹದ್ದುಗಣ್ಣಿನ ನಿಗಾ ಇಡುವ ವ್ಯವಸ್ಥೆ ಆಗಬೇಕಿದೆ..ಎಲ್ಲಕ್ಕಿಂತ ಹೆಚ್ಚಾಗಿ ಆಸ್ಪತ್ರೆ ಕ್ಯಾಂಪಸ್ ನಲ್ಲಿ ಊಟೋಪಚಾರ-ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟುಗೊಳಿಸ್ಬೇಕು..ಬಾಲಕಿ ಮೇಲಿನ ಅತ್ಯಾಚಾರ ಈ ಎಲ್ಲಾ ಬದಲಾವಣೆಗಳಿಗೆ ಮುನ್ನುಡಿ ಬರೆಯುತ್ತಾ..?    

Spread the love
Leave A Reply

Your email address will not be published.

Flash News