ಜಪ್ತಿ ಮಾಡಿದ್ದ ಕಳ್ಳತನದ 72 ಲಕ್ಷ ರೂ. ಗುಳುಂ ಮಾಡಿದ ಇನ್ ಸ್ಪೆಕ್ಟರ್ ಶಂಕರ್ ನಾಯ್ಕ್!

ಜಪ್ತಿ ಮಾಡಿದ್ದ ಕಳ್ಳತನದ 72 ಲಕ್ಷ ರೂ. ಗುಳುಂ ಮಾಡಿದ ಇನ್ ಸ್ಪೆಕ್ಟರ್ ಶಂಕರ್ ನಾಯ್ಕ್!

ಕಳ್ಳತನದ ವೇಳೆ ಸಿಕ್ಕಿಬಿದ್ದ ಕಳ್ಳನಿಂದ ಜಪ್ತಿ ಮಾಡಿದ್ದ 72 ಲಕ್ಷ ರೂ.ವನ್ನು ಸರ್ಕಾರದ ಸುಪರ್ದಿಗೆ ನೀಡದೇ ವೈಯಕ್ತಿಕವಾಗಿ ಬಳಸಿಕೊಂಡಿದ್ದ ಬೆಂಗಳೂರಿನ ಪೊಲೀಸ್ ಇನ್ ಸ್ಪೆಕ್ಟರ್ ಶಂಕರ್ ನಾಯ್ಕ್ ವಿರುದ್ಧ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬ್ಯಾಟರಾಯನಪುರದ ಠಾಣೆಯ ಇನ್ಸ್ ಪೆಕ್ಟರ್ ಶಂಕರ್ ನಾಯ್ಕ್ ವಿರುದ್ದದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು ಹಿನ್ನಲೆ ಸಿಸಿಬಿ ತಂಡದಿಂದ ಇನ್ಸ್ ಪೆಕ್ಟರ್ ಶಂಕರ್ ನಾಯ್ಕ್ ಗಾಗಿ ಶೋಧ ಆರಂಭಿಸಿದೆ.

ಬಂಧನ ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಪೋನ್ ಸ್ವೀಚ್ ಆಫ್ ಮಾಡಿಕೊಂಡಿರುವ ಶಂಕರ್ ನಾಯ್ಕ್ ಬಿಡದಿ ಠಾಣೆಯಿಂದ ಪರಾರಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತ್ತು. ಇನ್ಸ್ ಪೆಕ್ಟರ್ ಶಂಕರ್ ನಾಯ್ಕ್ ಜಿಕೆ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶಂಕರ್ ನಾಯ್ಕ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕರ್ತವ್ಯದ ವೇಳೆ ಕಳ್ಳತನ ಪ್ರಕರಣವೊಂದರಲ್ಲಿ 72 ಲಕ್ಷ ರೂ. ಜಪ್ತಿ ಮಾಡಿ ಶಂಕರ್ ನಾಯ್ಕ್, ಈ ಹಣವನ್ನು ಸರ್ಕಾರದ ಖಜಾನೆ ಅಥವಾ ಠಾಣೆಯ ಸುಪರ್ದಿಗೆ ಕೊಡದೆ ಸ್ವಂತಕ್ಕೆ ಬಳಸಿಕೊಂಡಿದ್ದರು. ಎಸಿಪಿ ಭರತ್ ರೆಡ್ಡಿ ದೂರು ಆಧರಿಸಿ ಎಫ್ ಐಆರ್ ದಾಖಲಾಗಿತ್ತು.

2023ರ ನವೆಂಬರ್ ನಲ್ಲಿ ದಾಖಲಾಗಿದ್ದ ಎಫ್ ಐಆರ್ ದಾಖಲಾಗಿದ್ದು, ನಂತರ ಪ್ರಕರಣದ ತನಿಖೆಯನ್ನು ಕಮಿಷನರ್ ಸಿಸಿಬಿಗೆ ವಹಿಸಿಸಲಾಗಿತ್ತು. ಪ್ರಕರಣ ರದ್ದು ಕೋರಿ ಶಂಕರ್ ನಾಯ್ಕ್ ಹೈಕೋರ್ಟ್ ಮೆಟ್ಟಲೇರಿದ್ದರು. ವಿಚಾರಣೆ ನಂತರ ಪ್ರಕರಣದ ತನಿಖೆಗೆ ತಡೆ ನೀಡಿದ್ದ ಹೈಕೋರ್ಟ್ ನಂತರ ಸಲ್ಲಿಸಿದ್ದ ಮೇಲ್ಮನವಿ ಹಿನ್ನೆಲೆಯಲ್ಲಿ ತಡೆಯಾಜ್ಞೆ ತೆರವುಗೊಳಿಸಿತ್ತು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *