ರವಿ ನಾಗೇಶ್‌ ನಾಯ್ಕ್‌
ರವಿ ನಾಗೇಶ್‌ ನಾಯ್ಕ್‌

ಶಿವಮೊಗ್ಗ/ಸಾಗರ/ಬೆಂಗಳೂರು:ಮನುಷ್ಯತ್ವ ಅಂದ್ರೆ ಇದು…ಕಷ್ಟಕ್ಕೆ ಸಿಲುಕಿದವರಿಗೆ ಕೈಲಾದ ಸಹಾಯವನ್ನು ಹೃದಯಪೂರ್ವಕವಾಗಿ ಮಡೋದಲ್ಲದೇ ಕಷ್ಟಗಳು ನೀಗಿ ಒಳ್ಳೆಯ ದಿನಗಳು ಬರಲಿ ಎಂದು ಆಶಿಸುವ ಮಾತೃಹೃದಯತ್ವವೇ ಮನುಷ್ಯತ್ವ ಎನ್ನುವುದು ನಮ್ಮ ಭಾವನೆ.ಇದಕ್ಕೆ ಸಾಕ್ಷಿಯಾದದ್ದು ಶಿವಮೊಗ್ಗದಲ್ಲಿ ನಡೆದ ಘಟನೆ ಹಾಗೂ ಅದಕ್ಕೆ ಮಿಡಿದ ಸಾರಿಗೆ ಹೃದಯಗಳ ಮನುಷ್ಯತ್ವದ ಕಥೆ.

ರವಿ ನಾಗೇಶ್‌ ನಾಯ್ಕ್‌  ಸಾಗರ ಬಸ್ಟ್ಯಾಂಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಾರಿಗೆ ಸಿಬ್ಬಂದಿ.ಆರೋಗ್ಯದಲ್ಲಿ ಏರುಪೇರಾಗುತ್ತಿದ್ದರೂ ಕೆಲಸಕ್ಕೆ ಪ್ರಾಮಾಣಿಕವಾಗಿ ಹಾಜರಾಗುತ್ತಿದ್ದ ಕಾರ್ಮಿಕ.ಈ ಹಿಂದೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ ಮೇಲೆ ದೈಹಿಕ ಕ್ಷಮತೆ ಕಳೆದುಕೊಂಡರೂ ಮಾನಸಿಕವಾಗಿ ಕುಗ್ಗದೆ ಎಲ್ಲರ ಜತೆಗೂ ನಸುನಗುತ್ತಾ ಕೆಲಸ ಮಾಡಿಕೊಂಡಿದ್ದ ಸಾರಿಗೆ ನೌಕರ.

ಇಂಥಾ  ರವಿ ನಾಗೇಶ್ ನಾಯ್ಕ್  ಕೆಲಸದ ವೇಳೆಯೇ ಬ್ರೈನ್ ಸ್ಟ್ರೋಕ್ ನಿಂದ ಕುಸಿದುಬಿದ್ದಿದ್ದಾರೆ.ತಕ್ಷಣಕ್ಕೆ ಅವರನ್ನು ಸಹದ್ಯೋಗಿಗಳು ತಡಮಾಡದೆ  ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನೇನೋ ಕೊಟ್ಟಿದ್ದಾರೆ.ಆದರೆ ಅದರಿಂದ ಪ್ರಯೋಜನವಾಗ್ಲಿಕ್ಕಿಲ್ಲ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ ಮೇರೆಗೆ  ಆಂಬುಲೆನ್ಸ್ ಮುಕಾಂತರ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

“ಇದರ ನಡುವೆಯೇ ರಾಜ್ಯಾದ್ಯಂತ ಬಿಸಿಲ ಝಳ ಹೆಚ್ಚಾಗುತ್ತಿದ್ದು ಅನೇಕರು ಬಿಸಿಲ ತಾಪ ಸಹಿಸಿಕೊಳ್ಳಿಕ್ಕಾಗದೆ ನಿತ್ರಾಣಗೊಂಡು ಸಾವನ್ನಪ್ಪುತ್ತಿದ್ದಾರೆ.ಇದರ ಅಪಾಯ ಸಾರಿಗೆ ಸಿಬ್ಬಂದಿಗೂ ಇದೆ.ದಿನದ ಕೆಲಸದ ಬಹುತೇಕ ಸಮಯವನ್ನು ಅವರು ಬಸ್‌ ನೊಳಗೆ ಕಳೆಯುತ್ತಾರೆ.ಡ್ರೈವರ್‌ ಉಷ್ಣಾಂಶ ಹೆಚ್ಚಾಗಿರುವ ಜಾಗದಲ್ಲಿ ಕುಳಿತು  ಕೆಲಸ ಮಾಡಿದ್ರೆ ಕಂಡಕ್ಟರ್‌ ರಶ್‌ ನೊಳಗೆ ನುಗ್ಗಿ ಕೆಲಸ ಮಾಡ್ಬೇಕಾಗಿದೆ.ಶಕ್ತಿ ಯೋಜನೆ ಜಾರಿಯಾದ್ಮೇಲಂತೂ ಅವರಿಗೆ ಆಗುತ್ತಿರುವ ಕಿರಿಕಿರಿ ಕೂಡ ಹೆಚ್ಚಾಗಿದೆ.ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ಅವರು ಕೆಲಸ ಮಾಡುತ್ತಿದ್ದಾರೆ.ಹಾಗಾಗಿ ನಿರ್ಲಕ್ಷ್ಯ ಮಾಡದೆ ಆರೋಗ್ಯ ಕಾಳಜಿ ಮಾಡಿ..ಇದು ಕನ್ನಡ ಫ್ಲ್ಯಾಶ್‌ ನ್ಯೂಸ್‌ ನ ಕಳಕಳಿ”

ಎಲ್ಲರಿಗೂ ಗೊತ್ತಿರುವಂತೆ ಮಣಿಪಾಲ ಆಸ್ಪತ್ರೆಯಲ್ಲಿ ಉತ್ಸಮ ಚಿಕಿತ್ಸೆ ದೊರೆಯುವ ಹೊರತಾಗ್ಯೂ ಹಣ ಸಾಕಷ್ಟು ಖರ್ಚು ಮಾಡಲೇಬೇಕಾಗುತ್ತದೆ.ಹಾಗಾಗಿ ರವಿ ನಾಗೇಶ್‌ ನಾಯ್ಕ್‌ ಗೆ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯವಿರುವುದರಿಂದ ಅವರ ಕುಟುಂಬಸ್ಥರು ಹಾಗೂ ಸಹದ್ಯೋಗಿಗಳ ನೆರವಿಗೆ ಸಾರ್ವಜನಿಕವಾಗಿ ಅಪೀಲು ಮಾಡಿದ್ದರು.

ಆಶ್ಚರ್ಯ ಎಂದರೆ ಮನುಷ್ಯತ್ವ ಇನ್ನೂ ಬದುಕಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಅವರ ಖಾತೆಗೆ ಸಾಕಷ್ಟು ಹಣ ಸಂದಾಯವಾಗಿದೆ.ಗೂಗಲ್‌ ಪೇ-ಫೋನ್‌ ಪೇ ಮೂಲಕ ಹಣ ನೀಡುತ್ತಿದ್ದಾರೆ.ತಮ್ಮ ಕೈಲಾದ ಪ್ರಮಾಣದಲ್ಲಿ ಸಹಾಯ ಮಾಡುತ್ತಿದ್ದಾರೆ.ಸಾರಿಗೆ ಸಿಬ್ಬಂದಿ ತಮ್ಮ ಗ್ರೂಪ್‌ ಗಳಲ್ಲೆಲ್ಲಾ ರವಿ ನಾಗೇಶ್‌ ನಾಯ್ಕ್‌ ಗೆ ನೆರವಾಗುವಂತೆ ಕೋರುತ್ತಿದ್ದಾರೆ. ಸಿಬ್ಬಂದಿ ಕೂಡ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಾಯವನ್ನೂ ಮಾಡುತ್ತಿದ್ದಾರೆ.

ಚಿಕಿತ್ಸೆಗೆ ಹೆಚ್ಚಿನ ಹಣದ ಅಗತ್ಯವಿದೆ ಎಂದು ಹೇಳಲಾಗುತ್ತಿದ್ದು ಹಣ ಸಹಾಯ ಮಾಡುವವರು  Ifc 91065884033, A/c41394848648 Sbin ashoka road sagara ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ.ಅದೇನೇ ಆಗಲಿ ಸಾರಿಗೆ ಸಿಬ್ಬಂದಿಯ ಮನುಷ್ಯತ್ವಕ್ಕೆ ನಮ್ಮದೊಂದು ಹ್ಯಾಟ್ಸಾಫ್.‌

Spread the love

Leave a Reply

Your email address will not be published. Required fields are marked *

You missed