gita gopinath

2027ರ ವೇಳೆಗೆ ಭಾರತ 3ನೇ ಆರ್ಥಿಕ ದೇಶವಾಗಲಿದೆ: ಐಎಂಎಫ್

ಭಾರತ 2027ರ ವೇಳೆಗೆ ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ ಎಂದು ಐಎಂಎಫ್ ಸಹಾಯಕ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಾಸಗಿ ಟಿವಿ ಚಾನೆಲ್ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೀತಾ ಗೋಪಿನಾಥ್, ಭಾರತದ ಅಭಿವೃದ್ಧಿ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಇದರಿಂದ 2027ರ ವೇಳೆಗೆ 3ನೇ ಅತಿ ದೊಡ್ಡ ಆರ್ಥಿಕ ದೇಶವಾಗುವ ನಿರೀಕ್ಷೆ ಇದೆ ಎಂದರು.

ಕಳೆದ ವರ್ಷ ಭಾರತದ ಆರ್ಥಿಕತೆ ಉತ್ತಮ ಸಾಧನೆ ಮಾಡಿದೆ. ಇದು ಈ ವರ್ಷವೂ ಮುಂದುವರಿಯುವ ಸಾಧ್ಯತೆ ಇದೆ. ಖಾಸಗಿ ಕಂಪನಿಗಳು ಕೂಡ ಉತ್ತಮ ಸಾಧನೆ ಮಾಡಿದರೆ ಆರ್ಥಿಕ ದೇಶವಾಗಿ ಮುಂದಿನ ಹೆಜ್ಜೆ ಇಡಲಿದೆ ಎಂದು ಅವರು ಹೇಳಿದರು.

2024-25ನೇ ಸಾಲಿನಲ್ಲಿ ಭಾರತದ ಅಭಿವೃದ್ಧಿ ದರ ಶೇ.7ಕ್ಕೆ ಏರಿಕೆಯಾಗಬಹುದು ಎಂದು ಗೀತಾ ಗೋಪಿನಾಥ್ ಹೇಳಿದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *