ಬೆಂಗಳೂರು : ಮಾಜಿ ರೌಡಿಶೀಟರ್ ಕಾರ್ತಿಕೇಯನ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಮಂಜುನಾಥ್ ಪರಾರಿಯಾಗಿದ್ದಾನೆ.
ಕೆಳೆದೆರಡು ದಿನಗಳ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್ ಕಾರ್ತಿಕೇಯನ್ ಎಂಬಾತನನ್ನು ಹಳೆ ದ್ವೇಷದ ಹಿನ್ನಲೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ನಡುರಸ್ತೆಯಲ್ಲಿ ಅಟ್ಟಾಡಿಸಿ ಕಾರ್ತಿಕೇಯನ್ನನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದರು. ಬಳಿಕ ರಕ್ತಸ್ರಾವವಾಗಿ ಕಾರ್ತಿಕೇಯನ್ ರಸ್ತೆಯಲ್ಲೇ ಮೃತಪಟ್ಟಿದ್ದನು.
ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ರೌಡಿಶೀಟರ್ ಕಾರ್ತಿಕೇಯನ್(40) ಮರ್ಡರ್ ಮಿಸ್ಟರಿಯನ್ನು ಬಾಣಸವಾಡಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಡುಸಂಜೆ ವೇಳೆಯಲ್ಲೇ ನಡುರಸ್ತೆಯಲ್ಲಿ ಕಾರ್ತಿಕೇಯನ್ ನ್ನು ಅಟ್ಟಾಡಿಸಿ ಕೊಂದಿದ್ದ 9 ಪಾತಕಿಗಳನ್ನು ಪೊಲೀಸರು ಎಳೆದುತಂದು ಸೆಲ್ ನೊಳಗೆ ಹಾಕಿದ್ದಾರೆ.
ಪ್ರಮುಖ ಆರೋಪಿ ಧರ್ಮ ಸೇರಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಇಶಾಕ್, ಸುಲ್ತಾನ್, ಗೋಪಾಲ್, ಬಸವರಾಜ್, ಜಾನ್ ಡೇವಿಡ್, ಸೀನಾ, ಪವನ್ ಹಾಗೂ ಅರಸು ಬಂಧಿತ ಆರೋಪಿಗಳಾಗಿದ್ದು ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಮಂಜುಋಥ್ ಪರಾರಿಯಾಗಿದ್ದಾನೆ.ಬಂಧಿತ ಆರೋಪಿಗಳಲ್ಲಿ ಧರ್ಮ, ಜಾನ್ ಡೇವಿಡ್ ಮತ್ತು ಸೀನಾ ರೌಡಿಶೀಟರ್ಗಳು ಎಂದು ತಿಳಿದು ಬಂದಿದೆ.
ಬೆಂಗಳೂರಿನ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ 10 ಜನರು ಮಂಗಳವಾರ ರಾತ್ರಿ ರೌಡಿಶೀಟರ್ ಕಾರ್ತಿಕೇಯನ್(40) ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದರು.ಕೊಲೆಗೆ ಹಳೇ ದ್ವೇಷ ಹಾಗೂ ರಿಯಲ್ಎಸ್ಟೇಟ್ ವ್ಯವಹಾರದಲ್ಲಿ ಆಗಿದ್ದ ಕಿರಿಕ್ ಕಾರಣ ಎನ್ನಲಾಗಿದೆ.
ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಬೆಂಗಳೂರಿನ ಹೊರವಲಯದಲ್ಲಿ ಬಚ್ಚಿಟ್ಟುಕೊಂಡಿದ್ದ ಎಲ್ಲಾ 9 ಜನರನ್ನು ಅರೆಸ್ಟ್ ಮಾಡಿದ್ದಾರೆ. ಅಂದ್ಹಾಗೆ ಕೊಲೆಯಾದ ಮಾಜಿ ರೌಡಿ ಶೀಟರ್ ಕಾರ್ತಿಕೇಯನ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ದಾಖಲಾಗಿತ್ತು. ಎರಡು ವರ್ಷಗಳ ಹಿಂದೆ ರೌಡಿಶೀಟ್‌ನಿಂದ ಕೈ ಬಿಡಲಾಗಿತ್ತು. ಈ ಹಿಂದೆ ಬಾಣಸವಾಡಿ ಪೊಲೀಸರಿಂದ ರೌಡಿಶೀಟರ್ ಕಾರ್ತಿಗೇಯನ್ ಗಡಿಪಾರಾಗಿದ್ದ. ನಂತರ ಮತ್ತೆ ಬೆಂಗಳೂರಿಗೆ ಬಂದು ಬಾಣಸವಾಡಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಕಚೇರಿ ತೆರೆದಿದ್ದ ಎನ್ನಲಾಗಿದೆ.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಧರ್ಮನ ಗುಂಪಿಗೂ ಕಾರ್ತಿಕೇಯನ್ ಗ್ಯಾಂಗ್ ನಡುವೆ ಆಗಾಗ ಗಲಾಟೆ ದೊಂಬಿ ನಡೆಯುತ್ತಿದ್ದವಂತೆ.ರೌಡಿಯಿಸಂನಲ್ಲೇ ನಟೋರಿಯಸ್ ಆದ ಕೆಲವರು ಇವರಿಬ್ಬರ ನಡುವೆ ಕಾಂಪ್ರಮೈಸ್ ಮಾಡಿಸಲು ನೋಡಿದ್ದರಂತೆ.ಆದರೆ ಅದಾಗದೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಆದ ಕಿರಿಕ್ ನ್ನೇ ಮುಂದಿಟ್ಟುಕೊಂಡ ಮಂಗಳವಾರ ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದಾರೆ.