ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದೇವೆ ಎಂದು ಬೀಗುತ್ತಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾಲೀಕತ್ವದ ‘ಪರಿಶ್ರಮ ನೀಟ್ ಮತ್ತು ಜೆಇಇ ಅಕಾಡೆಮಿ’ಯ ಮತ್ತೊಂದು ಕರಾಳ ಮುಖ ಈಗ ಬಯಲಾಗಿದೆ. ಸರ್ಕಾರದ ‘ಸ್ಯಾಟ್ಸ್’ (SATS) ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮೂಲಕ ಕೋಟ್ಯಂತರ ರೂಪಾಯಿಗಳ ಶೈಕ್ಷಣಿಕ ದಂಧೆ ನಡೆಸುತ್ತಿರುವುದು ದಾಖಲೆ ಸಮೇತ ಬಹಿರಂಗವಾಗಿದೆ.
ಏನಿದು ‘ಸ್ಯಾಟ್ಸ್’ (SATS) ಹಗರಣ? ನೋಡೊಣ ಬನ್ನಿ..
ವಿದ್ಯಾರ್ಥಿಗಳ ಪ್ರಗತಿ ಮತ್ತು ಹಾಜರಾತಿಯನ್ನು ಪತ್ತೆಹಚ್ಚಲು ಶಿಕ್ಷಣ ಇಲಾಖೆಯು ‘ಸ್ಟೂಡೆಂಟ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್’ (SATS) ಬಳಸುತ್ತದೆ. ನಿಯಮದ ಪ್ರಕಾರ, ಪ್ರತಿ ಸೆಕ್ಷನ್‌ನಲ್ಲಿ ಕೇವಲ 80 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಆದರೆ, ಪರಿಶ್ರಮ ಅಕಾಡೆಮಿಯು ಈ ನಿಯಮವನ್ನು ಗಾಳಿಗೆ ತೂರಿ ಬೃಹತ್ ವಂಚನೆ ಎಸಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅನುಮತಿ ಮೀರಿ ದಾಖಲಾತಿ: ದಾಖಲೆಗಳ ಪ್ರಕಾರ ಅಕಾಡೆಮಿಗೆ ಕೇವಲ 3 ರಿಂದ 4 ಸೆಕ್ಷನ್‌ಗಳನ್ನು ನಡೆಸಲು ಮಾತ್ರ ಅವಕಾಶ ನೀಡಲಾಗಿದೆ (ಅಂದರೆ ಸುಮಾರು 320 ವಿದ್ಯಾರ್ಥಿಗಳು). ಆದರೆ, ಅಕಾಡೆಮಿಯಲ್ಲಿ ವಾಸ್ತವವಾಗಿ 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಲೆಕ್ಕಕ್ಕೆ ಸಿಗದ 430 ವಿದ್ಯಾರ್ಥಿಗಳು: ಸುಮಾರು 430 ವಿದ್ಯಾರ್ಥಿಗಳ ಮಾಹಿತಿಯನ್ನು ಸ್ಯಾಟ್ಸ್ ವ್ಯವಸ್ಥೆಯಲ್ಲಿ ಅಪ್‌ಲೋಡ್ ಮಾಡದೆ, ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ.
ಕೋಟ್ಯಂತರ ರೂಪಾಯಿ ಲೂಟಿ: ಪ್ರತಿ ವಿದ್ಯಾರ್ಥಿಯಿಂದ ₹4 ರಿಂದ ₹4.5 ಲಕ್ಷ ರೂಪಾಯಿ ಶುಲ್ಕ ಪಡೆಯುವ ಅಕಾಡೆಮಿಯು, ಈ ಹೆಚ್ಚುವರಿ ವಿದ್ಯಾರ್ಥಿಗಳಿಂದಲೇ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದೆ ಎಂಬ ಆರೋಪ ಪಾಠಶಾಲೆ ಮಾಡಿರುವ ದೂರಿನಲ್ಲಿದೆ.
ಅಧಿಕಾರಿಗಳ ‘ಕೈ’ವಾಡ: ಡಿಡಿಪಿಯು ಮನೋಹರ್ ಕೊಳ್ಳರೇ ಕಿಂಗ್‌ಪಿನ್?
ಈ ಬೃಹತ್ ಹಗರಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಹೆಸರಿಸಲಾಗಿದೆ.

ಮನೋಜ್ ಮನೋಹರ್ ಕೊಳ್ಳ (DDPU, ಬೆಂಗಳೂರು ದಕ್ಷಿಣ ಜಿಲ್ಲೆ): ಇವರೇ ಈ ಹಗರಣದ ಮುಖ್ಯಸ್ಥ ಎಂಬ ಆರೋಪವಿದ್ದು, ಇಲಾಖೆಯ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆನ್ನ ಲಾಗಿದೆ. ಇವರ ಘನ ಅಧ್ಯಕ್ಷತೆಯಲ್ಲೇ ಇಷ್ಟೆಲ್ಲಾ ನಡೆದಿದೆ ಎನ್ನುವ ಮಾತುಗಳಿವೆ. ಅಕ್ರಮ ನಡೆದಿದೆ ಎನ್ನುವ ಮಾಹಿತಿಯನ್ನು ಕೊಡೋದು ಅವರೇ,ಆನಂತರ ಅದಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡೋದೇ ಅವರೇ..ಸ್ಯಾಟ್ಸ್ ಬಗ್ಗೆ ಸಣ್ಣ ಧ್ವನಿಯನ್ನೂ ಎತ್ತಬಾರದು ಎಂದು ಪಾಠಶಾಲೆ ಸಂಚಾಲಕ ಗಂಗಾಧರ್ ಅವರ ಬಳಿ ಮನವಿ ಮಾಡಿಕೊಂಡಿರುವುದು ಇದೀಗ ಬಯಲಾಗಿದೆ.ತಾನು ತುಂಬಾ ಪ್ರಾಮಾಣಿಕವಾಗಿದ್ದರೆ ಏಕೆ ಈ ರೀತಿಯಾಗಿ ಮನವಿ ಮಾಡಿಕೊಳ್ಳಬೇಕಿತ್ತು ಎನ್ನುವ ಅನುಮಾನ ಕಾಡೋದು ಸಹಜ. ಇವರ ಈ ಕೆಲಸಕ್ಕೆ ಅವರ ಜೊತೆಗೆ ಸಹಾಯಕ ನಿರ್ದೇಶಕರಾದ ಗಿರೀಶ್ ತನೋಪಿ, ಶಫಿ ಅಹಮದ್ ಮತ್ತು ತರುಣ್ ಅವರು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಯಾಟ್ಸ್ ಸಿಸ್ಟಮ್ ಲಾಕ್ ಆಗಿದ್ದರೂ ಅಧಿಕಾರಿಗಳು ಅದನ್ನು ಅನ್‌ಲಾಕ್ ಮಾಡಿ ಅಕ್ರಮವಾಗಿ ಅಡ್ಮಿಷನ್ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ರಾತ್ರೋರಾತ್ರಿ ಸ್ಯಾಟ್ಸ್ ಅಂಕಿ-ಅಂಶಗಳನ್ನು ತಿದ್ದಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಾಸಕ ಪ್ರದೀಪ್ ಈಶ್ವರ್ ಮತ್ತು ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ
“ತಾವು ಪ್ರಾಮಾಣಿಕ ತೆರಿಗೆದಾರ” ಎಂದು ಮಾಧ್ಯಮಗಳ ಮುಂದೆ ಹೇಳಿಕೊಳ್ಳುವ ಶಾಸಕ ಪ್ರದೀಪ್ ಈಶ್ವರ್ ಅವರು, ಸ್ಯಾಟ್ಸ್‌ನಲ್ಲಿ ಕಡಿಮೆ ವಿದ್ಯಾರ್ಥಿಗಳ ಲೆಕ್ಕ ತೋರಿಸಿ ಸರ್ಕಾರಕ್ಕೆ ಸಲ್ಲಿಸಬೇಕಾದ ಹಣವನ್ನು ವಂಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮತ್ತೊಂದೆಡೆ, ಈ ಅಕ್ರಮವನ್ನು ತನಿಖೆ ಮಾಡಲು ಮುಂದಾಗಿರುವ ಪ್ರಾಮಾಣಿಕ ಅಧಿಕಾರಿಗಳಾದ ಪಿಯು ಮಂಡಳಿ ನಿರ್ದೇಶಕ ಭರತ್ ಮತ್ತು ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ಮೇಲೆ ಸಚಿವ ಮಧು ಬಂಗಾರಪ್ಪ ಅವರು ತೀವ್ರ ಒತ್ತಡ ಹಾಕುತ್ತಿದ್ದಾರೆ ಎಂಬ ವದಂತಿಗಳು ಇಲಾಖೆಯ ಒಳಗೆ ಚರ್ಚೆಯಾಗುತ್ತಿವೆ. ಪಕ್ಷದ ಶಾಸಕರನ್ನ ಸಚಿವರು ಬಚಾವ್ ಮಾಡಲು ಹೀಗೆಲ್ಲಾ ಮಾಡುತಿದ್ದಾರೆ ಎನ್ನಲಾಗುತ್ತಿದೆ. ಹೀಗೆನಾದರು ಮಾಡಿದ್ದೆ ಆದಲ್ಲಿ ಸಚಿವರೂ ಕೂಡಾ ತಲೆದಂಡ ಹೊರಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂಬಂತಾಗಿದೆ.
ಏಕೆಂದರೆ ಪ್ರದೀಪ್ ಈಶ್ವರ್ ಕೈ ಪಕ್ಷದ ಶಾಸಕರಾಗಿರುವುದರಿಂದ ಅವರನ್ನು ರಕ್ಷಿಸುವ ಕೆಲಸ ಮಧು ಬಂಗಾರಪ್ಪ ಮಾಡುತ್ತಾರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ರೀತಿಯದಾದ್ ಭರವಸೆಯನ್ನು ಅವರು ಈ ಮೊದಲೇ ನೀಡಿದ್ದಾರೆನ್ನುವ ಮಾತುಗಳಿವೆ.ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮ-ಹಗರಣಗಳನ್ನು ಸರಿಪಡಿ ಸುವುದು ಮಧು ಬಂಗಾರಪ್ಪ ಅವರ ಮೊದಲ ಆಧ್ಯತೆ ಆಗಬೇಕಿತ್ತು.ಆದರೆ ದುರಾದೃಷ್ಟವಶಾತ್ ಸ್ವಪಕ್ಷದವರ ಅಭಿಮಾನದಲ್ಲಿ ಕುರುಡಾ ಗಿರುವಂತೆ ಅವರು ವರ್ತಿಸುತ್ತಿ ದ್ದಾರೆ.
ಈ ಕಾರಣಕ್ಕಾಗಿ ಪರಿಶ್ರಮದ ವಿಚಾರದಲ್ಲಿ ಎಷ್ಟೇ ಆಪಾದನೆ ಬಂದರೂ ಅದರ ವಿರುದ್ಧ ಒಂದೇ ಒಂದು ಕಡತ ಕೂಡ ಸೃಷ್ಟಿಯಾಗಬಾರದೆನ್ನುವ ಫರ್ಮಾನ್ ಹೊರಡಿಸಿದ್ದಾರೆನ್ನುವ ಮಾತುಗಳಿವೆ.ರಶ್ಮಿ ಮಹೇಶ್, ಭರತ್ ಅವರಂಥ ಖಡಕ್ ಅಧಿಕಾರಿಗಳಿಗೆ ಇದನ್ನೆಲ್ಲಾ ಸಹಿಸಿಕೊಂಡಿರುವುದು ಆಗುತ್ತಿಲ್ಲ..ತಮ್ಮಲ್ಲಿ ಕಸುವಿರುವವ ರೆಗೂ ಪರಿಶ್ರಮದ ಅಕ್ರಮಕ್ಕೆ ಅವಕಾಶ ಮಾಡಿಕೊಡಬಾರದೆನ್ನುವ ಬಿಗಿಪಟ್ಟನ್ನು ಇಟ್ಟುಕೊಂಡು ಮುಂದುವರೆದಿದ್ದಾರೆ.ಆದರೆ ಇವರಿಬ್ಬರು ಇದ್ದರೇ ನೇ ಅಲ್ವಾ ಸಮಸ್ಯೆ ಎನ್ನುವ ಕಾರಣಕ್ಕೆ ಅವರನ್ನೇ ಎತ್ತಂಗಡಿ ಮಾಡುವ ಹುನ್ನಾರವೂ ಸಚಿವ ಮಧು ಬಂಗಾರಪ್ಪ ಅವರ ಘನ ಆಧ್ಯಕ್ಷತೆಯಲ್ಲಿ ನಡೆಯುತ್ತಿದೆ ಎನ್ನುವ ಸುದ್ದಿಗಳು ಇಲಾಖೆ ಒಳಗಿಂದಲೇ ಕೇಳಿಬರುತ್ತಿವೆ.ಇದು ಸತ್ಯವೇ ಆಗಿದ್ದಲ್ಲಿ ಮಧು ಬಂಗಾರಪ್ಪ ಅವರು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದುಬಿಟ್ರಾ ಎಂಬ ಬೇಸರ ಮೂಡದೆ ಇರೊಲ್ಲ.
ಇದನ್ನೂ ಓದಿ | ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?
‘ಪಾಠಶಾಲೆ’ ಸಂಸ್ಥೆಯ ನಿಲ್ಲದ ಸಮರ-ನ್ಯಾಯ ಸಿಗುವವರೆಗೂ ಹೋರಾಟ ಬಿಡುವುದಿಲ್ಲ.
ಈ ಅಕ್ರಮದ ವಿರುದ್ಧ ‘ಪಾಠಶಾಲೆ’ ಎಂಬ ಸಂಸ್ಥೆಯು ದಾಖಲೆ ಸಮೇತ ಪದವಿ ಪೂರ್ವ ಶಿಕ್ಷಣ ಮಂಡಳಿಗೆ ದೂರನ್ನು ಸಲ್ಲಿಸಿದೆ. ಅಕಾಡೆಮಿಯು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವು ದಾಗಿ ನೀಡುತ್ತಿರುವ ಭರವಸೆಗಳು ಕೇವಲ ಸುಳ್ಳು, ಇದು ಸಂಸ್ಥೆಯು ಕೇವಲ ನೂರಾರು ಕೋಟಿ ರೂಪಾಯಿಗಳ ಶೈಕ್ಷಣಿಕ ದಂಧೆ ನಡೆಸಲಾಗುತ್ತಿದೆ ಎಂದು ಸಂಸ್ಥೆ ದೂರಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕು ಮತ್ತು ಭ್ರಷ್ಟ ಅಧಿಕಾರಿಗಳು ಹಾಗೂ ಅಕಾಡೆಮಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರಾದ ಗಂಗಾಧರ್ ಅವರು ಒತ್ತಾಯಿಸಿದ್ದಾರೆ.
ಅದೇನೇ ಆಗಲಿ, ಪರಿಶ್ರಮದ ಸ್ಯಾಟ್ಸ್ ಹಗರಣ ಪ್ರದೀಪ್ ಈಶ್ವರ್ ಗೆ ದೊಡ್ಡ ಸಂಕಷ್ಟ ತರುವ ಸಾಧ್ಯತೆಗಳಿದ್ದು , ಸಚಿವ ಮಧು ಬಂಗಾರಪ್ಪ , ಸ್ವಪಕ್ಷದ ಶಾಸಕ ಎನ್ನುವ ಮಮಕಾರ ಬಿಟ್ಟು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಮುಂದಾದ್ರೆ ಇಡೀ ಹಗರಣಕ್ಕೆ ಒಂದು ತಾರ್ಕಿಕ ಅಂತ್ಯ ದೊರೆಯಲು ಸಾಧ್ಯ.











