ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್
ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ನಾಗರಿಕರಿಗೆ ಆರೋಗ್ಯಭಾಗ್ಯದಡಿ ಹೊಸದೊಂದು ಸವಲತ್ತು ಕಲ್ಪಿಸುವ ಆಲೋಚನೆ ಮಾಡಿದೆ.

ನಮ್ಮ ಕ್ಲಿನಿಕ್ ಗಳ ಮೂಲಕ ಉಚಿತ ಆರೋಗ್ಯಭಾಗ್ಯ ಕಲ್ಪಿಸುತ್ತಿರುವ ಬಿಬಿಎಂಪಿ ಮತ್ತೊಂದು ಹೆಜ್ಜೆ ಮುಂದ್ಹೋಗಿ ದಂತ ಆರೋಗ್ಯಭಾಗ್ಯ ಕಲ್ಪಿಸಲು ಚಿಂತನೆ ನಡೆಸಿದೆ.ಯೋಜನೆ ಅನುಷ್ಟಾನಕ್ಕೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದ್ದು ದಂತ ಚಿಕಿತ್ಸೆ ಹಾಗು ತಪಾಸಣೆಗೆ ಅನ್ವಯವಾಗುವಂತೆ ಸ್ಥಳ ಹುಡುಕಾಟದಲ್ಲಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯಸೇವೆ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ.ಅದರ ಪ್ರಯತ್ನಗಳು ಕೂಡ ಸಾಕಷ್ಟು ಜನರಿಗೆ ತಲುಪುವಲ್ಲಿ ಯಶಸ್ವಿಯೂ ಆಗಿದೆ.ಇದಕ್ಕೆ ನಮ್ಮ ಕ್ಲಿನಿಕ್ ಕೂಡ ಉತ್ತಮ ಉದಾಹರಣೆ.ಜನರಿಗೆ ಮೂಲಭೂತವಾಗಿ ದೊರೆಯಬೇಕಾದ  ಸೌಲಬ್ಯಗಳನ್ನು ನಮ್ಮ  ಕ್ಲಿನಿಕ್ ಮೂಲಕ ನೀಡಲಾಗುತ್ತಿದೆ.

ಬೆಂಗಳೂರಿಗರು ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವುದು ಹಲ್ಲಿನ ಆರೋಗ್ಯದ್ದು.ಈ ಸಂಬಂಧ ನಮಗೆ ಅನೇಕ ರೀತಿಯ ದೂರು ಕೇಳಿಬರುತ್ತಿದೆಯಲ್ಲದೇ ನಮ್ಮ ಕ್ಲಿನಿಕ್ ಮಾದರಿಯಲ್ಲೇ ಹಲ್ಲಿನ ತಪಾಸಣೆ-ಚಿಕಿತ್ಸೆಗೂ ಒಂದಷ್ಟು ವ್ಯವಸ್ಥೆ ಮಾಡಿ ಎಂಬ ಬೇಡಿಕೆಗಳ ಹಿನ್ನಲೆಯಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗ ದಂತ ತಪಾಸಣೆಯ ಕ್ಲಿನಿಕ್ ಗಳನ್ನು ಆರಂಭಿಸಲು ನಿರ್ದರಿಸಿದೆ ಎಂದು ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ದಂತ ಕ್ಲಿನಿಕ್ ಗಳನ್ನು ಪ್ರಾರಂಭಿಸುವ ಹಿನ್ನಲೆಯಲ್ಲಿ ಬಿಬಿಎಂಪಿ ಒಂದಷ್ಟು ಸಿದ್ದತೆ ಮಾಡಿಕೊಂಡಿದೆ.ನಮ್ಮ ಕ್ಲಿನಿಕ್ ಗಳ ಮಾದರಿಯುಲ್ಲೇ ಇದನ್ನು ಆರಂಭಿಸಬೇಕೆನ್ನುವ ಚಿಂತನೆ ಇದ್ದರೂ ಒಂದಷ್ಟನ್ನು ಪ್ರಾಯೋಗಿಕವಾಗಿ ಮಾಡಲು ಚಿಂತನೆ ನಡೆಸಲಾಗಿದೆ.ಈಗಾಗ್ಲೇ ಇರುವ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲೇ ಅಥವಾ ಅದಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ ದಂತ ತಪಾಸಣೆ ಕ್ಲಿನಿಕ್ ಆರಂಬಿಸಲು ನಿರ್ದರಿಸಲಾಗಿದೆ.ಪ್ರಾಯೋಗಿಕವಾಗಿ 25ರಷ್ಟು ದಂತ ಕ್ಲಿನಿಕ್ ಗಳನ್ನು ಪ್ರಾರಂಭಿಸಲು ಆಲೋಚಿಸಲಾಗುತ್ತಿದೆ.ನಂತರ ಪ್ರತಿ ವಾರ್ಡ್ ಗಳಲ್ಲೂ ಇದನ್ನು ವಿಸ್ತರಿಸಲಾಗುವುದು ಎಂದು  ಸೂರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

ದಂತವೈದ್ಯಕೀಯ ತಪಾಸಣೆಗೆ ಸಾಕಷ್ಟು ಬೇಡಿಕೆ ಕೇಳಿಬರುತ್ತಿದೆ.ನಾವು ಕೂಡ ಈ ಹಿಂದೆಯೇ ಇದರ ಬಗ್ಗೆ ಚಿಂತನೆ ನಡೆಸಿದ್ದೆವು.ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.ಆದರೆ ಆರೋಗ್ಯಭಾಗ್ಯ ಜನರಿಗೆ ಮುಖ್ಯವಾಗಿರುವ ಹಿನ್ನಲೆಯಲ್ಲಿ ನಮ್ಮ ಕ್ಲಿನಿಕ್ ಕಾನ್ಸೆಪ್ಟ್ ಯಶಸ್ವಿಯಾಗಿದ್ದರಿಂದ ಪ್ರೇರಣೆ ಪಡೆದು ದಂತ ತಪಾಸಣೆ ಕ್ಲಿನಿಕ್ ಗಳನ್ನು ಪ್ರಾರಂಬಿಸಲು ಆಲೋಚಿಸಲಾಗಿದೆ.ದಂತ ವೈದ್ಯಕೀಯ ಕ್ಲಿನಿಕ್ ಗಳಲ್ಲಿ ಏನೇನೆಲ್ಲಾ ಸೌಲಭ್ಯಗಳಿರಲಿವೆ ಎನ್ನುವುದರ ಸ್ಪಷ್ಟತೆ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸೂರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed