ಭಾರತದ ಹರ್ವಿಂದರ್ ಸಿಂಗ್ ಪ್ಯಾರಾಲಿಂಪಿಕ್ಸ್ ಆರ್ಚರಿ (ಬಿಲ್ಲುಗಾರಿಕೆ)ಯಲ್ಲಿ ಚಿನ್ನದ ಪದಕ ಗೆದ್ದು, ಈ ಸಾಧನೆ ಮಾಡಿದ ಮೊದಲಿಗ ಎಂಬ ಇತಿಹಾಸ ಬರೆದಿದ್ದಾರೆ.
ಬುಧವಾರ ನಡೆದ ಪುರುಷರ ವೈಯಕ್ತಿಕ ರಿರ್ಕ್ಯೂ ಫೈನಲ್ ನಲ್ಲಿ ಪೋಲೆಂಡ್ ನ ಲುಕಾಸ್ ಸಿಜಾಕ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು.
ಭಾರತ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ಇದುವರೆಗೆ ಒಂದು ಬಾರಿಯೂ ಚಿನ್ನದ ಪದಕ ಗೆದ್ದಿರಲಿಲ್ಲ. ಇದೀಗ ಹರ್ವಿಂದರ್ ಈ ಪದಕದ ಬರವನ್ನು ನೀಗಿಸಿದ್ದಾರೆ.
33 ವರ್ಷದ ಹರ್ವಿಂದ್ ಸಿಂಗ್ ಟೊಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದು ಈ ಬಾರಿ ಚಿನ್ನಕ್ಕೆ ಗುರಿ ಇಟ್ಟಿದ್ದಾರೆ.
ಪೈನಲ್ ಪೂರ್ಣ ಅಧಿಪತ್ಯ ತೋರಿದ ಹರ್ವಿಂದರ್ ಸಿಂಗ್ 28-24, 28-27, 29-25 (6-0) ಸೆಟ್ವಗಳಿಂದ ಜಯಭೇರಿ ಬಾರಿಸಿದರು
ಬಾಲಕನಾಗಿದ್ದಾಗ ಡೆಂಗ್ಯೂ ಜ್ವರದಿಂದ ಕಾಲುಗಳನ್ನು ಕಳೆದುಕೊಂಡ ಹರ್ವಿಂದರ್ ಪಿಎಚ್ ಡಿ ಪದವೀಧರರಾಗಿದ್ದಾರೆ. ಅಲ್ಲದೇ ಬುಧವಾರ ಒಂದೇ ದಿನ ಸತತ 5 ಪಂದ್ಯಗಳಲ್ಲಿ ಸ್ಪರ್ಧಿಸಿದರೂ ದಣಿಯದೇ ಫೈನಲ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದರು.