ಬೆಂಗಳೂರು: ಉತ್ತಮ ಪ್ರಯಾಣದ ಅವಕಾಶವನ್ನೇನೋ ಕಲ್ಪಿಸುತ್ತಿರುವ ಬಿಎಂಆರ್ ಸಿಎಲ್ ಬದುಕಿನಲ್ಲಿ ಜಿಗುಪ್ಸೆಗೊಂಡವರ ಸೂಸೈಡಲ್ ಸ್ಪಾಟ್ ಆಗ್ತಿದೆಯಾ ಎನ್ನುವ ಅನುಮಾನ ಪುಷ್ಟಿಕರಿಸುವಂತೆ ಅನೇಕ ಜೀವಹಾನಿಗೆ ವೇದಿಕೆ ಕಲ್ಪಿಸಿಕೊಡ್ತಿದೆ. ಏನೆಲ್ಲಾ ವ್ಯವಸ್ಥೆ ಮಾಡುವ ಬಿಎಂಆರ್ ಸಿಎಲ್ ಆತ್ಮಹತ್ಯೆ ಮಾಡಿಕೊಳ್ಳುವವರ,ಅದಕ್ಕೆ ಯತ್ನಿಸುವವರಿಗೆ ಅಂಥದ್ದೊಂದು ಅವಕಾಶವೇ ಆಗದಂಥ ವ್ಯವಸ್ಥೆ ಕಲ್ಪಿಸೊಕ್ಕೆ ಸಾಧ್ಯವೇ ಆಗದಿರುವುದು ದುರಂತದ ವಿಚಾರ.ಇದಕ್ಕೆ ಇಂದು ನಡೆದಿರುವ ಆತ್ಮಹತ್ಯೆಯೇ ಸಾಕ್ಷಿ.
ಸುಮಾರು 35 ವರ್ಷದ ಯುವತಿಯೊಬ್ಬಳು ಸಂಜೆ 5:41 ಕ್ಕೆ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ಮೆಟ್ರೋ ಸ್ಟೇಷನ್ ನಲ್ಲಿ ಟ್ರ್ಯಾಕ್ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ.ಆತ್ಮಹತ್ಯೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ.ಆದ್ರೆ ಮೆಟ್ರೋ ರೈಲು ಟ್ರ್ಯಾಕ್ ಗೆ ಬರುತ್ತಿದ್ದಂಗೆ ಟ್ಯಾಕ್ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಗಸಂದ್ರ ಟೂ ಸಿಲ್ಕ್ ಇನ್ಸ್ಟಿಟ್ಯೂಟ್ ಮಾರ್ಗ ದಲ್ಲಿ ಬರುವ ದೊಡ್ಡಕಲ್ಲಸಂದ್ರ ಸ್ಟೇಷನ್ ( ಹಸಿರು ಮಾರ್ಗ )ದಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದ್ದು ಘಟನೆ ಹಿನ್ನಲೆಯಲ್ಲಿ ಯಲಚೇನಹಳ್ಳಿ ಟೂ ನಾಗಸಂದ್ರ ಮಾತ್ರ ಮೆಟ್ರೋ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.
ಕಳೆದ 8 ತಿಂಗಳಲ್ಲಿ ಮೆಟ್ರೋ ಟ್ರ್ಯಾಕ್ ನಲ್ಲಿ ಸಾಲು ಸಾಲು ಅವಘಡಗಳು ಸಂಭವಿಸಿವೆ ಎನ್ನುವುದಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಿ ದಾಖಲೆಗಳಿವೆ.ಮೆಟ್ರೊ ಸಿಬ್ಬಂದಿನೇ ನೀಡಿರುವ ಮಾಹಿತಿ ಪ್ರಕಾರದಂತೆ ಕೆಳಕಂಡ ದಿನಾಂಕಗಳಲ್ಲಿ ದುರಂತ ಸಂಭವಿಸಿದೆ.
ಜನವರಿ,1- 2024 :ಸ್ಥಳ: ಇಂದಿರಾ ನಗರ ಮೆಟ್ರೋ ನಿಲ್ದಾಣ: ಮೊಬೈಲ್ ತೆಗೆಯಲು ಟ್ರ್ಯಾಕ್ ಗೆ ಇಳಿದ ಮಹಿಳೆ..ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಉಳಿದ ಜೀವ.
ಜನವರಿ,5- 2024:ಸ್ಥಳ: ಜಾಲಹಳ್ಳಿ ಮೆಟ್ರೋ ನಿಲ್ದಾಣ: ಮೆಟ್ರೋ ಹಳಿಗೆ ಹಾರಿ ಯುವಕನಿಂದ ಆತ್ಮಹತ್ಯೆಗೆ ಯತ್ನ..ಐಸಿಯುನಲ್ಲಿ ಚಿಕಿತ್ಸೆ.
ಜನವರಿ,6-2024: ಸ್ಥಳ: ಜೆ.ಪಿ.ನಗರ ಮೆಟ್ರೋ ನಿಲ್ದಾಣ-ಮೆಟ್ರೋ ಟ್ರ್ಯಾಕ್ ಮೇಲೆ ಬೆಕ್ಕು ಪ್ರತ್ಯಕ್ಷ..ಆತಂಕಗೊಂಡ ಪ್ರಯಾಣಿಕರು.
ಮಾರ್ಚ್- 12,2024-ಸ್ಥಳ :- ಜ್ಞಾನ ಭಾರತಿ ಮೆಟ್ರೋ ನಿಲ್ದಾಣ- ಜ್ಞಾನಭಾರತಿ ಮೆಟ್ರೋ ಸ್ಟೇಷನ್ ನಿಂದ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ನಡುವಿನವಯಾಡಕ್ಟ್ ನಲ್ಲಿ ಕಾಣಿಸಿಕೊಂಡಿದ್ದ ಅಪರಿಚಿತ ವ್ಯಕ್ತಿ.
ಮಾರ್ಚ್-21/03/2024 ಸ್ಥಳ :- ಅತ್ತಿಗುಪ್ಪೆ-ಸಮಯ :- 2.10pm ,ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಯುವಕ -ಧ್ರುವ್ ಎನ್ನುವ 19/20 ವರ್ಷದ ಯುವಕ-ಟ್ರೈನ್ ಬರ್ತಾ ಇದೆ ಅಂತ ಗೊತ್ತಾಗಿ ಟ್ರ್ಯಾಕಿಗೆ ಹಾರಿದ ಯುವಕ- -ನ್ಯಾಷನಲ್ ಲಾ ಕಾಲೇಜಿನಲ್ಲಿ ಮೊದಲನೇ ವರ್ಷ ವ್ಯಾಸಂಗ ಮಾಡ್ತಿದ್ದ ಯುವಕ.
ದಿನಾಂಕ:- 10/06/2024 ಸ್ಥಳ:- ಹೊಸಕರೆ ಹಳ್ಳಿ,ಸಮಯ :- 8.46ಪಿಎಂ -ಹೊಸಕರೆ ಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಯುವಕನೋರ್ವ ಟ್ರ್ಯಾಕ್ ಗೆ ಹಾರ್ತಾನೆ -ಟ್ರೈನ್ ಬರುವ ಸಂದರ್ಭದಲ್ಲಿ ಜಂಪ್ ಮಾಡ್ತಾರೆ -ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಯುವಕ ಬಚಾವ್ ಆಗ್ತಾನೆ.-ಯುವಕನ್ನನ್ನ ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. -ಚಲಿಸುತ್ತಿದ್ದ ಮೆಟ್ರೋ ದಿಢೀರ್ ಸ್ಟಾಪ್ ಆಗಿ ಜನರೆಲ್ಲಾ ಪ್ಯಾನಿಕ್ ಆದ ಪ್ರಸಂಗವೂ ನಡೆಯಿತು.
ದಿನಾಂಕ 01-08-2024 ,ಬೈಯ್ಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ನಲ್ಲಿ ತಪ್ಪಿದ ಭಾರೀ ದುರಂತ. ನಿನ್ನೆ ರಾತ್ರಿ 9 ರ ಸುಮಾರಿಗೆ ತಪ್ಪಿದ ದುರ್ಘಟನೆ. -ಆಂದ್ರಮೂಲದ ಪೋಷಕರ ಮಗು.-ಕೆಳಗೆ ಆಟವಾಡಲು ಬಿಟ್ಟು ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದ ಪೋಷಕರು.-ಆಟವಾಡುತ್ತಾ ಟ್ರ್ಯಾಕ್ ಗೆ ಬಿದ್ದ ಮಗು.-ತಕ್ಷಣಕ್ಕೆ ಕಾರ್ಯಪ್ರವೃತ್ತವಾದ ಸಿಬ್ಬಂದಿ.-ಇಟಿಎಸ್..(ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್)ಆಫ್ ಮಾಡಿದ ಸಿಬ್ಬಂದಿ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.ಆತ್ಮಹತ್ಯೆ ಮಾಡಿಕೊಂಡ ಯುವತಿಯ ಪೂರ್ವಾಪರ ತಿಳಿದಿಲ್ಲ.ದುರಂತ ಸಂಭವಿಸುವ ವೇಳೆ ಅಲ್ಲಿ ಭದ್ರತಾ ಸಿಬ್ಬಂದಿ ಇದ್ದಾಗ್ಯೂ ಅವರ ಕಣ್ ತಪ್ಪಿಸಿ ಹೇಗೆ ಆ ಯುವತಿ ಟ್ರ್ಯಾಕ್ ಮೇಲೆ ಹಾರಿದ್ಲು ಎನ್ನುವುದು ಅಚ್ಚರಿ ಹಾಗು ಅನುಮಾನ ಮೂಡಿಸಿದೆ.
ಸುಗಮ ಹಾಗೂ ಕ್ಷಿಪ್ರ ಸಂಚಾರಕ್ಕೆ ಏನೆಲ್ಲಾ ವ್ಯವಸ್ಥೆ ಮಾಡುವ,ಅದಕ್ಕಾಗಿ ಎಷ್ಟೆಲ್ಲಾ ಖರ್ಚು ಮಾಡುವ ಮೆಟ್ರೋ ಆಡಳಿತ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಏನೂ ಮಾಡಲಿಕ್ಕೆ ಸಾಧ್ಯವಾಗದ ಅಸಹಾಯಕ ಸ್ತಿತಿಯಲ್ಲಿರುವುದು ನಿಜಕ್ಕೂ ದುರಂತ.ಮೆಟ್ರೋ ರೈಲು ಬರುವ ಸಂದರ್ಭದಲ್ಲಿ ಟ್ರ್ಯಾಕ್ ಹತ್ತಿರ ಪ್ರಯಾಣಿಕರು ಸುಳಿಯದಂತೆ ಮಾಡಲು ಏನಾದರೊಂದು ವ್ಯವಸ್ಥೆ ಮಾಡಬೇಕೆನ್ನುವ ಕೂಗು ಅನೇಕ ದಿನಗಳಿಂದಲು ಕೇಳಿಬರುತ್ತಿದೆ.ಆದ್ರೆ ಇದು ಹತ್ತಾರು ಕೋಟಿಯಷ್ಟು ಹಣ ನುಂಗುವಂಥ ಸ್ಕೀಂ ಎನ್ನುವ ಕಾರಣಕ್ಕೆ ಇದನ್ನು ಪೆಂಡಿಂಗ್ ಇಟ್ಟು ಕಾಲಹರಣ ಮಾಡುತ್ತಿದೆ ಎನ್ನುವ ಆರೋಪ ಪ್ರಯಾಣಿಕರದ್ದು.ಪ್ರಯಾಣಿಕ ಸ್ನೇಹಿ ಮೆಟ್ರೋ ಆಗಬೇಕಾದ್ರೆ ಒಂದಷ್ಟು ಕೋಟಿ ಖರ್ಚಾದ್ರು ಪರ್ವಾಗಿಲ್ಲ,ಮೊದಲು ಮೆಟ್ರೋ ನಿಲ್ದಾಣಗಳನ್ನು ಅಪಾಯಿದಿಂದ ಮುಕ್ತಗೊಳಿಸಬೇಕಾದ ಅಗತ್ಯವಿದೆ ಎನ್ನುವುದು ಸಾರಿಗೆ ತಜ್ನ ಶ್ರೀ ಹರಿ ಅವರ ಮಾತು.
ಇದು ಒಂದ್ರೀತಿ ಸಮಸ್ಯೆಯಾದ್ರೆ ರಾತ್ರಿ 9ರ ನಂತರ ಸ್ಟೇಷನ್ ನ ಉಸ್ತುವಾರಿ ನೋಡಿಕೊಳ್ಳಲು ಯಾವುದೇ ಅಧಿಕಾರಿ ಸಿಬ್ಬಂದಿ ಸ್ಟೇಷನ್ ನಲ್ಲಿರುವುದಿಲ್ಲ ಎನ್ನುವ ಮಾತಿದೆ.ಇದು ಸಾರ್ವಜನಿಕವಾಗಿ ಏನಾದ್ರೂ ಪ್ರಚಾರವಾದ್ರೆ ರಾತ್ರಿ ವೇಳೆ ಸ್ಟೇಷನ್ ಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುವ ಆತಂಕವಿದೆ.ಅದಾಗಬಾರದು ಎಂದ್ರೆ ಮೆಟ್ರೋ ಆಡಳಿತ ಎಚ್ಚೆತ್ತುಕೊಂಡು ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕಿದೆ.ಇಲ್ಲವಾದಲ್ಲಿ ಸಾರ್ವಜನಿಕರು ಬಂಡಾಯ ಏಳುವಂಥ ಸಾಧ್ಯತೆ ದಟ್ಟವಾಗಿದೆ.