BDA ಅಧಿಕಾರಿಗಳ ಮಹಾನ್ ಎಡವಟ್ಟಿಗೆ 8.55 ಕೋಟಿ ಸೋರಿಕೆ ..! 307 ಪ್ರಕರಣದಲ್ಲಿ ಎರಡು ಬಾರಿ ಹಣ ಪಾವತಿ ಪತ್ತೆ ಹಚ್ಚಿದ  ಸಿಎಜಿ.

0

ಬೆಂಗಳೂರು:ದಿಕ್ಕು ದಿಸೆಯಿಲ್ಲದಂತೆ ತಾವಾಡಿದ್ದೇ ಆಟ..ಹೂಡಿದ್ದೇ ಲಗ್ಗೆ ಎನ್ನುವಂತೆ ಮನಸಿಗೆ ಬಂದಂತೆ ಆಡಳಿತ ನಡೆಸಿ ಅರಾಜಕತೆಯನ್ನು ಸೃಷ್ಟಿಸುತ್ತಿರುವವರಿಗೆ ನೂತನ ಅದ್ಯಕ್ಷ ಎಸ್.ಆರ್ ವಿಶ್ವನಾಥ್ ಮೂಗುದಾರ ಹಾಕದೇ ಹೋದ್ರೆ ಬಿಡಿಎಯನ್ನು ಯಾರಿಂದಲು ಉಳಿಸ್ಲಿಕ್ಕೆ ಸಾಧ್ಯವೇ ಇಲ್ಲವೇನೋ..ಒಂದಲ್ಲಾ ಒಂದು ಕಾರಣಗಳಿಗೆ ಸುದ್ದಿಯಾಗುತ್ತಿರುವ ಬಿಡಿಎ ಮತ್ತೊಂದು ಯಡವಟ್ಟಿನಿಂದಾಗಿ ಸುದ್ದಿಯಾಗ್ತಿದೆ.ಈ ಬಾರಿ ಅದರ ಯಡವಟ್ಟನ್ನು ಪತ್ತೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಮಹಾಲೆಕ್ಕ ಪರಿಶೋಧಕರು(ಸಿಎಜಿ)ಅದರ EXCLUSIVE ಸ್ಟೋರಿ ಇಲ್ಲಿದೆ ನೋಡಿ..

ಬಿಡಿಎನಲ್ಲಿ ಎಂತೆಂತಹ ಮಹಾನ್ ಎಡವಟ್ಟಿಗರಿದ್ದಾರೆ, ಅವರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಆ ಮೂಲಕ ಪ್ರಾಧಿಕಾರದ ಬೊಕ್ಕಸವನ್ನು ಬರಿದು ಮಾಡುತ್ತಿದ್ದಾರೆ ಇದೆಲ್ಲವನ್ನೂ ನೋಡಿಕೊಂಡು ಆಡಳಿತ ಮಂಡಳಿ ಯಾವ ಪರಿ ದಿವ್ಯನಿರ್ಲಕ್ಷ್ಯಕ್ಕೆ ಜಾರಿದೆ ಎನ್ನುವುದಕ್ಕೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ಈ ವರದಿಯೇ ಸಾಕ್ಷಿ.

ಆಡಳಿತ ವ್ಯವಸ್ಥೆಯಲ್ಲಿನ ಲೋಪ, ದುರಾಡಳಿತ ಹಾಗೂ ಅದಕ್ಷತೆಯಿಂದಾಗಿ ಲಾಭದಲ್ಲಿರಬೇಕಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇವತ್ತು ಆರ್ಥಿಕ ನಷ್ಟಕ್ಕೆ ಸಿಲುಕಿ ತತ್ತರಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದಕ್ಕೆ ಪುಷ್ಟಿ ನೀಡುವಂತೆ ಆಂತರಿಕ ಲೆಕ್ಕ ನಿಯಂತ್ರಣದ ಲೋಪದಿಂದ ಪ್ರಾಧಿಕಾರಕ್ಕೆ 8.55 ಕೋಟಿಯಷ್ಟು ಹೆಚ್ಚುವರಿ ಹೊರೆ ಉಂಟಾಗಿರುವ ಸಂಗತಿ ಬೆಳಕಿಗೆ ಬಂದಿದೆ.ಸಿಎಜಿ ತನ್ನ ವರದಿಯಲ್ಲಿ ಇಂತಹದೊಂದು ಗಂಭೀರವಾದ ಅಂಶವನ್ನು ಬಹಿರಂಗಗೊಳಿಸಿದ್ದು, ಕೆಂಪೇಗೌಡ ಬಡಾವಣೆಯ ನಿವೇಶನಗಳ ಹಂಚಿಕೆಯ ವಿಷಯದಲ್ಲಿ ಒಟ್ಟು 307  ಪ್ರಕರಣಗಳಲ್ಲಿ ಪ್ರಾಧಿಕಾರದಲ್ಲಿರುವ ಮಹಾ ಎಡಬಿಡಂಗಿಗಳು 8.55 ಕೋಟಿಯಷ್ಟು ಮೊತ್ತವನ್ನು ಎರಡು ಬಾರಿ ಮರುಪಾವತಿಸಿರುವ ಅಕ್ರಮವನ್ನು ಪತ್ತೆ ಹಚ್ಚಿದೆ.

ವಿವಿಧ ಅಳತೆಯ 5,000 ನಿವೇಶನಗಳನ್ನು ಹಂಚಿಕೆ ಮಾಡಲು ಪ್ರಾಧಿಕಾರ  2015ರ ಅಕ್ಟೋಬರ್‌ನಲ್ಲಿ ಅಧಿಸೂಚನೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಜೊತೆಗೆ ಠೇವಣಿ ಮಾಡಬೇಕಿರುವ ವಿವರಗಳನ್ನೂ ನೀಡಿತ್ತು. ಇದರ ಅನ್ವಯ 31,349 ಅರ್ಜಿಗಳನ್ನು ಸ್ವೀಕರಿಸಿತ್ತು. ಈ ವೇಳೆ ಪ್ರಾರಂಭಿಕ ಠೇವಣಿಯಾಗಿ ಪ್ರಾಧಿಕಾರದ ಬೊಕ್ಕಸಕ್ಕೆ ಸಂದಾಯವಾಗಿದ್ದು, ಬರೋಬ್ಬರಿ 717.21 ಕೋಟಿ ಎಂದು ಸಿಎಜಿ ವರದಿ ಮಾಡಿದೆ.

ಕೆಂಪೇಗೌಡ ಬಡಾವಣೆಯ ನಿವೇಶನಗಳ ಹಂಚಿಕೆಯ ವಿಷಯದಲ್ಲಿ ಒಟ್ಟು 307  ಪ್ರಕರಣಗಳಲ್ಲಿ ಪ್ರಾಧಿಕಾರದಲ್ಲಿರುವ ಮಹಾ ಎಡಬಿಡಂಗಿಗಳು 8.55 ಕೋಟಿಯಷ್ಟು ಮೊತ್ತವನ್ನು ಎರಡು ಬಾರಿ ಮರುಪಾವತಿಸಿರುವ ಅಕ್ರಮವನ್ನು CAG ಪತ್ತೆ ಹಚ್ಚಿದೆ.
ಕೆಂಪೇಗೌಡ ಬಡಾವಣೆಯ ನಿವೇಶನಗಳ ಹಂಚಿಕೆಯ ವಿಷಯದಲ್ಲಿ ಒಟ್ಟು 307  ಪ್ರಕರಣಗಳಲ್ಲಿ ಪ್ರಾಧಿಕಾರದಲ್ಲಿರುವ ಮಹಾ ಎಡಬಿಡಂಗಿಗಳು 8.55 ಕೋಟಿಯಷ್ಟು ಮೊತ್ತವನ್ನು ಎರಡು ಬಾರಿ ಮರುಪಾವತಿಸಿರುವ ಅಕ್ರಮವನ್ನು CAG ಪತ್ತೆ ಹಚ್ಚಿದೆ.

5,000 ನಿವೇಶನಗಳ ಹಂಚಿಕೆಯ ನಂತರ  26,349 ವಿಫಲ ಅರ್ಜಿದಾರರಿಂದ ಸಂಗ್ರಹಿಸಿದ್ದ ಪ್ರಾರಂಭಿಕ ಠೇವಣಿಗಳನ್ನು ಕೆನರಾ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್‌ಗಳಿಂದ ಆರ್.ಟಿ.ಜಿ.ಎಸ್. ಹಾಗೂ ಎನ್.ಇ.ಎಫ್.ಟಿ. ಮೂಲಕ ಮರುಪಾವತಿಸಿತ್ತು. ಈ ಸಂದರ್ಭದಲ್ಲಿ ಇಷ್ಟೊಂದು ಮೊತ್ತದ ಆರ್ಥಿಕ ವ್ಯವಹಾರಕ್ಕೆ ಪೂರಕವೆನ್ನುವಂತೆ ಬ್ಯಾಂಕ್ ಹಾಗೂ ಪ್ರಾಧಿಕಾರದ ನಡುವೆ ಸಮರ್ಪಕವಾದ ನಿರ್ವಹಣೆಯಾಗಬೇಕಿತ್ತು. ಆದರೆ ಪ್ರಾಧಿಕಾರದ ಅನುಸರಣಾ ಲೆಕ್ಕಪರಿಶೋಧನೆಯ ಅವಧಿಯಲ್ಲಿ (ಅಂದರೆ ಜನವರಿ 2018  ರಿಂದ ಆಗಸ್ಟ್ 2018 ವರೆಗೆ) (ನವೆಂಬರ್ 2016 ರಿಂದ ಆಗಸ್ಟ್ 2018 ರ ಅವಧಿಯಲ್ಲಿ) ಮಾಡಿದ ಪ್ರಾರಂಭಿಕ ಠೇವಣಿಗಳ ಮರುಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಗಾಬರಿ ಹುಟ್ಟಿಸುವ ಸಂಗತಿ ಬಯಲಾಗಿದೆ.

BDA ಅದ್ಯಕ್ಷ ಎಸ್.ಆರ್ ವಿಶ್ವನಾಥ್
BDA ಅದ್ಯಕ್ಷ ಎಸ್.ಆರ್ ವಿಶ್ವನಾಥ್

6.85  ಕೋಟಿಯಷ್ಟು ಮೊತ್ತ ಎರಡು ಬಾರಿಯ ಪಾವತಿಯ ಮೂಲಕ ಅರ್ಜಿದಾರರಿಗೆ ಸಂದಾಯವಾಗಿರುವುದು ತಿಳಿದುಬಂದಿತ್ತು. ಒಂದು ಹೆಜ್ಜೆ ಮುಂದೆ ಹೋಗಿ ಲೆಕ್ಕ ಪರಿಶೋಧನೆಯು ಎಲ್ಲಾ 26,349 ಪ್ರಕರಣಗಳಲ್ಲಿನ ಆರ್.ಟಿ.ಜಿ.ಎಸ್. ಪಾವತಿಗಳ ಅರ್ಜಿದಾರರ ಪಟ್ಟಿಯನ್ನು ಮರು ಆರ್.ಟಿ.ಜಿ.ಎಸ್. ಪಾವತಿಯ ಯಶಸ್ವಿ ಪಟ್ಟಿಯೊಂದಿಗೆ ಹೋಲಿಕೆ ಮಾಡಿದಾಗ 1.97 ಕೋಟಿಯಷ್ಟು ಮರುಪಾವತಿ  79 ಪ್ರಕರಣಗಳಲ್ಲಿ ಆಗಿರುವುದು ಗಮನಕ್ಕೆ ಬಂತು.

ಈ ಎಲ್ಲಾ ಅಂಶಗಳನ್ನೂ ಕ್ರೋಢೀಕರಿಸಿ ಸಿಎಜಿ ತನ್ನ ವರದಿಯನ್ನು ಸಿದ್ದಪಡಿಸಿದೆ. ಇದರ ಮೂಲಕ ಪ್ರಾಧಿಕಾರದ ಆಂತರಿಕ ಲೆಕ್ಕ ನಿಯಂತ್ರಣದ ಅಶಿಸ್ತು ಹಾಗೂ ನಿರ್ಲಕ್ಷ್ಯವನ್ನು ಎತ್ತಿ ಹಿಡಿದಿದೆ. ಕೋಟ್ಯಾಂತರ ಆರ್ಥಿಕ ಹೊರೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅದೇನೇ ಆಗಲಿ ಈ ಒಂದು ಪ್ರಕರಣ ಬಿಡಿಎನ ಮಹಾ ಯಡವಟ್ಟು, ಆಡಳಿತದಲ್ಲಿನ ವೈಫಲ್ಯಕ್ಕೆ ಕೈಗನ್ನಡಿ ಹಿಡಿದಂತಿದೆ.

ಒಂದಷ್ಟು ಆಕ್ಟೀವ್ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿರುವ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಸಿಎಜಿ ರಿಪೋರ್ಟನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲೇಬೇಕಿದೆ..ಮಹಾನ್ ಯಡವಟ್ ಆಯುಕ್ತರೆನಿಸಿಕೊಂಡು ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳುತ್ತಾ ಬಂದಿರುವ ಮಹಾದೇವ್ ಮೇಲೆ ಯಾರಿಗೂ ನಂಬಿಕೆ ಇದ್ದಂತಿಲ್ಲವಾಗಿದೆ.ಆದರೆ ಅಂತದ್ದೊಂದು ನಿರೀಕ್ಷೆಯನ್ನು ನೂತನ ಅಧ್ಯಕ್ಷರಿಂದ ಮಾಡಬಹುದೇನೋ..?

Spread the love
Leave A Reply

Your email address will not be published.

Flash News