ಬೆಂಗಳೂರು: ಲೋಕಾಯುಕ್ತ ದಾಳಿ ಇಂದು (11-07-2024) ಹೆಚ್ಚು ಚರ್ಚೆ ಸೃಷ್ಟಿಸಿ್ದ್ದು ಹಾಗೂ ಗಮನಸೆಳೆದಿದ್ದು ಆ ಒಂದೇ ಒಂದು ಕಾರಣಕ್ಕೆ ಎನ್ನಿಸುತ್ತದೆ.ಆ ಕಾರಣವೇ ಬಸವರಾಜ ಮಗಿ ಎನ್ನುವ ಶೋಕಿಲಾಲ. ಬಹುಷಃ ಇತರೆ ಅಧಿಕಾರಿಗಳಂತೆ ಕೆಲಸ ಮಾಡಿಕೊಂಡಿದಿದ್ದರೆ ಮಗಿ ಹತ್ತರಲ್ಲಿ ಹನ್ನೊಂದಾಗಿ ಉಳಿದುಬಿಡುತ್ತಿದ್ದರೇನೊ..? ಆದರೆ ಶಾರ್ಟ್ ಟೈಮ್ ನಲ್ಲಿ ಹಣ ಮಾಡಬೇಕೆನ್ನುವ ದುರಾಸೆಗೆ ಬಿದ್ದು ಮಾಡಬಾರದ ಕೆಲಸಗಳನ್ನೆಲ್ಲಾ ಮಾಡಿ ಇವತ್ತು ಲೋಕಾಯುಕ್ತ ದಾಳಿಗೆ ಒಳಗಾಗುವಂಥ ಸ್ತಿತಿ ತಂದುಕೊಂಡಿದ್ದಾರೆ.
ಬಸವರಾಜ ಮಗಿ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿದೆ ಎನ್ನುವ ಸುದ್ದಿ ಬಿಬಿಎಂಪಿಯಲ್ಲಿ ಪಸರ್ ಆಗ್ತಿದ್ದಂತೆ ಹಾಲು ಕುಡಿದವರೇ ಹೆಚ್ಚು.ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಇದರ ಮರ್ಮ ಪರೀಕ್ಷಿಸಿದಾಗ ಈ ಮಹಾನುಭಾವ ತನ್ನ ಸಮಾನವಾದ ಹಾಗು ಕೆಳಹಂತದ ಸಿಬ್ಬಂದಿಯನ್ನು ಹೇಗೆ ನಡೆಸಿಕೊಂಡಿರಬಹುದೆನ್ನುವ ಅಂದಾಜು ಸಿಗ್ತು.ಕೆಲಸ ಮಾಡಲಾರಂಭಿಸಿ 30-40 ವರ್ಷಗಳಾದ್ರೂ ವಾಸ ಮಾಡಲಿಕ್ಕೊಂದು ಮನೆ ಮಾಡಿಕೊಳ್ಳಲಿಕ್ಕಾಗದ ಸ್ತಿತಿಯಲ್ಲಿ ಬಿಬಿಎಂಪಿಯ ಸಾವಿರಾರು ನೌಕರರಿದ್ದಾರೆ.
ಅವರಿಗೆ ಬರುವ ಸಂಬಳದಲ್ಲಿ ಜೀವನ-ಕುಟುಂಬ-ಹೊರೆ ಸಂಭಾಳಿಸಿದ್ರೆ ಸಾಕೆನ್ನುವ ಸ್ಥಿತಿಯಲ್ಲಿರುವ ನೌಕರರು ಒಂದೆಡೆಯಾದರೆ ಕೆಲಸಕ್ಕೆ ಸೇರಿದ 20 ವರ್ಷಗಳಲ್ಲೇ ಕೋಟಿ ಕುಳವಾಗಿ ಬೆಳೆದ ಬಸವರಾಜ ಮಗಿ ಎನ್ನುವ ಭ್ರಷ್ಟ ಅಧಿಕಾರಿ ಕಥೆ ಇನ್ನೊಂದೆಡೆ.ನೀಯತ್ತಾಗಿ ದುಡಿದಿದ್ದರೆ ಬಸವರಾಜ ಮಗಿ ಎನ್ನುವ ಶೋಕಿಲಾಲ ಕುಮಾರಪಾರ್ಕ್ ನಂಥ ಬೆಂಗಳೂರಿನ ಅತ್ಯಂತ ದುಬಾರಿ ಪ್ರದೇಶದಲ್ಲಿ ಕೋಟಿ ಮೌಲ್ಯದ ಫ್ಲಾಟ್ ನಲ್ಲಿ ವಾಸ ಮಾಡ್ಲಿಕ್ಕಾಗುತ್ತಿತ್ತಾ..? ದಿನಕ್ಕೆ ಒಂದು ಲಕ್ಷದಷ್ಟು ಹಣವನ್ನು ಖರ್ಚು ಮಾಡುವ ವಿಲಾಸಿ ಜೀವನದ ದಾಸನಾಗಲಿಕ್ಕಾಗುತ್ತಿತ್ತಾ..ನೋ ಚಾನ್ಸ್.
ಬಸವರಾಜ ಮಗಿ ಎಂದ್ರೆ ಶೋಕಿ, ಬಸವರಾಜ ಮಗಿ ಎಂದ್ರೆ ನೈಟ್ ಲೈಫ್..ಬಸವರಾಜ ಮಗಿ ಎಂದ್ರೆ ವಿಲಾಸಿ ಜೀವನ, ಬಸವರಾಜ ಮಗಿ ಎಂದ್ರೆ ಗೋವಾ-ನೈಟ್ ಕ್ಲಬ್-ಜೂಜಿನ ಅಡ್ಡೆ-ಹೆಣ್ಣು..ಎನ್ನುವಂಥ ಅನೇಕ ಸಂಗತಿಗಳು ದಾಳಿ ವೇಳೆ ಬಯಲಾಗಿದೆ. ದಾಳಿ ವೇಳೆ ಸಿಕ್ಕ ಕ್ಯಾಸಿನ್ ಕಾಯಿನ್ ಗಳು ಆತನ ನೈಟ್ ಲೈಫ್ ನ ವಿಲಾಸಿ ಜೀವನ ಬಿಂಬಿಸುತ್ತಿದೆ.ಮನೆಯಲ್ಲಿ ದೊರೆತ ಆಂಟಿಕ್ ವಸ್ತುಗಳು ಆತನ ಶೋಕಿತನದ ದ್ಯೋತಕದಂತಿದೆ.ಇನ್ನು ಕಲಬುರ್ಗಿ ಹಾಗೂ ಬೆಂಗಳೂರಿನ ಮನೆಗಳಲ್ಲಿ ದೊರೆತಿದೆ ಎನ್ನಲಾದ ಅನೇಕ ದಾಖಲೆಗಳು ಆತನ ಬೇನಾಮಿ ದುಡಿಮೆಗೆ ಸಾಕ್ಷಿಯಂತಿದೆ.
ಮಗಿ ಕೇವಲ ಇಷ್ಟಕ್ಕೆ ಸೀಮಿತವಾಗಿರಲಿಲ್ಲ.ತನಗೆ ದೊರೆತ ಅಧಿಕಾರವನ್ನು ಅಕ್ರಮ ಹಣ ಸಂಪಾದನೆಗೆ ಮೀಸಲಿಟ್ಟನೆನ್ನುವ ಮಾತುಗಳಿವೆ. 1998 ರಲ್ಲಿ ಬಿಬಿಎಂಪಿಯಲ್ಲಿ ಸಹಾಯಕನ ಹುದ್ದೆಯಲ್ಲಿ ನೇಮಕಗೊಂಡ ಈತನಿಗೆ ವಿಧಾನಸೌಧದ ಸಂಪರ್ಕ ಹೇಗೆ ಸಿಗ್ತೋ ಗೊತ್ತಿಲ್ಲ,ಬಾಬುರಾವ್ ಚಿಂಚನಸೂರ್ ಮಿನಿಸ್ಟರ್ ಆಗಿದ್ದಾಗ ಅವರಿವರ ಕಾಲಿಡಿದು ಅವರ ಆಪ್ತನಾಗಿ ಓಓಡಿ ಮೇಲೆ ನಿಯೋಜನೆಗೊಂಡ.ಕೈಯಲ್ಲಿ ಒಂದಷ್ಟು ಹಣ ಓಡಾಡ್ಲಿಕ್ಕೆ ಶುರುವಾಗ್ತಿದ್ದಂಗೆ ಸಚಿವರ ಹೆಸರನ್ನು ದುರ್ಬಳಕೆ ಮಾಡ್ಕೊಂಡು ಹಣ ಲೂಟಿಗೆ ಶುರುವಿಟ್ಟುಕೊಂಡ.ಅ
ದೇ ಅವಧಿಯಲ್ಲಿ ಚಿಂಚನಸೂರ್ ಸೆಕ್ಸ್ ಸ್ಕ್ಯಾಂಡಲ್ ನಿಂದಾಗಿ ಸುದ್ದಿಯಾದ್ರು.ಕೆಲವು ಮೂಲಗಳು ಹೇಳುವಂತೆ ಅವತ್ತು ಆ ಸೆಕ್ಸ್ ಸ್ಕ್ಯಾಂಡಲ್ ನ ಸೃಷ್ಟಿಕರ್ತನೇ ಈತನಾಗಿದ್ದನಂತೆ.ಸಚಿವರನ್ನು ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿಸಿ ಅವರಿಂದಲೇ ಹಣ ಪೀಕುವ ಐಡ್ಯಾ ಮಾಡಿದ್ದನಂತೆ,ಆದರೆ ಅದು ಸಚಿವರಿಗೆ ತಿಳಿದ ಮೇಲೆ ಆತನನ್ನು ಹೊರಹಾಕಿದ್ರೆನ್ನುವ ಮಾತುಗಳಿವೆ.ಆದರೆ ಇನ್ನೊಂದು ಮೂಲದ ಪ್ರಕಾರ ಕ್ಯಾಬಿನೆಟ್ ಗೆ ಸಂಬಂಧಿಸಿದ ಗೌಪ್ಯ ವಿಚಾರವನ್ನು ಲೀಕ್ ಮಾಡಿದ ಕಾರಣಕ್ಕೆ ಆತನನ್ನು ಅಲ್ಲಿ ಸಸ್ಪೆಂಡ್ ಮಾಡಲಾ ಗಿತ್ತಂತೆ.
ಅಮಾನತ್ತು ಆದೇಶ ರದ್ದು ಮಾಡಿಸಿಕೊಂಡು ಬಿಬಿಎಂಪಿಗೆ ಬಂದವನೇ,ಚೆನ್ನಾಗಿ ಮೇಯೊಕ್ಕೆ ಪಾಲಿಕೆಯನ್ನೇ ಪಂಪಾಸ್ ಹುಲ್ಲುಗಾವಲು ಮಾಡಿಕೊಂಡನಂತೆ.ದೊಮ್ಮಲೂರು ವಾರ್ಡ್ ನಲ್ಲಿ ಎಆರ್ ಓ ಆಗಿದ್ದಾಗ ಆಸ್ತಿ ತೆರಿಗೆ ನಿಗಧಿ ವಿಚಾರದಲ್ಲಿ ಮಾಡಿದ ಗೋಲ್ಮಾಲ್ ಒಂದಾ ಎರಡಾ..ಈತನ ವಿರುದ್ಧ ಪಾಲಿಕೆ ಸದಸ್ಯರೇ ಬಂಡಾಯ ಎದ್ದು ಆತನನ್ನು ಒದ್ದೋಡಿಸುವಂತೆ ದೊಡ್ಡ ಧರಣಿಯನ್ನೇ ಮಾಡಿದ್ರು.
ಅಲ್ಲಿದ್ದಾಗ ಈತ ಮಾಡಿದ ಅಕ್ರಮಗಳಿಂದ ಕೋಟ್ಯಾಂತರ ಸಂಪಾದಿಸಿದ ಎನ್ನುವ ಮಾತುಗಳಿವೆ.ಅಲ್ಲಿಂದ ಕೊಡಿಗೆಹಳ್ಳಿಗೆ ತೆರಳಿ ಅಲ್ಲಿಯೂ ಅಕ್ರಮಕ್ಕೆ ಕೈ ಹಾಕಿದ. ಬಿ ಖಾತಾಗಳಿಗೆ ಎ ಖಾತಾ ಕೊಡೋದು, ಹೈ ರೈಸ್ ಬಿಲ್ಡಿಂಗ್ ಗಳಿಗೆ ಓಸಿ-ಸಿಸಿ ನೀಡುವುದು, ಖಾತಾ ಅಕ್ರಮ..ಹೀಗೆ ಅಲ್ಲಿಯೂ ಕೋಟಿ ಕೋಟಿ ಲೂಟಿ ಮಾಡಿದ.ಅಲ್ಲಿಯೇ ಕೆಲಸ ಮಾಡುವಾಗ ಸುನೀತಾ.ಬಿ ಎನ್ನುವವರ ಸ್ವತ್ತಿಗೆ ಸಂಬಂಧಿಸಿದಂತೆ ಮೆಟ್ರೋ ಯೋಜನೆಗೆ ಭೂಮಿ ನೀಡುವ ವಿಷಯದಲ್ಲಿ ಕೋಟ್ಯಾಂತರ ಹಣವನ್ನು ಮಿಸ್ಯೂಸ್ ಮಾಡಿದ ಆಪಾದನೆಯೂ ಈತನ ಮೇಲಿದೆ.ಶಾಸಕ ಕೃಷ್ಣ ಭೈರೇಗೌಡರ ಕೆಂಗಣ್ನಿಗೆ ಗುರಿಯಾಗ್ತಿದ್ದಂಗೆ ದೊಡ್ಡವರ ಕಾಲಿಡಿದು ವಕ್ಕರಿಸಿದ್ದೇ ಕೆಂಗೇರಿಗೆ.
ಎಫ್ ಡಿಎ ಆಗಿದ್ದಾತ, ಅಸೆಸರ್.ಮ್ಯಾನೇಜರ್ ಆಗಿ ನಂತರ ಎಆರ್ ಓ ಹುದ್ದೆ ಪಡೆದಿದ್ದೇ ಅಕ್ರಮ ಮಾರ್ಗಗಳಿಂದ ಎನ್ನುವ ಮಾತಿದೆ.ಆದ್ರೆ ಯಾರನ್ನೂ ಇದರ ಬಗ್ಗೆ ಪ್ರಶ್ನಿಸದಂತೆ ಮ್ಯಾನೇಜ್ ಮಾಡಿಕೊಂಡಿದ್ದ. ಕೆಂಗೇರಿಗೆ ಬಂದ ಮೇಲೆ 300 ಬಿ ಖಾತಾಗಳನ್ನು ಎ ಖಾತಾಗಳನ್ನಾಗಿ ಪರಿವರ್ತಿಸಿ ಅಕ್ರಮ ಎಸಗಿದ ಆಪಾದನೆ ಹಿನ್ನಲೆಯಲ್ಲಿ ಕೆಂಗೇರಿ ವ್ಯಾಪ್ತಿಯಲ್ಲಿ ದೂರು ದಾಖಲಾಗಿ ಅರೆಸ್ಟ್ ಕೂಡ ಆಗಿದ್ದ.ಆ ಹಿನ್ನಲೆಯಲ್ಲಿ ಸಸ್ಪೆಂಡ್ ಕೂಡ ಆಗಿ ಕೆಲವೇ ದಿನಗಳಲ್ಲಿ ಮತ್ತೆ ಮರುನಿಯೋಜನೆಗೊಂಡಿದ್ದು ಕೂಡ ಜಗತ್ತಿನ ಅದ್ಭುತಗಳಲ್ಲೊಂದು ಎನ್ನಲಾಗ್ತಿದೆ.
ಬಸವರಾಜ ಮಗಿ ಬಗ್ಗೆ ಹೇಳ್ತಾ ಹೋದ್ರೆ ಆತನ ರಂಪಾಟ-ರಾದ್ದಾಂತ-ತೆವಲು-ತೀಟೆ-ಶೋಕಿಗಳದ್ದು ಒಂದೊಂದು ಸಿನೆಮಾ ಮಾಡಬಹುದು.ಕೆಂಗೇರಿಗೆ ಹೋದ ಮೇಲೆ ರಿಯಲ್ ಎಸ್ಟೇಟ್ ದಂಧೆ ಶುರುವಿಟ್ಟು ಕೊಂಡಿದ್ದನಂತೆ ಮಗಿ. ಅವರಿವರನ್ನು ಬೆದರಿಸಲು ಪೊಲೀಸ್ ಇನ್ಸ್ ಪೆಕ್ಟರ್ ಆಗಿರುವ ಸಹೋದರನನ್ನೇ ರಕ್ಷಾಕವಚನ್ನಾಗಿ ಬಳಸಿಕೊಳ್ಳುತ್ತಿದ್ದನೆನ್ನುವ ಮಾತಿದೆ.ಅವರ ಸಹೋದರ ಕೂಡ ತನ್ನ ಕರ್ತವ್ಯ ಮರೆತು ಅಣ್ಣನ ಅಕ್ರಮಕ್ಕೆ ಸಾಥ್ ಕೊಡುತ್ತಿದ್ದನೆನ್ನುವ ಆಪಾದನೆಯಿದೆ.ಅವರ ವಿರುದ್ದ ಸಾಮಾಜಿಕ ಕಾರ್ಯಕರ್ತರ ಪಡೆ ಶೀಘ್ರದಲ್ಲೇ ಪೊಲೀಸ್ ಇಲಾಖೆಗೆ ದೂರು ಕೊಡಲು ಸಿದ್ದತೆ ಕೂಡ ಮಾಡಿಕೊಂಡಿದೆ.
ವೃತ್ತಿ ಜೀವನದುದ್ದಕ್ಕೂ ಬೇನಾಮಿ ಸಂಪಾದನೆಯಲ್ಲೇ ಕಳೆದು ಹೋಗಿರುವ ಬಸವರಾಜ ಮಗಿ ಅವರನ್ನು ಇಷ್ಟೆಲ್ಲಾ ಆವಾಂತರಗಳ ಹೊರತಾಗ್ಯೂ ಏಕೆ ಬಿಬಿಎಂಪಿಯಲ್ಲಿ ಉಳಿಸಿಕೊಳ್ಳಲಾಗಿದೆಯೋ ಗೊತ್ತಾಗ್ತಿಲ್ಲ.ಯಾರೇ ಸಿಡಿದೆದ್ದರೂ ಅವರನ್ನು ತನ್ನ ಸಂಪನ್ಮೂಲಗಳಿಂದ ಮ್ಯಾನೇಜ್ ಮಾಡಿ ಅವರ ಬಾಯಿ ಮುಚ್ಚಿಸುವ ಛಾತಿತನ ಹೊಂದಿರುವ ಮಗಿಗೆ ಲೋಕಾಯುಕ್ತ ಸರಿಯಾಗೇ ಬಿಸಿ ಮುಟ್ಟಿಸಿದೆ.ಆದರೆ ಬಹುತೇಕರು ಹೇಳುವ ಪ್ರಕಾರ ಲೋಕಾಯುಕ್ತ ದಾಳಿ ಆತನ ಎಮ್ಮೆ ಚರ್ಮದ ಮನಸ್ತಿತಿಯನ್ನು ಬದಲಿಸೊಲ್ಲ.ಆ ನಟೋರಿಟಿಯನ್ನೇ ತನ್ನ ಅಕ್ರಮಕ್ಕ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುವಷ್ಟು ಖತರ್ನಾಕ್ ಆತ.ಆತನ ಹೆಡೆಮುರಿ ಕಟ್ಟುವ ಕೆಲಸ ಪರಿಣಾಮಕರಿಯಾಗಿ ನಡೆದರೇನೆ ಆತನ ಅಹಂ ಅಡಗುವುದು ಎನ್ನೋದು ಆತನಿಂದ ನೊಂದವರ,ಆತನ ಆಟಾಟೋಪ ಸಹಿಸಿಕೊಂಡವರ ಶಾಪ.