advertise here

Search

“ಭ್ರಷ್ಟ” ಡಿಡಿಪಿಐ ನಿಂಗರಾಜಪ್ಪಗೆ ಟ್ರಾನ್ಸ್‌ ಫರ್‌ ಶಿಕ್ಷೆ.. ಡಾ.ಯತೀಂದ್ರ ಅತ್ಯಾಪ್ತ ವಿವೇಕಾನಂದ ಅವರಿಗೆ ಆಯಕಟ್ಟಿನ ಹುದ್ದೆ ಭಾಗ್ಯ.!


ದಶಕಗಳಿಂದಲೂ ಕದಲದೆ ಕೂತಿರುವವರ ವರ್ಗಾವಣೆ ಯಾವಾಗ..!?

ಬೆಂಗಳೂರು:ಶಾಲಾ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಪರ್ವ ಶುರುವಾಗಿದೆ.ಇದರ ಮೊದಲ ಪ್ರಯತ್ನ ಎನ್ನುವಂತೆ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ಈ ಪೈಕಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಡಿಡಿಪಿಐ ವಿವೇಕಾನಂದ ಅವರನ್ನು ಬೆಂಗಳೂರಿಗೆ ವರ್ಗ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರೆನ್ನಲಾದ ಮತ್ತೋರ್ವ ಡಿಡಿಪಿಐ ನಿಂಗರಾಜಪ್ಪ ಅವರನ್ನು ಚಿಕ್ಕಬಳ್ಳಾಪುರಕ್ಕೆ ವರ್ಗ ಮಾಡಲಾಗಿದೆ.ಮೇಲ್ಕಂಡ ವರ್ಗಾವಣೆಯಲ್ಲಿ ಡಾ,ಯತೀಂದ್ರ ಅವರ ಪಾತ್ರವೇ ಹೆಚ್ಚಾಗಿರುವ ಮಾತು ಕೇಳಿಬರುತ್ತಿದೆ.

ಹೊಸ ಶೈಕ್ಷಣಿಕ ವರ್ಷ ಆರಂಭವಾಗೊಕ್ಕೆ ಕೆಲ ದಿನಗಳು ಬಾಕಿ ಇರುವಾಗಲೇ ಉಪನಿರ್ದೇಶಕರ ವರ್ಗಾವಣೆ ಪರ್ವ ಶುರುವಾಗಿದೆ.28-03-2025 ರಂದು ಹೊರಬಿದ್ದಿರುವ ಆದೇಶದಲ್ಲಿ ಮೂವರು ಡಿಡಿಪಿಐಗಳನ್ನು ವರ್ಗ ಮಾಡಲಾಗಿದೆ.ಅದರಲ್ಲಿ ಇಬ್ಬರು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು ಎನ್ನಲಾಗುತ್ತಿದೆ.ಈ ವರ್ಗಾವಣೆಯಲ್ಲಿ ಡಾ.ಯತೀಂದ್ರ ಅವರ ಪಾತ್ರ ಇರುವ ಬಗ್ಗೆ ಗುಸು ಗುಸು ಶುರುವಾಗಿದೆ.ತಂದೆಯ ಪವರ್‌ ನ್ನೇ ಬಳಸಿಕೊಳ್ಳುವ ಕಾಯಕದಲ್ಲಿ ಯತೀಂದ್ರ ಸಕ್ರೀಯವಾಗಿದ್ದಾರಾ ಎನ್ನುವ ಅನುಮಾನ ಈ ಬೆಳವಣಿಗೆ ಹಿನ್ನಲೆಯಲ್ಲಿ ಮೂಡುತ್ತದೆ.

ಹಾವೇರಿ ಡಯಟ್‌ ನಲ್ಲಿ ಪ್ರಾಂಶುಪಾಲರಾಗಿದ್ದ ಗಿರೀಶ್‌ ಪದಕಿ ಅವರನ್ನು ವಿಜಯಪುರ ಜಿಲ್ಲೆಗೆ ವರ್ಗ ಮಾಡಲಾಗಿದೆ. ಬಾಗಲ ಕೋಟೆಯಲ್ಲಿ ಆಡಳಿತ ವಿಭಾಗದ ಉಪನಿರ್ದೇಶಕರಾಗಿದ್ದ ವಿವೇಕಾನಂದ ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ವರ್ಗ ಮಾಡಲಾಗಿದೆ. ಅದೇ ರೀತಿ ಬೆಂಗಳೂರು ದಕ್ಷಿಣ ಜಿಲ್ಲೆ ಉಪನಿರ್ದೇಶಕರಾಗಿದ್ದ ಕೆ.ಬಿ.ನಿಂಗರಾಜಪ್ಪ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆ ಡಿಡಿಪಿಐ ಆಗಿ ನಿಯೋಜನೆ ಮಾಡಿ ವರ್ಗಾಯಿಸಲಾಗಿದೆ.

ಮೂರು ವರ್ಗಾವಣೆಗಳಲ್ಲಿ ಎರಡು ವರ್ಗಾವಣೆಗಳಲ್ಲಿ ಯತೀಂದ್ರ ಅವರ ಕೈವಾಡ ಇದೆ ಎನ್ನುವ ಗುಸುಗುಸು ಕೇಳಿಬರಲಾರಂಭಿಸಿದೆ.ಏಕೆಂದರೆ ವಿವೇಕಾನಂದ ಮತ್ತು ನಿಂಗರಾಜಪ್ಪ ಅವರು ಯತೀಂದ್ರ ಅವರ ಆಪ್ತ ಬಳಗದಲ್ಲಿರುವ ಶಿಕ್ಷಣಾಧಿಕಾರಿಗಳು ಎಂದು ಇಲಾಖೆಯೇ ಮಾತನಾಡಿಕೊಳ್ಳುತ್ತದೆ. ವಿವೇಕಾನಂದ ಅವರನ್ನು ಯಾವ ಕಾರಣಕ್ಕಾಗಿ ಬೆಂಗಳೂರಿನ ದಕ್ಷಿಣ ಜಿಲ್ಲೆಗೆ ಕರೆಯಿಸಿಕೊಳ್ಳಲಾಗುತ್ತಿದೆ ಎನ್ನುವುದು ಸ್ಪಷ್ಟವಾಗಿಲ್ಲ.ಆದರೆ ನಿಂಗರಾಜಪ್ಪ ವಿರುದ್ದ ಸಾಕಷ್ಟು ಗಂಭೀರ ಸ್ವರೂಪದ ಆಪಾದನೆಗಳಿದ್ದವು.ಭ್ರಷ್ಟಾಚಾರ, ಲಂಚಗುಳಿತನ,ಕರ್ತವ್ಯಲೋಪದಂಥ ಆಪಾದನೆಗಳನ್ನು ಹೊತ್ತಿದ್ದರು.ಈ ಬಗ್ಗೆ ಮಾದ್ಯಮಗಳಲ್ಲೂ ಕೂಡ ಸಾಕಷ್ಟು ವರದಿಗಳು ಪ್ರಸಾರವಾಗಿದ್ದವು.

ALSO READ :  14 ಲಕ್ಷ ಅನರ್ಹ ಪಡಿತರ ಚೀಟಿ ರದ್ದು: ಸಚಿವ ಕೆಎಚ್ ಮುನಿಯಪ್ಪ

ಶೈಕ್ಷಣಿಕ ನಿಯಮಗಳನ್ನು ಮೀರಿ ನಡೆಯುತ್ತಿರುವ ಶಾಲೆಗಳ  ಆಡಳಿತ ಮಂಡಳಿಗಳ ಜತೆ ಶಾಮೀಲಾಗಿ ಅಕ್ರಮ ನಡೆಯಲು ಅವಕಾಶ ನೀಡಿದ್ದ ಆಪಾದನೆ ನಿಂಗರಾಜಪ್ಪ ಅವರ ವಿರುದ್ದ ಕೇಳಿಬಂದಿತ್ತು. ಪಾಠಶಾಲೆ ಎನ್ನುವ ಶೈಕ್ಷಣಿಕ ಕಾಳಜಿಯ ಎನ್‌ ಜಿಓ ಕೂಡ ಅವರ ಬಗ್ಗೆ ಸಾಕ್ಷ್ಯ ಸಮೇತ ದೂರು ಸಲ್ಲಿಸಿತ್ತು.ಇದು ಸರ್ಕಾರಕ್ಕೆ ಮುಜುಗರವನ್ನೂ ತಂದಿತ್ತು.ದೂರು ನೀಡಿದ ದಿನವೇ ನಿಂಗರಾಜಪ್ಪ ಅವರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತವಾಗಿತ್ತು.ಅದಾದ ಬಳಿಕ ಪಾಠಶಾಲೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ತನ್ನ ಪ್ರಯತ್ನ ಬಿಟ್ಟಿರಲಿಲ್ಲ. ಇದರ ಪರಿಣಾಮ ಎನ್ನುವಂತೆ ನಿಂಗರಾಜಪ್ಪ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ವರ್ಗ ಮಾಡಲಾಗಿದೆ.

ಕೇವಲ ಡಿಡಿಪಿಐ ಗಳನ್ನಲ್ಲ. ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿ ಹಾಗೂ ಡಿಡಿಪಿಐ ಕಚೇರಿಗಳಲ್ಲಿ ಅನೇಕ ವರ್ಷಗಳಿಂದಲೂ ಎಲ್ಲೂ ಕದಲದೆ ಗೂಟಾ ಹೊಡೆದುಕೊಂಡಿರುವ ಅಧಿಕಾರಿ ಸಿಬ್ಬಂದಿ ಬಹಳ ಇದ್ದಾರೆ.ಅವರ ವಿರುದ್ಧ ಕ್ರಮ ಕೈಗೊಳ್ಳುವ, ಬೇರಡೆ ವರ್ಗ ಮಾಡುವ ಕೆಲಸ ಮಾಡಬೇಕಿದೆ.ಇಲ್ಲವಾದಲ್ಲಿ ಶಿಕ್ಷಣ ಇಲಾಖೆ ಅಕ್ರಮ-ಭ್ರಷ್ಟಾಚಾರದಲ್ಲಿ ಮುಳುಗಿ ಹೋಗುವುದರಲ್ಲಿ ಅನುಮಾನವೇ ಇಲ್ಲ.

ನಿಂಗರಾಜಪ್ಪ ವರ್ಗಾವಣೆ ಪಾಠಶಾಲೆ ಹೋರಾಟದ ಪ್ರತಿಫಲ:ಶೈಕ್ಷಣಿಕ ಕಾಳಜಿಯಲ್ಲಿ ಕೆಲಸ ಮಾಡುತ್ತಿರುವ ಪಾಠಶಾಲೆಯ ನಿರಂತರ ಹೋರಾಟವೇ ಭ್ರಷ್ಟ ಅಧಿಕಾರಿ ಎನ್ನುವ ಆಪಾದನೆ ಹೊತ್ತಿದ್ದ ನಿಂಗರಾಜಪ್ಪ ಅವರ ಎತ್ತಂಗಡಿಗೆ ಕಾರಣ ಎನ್ನಲಾಗುತ್ತಿದೆ.ಎಲ್ಲಾ ಅಧಿಕಾರಿ ಸಿಬ್ಬಂದಿ ಹೋದ ಮೇಲೆ ಸಂಜೆ 7 ಗಂಟೆ ಹೊತ್ತಿಗೆ ಶಾಲಾ ಆಡಳಿತ ಮಂಡಳಿಗಳವರನ್ನು ಕರೆಯಿಸಿ ರಾಜಾರೋಷವಾಗಿ ಅವರೊಂದಿಗೆ ವ್ಯವಹಾರ ಕುದುರಿಸುತ್ತಿದ್ದ ದೃಶ್ಯಗಳು ಪಾಠಶಾಲೆಗೆ ಸಿಕ್ಕಿದ್ವು.ಇದನ್ನು ಇಲಾಖೆ ಗಮನಕ್ಕೆ ತರಲಾಗಿತ್ತು.ಆದರೆ ಇಲಾಖೆ ಕ್ರಮ ಕೈಗೊಳ್ಳದಾಗ ಸರ್ಕಾರದ ಸಚಿವರು, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿತ್ತು.ಆಗಲೇ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತವಾಗಿತ್ತು.ಆ ಭರವಸೆ ಈ ವರ್ಗಾವಣೆ ಮೂಲಕ ಈಡೇರಿದಂತಾಗಿದೆ. ಹಾಗಾಗಿ ಇದು ಪಾಠಶಾಲೆ ಹೋರಾಟಕ್ಕೆ ಸಂದ ಜಯವಾಗಿದೆ ಎನ್ನುತ್ತಾರೆ ಪಾಠಶಾಲೆ ಸಂಚಾಲಕ ಗಂಗಾಧರ್.


Political News

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

Scroll to Top