“ಸಕ್ಕರೆ ನಾಡಿನ ಅಕ್ಕರೆ” ಮಗನಾದ ಕುಮಾರಸ್ವಾಮಿ; “ಕೈ” ಶಾಸಕರನ್ನು ನಂಬಿ ಕೆಟ್ರಾ “ಸ್ಟಾರ್ ಚಂದ್ರು”

“ಸಕ್ಕರೆ ನಾಡಿನ ಅಕ್ಕರೆ” ಮಗನಾದ ಕುಮಾರಸ್ವಾಮಿ; “ಕೈ” ಶಾಸಕರನ್ನು ನಂಬಿ ಕೆಟ್ರಾ “ಸ್ಟಾರ್ ಚಂದ್ರು”

ಕೈ ಶಾಸಕರು ಹೇಳಿದಂತೆಲ್ಲಾ ಕೇಳಿ, ಕೇಳಿದ್ದಷ್ಟು ಸಂಪನ್ಮೂಲ ಹರಿಸಿದ್ರೂ ಒಲಿಯದ ವಿಜಯಲಕ್ಷ್ಮಿ

‘ಸ್ಟಾರ್ ಇನ್ಫೋಟೆಕ್’ ಉದ್ಯಮಿ ವೆಂಕಟರಮಣೇಗೌಡ ( ಸ್ಟಾರ್ ಚಂದ್ರು)
‘ಸ್ಟಾರ್ ಇನ್ಫೋಟೆಕ್’ ಉದ್ಯಮಿ ವೆಂಕಟರಮಣೇಗೌಡ ( ಸ್ಟಾರ್ ಚಂದ್ರು)

ಮಂಡ್ಯ:ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಒಂದಾಗಿದ್ದ ಮಂಡ್ಯದಲ್ಲಿ ಮಾಜಿ ಸಂಸದ, ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಮೈತ್ರಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಸ್ಟಾರ್ ಚಂದ್ರು ಅವರನ್ನು ಮತಗಳ ಅಂತರದಿಂದ ಸೋಲಿಸಿದ್ದಾರೆ.(ಸುದ್ದಿ ಪ್ರಕಟಣೆ ಆಗುವ ವೇಳೆ  1,60  ಲಕ್ಷ ಸಾವಿರ ಮತಗಳ ಅಂತರದ ಮುನ್ನಡೆ ಸಾಧಿಸಿದ್ದ ಎಚ್ ಡಿ ಕುಮಾರಸ್ವಾಮಿ)

ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ, ಕೃಷ್ಣರಾಜನಗರ ಕ್ಷೇತ್ರಗಳನ್ನು ಒಳಗೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 81.67% ಮತದಾನವಾಗಿತ್ತು.ಬೇರೆ ಜಿಲ್ಲೆಗಳಿಗೆ ಹೋಲಿಸಿದ್ರೆ ಇದನ್ನು ದಾಖಲೆ ಮತದಾನ ಎಂದೇ ಹೇಳಲಾಗಿತ್ತು.

ಬಿಜೆಪಿ ಮತ್ತು ಜೆಡಿಎಸ್ ನಡುವೆ ಏರ್ಪಟ್ಟಿದ್ದ ಮೈತ್ರಿಯ  ಅಭ್ಯರ್ಥಿಯಾಗಿ ಹಾಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಪ್ರಯತ್ನಿಸಿ ಅದು ಸಾಧ್ಯವಾಗಿರಲಿಲ್ಲ. ಕುಮಾರಸ್ವಾಮಿ ಕ್ಷೇತ್ರವನ್ನು ಜೆಡಿಎಸ್ ಗೆ ಉಳಿಸಿಕೊಂಡು ತಾವೇ ಕಣಕ್ಕಿಳಿದಿದ್ದರು. ಕುಮಾರಸ್ವಾಮಿ ಎದುರು ಪ್ರಖ್ಯಾತ ಉದ್ಯಮಿ ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕಿಳಿದಿದ್ರು. ಮಂಡ್ಯ ಲೋಕಸಭಾ ಕ್ಷೇತ್ರ ಮತ್ತೊಮ್ಮೆ ಇಡೀ ರಾಜ್ಯದ ಗಮನ ಸೆಳೆದಿತ್ತು.

ಬಹುತೇಕ ಕಾಂಗ್ರೆಸ್ ಶಾಸಕರೇ ಹೆಚ್ಚಾಗಿರುವ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ದೊಡ್ಡ ಮಟ್ಟದ ಸವಾಲು ಎದುರಿಸುತ್ತಿದ್ದರು. ಏಕೆಂದ್ರೆ  ‘ಸ್ಟಾರ್ ಇನ್ಫೋಟೆಕ್’ ಉದ್ಯಮಿ ವೆಂಕಟರಮಣೇಗೌಡ ( ಸ್ಟಾರ್ ಚಂದ್ರು) ಬೆನ್ನಿಗೆ ನಿಂತಿದ್ದಂತೆ ತೋರಿದ ಕಾಂಗ್ರೆಸ್ ಶಾಸಕರು ಸಾಕಷ್ಟು ಕೆಲಸ ಮಾಡಿದಂತೆಯೇ ತೋರಿದ್ದರು.ಆದ್ರೆ ಕುಮಾರಸ್ವಾಮಿ ಅವರ ಪ್ರಚಂಡ ಗೆಲುವನ್ನು ಗಮನಿಸಿದ್ರೆ ಎಲ್ಲರೂ ಸ್ಟಾರ್ ಚಂದ್ರು ರನ್ನು “ಮಕ್ಕಾರ್” ಮಾಡಿದ್ರಾ ಎಂದೆನಿಸುತ್ತದೆ. ಏಕೆಂದರೆ ಶಾಸಕರು ಹೇಳಿದಂಗೆಲ್ಲಾ ಕೇಳಿ, ಅವರು ಕೇಳಿದ್ದಕ್ಕಿಂತ ಹೆಚ್ಚಿನ ಸಂಪನ್ಮೂಲ ಪೂರೈಸಿದ ಹೊರತಾಗ್ಯೂ ಗೆಲುವೆನ್ನೋದು ಇರಲಿ,ನಿರೀಕ್ಷಿತ ಮಟ್ಟದ ಮತಗಳಿಸಿ ಕೊಡ್ಲಿಕ್ಕೂ ಶಾಸಕರಿಗೆ ಆಗಿಲ್ಲ ಎಂದ್ಮೇಲೆ ಅವರ ಯೋಗ್ಯತೆ ಏನೆನ್ನುವುದು ಗೊತ್ತಾಗುತ್ತದೆ.

ಮೂಲತಃ ಹಾಸನದವರಾದ ವೆಂಕಟರಮಣೇ ಗೌಡ ನೆಲೆಸಿದ್ದೆಲ್ಲಾ ಮಂಡ್ಯದ ನಾಗಮಂಗಲದಲ್ಲಿ  ಕುಮಾರಸ್ವಾಮಿ ಹಾಗೂ ಸ್ಟಾರ್ ಚಂದ್ರು ನಡುವೆ ‘ಹೊರಗಿನವರು V/s ಮಂಡ್ಯದವರು’ ಎಂಬ ಮಟ್ಟದಲ್ಲಿ ಫೈಟ್ ನಡೆದಿತ್ತು.ಆದರೆ ಅಂತಿಮವಾಗಿ ಮಂಡ್ಯದ ಕುಮಾರಸ್ವಾಮಿ ಅವರನ್ನೇ ಒಪ್ಪಿಕೊಂಡು ಸ್ಟಾರ್ ಚಂದ್ರುರನ್ನು ದಿಕ್ಕರಿಸಿದ್ದಾರೆ.ಅಷ್ಟೇ ಅಲ್ಲ ಕೈ ಶಾಸಕರಿಗೆ ಯೋಗ್ಯತೆ ಇಲ್ಲ ಎನ್ನುವ ಸಂದೇಶ ರವಾನಿಸಿದಂತಿದೆ.

ಇಡೀ ರಾಜ್ಯಕ್ಕೆ ಹೋಲಿಸಿದೆರೆ ಅತೀ ಹೆಚ್ಚಿನ ಮತದಾನವಾಗಿದ್ದು ಈ ಬಾರಿ ಮಂಡ್ಯದಲ್ಲಿ ಶೇಕಡಾ 81.67 ರಷ್ಟು ಮತದಾನವಾದಾಗ ಎಲ್ಲರಲ್ಲೂ  ಆಶ್ಚರ್ಯ ಮೂಡಿತ್ತು.ಇಷ್ಟು ಪ್ರಮಾಣದ ಮತದಾನವಾದ್ರೆ ಏನಾಗಬಹುದೆನ್ನುವ ಲೆಕ್ಕಾಚಾರದ ಬಗ್ಗೆ ಸ್ಟಾರ್ ಚಂದ್ರು ಕೇಳಿದ್ದಾಗ ಎಲ್ಲಾ ಕಾಂಗ್ರೆಸ್ ಶಾಸಕರು ನಮ್ಮ ಪರವಾಗಿಯೇ ಹೆಚ್ಚು ಮತದಾನವಾಗಿದೆ.ಗೆಲ್ಲೋದು ಶ್ಯೂರ್..ಈಗಲೇ ಲೋಕಸಭೆಗೆ ಹೋಗೊಕ್ಕೆ ಕೋಟ್ ಹೊಲಿಸಿಕೊಳ್ಳಿ ಎನ್ನುವ ರೇಂಜ್ನಲ್ಲಿ ಸುಳ್ಳು ಹೇಳಿದ್ರು.ಅದೆಲ್ಲಾ ರಿಸಲ್ಟ್ ಬಂದ ಮೇಲೆ ಚಂದ್ರುಗೆ ಚೆನ್ನಾಗಿ ಗೊತ್ತಾದಂತಿದೆ.

ಕಾಂಗ್ರೆಸ್ ಶಾಸಕರು ಏನೆಲ್ಲಾ ಪ್ರಯತ್ನ ಮಾಡಿದ್ರೂ ಅದೇನೂ ವರ್ಕೌಟ್ ಆದಂತಿಲ್ಲ.ಇಡೀ ದೇಶದ ಲೆಕ್ಕ ಒಂದಾದ್ರೆ ಮಂಡ್ಯ ಜನರ ಲೆಕ್ಕನೇ ಬೇರೆ ಎನ್ನುವುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.ಸಿಕ್ಕಾಪಟ್ಟೆ ಹಾರಾಟ-ಚೀರಾಟ ಮಾಡ್ತಿದ್ದಾರೆನ್ನುವ ಕಾರಣಕ್ಕೆ ಜೆಡಿಎಸ್ ಅಲೆಯಿದ್ದ ಹೊರತಾಗ್ಯೂ  ಮಂಡ್ಯದ ಜನ ಕುಮಾರಸ್ವಾಮಿ ಅವರ ಮಗ ನಿಖಿಲ್ ರನ್ನು ಸೋಲಿಸಿ ಸುಮಲತಾ ಅವರನ್ನು ಗೆಲ್ಲಿಸಿದ್ದರು.ಅದೇ ರೀತಿ ಕಾಂಗ್ರೆಸ್ ನ ಶಾಸಕರೇ ಬಹುತೇಕ ಹೆಚ್ಚಾಗಿದ್ರೂ ಈ ಬಾರಿ ಸ್ಟಾರ್ ಚಂದ್ರುರನ್ನು ಮೂಲೆಗೆ ತಳ್ಳಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದಾರೆ.ಆ ಮೂಲಕ ನಾವೇ ಬೇರೆ ನಮ್ಮ ಸ್ಟೈಲೇ ಬೇರೆ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ.

ಆದರೆ ಕುಮಾರಸ್ವಾಮಿಗೆ ಒಂದು ಜ್ನಾಪಕ ಇದ್ದರೆ ಒಳ್ಳೇದು..ಈಗ ಗೆದ್ದೆನೆಂಬ ಅಹಂನಲ್ಲಿ ಮಂಡ್ಯ  ಹಾಗು ಇಲ್ಲಿನ ಜನರನ್ನು ಮರೆತರೆ ಮುಂದಿನ ಬಾರಿ ಎಲ್ಲರಿಗೂ ಆದಂತೆ ಅವರಿಗೂ ಆಗಬಹುದು.ಇದೊಂದು ಎಚ್ಚರಿಕೆ ಇಟ್ಟುಕೊಂಡು ಕುಮಾರಸ್ವಾಮಿ ಕೆಲಸ ಮಾಡಿದರೆ ಒಳ್ಳೇದೆನಿಸುತ್ತದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *