ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ ಕೃಷ್ಣ ಆರೋಗ್ಯದಲ್ಲಿ ತೀವ್ರತರದ ಏರುಪೇರು ಕಂಡುಬಂದಿದೆ.ವಯೋಸಹಜ ಸಮಸ್ಯೆಯಿಂದ ಬಳಲುತ್ತಿರುವ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಟ ನಡೆಸುತ್ತಿದ್ದು ಅವರ ಸ್ತಿತಿ ಜೀವನ್ಮರಣಗಳ ನಡುವಿನ ಹೋರಾಟವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ಮಣಿಪಾಲ ವೈದ್ಯರು ತಿಳಿಸಿದ್ದಾರೆ.

ಮನಿಪಾಲ್ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಎಸ್.ಎಂ ಕೃಷ್ಣ ಚಿಕಿತ್ಸೆ ಪಡೆಯುತ್ತಿದ್ದು ವಯೋಸಹಜ  ಆರೋಗ್ಯ ಸಮಸ್ಯೆ ಜತೆಗೆ ಶ್ವಾಸಕೋಶ ಸೋಂಕು ಸಹ ಅವರಲ್ಲಿ ಕಾಣಿಸಿಕೊಂಡಿದೆ.ವೈದ್ಯರ ತಂಡ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಟ್ಟು ಕೆಲಸ ಮಾಡ್ತಿದೆ.ಪ್ರತಿ ಗಂಟೆಗೊಮ್ಮೆ ಅವರ ಆರೋಗ್ಯದ ವರದಿಯನ್ನು ಸರ್ಕಾರಕ್ಕೆ ಸಹ ನೀಡಲಾಗ್ತಿದೆ.

92 ವಯಸ್ಸಿನ ಎಸ್.ಎಂ ಕೃಷ್ಣ ಅವರ ಆರೋಗ್ಯ ಇತ್ತೀಚಿನ ವರ್ಷಗಳಲ್ಲಿ ಹದಗೆಡುತ್ತಿದ್ದ ಪರಿಣಾಮ ಅವರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗುತ್ತಿತ್ತು.ಮೊನ್ನೆ ಅವರ ಆರೋಗ್ಯದಲ್ಲಿ ತೀವ್ರತರದ ಏರುಪೇರು ಕಂಡುಬಂದಿದ್ಗರಿಂದ ತಡಮಾಡದೆ ಕುಟುಂಬದವರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.ವಯೋಸಹಜ ಆರೋಗ್ಯ ಸಮಸ್ಯೆ ಜತೆಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿರುವುದರಿಂದ ಅವರನ್ನು ಐಸಿಯನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು.ಆದರೆ ವೈದ್ಯರ ಚಿಕಿತ್ಸೆಗೆ ಆರೋಗ್ಯ ದೇಹಸ್ತಿತಿ ಸ್ಪಂದಿಸುತ್ತಿಲ್ಲ ಎನ್ನುವ ಮಾಹಿತಿ ದೊರೆತಿದ್ದು ಸಧ್ಯಕ್ಕೆ ಅವರಿಗೆ ವೆಂಟಿಲೇಟರ್ ನೆರವಿನಿಂದ ಉಸಿರಾಡುವಂತೆ ಮಾಡಲಾಗಿದೆ.

ಮೇ 1, 1932 ರಂದು ಜನಿಸಿದ   ಸೋಮನಹಳ್ಳಿ ಮಲ್ಲಯ್ಯ ಕೃಷ್ಣ     ಕರ್ನಾಟಕ ಕಂಡ ಪ್ರತಿಭಾವಂತ    ಮುಖ್ಯಮಂತ್ರಿಗಳಲ್ಲಿ ಒಬ್ಬರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ಅವರು ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಮುಂದೆ, ಅವರು ದಕ್ಷಿಣ ಮೆಥೋಡಿಸ್ಟ್ ವಿಶ್ವವಿದ್ಯಾಲಯ, ಡಲ್ಲಾಸ್, USA ಮತ್ತು ನಂತರ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು.ಭಾರತಕ್ಕೆ ಹಿಂತಿರುಗಿ, ಅವರು ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಕಾನೂನಿನ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.  1962 ರಲ್ಲಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು.   1968 ರಲ್ಲಿ ಸಂಸದರಾದರು.4-5 ನೇ ಲೋಕಸಭೆಯ ಸದಸ್ಯರಾದರು. 1972 ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿದರು.ವಿಧಾನಸಭೆಗೆ ಚುನಾಯಿತರಾದರು ಮತ್ತು ವಾಣಿಜ್ಯ, ಕೈಗಾರಿಕೆಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು.1972 -1977 ರ ನಡುವೆ ಅಧಿಕಾರ ವಹಿಸಿಕೊಂಡರು. 1980 ರಲ್ಲಿ  ಲೋಕಸಭೆಗೆ ಮರಳಿದರು ಮತ್ತು 1983-84ರ ಅವಧಿಯಲ್ಲಿ ಕೈಗಾರಿಕಾ ರಾಜ್ಯ ಸಚಿವರಾಗಿದ್ದರು ಮತ್ತು 1984-85ರಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವರಾಗಿದ್ದರು.

1989ರಿಂದ 1992ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆದರು,  1992 ರಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿಯಾದರು. 1996-199ರವರೆಗೆ  ರಾಜ್ಯಸಭೆ ಸದಸ್ಯರಾಗಿದ್ದರು.ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿ ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಬದಲಾದ ಕಾಲಘಟ್ಟದಲ್ಲಿ 2004 ರಂದು ಮಹಾರಾಷ್ಟ್ರದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎಸ್.ಎಂ. ಕೃಷ್ಣ ಅವರು 1982 ರಲ್ಲಿ ವಿಶ್ವಸಂಸ್ಥೆಗೆ ಭಾರತೀಯ ನಿಯೋಗದ ಸದಸ್ಯರಾಗಿದ್ದರು

ರಾಜ್ಯ ಹಾಗು ಕೇಂದ್ರ ರಾಜಕಾರಣದ ಎಲ್ಲಾ ಅಧಿಕಾರವನ್ನು ಅನುಭವಿಸಿದ ಎಸ್.ಎಂ ಕೃಷ್ನ ತಮ್ಮ ರಾಜಕೀಯ ಅಂತ್ಯದ ದಿನಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.ಇದರ ಬಗ್ಗೆ ವ್ಯಾಪಕ ಆಕ್ರೋಶ-ವಿರೋಧ ವ್ಯಕ್ತವಾದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ..ರಾಜಕೀಯದ ಸಹವಾಸವೇ ಬೇಡ ಎಂದು ಸಧ್ಯಕ್ಕೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.ಎಸ್.ಎಂ ಕೃಷ್ಣ ಅವರ ಶೀಘ್ರ ಚೇತರಿಕೆಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಪ್ರಾರ್ಥಿಸುತ್ತದೆ.

Spread the love

Leave a Reply

Your email address will not be published. Required fields are marked *

You missed