ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಸಹಚರರು ಸೆಪ್ಟೆಂಬರ್ 9ರಂದು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅಂಡ್ ಟೀಮ್ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 9 ನೇ ತಾರೀಕು ಮುಕ್ತಾಯವಾಗಲಿದೆ.
ಸೆಪ್ಟೆಂಬರ್ 09ನೇ ತಾರೀಕಿನಂದು 24ನೇ ACMM ಕೋರ್ಟ್ ಗೆ ಹಾಜರು ಪಡಿಸಲಿರುವ ಪೊಲೀಸರು ಅದೇ ದಿನ ಚಾರ್ಜ್ ಶೀಟ್ ಸಲ್ಲಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಸೆಷನ್ಸ್ ಕೋರ್ಟ್ ಗೆ ವರ್ಗಾವಣೆಗೆ ಮನವಿ ಮಾಡಲಿದ್ದಾರೆ.
ಚಾರ್ಜ್ ಶೀಟ್ ವರ್ಗಾವಣೆ ಆದ 2 -3 ದಿನಗಳಲ್ಲಿ ಕೇಸ್ ಗೆ ಸಂಬಂಧಿಸಿದಂತೆ ಕೇಸ್ ಸ್ಕ್ರೂಟ್ಯೂನಿ ಆಗಲಿದೆ. ಸ್ಕ್ರೂಟ್ಯೂನಿ ಆದ ನಂತರ ಪ್ರಕರಣಕ್ಕೆ ಸಿಸಿ ನಂಬರ್ ಕೋರ್ಟ್ ನಿಂದ ನೀಡಲಾಗುತ್ತದೆ.
ಪ್ರಕರಣದ ಸಿಸಿ ನಂಬರ್ ಪಡೆದ ನಂತರ ಆರೋಪಿಗಳ ಪರ ವಕೀಲರಿಗೆ ಚಾರ್ಜ್ ಶೀಟ್ ಪ್ರತಿಯನ್ನು ನೀಡಲಾಗುತ್ತದೆ. ಚಾರ್ಜ್ ಸೀಟ್ ಪ್ರತಿ ಕೈಗೆ ಸಿಕ್ಕ ನಂತರ,ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.
ಸೆಪ್ಟೆಂಬರ್ 9ರ ನಂತರ ಜಾಮೀನಿಗೆ ಅರ್ಜಿ ಸಲ್ಲಿಸುವುದಕ್ಕೆ ದರ್ಶನ್, ಪವಿತ್ರ ಗೌಡ ಸೇರಿ ಉಳಿದ ಆರೋಪಿಗಳು ಸಿದ್ಧತೆ ನಡೆಸಿದ್ದಾರೆ.
ಚಾರ್ಜ್ ಸೀಟ್ ಗೂ ಮುನ್ನ ದರ್ಶನ್, ಪವಿತ್ರಾಗೌಡ ಮುಂತಾದವರು ಸಲ್ಲಿಸಿದ್ದ ಅರ್ಜಿಗಳು ವಜಾ ಆಗಿತ್ತು