KANNADA CINEMA PRODUCER SAUNDARYA JAGADISH COMMITE SUCIDE…ಮೀಟರ್‌ ಬಡ್ಡಿ ಮಾಫಿಯಕ್ಕೆ ಬಲಿಯಾದ್ರಾ  ನಿರ್ಮಾಪಕ ಸೌಂದರ್ಯ ಜಗದೀಶ್‌..?!

KANNADA CINEMA PRODUCER SAUNDARYA JAGADISH COMMITE SUCIDE…ಮೀಟರ್‌ ಬಡ್ಡಿ ಮಾಫಿಯಕ್ಕೆ ಬಲಿಯಾದ್ರಾ ನಿರ್ಮಾಪಕ ಸೌಂದರ್ಯ ಜಗದೀಶ್‌..?!

ಅಪಾರ ಮೊತ್ತದ ಸಾಲಗಾರರಾಗಿದ್ದ ಜಗದೀಶ್-ಜೆಟ್‌ ಲಾಗ್‌ ಪಬ್‌ -ಫಾರ್ಮ್‌ ಹೌಸ್‌  ನ್ನೂ ಸೇಲ್‌ ಗಿಟ್ಟಿದ್ರಾ..?!

ಬೆಂಗಳೂರು: ಕನ್ನಡದ  ನಿರ್ಮಾಪಕ  ಸೌಂದರ್ಯ  ಜಗದೀಶ್ ಸೂಸೈಡ್  ಮಾಡಿಕೊಂಡಿದ್ದಾರೆ.ಅವರ ಸಾವಿಗೊಂದು ಸಾಂತ್ವನ ಹೇಳುತ್ತಾ ಜಗದೀಶ್ ಅಸಹಜ ಸಾವಿಗೆ ಕಾರಣ ಹುಡುಕೋ ಪ್ರಯತ್ನ ಮಾಡೋಣ. ಸೌಂದರ್ಯ ಜಗದೀಶ್ ಎನ್ನುವ ಬಿಂದಾಸ್ ಪ್ರೊಡ್ಯೂಸರ್ ಸಾವು ಎಲ್ಲರಿಗೂ ಅಘಾತ ತಂದಿದೆ.ಎಲ್ಲವೂ ಆರಾಮಾಗಿದ್ದರೂ ಏಕೆ ಸೂಸೈಡ್ ಮಾಡಿಕೊಂಡ್ರು ಎನ್ನುವ ಚರ್ಚೆ ಶುರುವಾಗಿದೆ.ಆದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನೋದು ಒಮ್ಮೆ ತಲೆಗೆ ಬಂದ್ ಬಿಟ್ರೆ ಮುಗೀತು ಬದುಕುಳಿಯೋ ಸಾಧ್ಯತೆನೇ ಇರೊಲ್ಲ ಎನ್ನುವಂತೆ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡ್ ಬಿಟ್ಟಿದ್ದಾರೆ.

ಸೌಂದರ್ಯ ಜಗದೀಶ್ ಅವರದು ಬಿಂದಾಸ್ ಲೈಫ್ ಸ್ಟೈಲ್. ಚಿತ್ರರಂಗದಲ್ಲಿ ಭಾರೀ ಎನ್ನುವಂತ ಚಿತ್ರಗಳನ್ನೇನು ಅವರು ಪ್ರೊಡ್ಯೂಸ್ ಮಾಡಿದವರಲ್ಲ.ಆದ್ರೆ ಚಿತ್ರರಂಗದಲ್ಲಿ ಹೆಸರು ಮಾಡ್ಬೇಕು..ತನ್ನ ಚಿತ್ರಗಳ  ಮೂಲಕ ನನ್ನನ್ನು ಗುರುತಿಸಬೇಕೆಂಬ ಕನಸು ಮಾತ್ರ ಅವರಲ್ಲಿತ್ತು.ಅದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದ್ದರು.

ಮಹಾಲಕ್ಷ್ಮಿ ಲೇ ಔಟ್ ನಲ್ಲಿ ವಾಸವಾಗಿದ್ದ ಸೌಂದರ್ಯ ಜಗದೀಶ್ ಅವರು ತಮ್ಮ ಮನೆಯಲ್ಲಿ ಭಾನುವಾರ(14-04-2024) ರಂದು ಸೂಸೈಡ್ ಮಾಡಿಕೊಂಡಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಜಗದೀಶ್ ಆತ್ಮಹತ್ಯೆಗೆ ಮೊದಲ ಕಾರಣವಾಗಿ ಚರ್ಚೆಯಾಗ್ತಿರೋದು ಮೀಟರ್ ಬಡ್ಡಿ ವ್ಯವಹಾರ.ಮೀಟರ್ ಬಡ್ಡಿ ವ್ಯವಹಾರಕ್ಕೆ ಅಪಾರ ಮೊತ್ತದ ಹಣವನ್ನು ಅವರು ಇನ್ವೆಸ್ಟ್ ಮಾಡಿದ್ರಂತೆ.ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು.ಆದ್ರೆ ಗ್ರಹಚಾರ ಕೈ ಕೊಡುತ್ತಿದ್ದಂಗೆ ಅವರ ಸಂಪತ್ತು ಕ್ರಮೇಣ ಕರಗಲಾರಂಬಿಸಿತಂತೆ.ಸಾಲ ತೀರಿಸಲಿಕ್ಕೆ ಅವರು ಎಲ್ಲೆಲ್ಲಾ ಸಾಧ್ಯವಾಗುತ್ತೋ ಅಲ್ಲೆಲ್ಲಾ ಸಾಲ ಮಾಡಿಕೊಂಡಿದ್ರಂತೆ.

ಸಾಲ ತೀರಿಸ್ಲಿಕ್ಕೆ ಆಗದೆ ಇದ್ದಾಗ ತಾವು ಕಷ್ಟಪಟ್ಟು ಗಳಿಸಿದ್ದ ಆಸ್ತಿಗಳನ್ನೆಲ್ಲಾ ಒಂದೊಂದಾಗಿ ಮಾರೊಕ್ಕೆ ಶುರುವಿಟ್ಟುಕೊಂಡಿದ್ರಂತೆ.ನ್ಯೂ ಇಯರ್ ಪಾರ್ಟಿ ಕಾಂಟ್ರವರ್ಸಿಗೆ ಕಾರಣವಾದ ಜೆಟ್ ಲಾಗ್ ಪಬ್ ನ್ನು ಕೂಡ ಇದೇ ಕಾರಣಕ್ಕೆ ಮಾರಲು ಇಟ್ಟಿದ್ದರಂತೆ.ನೆಲಮಂಗಲ ಸಮೀಪದ ವೇರ್ ಹೌಸ್ ನ್ನು ಕೂಡ ಮಾರೊಕ್ಕೆ ಮುಂದಾಗಿದ್ದರಂತೆ.

ಬಂಡವಾಳಶಾಹಿಗಳೊಂದಿಗೆ ನಿರಂತರ ಬ್ಯುಸಿನೆಸ್ ಮಾಡಿಕೊಂಡಿದ್ದ ಜಗದೀಶ್ ಪ್ರತಿಷ್ಟೆಗಾಗಿಯೇ ಬದುಕುವಂತ ಸ್ಥಿತಿಯಿತ್ತು.ಆದರೂ ಮಾಡಿದ ಸಾಲ ತೀರಿಸ್ಲಿಕ್ಕಾಗದೆ ತೀವ್ರ ಡಿಪ್ರೆಷನ್ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ್ರಾ..? ಪೊಲೀಸ್ರು ಸಧ್ಯ ಸೀಜ್ ಮಾಡಿರುವ ಮೊಬೈಲ್ ನಲ್ಲಿರುವ ಒಂದಷ್ಟು ವಿವರಗಳು ಆತ್ಮಹತ್ಯೆಗೆ ಕಾರಣ ಹೇಳಬಹುದೇನೋ..ಅಲ್ವಾ..?

ವೈಯುಕ್ತಿಕವಾಗಿ ತೀವ್ರ ನೊಂದಿದ್ರಾ..ಡಿಪ್ರೆಷನ್ ಗೆ ತೆರಳಿದ್ರಾ..?!:  ಒಂದಷ್ಟು ವಿಶ್ವಸನೀಯ ಮೂಲಗಳ ಪೈಕಿ ಸೌಂದರ್ಯ ಜಗದೀಶ್ ನೋಡೊಕ್ಕೆ ಬಿಂದಾಸ್ ಮನುಷ್ಯನಂತೆ ಕಂಡ್ರೂ ವೈಯುಕ್ತಿಕವಾಗಿ ಸಾಕಷ್ಟು ನೊಂದಿದ್ದರಂತೆ.ಅದಕ್ಕೆ ಕಾರಣಗಳೇನು ಎನ್ನುವುದು ಗೊತ್ತಾಗಿಲ್ಲ.ಮನೆಯಲ್ಲಿ ಅರಚಾಟಕಿರುಚಾಟ ಸದಾ ಕೇಳುತ್ತಿತ್ತೆಂದು ಅಕ್ಕಪಕ್ಕದವರು ಹೇಳೋದುಂಟಂತೆ.ಅಂದ್ರೆ ಜಗದೀಶ್ ಅವರು ಯಾರ ಜತೆ ಗಲಾಟೆ ಮಾಡಿಕೊಳ್ಳುತ್ತಿದ್ದರು..ಯಾವ ಕಾರಣಕ್ಕೆ ಗಲಾಟೆ ಮಾಡಿಕೊಳ್ಳುತ್ತಿದ್ದರೆನ್ನುವುದು ಗೊತ್ತಿರದಿದ್ದರೂ ಅದೆಲ್ಲಾ ವೈಯುಕ್ತಿಕ ಕಾರಣಗಳಿಗೇ ಆಗುತ್ತಿತ್ತೆನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ.

ಮನೆಯಲ್ಲಿ ಸದಾ ಆಗುತ್ತಿದ್ದ ಗಲಾಟೆಗಳಿಂದ ಜಗದೀಶ್ ನೊಂದಿದ್ದರೆನ್ನಲಾಗುತ್ತಿದೆ.ಅವರ ಧರ್ಮಪತ್ನಿದು ಸ್ವಲ್ಪ ನನ್ನದೇ ನಡೆಯಬೇಕೆನ್ನುವ ಡಾಮಿನೇಟ್ ನೇಚರ್ ಅಂತೆ.ಅದು ಜಗದೀಶ್ ಅವರಿಗೆ ಇಷ್ಟವಾಗುತ್ತಿರಲಿಲ್ಲವಂತೆ. ಕಾರಣಕ್ಕೆ ಗಂಡ ಹೆಂಡತಿ ನಡುವೆ ಗಲಾಟೆಗಳಾಗುತ್ತಿದ್ದವೆನ್ನಲಾಗಿದೆ.ತನ್ನನ್ನು ಸಿಕ್ಕಾಪಟ್ಟೆ ನಿಯಂತ್ರಿಸುತ್ತಿದ್ದ ಹೆಂಡ್ತಿ ಧೋರಣೆ ಅವರನ್ನು ಮದ್ಯದ ದಾಸರನ್ನಾಗಿ ಮಾಡಿತ್ತೆಂದು ಹೇಳುವುದುಂಟು.ಸಿಕ್ಕಾಪಟ್ಟೆ ಕುಡಿಯುತ್ತಿದ್ದರೆಂದು ಹೇಳಲಾಗುತ್ತಿದೆ.ಅದು ಅತಿರೇಕಕ್ಕೆ ಹೋಗಿ ಅವರು ವಿಷ ಸೇವಿಸಿದ್ರೆಂದು ಹೇಳಲಾಗ್ತಿದೆ.ಆದ್ರೆ ಹೆಂಡ್ತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜಗದೀಶ್ ಅವರು ಹೆಂಡ್ತಿಯಿಂದ ಕಿರಿಕಿರಿಯಾಗುತ್ತಿದೆ ಎಂಬ ಕಾರಣಕ್ಕೆ ಸೂಸೈಡ್ ಮಾಡಿಕೊಳ್ಳುವಂಥ ದುರಾದೃಷ್ಟಕರವಾದ ನಿರ್ದಾರ ಮಾಡಿದ್ರಾ…? ಸ್ವಲ್ಪ ನಂಬೊಕ್ಕೆ ಕಷ್ಟ ಎನಿಸ್ತಿದೆ.

ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ರಾ..ಇನ್ವೆಸ್ಟ್ ಮಾಡಿದ್ರಾ..? ಹೀಗೂ ಒಂದು ಮಾತಿದೆ. ಜಗದೀಶ್ ಅವರು ಮೂಲತಃ ಫೈನಾನ್ಷಿಯರ್ ಆಗಿದ್ರಿಂದ ಕೋಟ್ಯಾಂತರ ಹಣವನ್ನು ಸಿನೆಮಾ ಸೇರಿದಂತೆ ನಾನಾ ಬ್ಯುಸಿನೆಸ್ ಗೆ ಇನ್ವೆಸ್ಟ್ ಮಾಡಿರುವ ಸಾಧ್ಯತೆಗಳಿವೆ. ಬಹುಷಃ ಸಿನೆಮಾದಲ್ಲಿ ಅವರು ಹೆಚ್ಚು ಹಣ ಹೂಡಿ ಕಳೆದುಕೊಂಡಿರುವ ಸಾಧ್ಯತೆಗಳು ಕಡಿಮೆ.ಹಾಗಾದ್ರೆ ಅವರು ಎಲ್ಲಿ ಇನ್ವೆಸ್ಟ್ ಮಾಡಿದ್ರು..ಅದರ ವ್ಯವಹಾರ ಹೇಗಿತ್ತು..ಅದರಿಂದ ಪ್ರಾಣ ಕಳೆದುಕೊಳ್ಳುವಂಥ ಲಾಸ್ ಏನಾದ್ರೂ ಆಗಿತ್ತಾ..? ಏಕೆಂದರೆ ಪ್ರತಿಷ್ಟಿತ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಾಗ ಕಾಡೋ ಮೊದಲ ಅನುಮಾನವೇ ಹಣಸಾಲಹೂಡಿಕೆಯಂಥ ಕಾರಣಗಳಿರಬಹುದಾ..? ಎನ್ನುವ ಹಿನ್ನಲೆಯಲ್ಲಿ ಇಂತದೊಂದಿಷ್ಟು ಪ್ರಶ್ನೆಗಳು ಕಾಡುತ್ತಿವೆ.

ಎಲ್ಲವೂ ಅದೇಕೋ ನಿಗೂಢವಾಗಿದೆ.ಹೆಂಡತಿನೇ ತನ್ನ ಗಂಡನದು ಸೂಸೈಡ್ ಎಂದು ಹೇಳಿಕೆ ಕೊಟ್ಟಿದ್ದಾರೆ.ಪೊಲೀಸ್ರು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಗಳಿಗೆ ಕೊಟ್ಟಾಗಿದೆ.ಇನ್ನೇನಿದ್ದರೂ ಪೊಲೀಸರ ಕೆಲಸ..ವಶಪಡಿಸಿಕೊಂಡಿರುವ ಮೊಬೈಲ್ ನಲ್ಲಿರುವ ವಿವರಗಳ ಮೇಲೆ ಇನ್ ವೆಸ್ಟಿಗೇಷನ್ ಮಾಡಿ,ಅಸಹಜ ಸಾವಿಗೆ ಕಾರಣಗಳೇನು ಎನ್ನುವುದನ್ನು ಪತ್ತೆ ಮಾಡಿ ಶೀಘ್ರವೇ ಬಹಿರಂಗಪಡಿಸಲಿದ್ದಾರೆ.ಅಲ್ಲಿವರೆಗೆ ಕಾದು ನೋಡಬೇಕಿದೆಯಷ್ಟೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *