“ಸೈಲೆಂಟ್” ಸುನೀಲನ “ಲೆಫ್ಟ್-ರೈಟ್-ಥಿಂಕ್ ಟ್ಯಾಂಕ್”, ರೌಡಿ ಲಿಂಗ ಮಟಾಷ್- ಹಂತಕರ ಬೆಂಗಳೂರು ಸ್ಕೆಚ್, ಹಾಸನದಲ್ಲಿ ವರ್ಕೌಟ್..

0

ಬೆಂಗಳೂರು/ಹಾಸನ:ಕುಖ್ಯಾತ ಪಾತಕಿ ಸೈಲೆಂಟ್ ಸುನೀಲನ ಎದೆಗೆ ಭರ್ಜಿ ಹಾಕಿದಂಥ ಅಘಾತದ ಅನುಭವ..ತನ್ನ ಲೆಫ್ಟ್-ರೈಟ್-ಥಿಂಕ್ ಟ್ಯಾಂಕ್ ಎಲ್ಲವೂ ಆಗಿದ್ದ ಬಲಗೈ ಭಂಟ ಲಿಂಗ  ಅಲಿಯಾಸ್ ಲಿಂಗರಾಜ್ ಹಾಸನದಲ್ಲಿ ಹೆಣವಾಗೋಗಿದ್ದಾನೆ.ಎನಿಮಿಟಿ ಎನ್ನೋದು ಎಲ್ಲೋದ್ರೂ ಬೆನ್ ಬಿಡೊಲ್ಲ ಎನ್ನುವುದು ಲಿಂಗನ ಕೊಲೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.ಬೆಂಗ್ಳೂರಲ್ಲಿದ್ದರೆ ಪ್ರಾಬ್ಲಂ ಎಂದ್ಕೊಂಡು ಹಾಸನದ ಚೆನ್ನರಾಯಪಟ್ಟಣದಲ್ಲಿ ಅಡಗಿಕೂತಿದ್ದ ಲಿಂಗನನ್ನು ಶತೃಪಡೆ ಕೊಚ್ಚಾಕಿಬಿಟ್ಟಿದೆ.ಇತ್ತ ಬೆಂಗಳೂರಲ್ಲಿ ಆತನ ಗುರು ಸುನೀಲನ ಎದೆ ಝಲ್ ಎಂದಿದೆ.

ಅಂಡರ್ ವರ್ಲ್ಡ್ ಡಾನ್ ಆಗಲು ಹವಣಿಸುತ್ತಿದ್ದ ಸೈಲೆಂಟ್ ಸುನೀಲನ ಪಾಲಿಗೆ ಎಲ್ಲವೂ ಆಗಿದ್ದ ಲಿಂಗ ಆಲಿಯಾಸ್ ಲಿಂಗರಾಜು.ಸುನೀಲನಿಗೆ ಜೀವ ಕೊಡ್ಲಿಕ್ಕೂ ಹಿಂದೆಮುಂದೆ ನೋಡದೆ ಸಾಕಷ್ಟು ಪಾತಕಗಳಲ್ಲಿ ಆತನೊಂದಿಗಿದ್ದವನೇ ಈ ಲಿಂಗ.ತನ್ನ ಸಾಮ್ರಾಜ್ಯ ಹಾಸನಕ್ಕೂ ವಿಸ್ತರಿಸ್ಬೇಕೆನ್ನುವ ಕೆಟ್ಟ ಆಸೆಯಲ್ಲಿ ಆತನನ್ನು ಕಳುಹಿಸಿಕೊಟ್ಟಿದ್ದೇ ರಕ್ತಕ್ಕೆ ಹಸಿದುಕೊಂಡಿದ್ದ ವೈರಿಗಳಿಗೆ ಹಾಸಿಕೊಟ್ಟಂತಾಗಿದೆ.ಅದಕ್ಕಾಗಿ ತಕ್ಷಣಕ್ಕೆ ಸ್ಕೆಚ್ ರೆಡಿಯಾಗಿದೆ. ಬೆಂಗಳೂರಿನ ಶಾಂತಿನಗರದ ನಿವಾಸಿಯಾಗಿ ಹಲವಾರು ಕೇಸುಗಳಲ್ಲಿ ತನಿಖೆ ಎದುರಿಸುತ್ತಿದ್ದ ಲಿಂಗ  ಹಾಸನಕ್ಕೆ ಶಿಫ್ಟ್ ಮಾಡಿಕೊಂಡು ಸಕ್ರಿಯನಾಗಿದ್ದನ್ನು ಪಕ್ಕಾ ಮಾಡಿಕೊಂಡು ಎಂಟು ಹಂತಕರ ತಂಡ ಅಟ್ಯಾಕ್ ಮಾಡಿದೆ.

ಕಾರ್ ಹಾಗೂ ಬೈಕ್ ನಲ್ಲಿ ಮನೆಗೆ ಬಂದಿದ್ದ 8 ಜನರಿದ್ದ ದುಷ್ಕರ್ಮಿಗಳ ಗುಂಪು, ಹ್ಯಾಮರ್ ಮತ್ತು ಮಚ್ಚಿನಿಂದ ಕೈಕಾಲು, ತಲೆ ಕತರಿಸಿ ಬರ್ಬರವಾಗಿ ಹತ್ಯೆ ಮಾಡಿದೆ.ಈ ವೇಳೆ ಲಿಂಗನೊಂದಿದ್ದ ಬೆಂಗಾವಲು ಪಡೆ ಕಣ್ಣೆದುರೇ ಮನಸೋಇಚ್ಛೆ ಕತ್ತರಿಸುತ್ತಿದ್ದವರನ್ನು ತಡೆಯಲು ಹೋದಾಗ ಅವರ  ಮೇಲೂ ಹಲ್ಲೆ ನಡೆಸಿದೆ. ಸಾಕ್ಷ್ಯ ನಾಶ ಮಾಡಲು ಸಿಸಿಟಿವಿಯ ಡಿವಿಆರ್ ನ್ನು ಕೂಡ ಹೊತ್ತೊಯ್ದಿದೆ. ಹಿರೇಸಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಬಲಗೈ ಭಂಟನ ಕೊಲೆಯಿಂದ ಕಂಗಾಲಾಗಿ ಹೋಗಿರುವ ಸೈಲೆಂಟ್ ಸುನೀಲ ಪ್ರತೀಕಾರದಲ್ಲಿ ಕುದಿಯುತ್ತಿದ್ದಾನೆ ಎನ್ನಲಾಗಿದೆ.ಸೋ, ಅಲ್ಲಿಗೆ ಬೆಂಗ್ಳೂರಲ್ಲಿ ಮತ್ಸರಕ್ಕೆ ಮತ್ತೊಂದು ಹೆಣ..ಅದಕ್ಕೆ ಪ್ರತೀಕಾರವಾಗಿ ಮತ್ತೊಂದಷ್ಟು ರಕ್ತದೋಕುಳಿ ಹರಿಯುವುದು ನಿಕ್ಕಿಯಾದಂತಾಯ್ತು.

ಕೊರೊನಾ ಪಿಡುಗಿನಿಂದ ಒಂದಷ್ಟು ಕಾಲ ಅಂಡರ್‌ವರ್ಲ್ಡ್ ರೌಡಿಸಂಗೆ ಬ್ರೇಕ್ ಬಿದ್ದಿತ್ತು. ಆದರೆ ಇದೀಗ ಸಕ್ರಿಯಗೊಂಡ ರೌಡಿಗಳು ತಮ್ಮ ವ್ಯಾಪ್ತಿ, ಅಸ್ತಿತ್ವಕ್ಕಾಗಿ ಮತ್ತೆ ಮಚ್ಚು ಎತ್ತಿ ಬಡಿದಾಡಲಿದ್ದಾರಾ…? ಹೌದೆನ್ನುತ್ತವೆ ಭೂಗತ ಜಗತ್ತಿನ ಮೂಲಗಳು.ಸ್ವಲ್ಪ ದಿನ ಏನೂ ಬೇಡ ಎಂದು ತಾನಾಯ್ತು..ಕಸದ ಕಾಂಟ್ರ್ಯಾಕ್ಟರ್ ಎಂದುಕೊಂಡಿದ್ದ ಸೈಲೆಂಟ್ ನನ್ನು ಲಿಂಗನ ಮರ್ಡರ್ ಮತ್ತೆ ವೈಲೆಂಟ್ ಮಾಡಿದೆ..ಅಂದ್ಹಾಗೆ ಲಿಂಗನನ್ನು ಕತ್ತರಿಸಿ ಕೊಂದ ಹಂತಕರ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದರೂ ಯಾರೆನ್ನುವುದು ಪಕ್ಕಾ ಆಗಿಲ್ಲ.. 

Spread the love
Leave A Reply

Your email address will not be published.

Flash News