bjp-udupi
bjp-udupi

ಉಡುಪಿ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತ ಅರೆಸ್ಟ್!

ಉಡುಪಿ ಜಿಲ್ಲೆಯಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಕಾರ್ಕಳ ಪೊಲೀಸರು ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದೆ.

ಬಿಜೆಪಿ ಕಾರ್ಯಕರ್ತ ಅಭಯ್ ನನ್ನು ಬಂಧಿಸಲಾಗಿದ್ದು, ಇದರಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 3ಕ್ಕೇರಿದೆ. ಬಂಧಿತ ಆರೋಪಿ ಅಭಯ್ ಫೇಸ್ ​​ಬುಕ್​ನಲ್ಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸುನೀಲ್ ​​ಕುಮಾರ್​​ ಫೋಟೋ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬಿಜೆಪಿ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾನೆ.

ಉಡುಪಿಯಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅಲ್ಲದೆ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ ಇದೀಗ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನೇ ಸಿಕ್ಕಿಬಿದ್ದಿದ್ದರಿಂದ ತೀವ್ರ ಮುಜುಗರಕ್ಕೆ ಒಳಗಾಗುವಂತಾಗಿದೆ.

ಅಭಯ್ ಮತ್ತು ಪ್ರಮುಖ ಆರೋಪಿ ಅಲ್ತಾಫ್​ ಆತ್ಮೀಯರಾಗಿದ್ದು, ಅತ್ಯಾಚಾರ ನಡೆದ ದಿನ ಅಲ್ತಾಫ್​ಗೆ ಡ್ರಗ್ಸ್​ ಒದಗಿಸಿದ್ದ. ಅಲ್ಲದೇ ಆತ ಅಲ್ತಾಫ್ ಗೆ ತಲೆಮರೆಸಿಕೊಳ್ಳಲು ನೆರವಾಗಿದ್ದ ಎಂದು ಹೇಳಲಾಗಿದೆ.

ಕಳೆದ ತಿಂಗಳು ಬಜರಂಗದಳ ನಡೆಸಿದ ಡ್ರಗ್ಸ್​ ವಿರೋಧಿ ಅಭಿಯಾನದಲ್ಲಿ ಅಭಯ್ ಕೂಡ ಭಾಗಿಯಾಗಿದ್ದ. ವಿಶೇಷ ಅಂದರೆ ಡ್ರಗ್ಸ್​ ಮಾರಾಟದ ವಿರುದ್ಧ ಕಾರ್ಕಳ ಡಿವೈಎಸ್ ಪಿ ಗೆ ಮನವಿ ನೀಡುವ ಸಮಯದಲ್ಲಿಯೂ ಜೊತೆಗಿದ್ದ ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *