“ಸಾರಿಗೆ ಸ್ಥಬ್ಧ” “ಕೋಟ್ಯಾಂತರ ನಷ್ಟ” ಯಾರ್ ಹೊಣೆ..! ಸಾರಿಗೆ ನೌಕರರಿಗೆ ಆತುರದಲ್ಲಿ ಕೊಟ್ಟ “ಸರ್ಕಾರಿ ನೌಕರಿ ಮಾನ್ಯತೆ” ಮಾತೇ ಸರ್ಕಾರಕ್ಕೆ ಮುಳುವಾಯ್ತಾ..

0

ಬೆಂಗಳೂರು:ಇದು ಸಾರಿಗೆ ನೌಕರರ ತಪ್ಪಂತೂ ಅಲ್ಲವೇ ಅಲ್ಲ..ಸರ್ಕಾರಿ ನೌಕರರನ್ನಾಗಿಸಲು ನಾವು ಸಿದ್ಧ..ಯಾವ್ದೇ ಸನ್ನಿವೇಶ ದಲ್ಲೂ ನಮ್ಮ ಹೇಳಿಕೆಗೆ ನಾವು ಬದ್ಧ ಎಂದು ಹೇಳಿದ್ದೇ ಇವತ್ತು ಸರ್ಕಾರಕ್ಕೆ ಬಿಸಿತುಪ್ಪವಾಗ್ಹೋಗಿದೆ.ಬಾಯಿಗೆ ಬಂದಂತೆ ಹೇಳಿಕೆ ಕೊಡೋ ಸರ್ಕಾರದ ಸಚಿವರುಗಳ ಹಿಡಿತವಿಲ್ಲದ ನಾಲಿಗೆಯೇ ಇವತ್ತು ಬಹುದೊಡ್ಡ ಸಂಕಷ್ಟ ತಂದೊಡ್ಟಿದೆ.

ಸಮಿತಿ ರಚಿಸಿದ್ದೇವೆ…ಸಮಿತಿ ಕೊಡುವ ವರದಿ ಮೇಲೆ ನಿರ್ದಾರ ಕೈಗೊಳ್ಳುತ್ತೇವೆ ಎಂದು ಹೇಳುತ್ತಲೇ ಸಾರಿಗೆ ನೌಕರರಲ್ಲಿ ಸರ್ಕಾರಿ ನೌಕರಿ ಮಾನ್ಯತೆಯ ಆಸೆಯನ್ನು ಜೀವಂತವಾಗಿಟ್ಟಿದ್ದು ಇದೇ ಸರ್ಕಾರ..ಆದ್ರೆ ಮೊನ್ನೆ ಮೊನ್ನೆ ಸಾರಿಗೆ ಸಚಿವ ಸವದಿ ಸರ್ಕಾರಿ ನೌಕರಿ ಮಾನ್ಯತೆ ಸಾಧ್ಯವಿಲ್ಲದ ಮಾತು,ಬೇರೆ ಏನಾದ್ರೂ ಇದ್ರೆ ಮಾತ್ನಾಡಿ ಎಂದ್ಹೇಳಿದ್ದೇ ಇವತ್ತು ಸಾರಿಗೆ ಬಂಡಾಯ ಗಂಭೀರ ಸ್ವರೂಪ ಪಡೆದುಕೊಳ್ಳೊಕ್ಕೆ ಕಾರಣವಾಯ್ತೆಂದ್ರೂ ತಪ್ಪಾಗಲಿಕ್ಕಿಲ್ಲವೇನೋ…

ಹೇಳಿಕೆ ಕೊಡುವ ಮುನ್ನ ಸರ್ಕಾರಕ್ಕೆ ವಿವೇಚನೆ ಇರಬೇಕಿತ್ತು.ಒಂದಷ್ಟು ಜನರಲ್ಲ,1.25 ಲಕ್ಷ ನೌಕರರನ್ನೊಳಗೊಂಡ  ರಾಜ್ಯದ ಅತೀ ದೊಡ್ಡ ನೌಕರ ಸಮುದಾಯದ ವಿಚಾರದಲ್ಲಿ ತೂಗಿ ಅಳೆದು ನಡೆದುಕೊಳ್ಳಬೇಕಿತ್ತು..ಜಾಗರೂಕತೆಯಿಂದ ಹೇಳಿಕೆ ಕೊಡಬೇಕಿತ್ತು.ಆದ್ರೆ ರಾಜಕೀಯ ಸ್ವಾರ್ಥ-ಹಿತಾಸಕ್ತಿಗಾಗಿ ಕೊಟ್ಟಂಥ ಭರವಸೆ ಇವತ್ತು ಕಿಡಿಯಾಗಿ ಪ್ರಾರಂಭವಾಗಿ ಕಿಚ್ಚಿನ ಸ್ವರೂಪ ಪಡೆದುಕೊಂಡಿದೆ.ಸರ್ಕಾರಿ ನೌಕರರನ್ನಾಗಿಸುವುದರಿಂದ ಆಗಬಹುದಾದ ಸಮಸ್ಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸದೆಯೇ ಇದಕ್ಕೊಂದು ಸಮಿತಿ ರಚಿಸಿ ಅದು ಕೊಡುವ ವರದಿ ಮೇಲೆ ನಿರ್ದಾರ ಕೈಗೊಳ್ಳುತ್ತೇವೆ ಎಂದಿದ್ದು,ಅದಕ್ಕೆ ಪುಷ್ಟಿ ನೀಡುವಂತೆ ನೌಕರ ಸಂಘಟನೆಗಳು ಭೇಟಿಯಾದಾಗಲೆಲ್ಲಾ ನಿಮಗೇಕೆ ಚಿಂತೆ ನೀವಂದುಕೊಂಡಂತೆಯೇ ಆಗುತ್ತೆ ಬಿಡಿ ಎಂದು ಭರವಸೆಯ ಮಾತನ್ನಾಡಿದ್ದೇ ನೌಕರರಲ್ಲಿ ಸರ್ಕಾರಿ ನೌಕರಿ ಮಾನ್ಯತೆಯ ಬೀಜ ಗಿಡವಾಗಿ ಬೆಳೆಯೊಕ್ಕೆ ಕಾರಣವಾಯ್ತು ಅನ್ಸುತ್ತೆ.

ಸರ್ಕಾರ ಸಮಿತಿ ರಚಿಸಿ ವರ್ಷಗಳೇ ಕಳೆದ್ರೂ ವರದಿ ಮಾತ್ರ ಸಲ್ಲಿಕೆಯಾಗದಿದ್ದುದು ನೌಕರರಲ್ಲಿ ಸರ್ಕಾರದ ಬಗ್ಗೆ ಅನುಮಾನ ಹುಟ್ಟೋಕ್ಕೆ ಕಾರಣವಾಯ್ತೆನಿಸುತ್ತೆ.ಇಂತದೊಂದಿಷ್ಟು ಅನುಮಾನ ಪುಷ್ಟಿಕರಿಸುವಂಥ ರೀತಿಯಲ್ಲಿ ಸರ್ಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತ್ನಾಡಲು ಶುರುಮಾಡಿತೋ ಆಗ ನೌಕರರಿಗೆ ಸರ್ಕಾರ ತಮ್ಮ ವಿಚಾರದಲ್ಲಿ ಡಬಲ್ ಗೇಮ್ ಆಡ್ತಿದೆ ಎಂದೆನಿಸಲು ಆರಂಭವಾಗಿರ್ಬೇಕು,ಆಗಿನಿಂದ್ಲೇ ನೌಕರರ ಪ್ರತಿಭಟನೆಗಳು ನಾನಾ ಸ್ವರೂಪ ಪಡೆದವು.

ಸಾರಿಗೆ ನೌಕರರು ಸಾಯೋದ್ರೊಳಗೆ ತಾವು ಸರ್ಕಾರಿ ನೌಕರರಾಗಿ ಸಾಯ್ಬೇಕು..ತಾವ್ ಸತ್ತ ಮೇಲೆ ತಮ್ಮ ಕುಟುಂಬದವರಿಗೆ ಎಲ್ಲಾ ಸರ್ಕಾರಿ ಸೌಲಭ್ಯ ಸಿಗ್ಬೇಕೆನ್ನುವ ಒಂದೇ ಒಂದು ಆಸೆಗೂ ಸರ್ಕಾರ ಮಾತು ಕೊಟ್ಟು ಮೋಸ ಮಾಡಿತಲ್ಲಾ ಎಂಬ ನೋವು ಕಾಡಿರ್ಬೋದು.ಹಾಗಾಗಿಯೇ ನೌಕರರು ಸೇರಿದಂತೆ ಅವರ ಮಕ್ಕಳು-ಪತ್ನಿಯರು ಕೂಡ ಸರ್ಕಾರದ ಮುಂದೆ ತರಹೇವಾರಿಯಾಗಿ ಮನವಿ ಮಾಡಿಕೊಂಡರು.ಮುದ್ರಣ-ದೃಶ್ಯ ಮಾದ್ಯಮ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಂಡ್ರು.

ಆದ್ರೆ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕಿದ್ದ ಸಾರಿಗೆ ಆಡಳಿತ ವ್ಯವಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವ ನ್ನು ತೋಡಿಕೊಂಡವ್ರ ವಿರುದ್ಧವೇ ಶಿಸ್ತುಕ್ರಮ ಕೈಗೊಳ್ಳಲು ಶುರುಮಾಡ್ತು.ಆದ್ರೂ ನೌಕರರ ಐಕ್ಯತೆ ಮುಂದೆ ಈ ಎಲ್ಲಾ ಪ್ರಯತ್ನಗಳು ನಿಷ್ಪಲವಾದವೇನೋ..ತಮ್ಮ ಹೋರಾಟವನ್ನು ನೌಕರರು ಮತ್ತಷ್ಟು ತೀಕ್ಷ್ಣ ಗೊಳಿಸಿದ್ರು.ಸಾಂಕೇತಿಕ ಪ್ರತಿಭಟನೆ ಗಳು ನಡೆದ್ವು.ಸರ್ಕಾರ ಇದನ್ನು ಮಟ್ಟ ಹಾಕಬಹುದು ಎಂದು ಭಾವಿಸಿದ್ದವು ಅನ್ಸುತ್ತೆ.ಆದ್ರೆ ಸಾರಿಗೆ ನೌಕರರು ಒಗ್ಗಟ್ಟಾಗಿ ನಡೆಸಿದ ಪ್ರತಿಭಟನೆಗೆ ಸರ್ಕಾರ ಅದುರಿ ಹೋಗಿದೆ. ಮುಖಂಡರ ಮೂಲಕ ಹೇಳಿಸಿನೋಡುವ ಕೆಲಸ ಮಾಡಿದ್ರೂ ಅದಕ್ಕು ನೌಕರರು ಸೊಪ್ಪಾಕಿಲ್ಲ..ಇದು ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ..

ಸಾರಿಗೆ ನೌಕರರ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಯೇ ಇವತ್ತು ನಾನಾ ಸಮಸ್ಯೆಗಳ ನಡುವೆ  ಮತ್ತೊಂದು ಬೃಹತ್ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.ಸಾರಿಗೆ ನೌಕರರು ಸರ್ಕಾರಿ ಮಾನ್ಯತೆಗೆ ಪಟ್ಟು ಹಿಡಿದಿದ್ದಾರೆ.ಪರಿಸ್ತಿತಿ ಗಮನಿಸಿದ್ರೆ ಬಿಗಿಪಟ್ಟು ಸಡಿಲಿಕೆಯಾಗುವ ಲಕ್ಷಣ ಕೂಡ ಗೋಚರಿಸುತ್ತಿಲ್ಲ.

ಸರ್ಕಾರ ತಾನೇ ಹಗ್ಗವನ್ನು ಕೊಟ್ಟು ಕೈ ಕಟ್ಟಿಸಿಕೊಂಡಂತಾಗಿದೆ.ಈಗ ಎಂಥಾ ಧರ್ಮಸಂಕಟಕ್ಕೆ ಸಿಲುಕಿದೆ ಎಂದ್ರೆ ಒಂದ್ವೇಳೆ 1.25 ಲಕ್ಷ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಿದ್ರೆ ಉಳಿದ ಇನ್ನು ಅದೆಷ್ಟೋ ನಿಗಮ ಮಂಡಳಿಗಳ ನೌಕರರು ಕೂಡ ಇದೇ ಬೇಡಿಕೆಯನ್ನು ಸರ್ಕಾರದ ಮುಂದೊಡ್ಡಿ ಪ್ರತಿಭಟನೆಗೆ ಮುಂದಾಗಬಹುದು..ಆಗ ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಲೇಬೇಕಾಗುತ್ತೆ.ಇಂತದ್ದೊಂದು ಸನ್ನಿವೇಶ ಸೃಷ್ಟಿಯಾಗಬಾರದೆನ್ನುವ ಕಾರಣಕ್ಕೆ ಸಾರಿಗೆ ನೌಕರರ ವಿಷಯದಲ್ಲಿ ಜಾಣ ನಡೆ ಪ್ರದರ್ಶಿಸಲು ಪ್ರಯತ್ನಿಸುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದ್ರೆ ಒಂದಂತೂ ಸತ್ಯ.ಸಾರಿಗೆ ನೌಕರರು ಸಾವಿರಾರು ಬಸ್ ಗಳನ್ನು ಡಿಪೋ-ಬಸ್ ಸ್ಟ್ಯಾಂಡ್ ಗಳಲ್ಲೇ ನಿಲ್ಲಿಸಿಕೊಂಡು ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕವಾಗಿ ನ್ಯೂಸೆನ್ಸ್ ಕ್ರಿಯೇಟ್ ಮಾಡೊಕ್ಕೆ ಕಾರಣ ಸರ್ಕಾರ..ಸರ್ಕಾರ..ಒನ್ಸ್ ಅಗೈನ್ ಸರ್ಕಾರ ಮಾತ್ರ..

“ಸಾರಿಗೆ ಸ್ಥಬ್ಧ” “ಕೋಟ್ಯಾಂತರ ನಷ್ಟ” ಯಾರ್ ಹೊಣೆ..! ಸಾರಿಗೆ ನೌಕರರಿಗೆ ಆತುರದಲ್ಲಿ ಕೊಟ್ಟ “ಸರ್ಕಾರಿ ನೌಕರಿ ಮಾನ್ಯತೆ” ಮಾತೇ ಸರ್ಕಾರಕ್ಕೆ ಮುಳುವಾಯ್ತಾ..

Spread the love
Leave A Reply

Your email address will not be published.

Flash News