**ಕಾಂಡೋಮ್ಸ್ ಬಳಸಿ ಬಿಸಾಡುವಷ್ಟು ಧೈರ್ಯ ಯಾರಿಗಿದೆ..?
**ಕೃತ್ಯದ ಹಿಂದಿರುವ ಕಿಡಿಗೇಡಿಗಳ ಪತ್ತೆಗೆ ತನಿಖೆ ನಡೆಯುತ್ತಾ..?!
ಬೆಂಗಳೂರಿನ ನಾಗರಿಕರು ನೆಮ್ಮದಿಯಿಂದ ಇರಬೇಕು, ಕಾನೂನುಸುವ್ಯವಸ್ಥೆ ಹದಗೆಡಬಾರದು ಎನ್ನುವ ಉದ್ದೇಶದಲ್ಲಿ ಹಗಲಿರುಳು ಶ್ರಮಿಸ್ತಿದ್ದಾರೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್. ಒಂದು ಕ್ಷಣ ಪುರುಸೊತ್ತಿಲ್ಲದೆ ದುಡಿಯುತ್ತಿ ರುವ ಜನಪರ ಕಾಳಜಿಯ ಕಾಮನ್ ಮ್ಯಾನ್ ಕಮಿಷನರ್ ಅವರ ಕಚೇರಿ ಇರುವ ಕ್ಯಾಂಪಸ್ ನಲ್ಲೇ ಅಪಚಾರವೊಂದು ನಡೆದೋ ಗಿದೆ. ಬಹುಷಃ ಕಮಿಷನರ್ ಅವರ ಗಮನಕ್ಕೆ ಇಲ್ಲದಿರಬಹುದಾದ ಅಘಾತಕಾರಿ ವಿಷಯವೊಂದರ ಮೇಲೆ ಕನ್ನಡ ಫ್ಲ್ಯಾಶ್ ನ್ಯೂಸ್ ಗಮನಸೆಳೆಯುತ್ತಿದೆ.
ನಿಜವಾಗಿಯೂ ಈ ಒಂದು ಸುದ್ದಿಯನ್ನು ಪ್ರಕಟಿಸುವ ಯಾವುದೇ ಇರಾದೆ, ಉದ್ದೇಶ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಇರಲಿಲ್ಲ.ಕಮಿಷನರ್ ದಯಾನಂದ್ ಹಾಗೂ ಡಿಸಿಪಿ ಸಾಹು ಮೇಡಮ್ ಅವರ ಬಗ್ಗೆ ನಮಗೂ ಒಳ್ಳೆಯ ಅಭಿಪ್ರಾಯವಿದೆ.ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನವಿದೆ. ಇರುವ ವ್ಯವಸ್ಥೆಯನ್ನು ತಮ್ಮದೇ ಚೌಕಟ್ಟಿನಲ್ಲಿ ಸರಿಪಡಿಸುವ ಸಾಕಷ್ಟು ಸುಧಾರಣೆಯ ಕೆಲಸವನ್ನು ಅವರಿಬ್ಬರೂ ಮಾಡುತ್ತಿದ್ದಾರೆ. ಆದರೆ ಅವರ ಪ್ರಯತ್ನಕ್ಕೆ ಅವರದೇ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕೆಟ್ಟ ಹೀನಮನಸ್ಸಿನ ಸಿಬ್ಬಂದಿ ಹೇಗೆ ಹಾಳು ಮಾಡುತ್ತಿರಬಹುದಾದ ಸಾಧ್ಯತೆಗಳಿವೆ.ಇದು ಆತಂಕಕಾರಿಯಾದ ವಿಚಾರ. ಕಚೇರಿಯ ಪಾವಿತ್ರ್ಯ ತೆ ಹಾಗೂ ಗಾಂಭೀರ್ಯತೆಯನ್ನು ಕಿಡಿಗೇಡಿಗಳು ಹೇಗೆ ಗಾಳಿಗೆ ತೂರುತ್ತಿದ್ದಾರೆ ಎನ್ನುವುದನ್ನು ತಿಳಿಸುವ ಏಕೈಕ ಉದ್ದೇಶದಿಂದ ಸುದ್ದಿ ಪ್ರಕಟಿಸಬೇಕಾಗಿ ಬಂದಿದೆ.
ಕಳೆದ ಬುಧವಾರ ಅಂದ್ರೆ 21-08-2024 ರಂದು ಪೊಲೀಸ್ ಕಮಿಷನರ್ ಕಚೇರಿಗೆ ಕಾರ್ಯನಿಮಿತ್ತ ಹೋದ ಮೀಡಿಯಾದ ಕ್ಯಾಮೆರಮನ್ ಒಬ್ಬರು, ಜಲಬಾಧೆ ತೀರಿಸಿಕೊಳ್ಳಲು ಅಡ್ಮಿನ್ ಡಿಸಿಪಿ ಕಚೇರಿ ಪಕ್ಕದಲ್ಲಿರುವ ಟಾಯ್ಲೆಟ್ ಗೆ ಹೋದಾಗ ಅಲ್ಲಿ ನೆಲದಲ್ಲಿ ಹಾಗೂ ಟಾಯ್ಲೆಟ್ ನ ಮೇಲ್ಬಾಗದಲ್ಲಿ ಬಳಸಿ ಬಿಸಾಡಿದ ಸ್ಥಿತಿ ಯಲ್ಲಿರುವ ಕಾಂಡೋಮ್ ಗಳನ್ನು ಕಂಡು ಶಾಕ್ ಆಗಿದ್ದಾರೆ.ಸಾಕ್ಷಿಗಿರಲಿ ಎಂದು ಅವನ್ನು ತಮ್ಮ ಮೊ ಬೈಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಂಡಿದ್ದಾರೆ.ಅಡ್ಮಿನ್ ಡಿಸಿಪಿ ಇದ್ದರೆ ಅವರ ಗಮನಕ್ಕೆ ತರಲು ಬಯಸಿ ಕಚೇರಿಗೆ ಹೋದಾಗ ಅವರು ಇರಲಿಲ್ಲವಂತೆ.ಈ ಫೋಟೋಗಳು ಸಾಕಷ್ಟು ಮಾದ್ಯಮಗಳ ಕೈಸೇರಿವೆ.
“ಗಮನಕ್ಕೆ ಬಂದಿದೆ…ಸೂಕ್ತ ಕ್ರಮ ಕೈಗೊಳ್ಳುತ್ತೇವೆ”
ಆಡಳಿತ ವಿಭಾಗದ ಡಿಸಿಪಿ ಪದ್ಮನಿ ಸಾಹು ಮೇಡಮ್ ಅವರನ್ನು ಮಾದ್ಯಮಗಳು ಈ ಬಗ್ಗೆ ಸಂಪರ್ಕಿಸಿದಾಗ ಪ್ರಕರಣ ನನ್ನ ಗಮನಕ್ಕೆ ಬಂದಿದೆ.ಮಾದ್ಯಮಗಳಿಂದ ತಿಳಿದುಕೊಂಡಿ ದ್ದೇನೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಮಗ್ರ ತನಿಖೆ ಕೈಗೊಳ್ಳಲಿದ್ದೇವೆ. ಯಾರು ಕಾಂಡೋಮ್ಸ್ ಗಳನ್ನು ಬಳಸಿ ಬಿಸಾಡಿದ್ದಾರೆ ಎನ್ನುವ ಸತ್ಯ ಬಯಲಾಗಬೇಕಿದೆ. ಹಾಗಾಗಿ ಅಗತ್ಯಬಿದ್ದವ ರನ್ನು ತನಿಖೆಗೊಳಪಡಿಸಲು ನಿರ್ದರಿಸಿದ್ದೇವೆ.ತಪ್ಪಿತಸ್ಥರು ಯಾರೇ ಇರಲಿ,ಅವರ ವಿರುದ್ಧ ಕ್ರಮವಾಗಲಿದೆ -ಪದ್ಮನಿ ಸಾಹು,ಡಿಸಿಪಿ( ಆಡಳಿತ)
ಪೊಲೀಸ್ ಕಮಿಷನರ್ ಕಚೇರಿ ಇರುವ ಕಟ್ಟಡದ 2 ನೇ ಮಹಡಿಯ ಕ್ಯಾಂಪಸ್ ನಲ್ಲೇ ಆಡಳಿತ ವಿಭಾಗದ ಡಿಸಿಪಿ ಕಚೇರಿಯಿದೆ.ಆ ಕಚೇರಿಗೆ ಹೊಂದಿಕೊಂಡಿ ರುವ ಟಾಯ್ಲೆಟ್ ನಲ್ಲಿ ಕಾಂಡೋಮ್ ಗಳು ಪತ್ತೆಯಾಗಿದೆ.ಪೊಲೀಸ್ ಕಮಿಷನರ್ ಕಚೇರಿ ಎನ್ನುವ ಭಯವೂ ಇಲ್ಲದೆ ಕಾಂಡೋಮ್ ಗಳನ್ನು ಹೀಗೆ ಬಿಸಾಡಿದವರು ಯಾರೆನ್ನುವ ಪ್ರಶ್ನೆಗೆ ಈಗ ಉತ್ತರ ಸಿಗಬೇಕಿದೆ.ಕಚೇರಿಯ ಸಿಬ್ಬಂದಿನೇ ಇದನ್ನು ಮಾಡಿದ್ರೋ ಅಥವಾ ಹೊರಗಿನವರ ಕೈವಾಡವಿದೆ ಯೋ ಎನ್ನುವುದು ಕೂಡ ತನಿಖೆಯಿಂದ ಗೊತ್ತಾಗಬೇಕಿದೆ.
ಟಾಯ್ಲೆಟ್ ನಲ್ಲಿ ಸಿಕ್ಕ ಕಾಂಡೋಮ್ ಗಳನ್ನು ಗಮನಿಸಿದರೆ ಅವನ್ನು ಬಳಸಿ ಬಿಸಾಡಿರುವುದು ಗೊತ್ತಾಗುತ್ತದೆ.ಟಾಯ್ಲೆಟ್ ನಲ್ಲೇ ಅವನ್ನು ಬಳಸಿ ಬಿಸಾಡಲಾಗಿದೆಯೋ? ಅಥವಾ ಬೇರೆ ಕಡೆ ಬಳಸಿ ಇಲ್ಲಿ ಬಿಸಾಡಲಾಗಿದೆಯೋ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಪೊಲೀಸ್ ಕಮಿಷನರ್ ಕಚೇರಿಗೆ ಅದರದೇ ಆದ ಘನತೆ-ಗಾಂಭೀರ್ಯ ಹಾಗೂ ಮರ್ಯಾದೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾನೂನು ಕಟ್ಟುನಿಟ್ಟಾಗಿ ಪಾಲನೆಯಾಗಬೇಕಾದಂಥ ಸ್ಥಳ.ಇವತ್ತು ಅದೇ ಕ್ಯಾಂಪಸ್ ನಲ್ಲಿರುವ ಟಾಯ್ಲೆಟ್ ನಲ್ಲಿ ಕಾಂಡೋಮ್ ಗಳು ಬಳಸಿ ಬಿಸಾಡಿದ ರೀತಿಯಲ್ಲಿ ದೊರೆಯುತ್ತವೆ ಎಂದರೆ ಇದರ ಬಗ್ಗೆ ಏನನ್ನಬೇಕೋ ಗೊತ್ತಾಗುತ್ತಿಲ್ಲ.
ಬೆಂಗಳೂರಿನ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಬ್ಯುಸಿಯಾಗಿರುವ ಪೊಲೀಸ್ ಕಮಿಷನ ರ್ ದಯಾನಂದ್ ಹಾಗೂ ಆಡಳಿತಾತ್ಮಕ ಸಂಗತಿಗಳಲ್ಲಿ ತಲೆಕೆಡಿಸಿಕೊಂಡಿರುವ ಡಿಸಿಪಿ ಅವರಂಥ ಅಧಿಕಾರಿಗಳೇ ಮುಜುಗರ ಪಟ್ಟುಕೊಳ್ಳುವಂಥ ಈ ಘಟನೆಗೆ ಕಾರಣವಾದವರು ಯಾರೇ ಇರಲಿ ಅವರ ವಿರುದ್ಧ ಕ್ರಮ ಜಾರಿಯಾಗಲೇಬೇಕಿದೆ.
ಏಕೆಂದರೆ ಪೊಲೀಸ್ ಕಮಿಷನರ್ ಕಚೇರಿಗೆ ಅದರದೇ ಆದ ಪಾವಿತ್ರ್ಯತೆ ಇರುತ್ತದೆ.ಕೆಲಸಕ್ಕೆ ಬರೋ ಸಿಬ್ಬಂ ದಿಗೂ ಕೂಡ ಈ ಘಟನೆ ಮುಜುಗರ ತರಿಸುತ್ತದೆ. ಎಲ್ಲಕ್ಕಿಂತ ಇಂತದ್ದೊಂದು ಕೃತ್ಯ ಎಸಗಿರಬಹುದಾದ ವರ ನೀಚಪ್ರವೃತ್ತಿ ಯಿಂದ ಕಮಿಷನರ್ ಕಚೇರಿಗೂ ಕೆಟ್ಟ ಹೆಸರು ಬರುವ ಸಾಧ್ಯತೆಗಳಿವೆ. ಕಮಿಷನರ್ ಕಚೇರಿಯ ಪಾವಿತ್ರ್ಯತೆ ಹಾಗೂ ಗಾಂಭೀರ್ಯತೆ ಹಾಳು ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಠಿಣಾತೀ ಕಠಿಣ ಕ್ರಮ ಕೈಗೊಳ್ಳಲೇಬೇಕಿದೆ. ಆ ಮೂಲಕ ಕಮಿಷನರ್ ದಯಾನಂದ್ ಹಾಗೂ ಡಿಸಿಪಿ (ಆಡಳಿತ) ಪದ್ಮಿನಿ ಸಾಹು ಅವರಿಗೆ ಆಗಿರುವ ಮುಜುಗರ ತಪ್ಪಿಸಲೇಬೇಕಿದೆ.ಇದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ..