“ಯಮ”ನೂರಿಗೆ ದಾರಿ ತೋರಿಸುತ್ತಿವೆ “ಡಕೋಟಾ ಬಸ್ ಗಳು- 20 ಲಕ್ಷ ಕಿಮೀ ಕ್ರಮಿಸಿದ್ರೂ ರಸ್ತೆಗಿಳಿತೀವೆ ಡಕೋಟಾ ಬಸ್ ಗಳು..

ಬೆಂಗಳೂರು:ಕರ್ನಾಟಕ ಸಾರಿಗೆ ದೇಶದಲ್ಲೇ ಅತ್ಯುತ್ತಮ ಸಾರಿಗೆ ಎನ್ನುವ ಹೆಸರು ಪಡೆದಿದೆ.ನಮ್ಮ ರಾಜ್ಯದಲ್ಲಿ ಸಂಚರಿಸುವಷ್ಟು ಉತ್ತಮ ಗುಣಮಟ್ಟದ ಬಸ್ ಗಳನ್ನು ದೇಶದ ಯಾವುದೇ ರಾಜ್ಯಗಳಲ್ಲೂ ನೋಡಲಿಕ್ಕೆ ಸಾಧ್ಯವಿಲ್ಲ ಎನ್ನುವುದು ಕೂಡ ಅಷ್ಟೇ ವಾಸ್ತವ.ಕೆಎಸ್ ಆರ್ ಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್ ಗಳಲ್ಲಿರುವಷ್ಟು ಸೇಫೆಸ್ಟ್ ಆದ ಪ್ರಯಾಣ-ಸಂಚಾರ ಬೇರೆಲ್ಲೂ ಸಿಗೊಲ್ಲ ಎನ್ನುವುದು ಉತ್ಪ್ರೇಕ್ಷೆ ಎನಿಸಿದರು ಸತ್ಯ.ಇಂಥಾ ಹೆಮ್ಮೆ-ಹೆಗ್ಗಳಿಕೆ ಇರುವ ಕೆಎಸ್ ಆರ್ ಟಿಸಿ ಬಗ್ಗೆ ಸದಾ ಕೇಳಿ ಬರುವ ಅಪಸ್ವರವೊಂದೇ ಡಕೋಟಾ ಬಸ್ ಗಳ ಅಬ್ಬರ..ಹಾವಳಿ. ಎಷ್ಟು ಐಷಾರಾಮಿ-ಹಿತಕಾರಿ ಎನಿಸುವಂಥ ಬಸ್ ಗಳಿವೆಯೋ ಅಷ್ಟೇ ಹಾಳಾಗಿರುವ ಬಸ್ ಗಳು ಕಾರ್ಯಾಚರಣೆಗೊಳ್ಳುತ್ತಿವೆ ಎಂದರೆ ನಂಬಲೇಬೇಕು. ಇಂಥಾ  ನೂರಾರು ಬಸ್ ಗಳು ಇವತ್ತಿಗೂ ಸಂಚರಿಸುತ್ತಿವೆ ಎನ್ನುವುದು ಆತಂಕಕಾರಿ ಸಂಗತಿಯಲ್ಲದೇ ಇನ್ನೇನು.

ಕೆಎಸ್ ಆರ್ ಟಿಸಿ ಸೇರಿದಂತೆ ನಾಲ್ಕು ನಿಗಮಗಳಲ್ಲಿ ನಿತ್ಯವೂ ಕಾರ್ಯಾಚರಣೆ ಮಾಡುತ್ತಿರುವ ಬಸ್ ಗಳಲ್ಲಿ ಶೇಕಡಾ 5 ರಿಂದ 10 ಬಸ್ ಗಳು ಸಂಚಾರಕ್ಕೇನೆ ಯೋಗ್ಯವಲ್ಲ ಎನ್ನುವಷ್ಟು ಹಾಳಾಗಿವೆಯಂತೆ. ಇದನ್ನು ನಾವ್ ಹೇಳ್ತಿಲ್ಲ.ಇಂಥಾ ಬಸ್ ಗಳನ್ನು ಕಾರ್ಯಾಚರಣೆ ಮಾಡುವ ಸಿಬ್ಬಂದಿನೇ  ಆಕ್ರೋಶ ವ್ಯಕ್ತಪಡಿಸ್ತಾರೆ.ಬೇಡ ಎಂದರೂ ಬಲವಂತವಾಗಿ ಉತ್ತಮ ಸ್ತಿತಿಯಲ್ಲಿಲ್ಲದ ಬಸ್ ಗಳನ್ನು ಸಿಬ್ಬಂದಿಗೆ ಕೊಟ್ಟು ಕಾರ್ಯಾಚರಣೆ ಮಾಡಿಕೊಂಡು ಬರುವಂತೆ ಹೇಳುವ ಸಾರಿಗೆ ಅಧಿಕಾರಿಗಳೇ ಡ್ರೈವರ್ಸ್-ಕಂಡಕ್ಟರ್ಸ್ ಗೆ ಶತೃಗಳಾಗಿಬಿಟ್ಟಿದ್ದಾರೆ.ಮೈಯೆಲ್ಲಾ ಕಣ್ಣಾಗಿಸಿಕೊಂಡು ಡ್ರೈವ್ ಮಾಡಿದ ಹೊರತಾಗ್ಯೂ ಕೆಲವೊಮ್ಮೆ ಬಸ್ ಗಳ ದುಸ್ತಿತಿ ಕಾರಣಕ್ಕೆ ಅಪಘಾತಗಳಾಗಿಬಿಡುತ್ತವೆ.ಆದರೆ ಹೊಣೆ ಮಾಡೋದು ಡ್ರೈವರ್ ನ್ನು.ನಿರ್ಲಕ್ಷ್ಯದ-ಅಜಾಗರೂಕತೆಯ ಚಾಲನೆಯಿಂದಲೇ ಅಪಘಾತ ಸಂಭವಿಸ್ತು ಎಂದು ಕಥೆ ಕಟ್ಟೋದು ಸಾರಿಗೆ ನಿಗಮಗಳಲ್ಲಿ ಮಾಮೂಲಾಗಿ ಹೋಗಿದೆ.

ಉತ್ತಮ ಸ್ತಿತಿಯಲ್ಲಿರುವ ಬಸ್ ಗಳ ಬದಲಿಗೆ ಅವಧಿ ಮೀರಿದ ಡಕೋಟಾ ಬಸ್ ಗಳನ್ನು ಕೊಟ್ಟಾಗ ಡ್ರೈವರ್ ಗಳು ಅಲರ್ಟ್ ಆಗಿ ಡ್ರೈವ್ ಮಾಡ್ತಾರೆ.ಮೈಯೆಲ್ಲಾ ಕಣ್ಣಾಗಿದ್ದುಕೊಂಡು ಬಸ್ ಚಾಲನೆ ಮಾಡುವ ಅವರ ನಿಪುಣತೆಯೇ ವಿಶೇಷ.ಡಕೋಟಾ ಬಸ್ ಗಳನ್ನು ಜಾಗರೂಕತೆ ಹಾಗೂ ಸೂಕ್ಷ್ಮವಾಗಿ ಚಾಲನೆ ಮಾಡಿ ಪ್ರಯಾಣಿಕರು ತಮ್ಮ ಗಮ್ಯಕ್ಕೆ ತಲುಪಿಸಿ ಡಿಪೋಗಳಿಗೆ ಸುರಕ್ಷಿತವಾಗಿ ಬಸ್ ಗಳನ್ನು ತಂದುನಿಲ್ಲಿಸುತ್ತಿದ್ದಾರೆ ಡ್ರೈವರ್ಸ್..ಆ ಕಾರಣಕ್ಕೆ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.

ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ.ಮೊನ್ನೆ ಶಿವಮೊಗ್ಗ ನಿಲ್ದಾಣದಿಂದ ಮೈಸೂರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಿಮಿಯರ್ ಸರ್ವಿಸ್ ವೋಲ್ವೋ ಬಸ್ (ಕೆ.ಎ.01, ಎಫ್ -9077) ರಾತ್ರಿ 1:30ರ ಸಮಯದಲ್ಲಿ ತರಿಕೆರೆಯ ಅಜ್ಜಂಪುರ ಕ್ರಾಸ್ ಬಳಿ  ತಾಂತ್ರಿಕ ಕಾರಣದಿಂದಾಗಿ ಅಗ್ನಿಗೆ ಆಹುತಿಯಾಗಿದೆ.ಅಂದ್ರೆ ಎಂಜಿನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಮೈಯೆಲ್ಲಾ ಕಣ್ಣಾಗಿಸಿಕೊಂಡು ಬಸ್ ಚಾಲನೆ ಮಾಡುತ್ತಿದ್ದ ಚಾಲಕ ಸುಬ್ರಮಣಿಗೆ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗೊತ್ತಾಗ್ತಿದ್ದಂಗೆ ಪ್ರಯಾಣಿಕರನ್ನು ಅಲರ್ಟ್ ಮಾಡಿ ಅವರೆಲ್ಲರನ್ನು ಅಪಾಯದಿಂದ ಪಾರು ಮಾಡಿದ್ದಾರೆ.ಚಾಲಕ ಸುಬ್ರಮಣಿ ಸಮಯಪ್ರಜ್ನೆ ಪ್ರದರ್ಶಿಸದಿದ್ರೆ ಅವತ್ತು ಬಸ್ ನಲ್ಲಿದ್ದವರೆಲ್ಲಾ ಬೆಂಕಿಯಲ್ಲಿ ಸಜೀವದಹನವಾಗುವ ಆತಂಕವಿತ್ತು.ಮದ್ಯರಾತ್ರಿಯಲ್ಲಿ ಬಸ್ ನಲ್ಲಿದ್ದವರನ್ನೆಲ್ಲಾ ಇಳಿಸಿದ ಚಾಲಕನ ಸಮಯಪ್ರಜ್ನೆಗೆ ಬಸ್ ನಲ್ಲಿದ್ದವರೆಲ್ಲಾ ಆತನಿಗೆ ಹೃದಯತುಂಬಿ ಧನ್ಯವಾದ ಹೇಳಿದ್ದಾರೆ. ಅವತ್ತೇನಾದ್ರು ಚಾಲಕ ಯಾಮಾರಿದಿದ್ರೆ ದೊಡ್ಡ ಅನಾಹುತವೇ ನಡೆದು ಹೋಗ್ತಿತ್ತು.ಇಂಥಾ ಸಾಕಷ್ಟು ಸಂದರ್ಭ ಸನ್ನಿವೇಶಗಳು ಸಾರಿಗೆಯ 4 ನಿಗಮಗಳಲ್ಲು ನಡೆದ್ಹೋಗಿದೆ.ಹಾಗೆ ನಡೆದಾಗಲೆಲ್ಲಾ ಚಾಲಕ-ನಿರ್ವಾಹಕರು ಪ್ರಯಾಣಿಕರ ಪಾಲಿಗೆ ದೇವರಾಗಿಬಿಟ್ಟಿದ್ದಾರೆ.

ಇದನ್ನು ಸಾಮಾನ್ಯ ಘಟನೆ ಎಂದು ಬಿಟ್ಟುಬಿಡಲಿಕ್ಕೆ ಆಗುತ್ತಾ..ಖಂಡಿತಾ ಇಲ್ಲ..ಈ ಎಲ್ಲಾ ಅನಾಹುತಕ್ಕೆ ಕಾರಣ ಯಾರು..? ನಿಸ್ಸಂಶಯವಾಗಿ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ಅಧಿಕಾರಿಗಳು.ಸುಸ್ತಿತಿಯಲ್ಲಿರುವ ಬಸ್ ಗಳನ್ನು ಮಾತ್ರ ಚಾಲಕರಿಗೆ ಕೊಟ್ಟು ಕಳುಹಿಸಬೇಕು.ಬಸ್ ಕಂಡಿಷನ್ ಸರಿಯಾಗಿರಬೇಕು ಎನ್ನುವ ನಿಯಮವಿದ್ದರೂ ಅದ್ಯಾವುದು ಪಾಲನೆಯೇ ಆಗ್ತಿಲ್ಲ.ತರಿಕೆರೆಯಲ್ಲಿ ನಡೆದ ಘಟನೆಯಲ್ಲೂ ಬಸ್ ನ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಚಾಲಕನಿಗೆ ಕೊಟ್ಟಿದ್ದು ಸ್ಕ್ರಾಪ್ ಅಂದ್ರೆ ಅವಧಿ ಮೀರಿ ಯಾವುದೇ ರೀತಿಯಲ್ಲು ಬಳಕೆಗೆ ಯೋಗ್ಯವೇ ಅಲ್ಲ ಎಂದು ಸರ್ಕಾರವೇ ಡಿಕ್ಲೇರ್ ಮಾಡಿರುವ ಸ್ಕ್ರಾಪ್ ಬಸ್ ನ್ನು ಎನ್ನಲಾಗ್ತಿದೆ.ಅಂಥಾ ಬಸ್ ಕೊಟ್ಟ ಹೊರತಾಗ್ಯೂ ಚಾಲಕ ಸುಬ್ರಮಣಿ ಅವಘಡ ತಪ್ಪಿಸಿದ್ದು ಆತನ ಗ್ರೇಟ್ ನೆಸ್..ಇಲಾಖೆ ಆತನಿಗೆ ಅಭಾರಿಯಾಗಿರಬೇಕು ಅಷ್ಟೆ ಅಲ್ಲ,ಆತನನ್ನು ಕರೆದು ಸನ್ಮಾನಿಸಬೇಕು.

ಸಂಸ್ಥೆಯ ಕೇಂದ್ರ ಕಛೇರಿಯೇ ಹೊರಡಿಸಿರುವ ಸುತ್ತೋಲೆಗಳ ಪ್ರಕಾರ 13 ಲಕ್ಷ ಕಿಲೋಮೀಟರ್ ಕ್ರಮಿಸಿ ದರೆ ಅಂತಹ ವಾಹನಗಳನ್ನು ಯಾವುದೇ ಕಾರಣಕ್ಕೂ ರಸ್ತೆಗೆ ಇಳಿಸಬಾರದು.ಅದನ್ನು ನಿಷ್ಕ್ರೀಯಗೊಳಿ ಸಬೇಕು  ಅಂದ್ರೆ ಸ್ಕ್ರಾಪ್ ಮಾಡಬೇಕೆನ್ನುತ್ತದೆ.ಆದರೆ 20 ಲಕ್ಷ ಕಿಲೋಮೀಟರ್ ಮೀರಿದ್ರೂ ಅಂಥಾ ಬಸ್ ಗಳನ್ನು ರಸ್ತೆಗಿಳಿಸಿ ಪ್ರಯಾಣಿಕರ ಪ್ರಾಣದ ಜತೆ ಚೆಲ್ಲಾಟವಾಡ್ತಿದ್ದಾರಂತೆ ಸಾರಿಗೆ ಅಧಿಕಾರಿಗಳು.ಒಂದ ಮೂಲದ ಪ್ರಕಾರ 1 ಸಾವಿರಕ್ಕೂ ಹೆಚ್ಚು ಇಂಥಾ ನಿಷ್ಕ್ರೀಗೊಳ್ಳಬೇಕಾದ ಬಸ್ ಗಳು ಸಾರಿಗೆಯ ನಾಲ್ಕು ನಿಗಮಗಳಲ್ಲಿ ನಿತ್ಯವೂ ಸಂಚರಿಸುತ್ತಿದೆ ಎಂದ್ರೆ ಅದು ಬೆಚ್ಚಿಬೀಳುವ ಸಂಗತಿಯಲ್ಲದೆ ಇನ್ನೇನಲ್ವಾ

ಗುಜರಿ ಸೇರಬೇಕಾದ ಸಾವಿರಾರು ಡಕೋಟಾ ಬಸ್ ಗಳನ್ನು ಅಲರ್ಟ್ ಮಾಡಿ,ಎಫ್ ಸಿ ಸರ್ಟಿಫಿಕೇಟ್ ಮಾಡಿಸಿ ಚಾಲಕರ ಕೈಗೆ ಇಡುತ್ತಿವೆ ಸಾರಿಗೆ ನಿಗಮಗಳು.ಇಲಾಖೆಯ ಸುತ್ತೋಲೆ ಬಗ್ಗೆ ತಿಳಿಸಿದ್ರೂ ಅದ್ಯಾವುದಕ್ಕು ಕೇರ್ ಮಾಡದೆ ಅದೇ ಬಸ್ ಗಳನ್ನು ಬಲವಂತವಾಗಿ ಚಾಲಕರ ಕೈಗೆ ಇಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆನ್ನುವ ಆತಂಕಕಾರಿ ಸಂಗತಿಯನ್ನು ಬಸ್ ಗಳಲ್ಲಿ ಕೆಲಸ ಮಾಡುವ ಡ್ರೈವರ್ಸ್-ಕಂಡಕ್ಟರ್ಸ್ ಹೇಳ್ತಿದಾರೆ.

ಡಕೋಟಾ ಬಸ್ ಗಳನ್ನು ರಸ್ತೆಗಿಳಿಸುವ ಉದ್ದೇಶದ ಹಿಂದೆ ಕೆಲವು ಅಧಿಕಾರಿಗಳ ಲಂಚಗುಳಿತನ ಅಡಗಿದೆ ಎನ್ನುವ ಆರೋಪವೂ ಕೇಳಿಬಂದಿದೆ.ಸ್ಕ್ರಾಪ್ ಬಸ್ ಗಳ ದುರಸ್ತಿ ನೆವದಲ್ಲಿ ಲಕ್ಷಾಂತರ ಹಣ ಲೂಟಿ ಮಾಡುವ ಕೆಲಸವನ್ನು ಕೆಲ ಅಧಿಕಾರಿಗಳು ಮಾಡ್ತಿದ್ದಾರಂತೆ.ಅವುಗಳಿಗೆ ನಟ್ಟೂ ಬೋಲ್ಟು..ಇತರೆ ರಿಪೇರಿ..ಹೀಗೆ ಇಲ್ಲಸಲ್ಲದ ಬಿಲ್ ಗಳನ್ನು ರೆಡಿ ಮಾಡಿ ಅದನ್ನು ವರ್ಕ್ ಶಾಪ್ ಮೂಲಕ ನಗದೀಕರಿಸಿಕೊಳ್ಳುವ ದೊಡ್ಡ ದಂಧೆಯೇ ನಾಲ್ಕು ನಿಗಮಗಳಲ್ಲಿ ನಡೆಯುತ್ತಿರುವ ಮಾಹಿತಿಯಿದೆ.ಇದೆಲ್ಲಾ ಎಂಡಿಗಳಿಗೆ ಗೊತ್ತಿಲ್ವೆ..ಅಥವಾ ಸಾರಿಗೆ ಸಚಿವರಿಗೆ ತಿಳಿದಿಲ್ವೇ..ನಾಲ್ಕು ನಿಗಮಗಳ ಅಧ್ಯಕ್ಷರಿಗೆ ಗೊತ್ತಿಲ್ವೇ….ಖಂಡಿತಾ ಗೊತ್ತಿದೆ..ಆದ್ರೆ ಅದಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾತ್ರ ಪ್ರಾಮಾಣಿಕವಾಗಿ ನಡೀತಿಲ್ಲ ಅಷ್ಟೇ,.. ಹಾಗಾಗಿ ಎಷ್ಟೇ ಕ್ರಮಗಳ ಹೊರತಾಗ್ಯೂ..ಇಲಾಖೆಯ ಸುತ್ತೋಲೆಯ ಬಳಿಕವೂ ಸ್ಕ್ರಾಪ್ ಬಸ್ ಗಳನ್ನು ರಸ್ತೆಗಿಳಿಸುವ ಕೆಲಸ ಮಾತ್ರ ನಿಂತಿಲ್ಲ.

Spread the love

Leave a Reply

Your email address will not be published. Required fields are marked *

You missed