ಫ್ರಾನ್ಸ್ ಸ್ಪರ್ಧಿ ಪೋಲ್ ವಾಲ್ಟ್ ಆಂಥೋನಿ ಅಮ್ಮಿರತಿ ವಿಚಿತ್ರ ರೀತಿಯ ದುರ್ಘಟನೆಯಿಂದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪೋಲ್ ವಾಲ್ಟ್ ಸ್ಪರ್ಧೆ ಫೈನಲ್ ರೇಸ್ ನಿಂದ ಹೊರಬಿದ್ದಿದ್ದಾರೆ.
ಭಾನುವಾರ ನಡೆದ ಸ್ಪರ್ಧೆಯಲ್ಲಿ ಅಂಥೋನಿ ಅಮ್ಮಿರತಿ ಅರ್ಹತಾ ಸುತ್ತಿನಲ್ಲಿ 5.70.ಮೀ. ಎತ್ತರ ಜಿಗಿಯುವ ವೇಳೆ ಮರ್ಮಾಂಗಕ್ಕೆ ಕಂಬ ಬಡಿದು ಫೈನಲ್ ಪ್ರವೇಶಿಸಲು ವಿಫರಾದರು.
ಪೋಲ್ ವಾಲ್ಟ್ ನಲ್ಲಿ ಪದಕ ಗೆಲ್ಲುವ ಭರವಸೆಯ ಸ್ಪರ್ಧಿಯಾಗಿದ್ದ ಅಂಥೋನಿ ಅಮ್ಮಿರತಿ ತವರಿನ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದ ಸ್ಪರ್ಧೆಯ ವೇಳೆ ಈ ಎಡವಟ್ಟಿನಿಂದ ಮುಜುಗರದ ಜೊತೆಗೆ ನೋವಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದ್ದಾರೆ.
21 ವರ್ಷದ ಅಂಥೋನಿ ಅಮ್ಮಿರತಿ 5.70 ಮೀ. ಎತ್ತರ ಜಿಗಿತದ ಮೂರು ಪ್ರಯತ್ನಗಳ ಪೈಕಿ ಎರಡನೇ ಪ್ರಯತ್ನದಲ್ಲಿ ಜಿಗಿದು ಪೋಲ್ ವಾಲ್ಟ್ ಈ ಘಟನೆ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.