ಪ್ರಧಾನಿ ಮೋದಿ ಸ್ವಾಗತಿಸಿದ 7000 ಕಾರುಗಳ ಮಾಲೀಕ, ಬ್ರ್ಯುನಿ ಸುಲ್ತಾನ್!

ಪ್ರಧಾನಿ ಮೋದಿ ಸ್ವಾಗತಿಸಿದ 7000 ಕಾರುಗಳ ಮಾಲೀಕ, ಬ್ರ್ಯುನಿ ಸುಲ್ತಾನ್!

ಪ್ರಧಾನಿ ನರೇಂದ್ರ ಮೋದಿ ಇಂದು ಅರಬ್ ನ ಬ್ರುನಿಗೆ ಭೇಟಿ ನೀಡಿದ್ದು, 7000 ಕಾರುಗಳ ಮಾಲೀಕ ಹಾಗೂ ಬ್ರೂನಿ ಸುಲ್ತಾನ್ ಸ್ವಾಗತಿಸಿದ್ದಾರೆ.

ಇದೇ ಮೊದಲ ಬಾರಿಗೆ ಬಾರತದ ಪ್ರಧಾನಿಯೊಬ್ಬರು ಮಧ್ಯಪ್ರಾಚ್ಯ ಅರಬ್ ದೇಶಗಳಲ್ಲಿ ಒಂದಾದ ಬ್ರ್ಯೂನಿಗೆ ಭೇಟಿ ನೀಡಿದ್ದಾರೆ. ಮೋದಿ ಎರಡು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದು, 40 ವರ್ಷಗಳ ನಂತರ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಒಪ್ಪಂದಗಲ ಕುರಿತು ಮಾತುಕತೆ ನಡೆಸಲಿದ್ದಾರೆ.

ಬ್ರಿಟನ್ ರಾಣಿ ಎಲಿಜಬೆತ್ ನಂತರ ಅತ್ಯಂತ ದೀರ್ಘಕಾಲ ದೇಶದ ರಾಜಮನೆತನ ಮುನ್ನಡೆಸುತ್ತಿರುವ ಬ್ರ್ಯುನಿ ಸುಲ್ತಾನ್ ಹಸನಾಲ್ ಬುಲ್ಕಿ ಆಹ್ವಾನದ ಮೇರೆಗೆ ಮೋದಿ ಬುಧವಾರ ಭೇಟಿ ನೀಡುತ್ತಿದ್ದಾರೆ.

ಐಷಾರಾಮಿ ಜೀವನ ಹಾಗೂ ಜೀವನಶೈಲಿಯಿಂದ ಹಸನಾಲ್ ಬುಲ್ಕಿ ಜಗತ್ತಿನಲ್ಲೇ ಖ್ಯಾತಿ ಪಡೆದಿದ್ದಾರೆ. 5 ಶತಕೋಟಿ ಮೌಲ್ಯದ 7000 ಕಾರುಗಳ ಸಂಗ್ರಹ ಹೊಂದಿರುವ ಖ್ಯಾತಿಗೆ ಬ್ರ್ಯೂನಿ ಸುಲ್ತಾನ್ ಪಾತ್ರರಾಗಿದ್ದಾರೆ. ಇದರಲ್ಲಿ 600 ರೋಲ್ಸ್ ರಾಯ್ ಕಾರುಗಳಿದ್ದು, ಅಧಿಕೃತ ವಿಶ್ವದಾಖಲೆ ಹೊಂದಿದ್ದಾರೆ.

ಸುಲ್ತಾನ್ ಅವರ ವಾರ್ಷಿಕ ಆದಾಯ 600 ಶತಕೋಟಿ ಡಾಲರ್ ಆಗಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಿಂದ ಆದಾಯ ಹೊಂದಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *