isro

ಇಸ್ರೊದ ಭೂ ವೀಕ್ಷಣಾ ಉಪಗ್ರಹ EOS-8 ಯಶಸ್ವಿ ಉಡಾವಣೆ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಭೂಮಿಯ ವೀಕ್ಷಣಾ ಉಪಗ್ರಹ-8 (EOS-8) ಯಶಸ್ವಿಯಾಗಿ ಬಾಹ್ಯಕಾಶಕ್ಕೆ ಉಡಾವಣೆಗೊಂಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಬೆಳಿಗ್ಗೆ ಯಶಸ್ವಿಯಾಗಿ ಎಸ್ ಎಸ್ ಎಲ್ ವಿ ಯ ಮೂರನೇ ಅಭಿವೃದ್ಧಿ ವಾಹಕ ಯಶಸ್ವಿಯಾಗಿ ಬಾಹ್ಯಕಾಶಕ್ಕೆ ಚಿಮ್ಮಿದೆ.

ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿರುವ ಇಸ್ರೊ, “ಎಸ್ ಎಸ್ ಎಲ್ ವಿ ಯ ಮೂರನೇ ಅಭಿವೃದ್ಧಿ ವಾಹಕ ಹಾರಾಟ ಯಶಸ್ವಿಯಾಗಿದೆ. SSLV-D3 ನಿಖರವಾಗಿ EOS-08 ನ್ನು ಕಕ್ಷೆಗೆ ಸೇರಿಸಿತು. ಇದು ISRO/DOS ನ SSLV ಅಭಿವೃದ್ಧಿ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ತಂತ್ರಜ್ಞಾನ ವರ್ಗಾವಣೆಯೊಂದಿಗೆ, ಭಾರತೀಯ ಉದ್ಯಮ ಮತ್ತು ಎನ್ ಎಸ್ ಐಎಲ್ ಇಂಡಿಯಾ ಈಗ ಎಸ್ ಎಸ್ ಎಲ್ ವಿಯನ್ನು ವಾಣಿಜ್ಯ ಕಾರ್ಯಾಚರಣೆಗಳಿಗಾಗಿ ಉತ್ಪಾದಿಸುತ್ತದೆ ಎಂದಿದೆ.

ಶುಕ್ರವಾರ ಮುಂಜಾನೆ 2.47ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದು SSLV-D3/EOS-08 ಮಿಷನ್‌ 3ನೇ ಮತ್ತು ಅಂತಿಮ ಅಭಿವೃದ್ಧಿ ವಾಹಕವಾಗಿದೆ. ಈ ನೌಕೆ 1 ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲಿದೆ.

ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆ, ಅಪ್ಲಿಕೇಶನ್‌ಗಳಿಗಾಗಿ ಹಗಲು ಮತ್ತು ರಾತ್ರಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಪತ್ತೆ, ಜ್ವಾಲಾಮುಖಿ ಚಟುವಟಿಕೆ ವೀಕ್ಷಣೆ, ಮತ್ತು ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರ ವಿಪತ್ತು ಮೇಲ್ವಿಚಾರಣೆ. GNSS-R ಪೇಲೋಡ್ ಸಾಗರ ಮೇಲ್ಮೈ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶದ ಮೌಲ್ಯಮಾಪನ, ಹಿಮಾಲಯ ಪ್ರದೇಶದ ಮೇಲಿನ ಕ್ರಯೋಸ್ಪಿಯರ್ ಅಧ್ಯಯನಗಳು, ಪ್ರವಾಹ ಪತ್ತೆ ಮತ್ತು ಒಳನಾಡಿನ ಜಲಮೂಲ ಪತ್ತೆ ಮುಂತಾದ ವಿಷಯಗಳ ಕುರಿತು ನೌಕೆ ಅಧ್ಯಯನ ನಡೆಸಲಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *