ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್ ನಟಿಸಿ ನಿರ್ದೇಶಿಸಿರುವ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತ `ಎಮರ್ಜೆನ್ಸಿ’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.
ಸಿಖ್ ಸಮುದಾಯದ ಕುರಿತ ವಿವಾದಾತ್ಮಕ ದೃಶ್ಯಗಳ ಕುರಿತು ಪಂಜಾಬ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಹಲವು ದೃಶ್ಯಗಳ ಕಡಿತಕ್ಕೆ ಸೂಚನೆ ನೀಡಿದೆ.
ಸೆನ್ಸಾರ್ ಮಂಡಳಿ ಹಲವು ದೃಶ್ಯಗಳ ಕಡಿತಕ್ಕೆ ಸೂಚನೆ ನೀಡಿದ್ದು, ಇನ್ನು ಯಾವುದೇ ಪ್ರಮಾಣ ಪತ್ರ ನೀಡದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ರಂದು ಬಿಡುಗಡೆ ಆಗಬೇಕಿದ್ದ ಎಮರ್ಜೆನ್ಸಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.
ಎಮರ್ಜೆನ್ಸಿ ಚಿತ್ರದ ಕೆಲವು ದೃಶ್ಯಗಳು ಹಲವಾರು ಸಮುದಾಯಗಳ ಭಾವನೆಗೆ ಧಕ್ಕೆ ಆಗಲಿದೆ. ಈ ಹಿನ್ನೆಲೆಯಲ್ಲಿ ದೃಶ್ಯಗಳ ಕಡಿತಕ್ಕೆ ಸೂಚಿಸಲಾಗಿದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ.
ಇದೇ ವೇಳೆ ಎಮರ್ಜೆನ್ಸಿ ಚಿತ್ರದ ಟ್ರೇಲರ್ ನಲ್ಲಿ ಹಲವು ವಿವಾದಾತ್ಮಕ ಅಂಶಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಶಿರೊಮಣಿ ಅಕಾಲಿದಳ ಕಂಗನಾ ರಾಣವತ್ ಗೆ ನೋಟಿಸ್ ಜಾರಿ ಮಾಡಿದೆ. ಚಿತ್ರವು ತಪ್ಪು ಸಂದೇಶಗಳಿಂದ ಕೂಡಿದ್ದು, ಕೋಮುಗಲಭೆಗೆ ಪ್ರಚೋದನೆ ನೀಡಲಿದೆ ಎಂದು ಆರೋಪಿಸಿದೆ.
ಅಕಾಲಿದಳದ ನೋಟಿಸ್ ಗೆ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಕಂಗನಾ ಹೇಳಿಕೆ ನೀಡಿದ್ದರು.