advertise here

Search

ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಹನಿಟ್ರಾಪ್ ಸಂಚು? ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್!

jakkur villa valentines day

ಬೆಂಗಳೂರು: ಪ್ರೇಮಿಗಳ ದಿನದಂದು (ಫೆಬ್ರವರಿ 14) ಜಕ್ಕೂರಿನ ‘ರೆಕ್ಸ್ ವಿಲ್ಲಾ’ದಲ್ಲಿ ನಡೆದ ಘಟನೆ ಈಗ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದೆ. ತಮಿಳುನಾಡು ಮೂಲದ 19 ವರ್ಷದ ಯುವತಿಯನ್ನು ಪಾರ್ಟಿಗೆ ಕರೆಸಿ, ಆಕೆಗೆ ನಶೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪಾರ್ಟಿಯಿಂದ ಶುರುವಾದ ಹನಿಟ್ರಾಪ್?

ದೂರುದಾರರಾದ ನಿಖಿಲ್ ಎಂಬುವವರು ಜಕ್ಕೂರಿನಲ್ಲಿ ವಿಲ್ಲಾವೊಂದನ್ನು ಲೀಸ್ ಪಡೆದು ಪಾರ್ಟಿಗಳಿಗೆ ಬಾಡಿಗೆ ನೀಡುವ ವ್ಯವಹಾರ ಮಾಡುತ್ತಿದ್ದರು. ಫೆಬ್ರವರಿ 14ರಂದು ಅವರ ಸ್ನೇಹಿತ ದೀಕ್ಷನ್ ಎಂಬುವವರು ವ್ಯಾಲೆಂಟೈನ್ಸ್ ಡೇ ಪಾರ್ಟಿಗಾಗಿ ವಿಲ್ಲಾ ಬುಕ್ ಮಾಡಿದ್ದರು. ಅಂದು ರಾತ್ರಿ ನಡೆದ ಪಾರ್ಟಿಯಲ್ಲಿ ವೈಭವಿ (ವಿವಿ) ಎಂಬ ಯುವತಿ ನಿಖಿಲ್ ಅವರಿಗೆ ಪರಿಚಯವಾಗಿದ್ದಳು.

ಪಾರ್ಟಿಯ ಸಮಯದಲ್ಲಿ ವೈಭವಿ ತನ್ನ ವೈಯಕ್ತಿಕ ನೋವುಗಳನ್ನು ಹೇಳಿಕೊಳ್ಳುತ್ತಾ ನಿಖಿಲ್ ಜೊತೆ ಅತಿ ಸಲುಗೆಯಿಂದ ವರ್ತಿಸಲು ಪ್ರಾರಂಭಿಸಿದ್ದಳು. ಅಷ್ಟೇ ಅಲ್ಲದೆ, ತಾನು ‘ಶುಗರ್ ಬೇಬಿ’ ತನಗೆ ‘ಶುಗರ್ ಡ್ಯಾಡಿ’ ಬೇಕು ಎಂದು ಕೇಳಿಕೊಂಡಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್..

ಇನ್ಸ್ಟಾಗ್ರಾಮ್ ಪೋಸ್ಟ್ ಮತ್ತು ಬ್ಲಾಕ್‌ಮೇಲ್ ಶುರು

ಪಾರ್ಟಿ ಮುಗಿದ ನಾಲ್ಕು ದಿನಗಳ ನಂತರ, ಅಂದರೆ ಫೆಬ್ರವರಿ 18ರಂದು ವೈಭವಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿಖಿಲ್ ಮತ್ತು ದೀಕ್ಷನ್ ಅವರು ತನಗೆ ಮಾದಕ ವಸ್ತು ನೀಡಿ ಲೈಂಗಿಕ ಹಲ್ಲೆ ನಡೆಸಿದ್ದಾರೆ ಎಂದು ಪೋಸ್ಟ್ ಹಾಕಿದ್ದಳು. ಇದರ ಬೆನ್ನಲ್ಲೇ ಇಮ್ರಾನ್ ಎಂಬಾತ ತಾನು ‘ರಾಜ್ ನ್ಯೂಸ್’ ಚಾನೆಲ್‌ನ ಕ್ರೈಂ ಬ್ರಾಂಚ್ ಹೆಡ್ ಎಂದು ಪರಿಚಯಿಸಿಕೊಂಡು ನಿಖಿಲ್ ಅವರಿಗೆ ಕರೆ ಮಾಡಿದ್ದಾನೆ. ಆರೋಪಿಗಳು ನಿಖಿಲ್ ಅವರ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಲು ಶುರುಮಾಡಿದ್ದಾರೆ. ಕೇಳಿದಷ್ಟು ಹಣ ನೀಡದಿದ್ದರೆ ನ್ಯೂಸ್ ಚಾನೆಲ್‌ನಲ್ಲಿ ಪ್ರೋಮೋ ಹಾಕಿ ಮಾನ ಮರ್ಯಾದೆ ತೆಗೆಯುವುದಾಗಿ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ALSO READ :  "ಮಾತನಾಡಿದ್ದು ನಾನೇ, ಆದ್ರೆ ಟ್ರ್ಯಾಪ್ ನಾನಲ್ಲ!" – ಶಿರಹಟ್ಟಿ ಶಾಸಕರ ಪ್ರಕರಣದಲ್ಲಿ ಸ್ವಾಮೀಜಿ

ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ವೈಭವಿ ಮತ್ತು ಇಮ್ರಾನ್ ವಿರುದ್ಧ Bharatiya Nyaya Sanhita (BNS) ಸೆಕ್ಷನ್ 308(2) ಮತ್ತು Information Technology Act ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ವ್ಯವಸ್ಥಿತವಾಗಿ ನಡೆದ ಹನಿಟ್ರಾಪ್ ಜಾಲವೇ ಅಥವಾ ಅತ್ಯಾಚಾರದ ಆರೋಪದಲ್ಲಿ ಸತ್ಯವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


Political News

ಮಾರ್ಚ್ ಅಂತ್ಯಕ್ಕೆ ಕರ್ನಾಟಕದ ಗದ್ದುಗೆ ಬದಲಾವಣೆ ಪಕ್ಕಾ?! ಡಿಕೆಶಿಗೆ ಸಿಎಂ ಪಟ್ಟ ಕಟ್ಟಲು ಸಜ್ಜಾದ ಹೈಕಮಾಂಡ್!

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಐತಿಹಾಸಿಕ ಪಯಣಕ್ಕೆ ಸಿಎಂ ಅಭಿನಂದನೆ

ಸಂವಿಧಾನ ರಕ್ಷಣೆಗೆ ಸ್ಪೀಕರ್ ಪೀಠಕ್ಕೆ ಸವಾಲು: ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ

ವಾಣಿಜ್ಯ ಎಲ್‌ಪಿಜಿ ಕೊರತೆ: ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಹೊಸ ನಾಯಕನ ಆಯ್ಕೆಯ ಬೆನ್ನಲ್ಲೇ ತೀವ್ರಗೊಂಡ ಯುದ್ಧ: ಆಪರೇಶನ್ ಎಪಿಕ್ ಫ್ಯೂರಿಗೆ 10ನೇ ದಿನ

‘ಹೈಕಮಾಂಡ್ ನಿರ್ಧಾರವೇ ಅಂತಿಮ’: ನಾಯಕತ್ವದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಫುಲ್ ಸ್ಟಾಪ್!

‘ಖಾಲಿ ಚೊಂಬು’ ಕೊಟ್ಟ ಕಾಂಗ್ರೆಸ್: ಬಜೆಟ್ ದಿನದಂದು ಬಿಜೆಪಿ ನಾಯಕರ ಪ್ರತಿಭಟನೆ

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ!

Scroll to Top