ಫಿಲಂಫೇರ್ ದಕ್ಷಿಣ: ರಕ್ಷಿತ್ ಶೆಟ್ಟಿ ಶ್ರೇಷ್ಠ ನಟ, ಸಿರಿ ಶ್ರೇಷ್ಠ ನಟಿ ಪ್ರಶಸ್ತಿ ಪ್ರದಾನ

ಫಿಲಂಫೇರ್ ದಕ್ಷಿಣ: ರಕ್ಷಿತ್ ಶೆಟ್ಟಿ ಶ್ರೇಷ್ಠ ನಟ, ಸಿರಿ ಶ್ರೇಷ್ಠ ನಟಿ ಪ್ರಶಸ್ತಿ ಪ್ರದಾನ

ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಟನೆಗಾಗಿ ರಕ್ಷಿತ್ ಶೆಟ್ಟಿ ಹಾಗೂ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ನಟನೆಗಾಗಿ ಸಿರಿ ರವಿಕುಮಾರ್ ಫಿಲಂಫೇರ್ ದಕ್ಷಿಣ ವಿಭಾಗದ ಕನ್ನಡದಲ್ಲಿ ಶ್ರೇಷ್ಠ ನಟ ಮತ್ತು ನಟಿಯಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ಫಿಲಂಫೇರ್ ಪ್ರಶಸ್ತಿ ವಿತರಣಾ ಸಮಾರಂಭ ನಡೆದಿದ್ದು, ಸಪ್ತ ಸಾಗರದಾಚೆ ಚಿತ್ರ 6 ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡು ಪ್ರಾಬಲ್ಯ ಮೆರೆಯಿತು.

ಜೀವಮಾನದ ಸಾಧನೆಗಾಗಿ ಹಿರಿಯ ನಟ ಶ್ರೀನಾಥ್ ಅವರಿಗೆ ಫಿಲಂಫೇರ್ ಪ್ರಶಸ್ತಿ ಒಲಿದರೆ, ಶ್ರೇಷ್ಠ ಕನ್ನಡ ಚಿತ್ರವಾಗಿ ಡೇರ್ ಡೆವಿಲ್ ಮುಸ್ತಫಾ ಚಿತ್ರ ಆಯ್ಕೆಯಾಗಿದೆ.

ಸಮಾರಂಭದಲ್ಲಿ ನೆರೆಯ ಚಿತ್ರರಂಗದ ಸ್ಟಾರ್ ನಟರಾದ ಮಮ್ಮುಟಿ, ವಿಕ್ರಂ, ಬ್ರಹ್ಮಾನಂದಂ, ಸಿದ್ಧಾರ್ಥ್, ನಟಿ ಕೀರ್ತಿ ಸುರೇಶ್ ಮುಂತಾದವರು ಭಾಗವಹಿಸಿದ್ದರು.

ಫಿಲಂಫೇರ್ ಪ್ರಶಸ್ತಿ ಪಟ್ಟಿ

ಅತ್ಯುತ್ತಮ ಸಿನಿಮಾ: ಡೇರ್​ಡೆವಿಲ್ ಮುಸ್ತಫಾ

ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)

ಅತ್ಯುತ್ತಮ ನಟಿ: ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೇ)

ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ: ಪಿಂಕಿ ಎಲ್ಲಿ?

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಮೈಸೂರು ಪೂರ್ಣ (ಆರ್ಕೆಸ್ಟ್ರಾ ಮೈಸೂರು)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ಟಗರು ಪಲ್ಯ)

ಅತ್ಯುತ್ತಮ ಪೋಷಕ ನಟಿ: ಸುಧಾ ಬೆಳವಾಡಿ (ಕೌಸಲ್ಯ ಸುಪ್ರಜಾ ರಾಮ)

ಅತ್ಯುತ್ತಮ ಹೊಸ ನಟ: ಶಿಶಿರ್ ಬೈಕಾಡಿ (ಡೇರ್​ಡೆವಿಲ್ ಮುಸ್ತಫ)

ಅತ್ಯುತ್ತಮ ಹೊಸ ನಟಿ: ಅಮೃತಾ ಪ್ರೇಮ್ (ಟಗರು ಪಲ್ಯ)

ಅತ್ಯುತ್ತಮ ಹಾಡುಗಳು: ಚರಣ್ ರಾಜ್ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಸಾಹಿತ್ಯ: ಬಿಆರ್​ ಲಕ್ಷ್ಮಣರಾವ್ (ಯಾವ ಚುಂಬಕ, ಚೌಕಬಾರ)

ಅತ್ಯುತ್ತಮ ಗಾಯಕ: ಕಪಿಲ್ ಕಪಿಲನ್ (ನದಿಯೇ: ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಗಾಯಕಿ: ಶ್ರೀಲಕ್ಷ್ಮಿ ಬೆಲಮಣ್ಣು

(ಕಡಲನು ಕಾಣ ಹೊರಟ: ಸಪ್ತ ಸಾಗರದಾಚೆ ಎಲ್ಲೊ)

ಜೀವಮಾನ ಸಾಧನೆ: ಹಿರಿಯ ನಟ ಶ್ರೀನಾಥ್

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *