ಬೆಂಗಳೂರು: ನಮಗೆ ಲಭ್ಯವಾಗಿರುವ ದೃಶ್ಯಾವಳಿಗಳು ನಮ್ಮ ಹೆಮ್ಮೆಯ ಮೆಟ್ರೋದ ಆಡಳಿತದಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ-ಅಗೌರವವನ್ನು ಸಾರಿ ಹೇಳುತ್ತದೆ.ಇದು ಸತ್ಯವೇ ಆಗಿದ್ದಲ್ಲಿ ಬಿಎಂಆರ್ ಸಿಎಲ್ ಆಡಳಿತ ಕೇವಲ ಅಂಬೇಡ್ಕರ್ ವಿರೋಧಿ ಅಷ್ಟೇ ಅಲ್ಲ, ಸಂವಿಧಾನವಿರೋಧಿಯೂ ಹೌದೆಂದು ಬೇಸರ-ಅಪಮಾನ-ಆಕ್ರೋಶದಿಂದಲೇ ಹೇಳಬೇಕಾಗುತ್ತದೆ.

ದೇಶಕ್ಕೆ ಸಂವಿಧಾನದಂಥ ಮಹಾನ್ ಗ್ರಂಥ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ಎನ್ನುವುದೇ ಬಿಎಂಆರ್ ಸಿಎಲ್ ಗೆ ಗೊತ್ತಿಲ್ಲ ಎನ್ನಿಸುತ್ತೆ.ಹಾಗಾಗಿನೇ ಸರ್ಕಾರ ಈ ಬಗ್ಗೆ  ಹೊರಡಿಸಿದ್ದ ಆದೇಶವನ್ನೂ ಗಾಳಿಗೆ ತೂರಿದೆ.

ಗಣರಾಜ್ಯೊತ್ಸವ ಸಮಾರಂಭಗಳಂದು ರಾಜ್ಯದ ಸರ್ಕಾರಿ ಕಚೇರಿಗಳು.ಸರಕಾರಿ ಶಾಲಾ ಕಾಲೇಜು, ಹಾಗೂ ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಎಲ್ಲಾ ಇಲಾಖೆ,ನಿಗಮಗಳ ಕಚೇರಿಗಳಲ್ಲೂ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟುಗೌರವಿಸುವುದು ಕಡ್ಡಾಯ ಎಂದು  ದಿನಾಂಕ 25-01-2020 ರಂದೇ ಆದೇಶ ಹೊರಡಿಸಲಾಗಿತ್ತು.ಸರ್ಕಾರದ ಆದೇಶವನ್ನು ಎಲ್ಲಾ ಇಲಾಖೆಗಳು ಕೂಡ ಚಾಚೂತಪ್ಪದೇ ಪಾಲಿಸ್ತಿವೆ.ಆದರೆ ಎಲ್ಲರಿಗೂ ಒಂದು ನ್ಯಾಯವಾದ್ರೆ ಬಿಎಂಆರ್ ಸಿಎಲ್ ಗೆ ಇನ್ನೊಂದು ನ್ಯಾಯನಾ ಎನ್ನುವಂತೆ ಸರ್ಕಾರದ ಆದೇಶಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಆಡಳಿತ ನಡೆದುಕೊಂಡಿದೆ.

ಅಂಬೇಡ್ಕರ್ ಅವರ ಭಾವಚಿತ್ರವನ್ನು ಎಲ್ಲೂ ಇಟ್ಟು ಗೌರವಿಸಿರುವುದು ವೇದಿಕೆಯಲ್ಲಿ ಕಂಡುಬರುತ್ತಿಲ್ಲ. ಇದೆಲ್ಲಕ್ಕೂ ಕಾರ್ಯಕ್ರಮದ ಆಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದರೆನ್ನಲಾದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಅವರೇ ಕಾರಣ ಎನ್ನುವುದು ಮೆಟ್ರೋ ಕಾರ್ಮಿಕರ ಆರೋಪ.

ಭಾರತಕ್ಕೆ ವಿಶ್ವಮಾನ್ಯವಾದ ಶ್ರೇಷ್ಟಗ್ರಂಥವಾದ ಸಂವಿಧಾನ ಕೊಟ್ಟ  ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್.ಅವರನ್ನುಅವಮಾನಿಸಿ  ಅವರ ವಿಚಾರಗಳಿಗೆ ಅಗೌರವ ಸೂಚಿಸಿರುವ ಬಿ.ಎಂ.ಆರ್ ಸಿಎಲ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲೇಬೇಕು.ಅಲ್ಲದೇ ಇದಕ್ಕೆ ಕಾರಣವಾದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಅವರನ್ನು ಅಂಬೇಡ್ಕರ್ ವಿರೋಧಿ ಧೋರಣೆ ಕಾರಣಕ್ಕೆ ಅಮಾನತುಗೊಳಿಸಬೇಕು.ಇಲ್ಲವಾದಲ್ಲಿ ಬಿಎಂಆರ್ ಸಿಎಲ್ ಕಚೇರಿ ಆವರಣದಲ್ಲಿ  ಉಗ್ರಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ದಲಿತ ಮುಖಂಡ ಶಂಕರ್ ಎಚ್ಚರಿಸಿದ್ದಾರೆ.

ಅಂಬೇಡ್ಕರ್ ಅವರಂಥ ಮಹಾನ್ ಚೇತನ ಇಲ್ಲದೆ ಇದ್ದಲ್ಲಿ ಇವತ್ತು ಭಾರತದ ಪರಿಸ್ತಿತಿ ಏನಾಗುತ್ತಿತ್ತು ಎನ್ನುವ ಅರಿವು ಬಿಎಂಆರ್ ಸಿಎಲ್ ಆಡಳಿತಕ್ಕೆ ಗೊತ್ತಿಲ್ಲವೇ..? ಅಂಬೇಡ್ಕರ್ ಭಾವಚಿತ್ರ ಇಡದ ಅಪಮಾನ ಮಾಡಿರುವ ಬಿಎಂಆರ್ ಸಿಎಲ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಬೇಕು. ಎಂಡಿ ಮಹೇಶ್ವರ ರಾವ್ ಈ ವಿಷಯವನ್ನು ಗಂಭೀರವಾಗಿ ಪ

ರಿಗಣಿಸಬೇಕು.ಇಷ್ಟೆಲ್ಲಕ್ಕೂ ಕಾರಣವಾದ ಶಂಕರ್ ಅವರನ್ನು ಅಮಾನತುಗೊಳಿಸಬೇಕು ಎಂದು ದಲಿತ ಮುಖಂಡ ಶಿವಕುಮಾರನಾಯ್ಕ  ಮನವಿ ಮಾಡಿದ್ದಾರೆ.

ಅದೇನೇ ಆಗಲಿ  ಶಂಕರ್ ಅವರಂಥ ಅಧಿಕಾರಿಗಳಿಗೆ ಬಿ.ಆರ್ ಅಂಬೇಡ್ಕರ್ ಅವರಂಥ ಮಹಾನ್ ಚೇತನವನ್ನು ಅವಮಾನಿಸುವ ಅಧಿಕಾರವೇ ಇಲ್ಲ..ಹಾಗೇನಾದ್ರು ಅವರು ಮಾಡಿದ್ದರೆ ಅವರ ವಿರುದ್ಧ ಕಠಿಣ ಶಿಕ್ಷೆಯಾಗಬೇಕೆನ್ನುವುದು ನಮ್ಮ ವಾದ ಕೂಡ.

Spread the love

Leave a Reply

Your email address will not be published. Required fields are marked *