- ಹಾಸನ ರಾಜಕಾರಣ ಪ್ರಜ್ವಲ್ ಗೆ ಬಹುತೇಕ ಕನಸು
- ಇಷ್ಟೆಲ್ಲಾ ಆರೋಪಗಳನ್ನು ಮೆಟ್ಟಿನಿಂತು ಬೆಳೆಯೋದು ಕಷ್ಟ
- ಪಕ್ಷಕ್ಕೆ ಮುಜುಗರ ತಡೆಯಲು ಪಕ್ಷದಿಂದ ದೂರ ಉಳಿಯುವಂತೆ ಕಟ್ಟಪ್ಪಣೆ ಸಾಧ್ಯತೆ
- ಗೆದ್ದರೂ ಸಾರ್ವಜನಿಕವಾಗಿ ಮುಖ ತೋರಿಸಷ್ಟು ಅವಮಾನ
- ಪಾರ್ಲಿಮೆಂಟ್ ನಲ್ಲಿ ಮುಜುಗರ ಎದುರಿಸುವುದು ಕಷ್ಟ..ಕಷ್ಟ
- ಗೆದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಸಾಧ್ಯತೆ
- ಕಳಂಕಮುಕ್ತನಾದ್ಮೇಲೆ ಪಕ್ಷಕ್ಕೆ ವಾಪಸ್ಸಾಗುವಂತೆ ವರಿಷ್ಟರ ಸಲಹೆ
- ಮಿತ್ರ ಪಕ್ಷವಾಗಿ ಬಿಜೆಪಿ ಕೂಡ ಪ್ರಜ್ವಲ್ ಕೃತ್ಯ ಸಮರ್ಥಿಸಿಕೊಳ್ಳೋದು ಡೌಟ್
- ಪಕ್ಷಕ್ಕೆ ಮುಜುಗರ ಉಂಟಾಗುವ ಹಿನ್ನಲೆಯಲ್ಲಿ ಜೆಡಿಎಸ್ ನಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆ
- ವಿದೇಶಕ್ಕೆ ಹಾರಿರುವ ಪ್ರಜ್ವಲ್ ಭಾರತಕ್ಕೆ ವಾಪಸ್ಸಾಗುವುದು ಡೌಟ್
- ಪ್ರಕರಣ ತಣ್ಣಗಾಗುವವರೆಗೂ ಅಲ್ಲಿಯೇ ವಾಸ್ತವ್ಯ ಹೂಡುವ ಸಾಧ್ಯತೆ
- ಭಾರತಕ್ಕೆ ಬಂದರೆ ಬಂಧನ ಸಾಧ್ಯತೆ.ಕೇಸ್ ಗಳ ಮೇಲೆ ಕೇಸ್ ಸಾಧ್ಯತೆ
- ಬಹುಪಾಲು ಅವಧಿಯನ್ನು ಜೈಲ್ –ಕೋರ್ಟ್ ಗಳಲ್ಲಿಯೇ ಕಳೆಯುವ ಸಾಧ್ಯತೆ
- ವಿದೇಶಕ್ಕೆ ತೆರಳಿ ಬಂಧಿಸುವ ಆಲೋಚನೆಯಲ್ಲಿ ಎಸ್ ಐಟಿ
- ತಮ್ಮ ರಾಜಕೀಯ ಬಳಸಿ ಒತ್ತಡ ತರಲು ದೊಡ್ಡಗೌಡ್ರ ಕುಟುಂಬದ ಯತ್ನ
- ಮೊಮ್ಮಗನ ಕೃತ್ಯ ಸಮರ್ಥಿಸಿಕೊಳ್ಳಲಿಕ್ಕಾಗದಷ್ಟು ಸಂದಿಗ್ಧತೆಗೆ ಸಿಲುಕಿರುವ ದಳಪತಿಗಳು
ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲ ಮೂಡಿಸಿರುವ ಪೆನ್ ಡ್ರೈವ್ ಸೆಕ್ಸ್ ಹಗರಣ ಹಾಸನ ಸಂಸದ ಪ್ರಜ್ವಲ್ ರೇವಣ್ಣವರ ರಾಜಕೀಯ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗಿದೆ. ರಾಜಕಾರಣ ದಲ್ಲಿದ್ದ ಉಜ್ವಲ ಭವಿಷ್ಯಕ್ಕೆ ಅವರೇ ಚಪ್ಪಡಿ ಎಳೆದುಕೊಂಡಂತಾಗಿದೆ.ಹಾಸಕ್ಕಷ್ಟೇ ಅಲ್ಲ ಕರ್ನಾಟಕ,ಭಾರತಕ್ಕೆ ಅವರು ಮತ್ತೆ ವಾಪಸ್ಸಾಗುವುದೇ ಡೌಟ್ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.ಗೆಲ್ಲೊದಕ್ಕಿಂತ ಸೋಲೋದೇ ಉತ್ತಮ ಎಂಬ ಟಾಕ್ಸ್ ಎಲ್ಲೆಡೆ ಕಡೆ ಜೋರಾಗಿ ಕೇಳಬರುತ್ತಿದೆ.
ಪ್ರಜ್ವಲ್ ರೇವಣ್ಣ ಕಾಮಕಾಂಡದ ಕಾವು ದಿನೇ ದಿನೇ ಹೆಚ್ಚುವ ಜತೆಗೆ ಅವರ ರಾಜಕೀಯ ಜೀವನ-ಭವಿಷ್ಯವನ್ನೇ ಸಂಪೂರ್ಣ ಭಸ್ಮ ಮಾಡುವಂತೆ ಕಾಣ್ತಿದೆ.ಯಾವ ಹಾಸನದಂಥ ಹಾಸವನ್ನು ತಮ್ಮ ಜಹಗೀದಾರ್ ಅಂತೆ ನಿರ್ಮಿಸಿ ಸಾಯೋತಳಕ ಸರ್ವಾಧಿಕಾರಿಯಾಗಿ ಆಳುವ ಕನಸು ಕಂಡಿದ್ದ ಪ್ರಜ್ವಲ್ ರೇವಣ್ಣನ ಯೋಗ್ಯತೆ-ಹಣೇಬರಹ-ನೀಯತ್ತು ಏನನ್ನುವುದು ಜಗಜ್ಜಾಹೀರಾಗಿದೆ.ಪೆನ್ ಡ್ರೈವ್ ನಲ್ಲಿರೋ ಪರಮಪೋಲಿ-ಅಸಹ್ಯಕರ ದೃಶ್ಯಗಳು ಪ್ರಜ್ವಲ್ ರನ್ನು ಹಾಸನದ ಜನತೆ ಛೀ..ಥೂ..ಎಂದು ಬೈಯ್ದುಕೊಳ್ಳುವಂತೆ ಮಾಡಿದೆ.
ಇಂಥಾ ಮಾನಗೇಡಿ..ಲಜ್ಜೆಗೇಡಿ ರಾಜಕಾರಣಿ ನಮ್ಮ ಸಂಸದನಾಗುವ ಪ್ರಾರಬ್ಧ ಸ್ಥಿತಿ ನಮಗೆ ಬರಬಾರದಪ್ಪ ಎಂದು ಬಹುತೇಕರು ಮಾತನಾಡಿಕೊಳ್ಳುತ್ತಿದ್ದಾರೆ.ಕೆಲವರು ಪೆನ್ ಡ್ರೈವ್ ನೋಡುತ್ತಿದ್ದಂತೆ ಜೆಡಿಎಸ್ ಹಾಗೂ ಪ್ರಜ್ವಲ್ ಪರ ಹೊಂದಿದ್ದ ನಿಲುವನ್ನೇ ಬದಲಿಸಿಕೊಂಡು ಅದನ್ನು ಮತದಾನದಲ್ಲೂ ಪ್ರದರ್ಶಿಸಿದ್ದಾರೆ. ಗ್ತಹಚಾರ ತಪ್ಪಿ ಗೆದ್ದರೆ, ಇಂಥವನ ಮುಖ ನೋಡುವಂಥ ಕರ್ಮ ನಮಗೇಕೆ ಎಂದು ಮಾತನಾಡಿಕೊಳ್ಳುತ್ತಿರುವ ಹಾಸನದ ಜನತೆ ಅದ್ಯಾವ ಮುಖ ಇಟ್ಕೊಂಡು ಹಾಸನದಲ್ಲಿ ಅಡ್ಡಾಡುತ್ತಾನೋ,,? ನಮಗೆ ಮುಖ ತೋರಿಸುತ್ತಾನೋ..? ಸಂಸತ್ ನಲ್ಲಿ ಮುಖ ತೋರಿಸ್ತಾನೋ ಎಂದು ಬಾಯಿಗೆ ಬಂದಂತೆ ಬೈಯ್ದುಕೊಳ್ಳಲಾರಂಭಿಸಿದ್ದಾರಂತೆ.
ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡೊಕ್ಕೆ ಹೆದರುತ್ತಿದ್ದ ಸಾಕಷ್ಟು ಜನ,ಯಾವಾಗ ಪೆನ್ ಡ್ರೈವ್ ಮನೆ ಮನೆಗಳಿಗೂ ತಲುಪ್ತೋ ಆಗಿನಿಂದ್ಲೇ ಧೈರ್ಯವಾಗಿ ಮಾತನಾಡಲಿಕ್ಕೆ ಶುರು ಮಾಡಿದ್ದಾರೆ.ಅಪ್ಪ-ಅಮ್ಮ-ತಮ್ಮನ ಜತೆ ಸೇರಿ ರಿಪಬ್ಲಿಕ್ ಹಾಸನವನ್ನಾಗಿ ಮಾಡಿಕೊಂಡಿದ್ದ ಪ್ರಜ್ವಲ್ ಬಗ್ಗೆ ಪುಂಖಾನುಪುಂಖವಾಗಿ ಬೈಯ್ಯಲಾರಂಭಿಸಿದ್ದಾರೆ.ಈ ಕುಟುಂಬದ ಸರ್ವಾಧಿಕಾರಿತನಕ್ಕೆ ಫುಲ್ ಸ್ಟಾಪ್ ಯಾವಾಗ ಬೀಳ್ತದಪ್ಪಾ ಎಂದು ಚಾತಕ ಪಕ್ಷಿಗಳಂತೆ ಕಾಯ್ತಿದ್ದವರು, ಪೆನ್ ಡ್ರೈವ್ ಸೆಕ್ಸ್ ಗೆ ಧನ್ಯವಾದ ಹೇಳ್ತಿದ್ದಾರೆ.ಅದನ್ನು ಯಾರು ಬಹಿರಂಗಪಡಿಸಿದ್ರೋ ಅವರನ್ನು ಪುಣ್ಯಾತ್ಮ ಎಂದು ಹಾಡಿಹೊಗಳುತ್ತಿದ್ದಾರಂತೆ.
ಇಷ್ಟೆಲ್ಲಾ ಆದ್ರೂ ಸತ್ಯವನ್ನು ಒಪ್ಪಿಕೊಳ್ಳೊಕ್ಕೆ ಸಿದ್ದರಿಲ್ಲದ ಕೆಲವರು,ಈ ಸನ್ನಿವೇಶವನ್ನು ಪ್ರಜ್ವಲ್ ರೇವಣ್ಣನ ರಾಜಕೀಯ ಭವಿಷ್ಯಕ್ಕೆ ಕೊಳ್ಳಿ ಇಡೊಕ್ಕೆ ವ್ಯವಸ್ಥಿತ ಷಡ್ಯಂತ್ರ ಎಂದು ವಿಶ್ಲೇಷಿಸುತ್ತಿ ದ್ದಾರೆ.ಆದ್ರೆ ಹಾಗೆ ವಿಶ್ಲೇಷಿಸುವವರು, ವ್ಯಾಖ್ಯಾನಿಸುವವರ ಮನೆ ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೋ..ಕಾಮಕೇಳಿಗೋ ಬಳಕೆಯಾಗಿದ್ದರೆ ಅವರ ನಿಲುವು ಹೀಗೆ ಇರುತ್ತಿತ್ತಾ..?ಖಂಡಿತಾ ಇಲ್ಲ.. ಪ್ರಜ್ವಲ್ ವಿರುದ್ಧ ಹರಿಹಾಯುತ್ತಿದ್ದಾರೆ ಎನ್ನಲಾಗುತ್ತಿರುವವರೆಲ್ಲರ ಆಕ್ರೋಶ-ಅಸಮಾಧಾನಕ್ಕೆ ಕಾರಣವಾಗಿರುವುದು ನಮ್ಮ ಮನೆ ಹೆಣ್ಣು ಮಕ್ಕಳೆಲ್ಲಿ ಆತನ ಕಾಮದಾಟಕ್ಕೆ ಬಲಿಯಾಗಿದ್ದಾರೋ..ಬಳಕೆಯಾಗಿದ್ದಾರೋ ಎನ್ನುವ ಅಳುಕಿನಿಂದ ಎನ್ನುವುದನ್ನು ಗಮನಿಸಬೇಕಾಗುತ್ತದೆ.
ತಮ್ಮ ಪಕ್ಷದ ಗುರುತು “”ತೆನೆ ಹೊತ್ತ ಮಹಿಳೆ””..ಮಹಿಳೆಯರ ಬಗ್ಗೆ ನಮ್ಮ ಪಕ್ಷಕ್ಕೆ ಅಪಾರವಾದ ಗೌರವವವಿದೆ ಎಂದು ದಳಪತಿಗಳು ಹೇಳುತ್ತಲೇ ಬಂದಿದ್ದಾರೆ.ಈ ಘಟನೆ ಬೆನ್ನಲ್ಲೂ ಅವರ ಅಭಿಪ್ರಾಯ ಬದಲಾಗಿಲ್ಲ.ಪ್ರಜ್ವಲ್ ತಪ್ಪಿತಸ್ಥನೆನ್ನುವುದು ಪ್ರೂವಾದ್ರೆ ಎಲ್ಲರಂತೆ ಆತನಿಗೂ ಶಿಕ್ಷೆಯಾಗಲಿ ಎಂದೇ ಕುಮಾರಸ್ವಾಮಿ ಹೇಳಿದ್ದಾರೆ.ತಮ್ಮ ಕುಟುಂಬದ ಮಾನ ಮರ್ಯಾದೆ ಹಾದಿರಂಪ ಬೀದಿರಂಪ ಮಾಡಿದ ಪ್ರಜ್ವಲ್ ಬಗ್ಗೆ ಕೆಂಡದಂಥ ಕೋಪವಿದ್ದರೂ ಪ್ರಕರಣ ಸಮರ್ಥಿಸಿಕೊಂಡರೆ ಮುಜುಗರ ಹೆದರಿಸಬೇಕಾಗ್ತದೆ ಎನ್ನುವ ಜಾಣತನದಿಂದ ಅತ್ಯಂತ ಜಾಣ್ಮೆಯ ಉತ್ತರ ಕೊಟ್ಟು ಜಾರಿಕೊಂಡಿದ್ದಾರೆ.ಅದು ಕುಮಾರಸ್ವಾಮಿ ಅವರ ರಾಜಕೀಯ ಪ್ರಭುದ್ದತೆಯನ್ನು ತೋರಿಸುತ್ತದೆ.
ಪ್ರಜ್ವಲ ವಿರುದ್ಧ ಗಂಭೀರ ಆಪಾದನೆ ಕೇಳಿಬಂದ ಮೇಲೆ ಅವರು ರಾಜಕೀಯದಲ್ಲಿ ಮುಂದುವರೆಯೋದೇ ಸರಿಯಲ್ಲ.ಅದು ದೊಡ್ಡಗೌಡರ ಪ್ರತಿಷ್ಟೆ-ಗೌರವಕ್ಕೆ ಶೋಭೆ ತರುವಂತದ್ದಲ್ಲ.ರಾಜಕೀಯವಾಗಿ ರಾಜೀನಾಮೆ ಕೊಡಿಸಿ ಮನೆಯಲ್ಲಿ ಸುಮ್ಮನೆ ಕೂರಿಸುವುದೇ ಸೂಕ್ತ ಎಂದು ಮಾತನಾಡಿಕೊಳ್ಳುತ್ತಿದ್ದಾರಂತೆ. ತೀವ್ರ ವಿರೋಧಧ ನಡುವೆಯೂ ಮೋದಿ-ಶಾ ಜತೆ ಗುದ್ದಾಡಿ ಪ್ರಜ್ವಲ್ ಗೆ ಟಿಕೆಟ್ ಕೊಡಿಸಿದ ದೇವೇಗೌಡರಂತೂ ಈ ಪ್ರಕರಣದಿಂದ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.ತನ್ನ ಕುಟುಂಬದ ವಾರಸುದಾರರಾಗಿ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಾರೆನ್ನುವ ಕನಸು-ನಿರೀಕ್ಷಗೆ ಪ್ರಜ್ವಲ್ ತಣ್ಣೀರೆರಚಿದ್ದಾರೆ. ಯಾವ ಮುಖವಿಟ್ಟುಕೊಂಡು ತನ್ನ ಬಗ್ಗೆ ದಳಪತಿಗಳು ಮಾತನಾಡಲಿಕ್ಕಾಗದಂಥ ಸನ್ನಿವೇಶವೊಂದನ್ನು ಸೃಷ್ಟಿಸಿಬಿಟ್ಟಿದ್ದಾರೆನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಪ್ರಜ್ವಲ್ ಕೂಡ ಇದಾದ ಮೇಲೆ ರಾಜಕೀಯ ಮಹತ್ವಾಕಾಂಕ್ಷೆ ಇಟ್ಟುಕೊಳ್ಳುವದರಲ್ಲಿಯೂ ಅರ್ಥವಿಲ್ಲ.ಏಕೆಂದ್ರೆ ಸಧ್ಯದ ಪರಿಸ್ಥಿತಿಯಲ್ಲಿ ಅವರ ರಾಜಕೀಯ ಭವಿಷ್ಯಕ್ಕೆ ಅವರೇ ಕೊಳ್ಳಿ ಇಟ್ಟುಕೊಂಡಂತಾಗಿದೆ.ಗೆದ್ದರೂ ಸಾರ್ವಜನಿಕವಾಗಿ ಅವರೇ ಮುಖ ಎತ್ತಿಕೊಂಡು ಅಡ್ಡಾಡದಂತಾಗಿದೆ.ಸಾರ್ವಜನಿಕರು ಕೇಳೋ ಪ್ರಶ್ನೆಗಳಿಗೆ ಉತ್ತರಿಸದಂತಾಗಿದೆ.ಹೆಣ್ಣುಮಕ್ಕಳ ದೃಷ್ಟಿಯಲ್ಲಂತೂ ಪ್ರಪಾತಕ್ಕೆ ಬಿದ್ದಿರುವುದರಿಂದ ಹೆಣ್ಮಕ್ಕಳು ಇರುವ ಮನೆಗೆ ಇವರನ್ನು ಒಳಗೆ ಕರೆದು ಆದರಿಸುವ ಸನ್ನಿವೇಶವಂತೂ ನೋಡಕ್ಕೆ ಸಾಧ್ಯವಾಗದೇನೋ..?
ಗೆದ್ದರೆ ಅವರನ್ನು ಅಧಿಕಾರದಲ್ಲಿ ಮುಂದುವರೆಯಲಿಕ್ಕೆ ರಾಜಕೀಯದವರೇ ಅಲ್ಲ, ಕ್ಷೇತ್ರದ ಜನರೇ ಬಿಡಲಿಕ್ಕಿಲ್ಲವೇನೋ..ಗೆಲ್ಲುತ್ತಿದ್ದಂತೆ ರಾಜೀನಾಮೆ ಕೊಟ್ಟು ಪಾಪ ಕಳೆದುಕೊಳ್ಳುವಂತೆ ಜನರೇ ಒತ್ತಾಯಿಸಬಹುದೇನೋ..? ಪಕ್ಷದ ವರಿಷ್ಟರೇ ಮುಜುಗರದಿಂದ ತಪ್ಪಿಸಿಕೊಳ್ಳಲಿಕ್ಕೆ ಪ್ರಜ್ವಲ್ ಅವರಿಂದ ರಾಜೀನಾಮೆ ಪಡೆಯಬಹುದೇನೋ..? ಲೋಕಸಭೆಯಲ್ಲಿ ಹೇಗೆ ಅಲ್ಲಿ ಎದುರಾಗುವ ಸನ್ನಿವೇಶವನ್ನು ಎದುರಿಸ್ತಾರೋ..ರಾಷ್ಟ್ರೀಯ ಮಟ್ಟದಲ್ಲಿ ಎದುರಾಗಬಹುದಾದ ಸನ್ನಿವೇಶವನ್ನು ಹೇಗೆ ನಿಭಾಯಿಸುತ್ತಾರೋ ಎನ್ನುವ ಪ್ರಶ್ನೆ ಮೂಡಿದೆ.ಗೆಲ್ಲುವುದರಿಂದ ಆಗಬಹುದಾದ ಸಮಸ್ಯೆಗಳನ್ನು ಮನಗಂಡಿರುವ ದಳಪತಿಗಳು ಹಾಗೂ ಪ್ರಜ್ವಲ್ ಅವರೇ ತಮ್ಮ ಸೋಲಿಗೆ ಪ್ರಾರ್ಥನೆ ಮಾಡುತ್ತಿರಬಹುದೇನೋ ಎಂದು ಹಾಸನದ ಜನತೆ ಮಾತನಾಡಿಕೊಳ್ಳುತ್ತಿದ್ದಾರಂತೆ.
ಇನ್ನು ಈ ಪ್ರಕರಣದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯಂತೂ ಜೆಡಿಎಸ್ ಬೆಂಬಲಕ್ಕೆ ಬರೋದು ಕಷ್ಟ ಕಷ್ಟ..ಪ್ರಜ್ವಲ್ ಮಾಡಿಕೊಂಡ ಯಡವಟ್ಟನ್ನು ಮಿತ್ರಪಕ್ಷ ಎನ್ನುವ ಕಾರಣಕ್ಕೆ ಬೆಂಬಲಿಸಿ, ಸಮರ್ಥಿಸಿಕೊಂಡು ಯಾಕೆ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗುವುದು..ಕರ್ನಾಟಕದ ಲೋಕಸಭಾ ಚುನಾವಣೆ ಇನ್ನೂ 14 ಕ್ಷೇತ್ರಗಳಲ್ಲಿ ಇದೆ. ಪ್ರಜ್ವಲ್ ಪರ ಹೇಳಿಕೆ ಕೊಟ್ಟು ಆ 14 ಕ್ಷೇತ್ರಗಳ ಚುನಾವಣಾ ಭವಿಷ್ಯದ ಮೇಲೆ ಚಪ್ಪಡಿ ಹಾಕಿಕೊಳ್ಳೋದು ಎನ್ನುವ ಬುದ್ದಿವಂತಿಕೆಯಿಂದ ಬಿಜೆಪಿ ವರಿಷ್ಟರು ಈ ಪ್ರಕರಣದಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆನೇ ಹೆಚ್ಚು.
ಸಧ್ಯಕ್ಕೆ ಪ್ರತಿಭಟನಾ ಸ್ವರೂಪ ಪಡೆದುಕೊಂಡಿರುವ ಈ ಪ್ರಕರಣ ಯಾವೆಲ್ಲಾ ತಿರುವು ಪಡೆಯಲಿದೆಯೋ ಎನ್ನುವ ಕುತೂಹಲ ಮೂಡಿದೆ.ಪ್ರಜ್ವಲ್ ರೇವಣ್ಣ ಎನ್ನುವ ದಾರಿ ತಪ್ಪಿದ ಮೊಮ್ಮಗನಿಗೆ ದೊಡ್ಡ ಗೌಡ್ರು ಯಾವ್ ರೀತಿಯ ನೆಲೆ ಕಲ್ಪಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.ವಿದೇಶಕ್ಕೆ ಹಾರಿ ಹೋಗಿರುವ ಪ್ರಜ್ವಲ್ ರೇವಣ್ಣನನ್ನು ಪಾತಾಳ ಗರಡಿ ಹಾಕಿ ಹಿಡಿಯುವ ಪ್ರಯತ್ನದಲ್ಲಿ ಎಸ್ ಐ ಟಿ ಇದೆ.ಇದೆಲ್ಲವನ್ನು ಗಮನಿಸಿದಾಗ ತಮ್ಮ ತಪ್ಪಿನಿಂದಲೇ ಪ್ರಜ್ವಲ್ ರೇವಣ್ಣ ಅಕಾಲಿಕ ಅಂತ್ಯ ಹಾಡಿಕೊಂಡಿದ್ದಾರೆ ಎನಿಸುತ್ತದೆ.