ತನಿಖಾ ಸಮಿತಿ‌ ರಚನೆ

ರಾಜರಾಜೇಶ್ವರಿ ನಗರ ವಲಯದಲ್ಲಿ ಖಾತಾ ಗೋಲ್ಮಾಲ್ ತನಿಖೆಗೆ ಸಮಿತಿ‌ ರಚನೆ

ಕೆಂಗೇರಿ ವಿಭಾಗದ ಕಂದಾಯ ಸಹಾಯಕ ಆಯುಕ್ತ ಬಸವರಾಜ‌ಮಗಿ
ಕೆಂಗೇರಿ ವಿಭಾಗದ ಕಂದಾಯ ಸಹಾಯಕ ಆಯುಕ್ತ ಬಸವರಾಜ‌ಮಗಿ

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸದ್ದು ಮಾಡಿದ್ದ ಖಾತಾ ಗೋಲ್ಮಾಲ್ ಹಗರಣದ ತನಿಖೆ ಮತ್ತೊಂದು ತಿರುವು ಪಡೆದಿದೆ.ಉನ್ನತ ಮಟ್ಟದ ತನಿಖೆಗೆ ವಿಶೇಷ ಆಯುಕ್ತ ಡಾ.ದೀಪಕ್ ಅವರ ನೇತೃತ್ವದಲ್ಲಿ ಮೂವರ ಸಮಿತಿ ರಚಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿ ಕಂದಾಯಾಧಿಕಾರಿ‌ ದೇವರಾಜ್
ಬಿಬಿಎಂಪಿ ಕಂದಾಯಾಧಿಕಾರಿ‌ ದೇವರಾಜ್
ದೂರುದಾರ ಮಂಜುನಾಥ್
ದೂರುದಾರ ಮಂಜುನಾಥ್
ಬಿಬಿಎಂಪಿ ಪಶ್ಚಿಮ ವಲಯ ವಿಶೇಷ ಆಯುಕ್ತ ಡಾ.ದೀಪಕ್
ಬಿಬಿಎಂಪಿ ಪಶ್ಚಿಮ ವಲಯ ವಿಶೇಷ ಆಯುಕ್ತ ಡಾ.ದೀಪಕ್

ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಅವರ ದೂರಿನ ಹಿನ್ನಲೆಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದ್ದ ಖಾತಾ ಗೋಲ್ಮಾಲ್ ಹಗರಣ ಈ ಸಮಿತಿ ರಚನೆಯಿಂದ ಮತ್ತೊಂದು ಆಯಾಮ ಪಡೆದಿರುವುದು ಸ್ಪಷ್ಟ,
ಐಆರ್ ಎಸ್ ಅಧಿಕಾರಿಯೂ ಆಗಿರುವ ಬಿಬಿಎಂಪಿ ಪಶ್ಚಿಮ ವಲಯದ ವಿಶೇಷ ತನಿಖಾ ಸಮಿತಿ‌ ರಚನೆ ಆಯುಕ್ತ ಡಾ.ದೀಪಕ್ ಅವರನ್ನೊಳಗೊಂಡ ಸಮಿತಿಯಲ್ಲಿ ಉಪ ಆಯುಕ್ತರು(ಆಸ್ತಿಗಳು) ಹಾಗೂ ಜಂಟಿ ಆಯುಕ್ತರು( ಮಹಾದೇವಪುರ ವಲಯ) ಕಾರ್ಯನಿರ್ವಹಿಸಲಿದ್ದಾರೆ ಎಂದು ಮುಖ್ಯ ಆಯುಕ್ತ ತುಷಾರ ಗಿರಿನಾಥ್ ತಿಳಿಸಿದ್ದು ಶೀಘ್ರವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಏನಿದು ಪ್ರಕರಣ: ದೂರುದಾರರು ಯಾರು..?ಬಿ ಖಾತಾ ಸ್ವತ್ತುಗಳನ್ನು ಎ ಖಾತಾಗಳನ್ನಾಗಿ ಪರಿವರ್ತಿಸಿ ಜನರನ್ನು ವಂಚಿಸುವ ದೊಡ್ಡ ಮಟ್ಟದ ಹಗರಣ ಸಮೃದ್ದಿ ಭಾರತ ಫೌಂಡೇಷನ್ ಮುಖ್ಯಸ್ಥ ಮಂಜುನಾಥ್ ನೀಡಿದ ದೂರಿನ ಹಿನ್ನಲೆಯಲ್ಲಿ ಬಿಬಿಎಂಪಿಯಲ್ಲಿ ವರದಿಯಾಗಿತ್ತು.ರಾಜರಾಜೇಶ್ವರಿ ನಗರ ವಲಯ ಕೆಂಗೇರಿ ವಿಭಾಗದ ಕಂದಾಯ ವಿಭಾಗದ ಸಹಾಯಕ ಆಯುಕ್ತ ಬಸವರಾಜ ಮಗಿ ಅವರೇ ಒಟ್ಟಾರೆ ಹಗರಣದ ಸೂತ್ರಧಾರ ಎನ್ನುವುದನ್ನು ದಾಖಲೆ ಸಮೇತ ಮಂಜುನಾಥ್ ಬಹಿರಂಗಪಡಿಸಿದ್ದರು.ಆದರೆ ದುರಂತ ಎಂದರೆ ದೂರುದಾರ ಮಂಜುನಾಥ್ ಅವರ ವಿರುದ್ಧವೇ ದೂರು ದಾಖಲಾಗಿ ಬೇಲ್ ಗಾಗಿ ಭೂಗತವಾಗಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು.
ಬಸವರಾಜ ಮಗಿ ಅವರ ನೇತೃತ್ವದಲ್ಲಿ ನಡೆದಿದೆ ಎನ್ನಲಾದ ಖಾತಾ ಗೋಲ್ಮಾಲ್ ಹಗರಣವನ್ನು ಬಯಲಿಗೆಳೆಯುತ್ತಿದ್ದಂತೆ ಮಗಿ ಮಾಡಿದ ಮೊದಲ ಕೆಲಸ ಎಂದರೆ ತನ್ನ ಶಿಫಾರಸ್ಸು ಬಳಸಿ ಪ್ರಕರಣದಿಂದ ಹೊರಗುಳಿಯುವ ಪ್ರಯತ್ನ(ಪೊಲೀಸ್ ಅಧಿಕಾರಿಯಾಗಿರುವ ತನ್ನ ಸಹೋದರನ ಪವರ್ ಹಾಗೂ ಮಾತೆತ್ತಿದರೆ ಮಾಜಿ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರ ಹೆಸರಿನ ಶ್ರೀರಕ್ಷೆ ಬಳಸಿಕೊಳ್ಳುವ ಬಹುದೊಡ್ಡ ಆಪಾದನೆ ಮಗಿ ಅವರ ಮೇಲಿದೆಯಂತೆ).ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನಿಷ್ ಮೌದ್ಗಿಲ್ ಪ್ರಕರಣದಲ್ಲಿ ಎಂಟ್ರಿ ಹೊಡೆದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡಿದ್ದು.ಪ್ರಕರಣದಲ್ಲಿ ಬಸವರಾಜಮಗಿ ಅವರನ್ನು ಅಮಾನತುಗೊಳಿಸಿದ್ದು ಹಳೆಯ ಸುದ್ದಿ.
ಮಾರ್ಚ್ 4 ರಂದು ಆರ್ ಆರ್ ನಗರ ವಲಯ ಜಂಟಿ ಆಯುಕ್ತ ವಿ.ಅಜಯ್ ಅವರು ಪ್ರಕರಣ ಸಂಬಂಧ ದೂರು ದಾಖಲಿಸಿದ ಹಿನ್ನಲೆಯಲ್ಲಿ ಬಸವರಾಜ ಮಗಿ ಹಾಗೂ ಕಂದಾಯಾಧಿಕಾರಿ ದೇವರಾಜ್ ವಿರುದ್ದ ಎಫ್ ಐ ಆರ್ ಮಾಡಿದ್ರು.ಈ ಪೈಕಿ ಬಸವರಾಜಮಗಿ ಅವರನ್ನು ಬಂಧಿಸಲಾಗಿತ್ತು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಬಿಎಂಪಿ ಆಡಳಿತ ಬಸವರಾಜ ಮಗಿ ಅವರನ್ನು ಸಸ್ಪೆಂಡ್ ಮಾಡಿತ್ತು.ಸಸ್ಪೆಂಡ್ ಆದ ದೇವರಾಜ್ ನಾಪತ್ತೆಯಾಗಿದ್ದರು.
ಆದರೆ ದುರಾದೃಷ್ಟಕರ ಸಂಗತಿ ಎಂದರೆ ಅಮಾನತುಗೊಂಡ ಬಸವರಾಜ ಮಗಿ ವಿರುದ್ದಗ ಹೇಳಿಕೊಳ್ಳುವಂಥ ಕಠಿಣ ಕ್ರಮವೇ ಜಾರಿಯಾಗಲಿಲ್ಲ.ಏಕೆಂದರೆ ಕೋಟ್ಯಾಂತರ ಮೊತ್ತದ ಅಕ್ರಮ ನಡೆಯೊ್ಕ್ಕೆ ಮಗಿ ಅವರೇ ಕಾರಣ ಎಂದು ಮಂಜುನಾಥ್ ದೂರಿನಲ್ಲಿ ಸಾರಿ ಸಾರಿ ಹೇಳಿದ್ರೂ..ಅದಕ್ಕೆ ಸಂಬಂಧಿಸಿದ ದಾಖಲೆ ಕೊಟ್ಟರೂ ಮಗಿ ಅವರ ವಿರುದ್ಧ ಆಗಿದ್ದು ಅಮಾನತ್ತಿನಂಥ ಕ್ರಮ.ಮಗಿ ತಮ್ಮ ಪ್ರಭಾವ ಬಳಸಿ ಬಿಬಿಎಂಪಿ ಆಡಳಿತದ ಮೇಲೆ ಪ್ರಭಾವ ಬೀರಿದ್ದರಿಂದಲೇ ಎರಡು ತಿಂಗಳು ಕಳೆಯೋದರೊಳಗೆ ಪ್ರಕರಣವೇ ನಡೆದಿರಿಲ್ಲವೇನೋ ಎನ್ನುವಂಥ ಸ್ತಿತಿ ನಿರ್ಮಾಣವಾಗಿಬಿಟ್ಟಿದೆ. ಏಕೆಂದರೆ ಕೆಲವು ಮೂಲಗಳ ಪ್ರಕಾರ ಈ ಕ್ಷಣಕ್ಕೂ ಬೋಗಸ್ ಖಾತಗಳನ್ನು ನೀಡುವ ವ್ಯವಸ್ಥೆ ಕೆಂಗೇರಿ ವಿಭಾಗದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆಯಂತೆ.
ಬಸವರಾಜ ಮಗಿ ಅವರು ಹಗರಣ ನಡೆದ ಮೇಲೂ ಅದೇ ವಿಭಾಗ ಹಾಗೂ ಸ್ಥಳದಲ್ಲಿ ಮುಂದುವರೆದಿದ್ದಾರೆ ಎನ್ನಲಾಗ್ತಿದೆ.ಈ ಬಗ್ಗೆ ಸ್ಪಷ್ಟನೆ ಕೇಳೊಕ್ಕೆ ಅವರಿಗೆ ಕರೆ ಮಾಡಿದ್ರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.ಆದರೆ ಮಂಜುನಾಥ್ ಅವರ ಆತಂಕ ಹಾಗು ಆರೋಪ ಏನೆಂದರೆ ತನಿಖಾ ಸಮಿತಿ ನಿಜವಾಗ್ಲೂ ಪಾರದರ್ಶಕವಾಗಿ ತನಿಖೆ ನಡೆಸುತ್ತಾ..? ತಪ್ಪಿತಸ್ಥರಾಗಿರುವ ಬಸವರಾಜ ಮಗಿ ಅವರ ವಿರುದ್ದ ಕಠಿಣಾತೀಕ್ರಮ ಕೈಗೊಳ್ಳುತ್ತಾ ಎನ್ನುವುದು..? ಅವರ ಅನುಮಾನ ಹಾಗೂ ಪ್ರಶ್ನೆಯಲ್ಲೂ ಒಂದು ಅರ್ಥವಿದೆ ಎನ್ನಿಸುತ್ತೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *