ಬೆಂಗಳೂರು: ಸಾರಿಗೆಯ ನಾಲ್ಕು ನಿಗಮಗಳ ಸಿಬ್ಬಂದಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸಿಡಿದೆದ್ದಿರುವ ಸಾರಿಗೆ ಸಂಘಟನೆಗಳು ಮತ್ತೊಂದು ಮುಷ್ಕರಕ್ಕೆ ಕರೆ ಕೊಡಬೇಕೋ..ಬೇಡವೋ ಎನ್ನುವ ಗೊಂದಲಕ್ಕೆ ಸಿಲುಕಿವೆ.ಮುಷ್ಕರಕ್ಕೆ ಕರೆ ಕೊಟ್ಟರೆ ಯಶಸ್ವಿಯಾಗುತ್ತದೋ ಇಲ್ಲವೋ..ಅದಕ್ಕೆ ಸರ್ಕಾರದ ಸ್ಪಂದನೆ ಯಾವ್ ರೀತಿ ಇರುತ್ತೋ..? ಎಲ್ಲಕ್ಕಿಂತ ಹೆಚ್ಚಾಗಿ ಸಾರಿಗೆ ಸಿಬ್ಬಂದಿನೇ ಯಾವ್ ರೀತಿ ಪ್ರತಿಕ್ರಿಯಿಸ್ತಾರೋ ಎನ್ನುವ ಗೊಂದಲ ಸಂಘಟನೆಗಳಿವೆ.
ಆದರೂ ಧೈರ್ಯ ಮಾಡಿ ಸಾರಿಗೆ ಕೂಟ ಮುಷ್ಕರದ ಬಗ್ಗೆ ಮಾತನಾಡಿತ್ತು..ಸರ್ಕಾರ ಮಾತುಕತೆಗೆ ಕರೆಯುತ್ತೆ ಎನ್ನುವ ನಿರೀಕ್ಷೆಯಲ್ಲಿದೆ..ಅದರ ಬೆನ್ನಲ್ಲೇ ಸೈಲೆಂಟಾಗಿದ್ದ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಇದ್ದಕ್ಕಿದ್ದಂತೆ ಆಕ್ಟೀವ್ ಆಗಿದೆ.ಇಂದು ಅಂದ್ರೆ 13-08-2024 ರಂದು ಬೆಂಗಳೂರಲ್ಲಿ ಸಿದ್ದತಾ ಸಮಾವೇಶ ನಡೆಸುತ್ತಿದೆ. ಬೇಡಿಕೆ ಈಡೇರಿಸಿರುವ ಲಕ್ಷಣ ಗೋಚರಿಸದ ಹಿನ್ನಲೆಯಲ್ಲಿ ಮುಂದಿನ ಚಳುವಳಿ-ಹೋರಾಟಗಳ ಸ್ವರೂಪ ಹೇಗಿರಬೇಕೆನ್ನುವುದರ ಬಗ್ಗೆ ಗಂಭೀರ ಚರ್ಚೆ ನಡೆಸಿ ಅಂತಿಮ ನಿರ್ದಾರಕ್ಕೆ ಬಂದಂತಿದೆ ಎನ್ನಲಾಗ್ತಿದೆ.
ಸಾರಿಗೆ ಸಂಘಟನೆಗಳ ಹೋರಾಟದಲ್ಲಿ ಮುಂವೂಣಿಯಲ್ಲಿರುವ ಕೆಎಸ್ ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್(ಎಐಟಿಟಿಯುಸಿ) ರಾಜ್ಯಾಧ್ಯಕ್ಷ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಅವರ ಕಚೇರಿ ಹಿಂಭಾಗ ದಲ್ಲಿರುವ ವರದರಾಜ್ ಸ್ಮಾರಕ ಸಭಾಂಗಣದಲ್ಲಿ ಸಿದ್ದತಾ ಸಭೆ ಕರೆಯಲಾಗಿತ್ತು.ಸಮಾನ ಮನಸ್ಕ ಹಾಗೂ ಮಿತ್ರ ಸಂಘಟನೆಗಳಾದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್, ಕೆಎಸ್ ಆರ್ ಟಿಸಿ ಪರಿಶಿಷ್ಟ ಜಾ ತಿ,ಪರಿಶಿಷ್ಟ ಪಂಗಡಗಳ ನೌಕರರ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
01-01-2020 ರಿಂದ 38 ತಿಂಗಳ ವೇತನ ಹಿಂಬಾಕಿ,01-01-2024 ರಿಂದ ಹೊಸ ವೇತನ ಪರಿಷ್ಕರಣೆ ಸೇರಿದಂತೆ ಅನೇಕ ಪ್ರಮುಖ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮಾತುಕತೆಗೆ ಕರೆದು ಸೌಹಾರ್ದ ಯು ತವಾಗಿ ಸಮಸ್ಯೆ ಬಗೆಹರಿಸುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೆವು.ಸರ್ಕಾರಿ ನೌಕರರ ವಿಷಯದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೂ ಸಾರಿಗೆ ಸಿಬ್ಬಂದಿ ವಿಚಾರದಲ್ಲಿ ತೋರುತ್ತಿರುವ ತಾರತಮ್ಯದ ಬಗ್ಗೆ ಎಷ್ಟೇ ಅಸಹನೆ-ಆಕ್ರೋಶವಿದ್ದಾಗ್ಯೂ ಎಲ್ಲವನ್ನು ಸಹಿಸಿಕೊಂಡಿದ್ದೆವು.ಆದರೆ ಸರ್ಕಾರದಿಂದ ಈವರೆಗೂ ಸಕಾರಾತ್ಮಕವಾಗಿ ಏನೂ ಸ್ಪಂದನೆ ಸಿಗುತ್ತಿಲ್ಲ.ಇದರ ಅರ್ಥ ಸರ್ಕಾರ ನಮ್ಮನ್ನು ನಿರ್ಲಕ್ಷ್ಯಿಸುವ ಎಂದಿನ ಸಂಪ್ರ ದಾಯ ಮುಂದುವರೆಸಿದೆ ಎಂದರ್ಥ.ನಮ್ಮನ್ನು ನಿರ್ಲಕ್ಷ್ಯಿಸಿದರೆ ಏನಾಗಲಿದೆ ಎನ್ನುವುದನ್ನು ಅನೇಕ ಬಾರಿ ತಿಳಿಸಿಕೊಟ್ಟಿದ್ದೇವೆ.ಅದನ್ನೇ ಈಗಲೂ ಪ್ರದರ್ಶಿಸಬೇಕಾಗ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದಿದೆ ಎನ್ನಲಾಗಿದೆ.
ಚಳುವಳಿ ಸಿದ್ದತಾ ಸಭೆಯಲ್ಲಿ ಬಹುತೇಕ ಸಾರಿಗೆ ಸಿಬ್ಬಂದಿ ಸಾರಿಗೆ ಮುಷ್ಕರ ನಡೆಸುವುದೇ ಒಳ್ಳೇದು.ನಮ್ಮನ್ನು ಮನುಷ್ಯರಂತೆಯೇ ನೋಡಲಾಗುತ್ತಿಲ್ಲ.ಸ್ಟ್ರೈಕ್ ಮಾಡಿದ್ರೆ ಹೆಚ್ಚೆಂದರೆ ಶಿಸ್ತುಕ್ರಮ ಆಗುತ್ತಲ್ವಾ..? ಅದೇ ನೆಲ್ಲಾ ನಮಗೆ ಹೊಸದಾ..ಎಲ್ಲದಕ್ಕೂ ಸಿದ್ದರಿದ್ದೇವೆ..ಹೀಗೆ ಕೆಲಸ ಮಾಡ್ತಾ ಬದುಕೋದಕ್ಕಿಂತ ಎಂತದ್ದೇ ಗಂಭೀರ ಪರಿಣಾಮ ಬಂದ್ರೂ ಎದುರಿಸಿ ಬದುಕುವುದೇ ಸೂಕ್ತ ಎನ್ನುವುದು ಕೂಡ ಅನೇಕ ಸಾರಿಗೆ ಸಿಬ್ಬಂದಿ ಯಿಂದ ಕೇಳಿಬಂದ ಅಭಿಪ್ರಾಯವಾದ ಹಿನ್ನಲೆಯಲ್ಲಿ ಅಂತಿಮವಾಗಿ ಸಾರಿಗೆ ಸಿಬ್ಬಂದಿಯ ಭಾವನೆಗಳಿಗೆ ಬೆಲೆ ಕೊಡುವುದು ಸೂಕ್ತ ಎನ್ನುವ ಚಿಂತನೆಗೆ ಸಭೆ ಬಂದಿದೆ ಎನ್ನಲಾಗ್ತಿದೆ.
ಸಭೆಯಲ್ಲಿ ಬಹುತೇಕ ಸಾರಿಗೆ ಸಿಬ್ಬಂದಿಗೆ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ದ ಸಿಡಿದೇಳುವುದೇ ಸೂಕ್ತ ಎನ್ನುವ ಅಭಿಪ್ರಾಯ ಕೇಳಿಬಂದಿದೆ.ಇಂದಿನ ಸಭೆ ಕೂಡ ಸರ್ಕಾರದ ವಿರುದ್ದ ಸಾರಿಗೆ ಸಮೂಹದ ಅಸಹನೆ-ಬೇಸರ-ಆಕ್ರೋಶ-ಅಸಮಾಧಾನ ವ್ಯಕ್ತಪಡಿಸುವುದಕ್ಕೆಂದೇ ಸೀಮಿತವಾದ ವೇದಿಕೆಯಾದ್ದರಿಂದ ರಾತ್ರಿಯಾಗುವುದರೊಳಗೆ ಮುಂದಿನ ಹೋರಾಟದ ಸ್ವರೂಪವೇನು ಎನ್ನುವ ಸ್ಪಷ್ಟ ಸಂದೇಶ ರವಾನೆಯಾಗುವ ಸಾಧ್ಯತೆಗಳಿವೆ.ಅದು ಹಂತ ಹಂತದ ಹೋರಾಟನೋ..ಅಥವಾ ಒಮ್ಮಿಂದೊಮ್ಮೆಗೆ ಸಾರಿಗೆ ಮುಷ್ಕರನೋ..ಕಾದು ನೋಡಬೇಕಿದೆ.
ಇಂದೇ “ನಿಗಧಿ”ಯಾಗುತ್ತಾ “ಸಾರಿಗೆ ಮುಷ್ಕರ”ದ ದಿನಾಂಕ..?! ಬೆಂಗ್ಳೂರಲ್ಲಿ ‘ಹೈ ವೋಲ್ಟೇಜ್” ಸಭೆ..