advertise here

Search

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!


ಹೀಗೊಂದು ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.ಚಿಕ್ಕಾಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಮಾಲೀಕತ್ವದ ಪರಿಶ್ರಮ ಶಿಕ್ಷಣ ಸಂಸ್ಥೆ ಹೆಸರಲ್ಲಿ ಅವರು ನಡೆಸುತ್ತಿದ್ದಾರೆ ಎನ್ನಲಾಗಿರುವ ಬೃಹತ್‌ ಅಕ್ರಮವನ್ನು ಪಾಠಶಾಲೆ ನಾಳೆ ಜಗಜ್ಜಾಹೀರುಗೊಳಿಸಲಿದೆಯಂತೆ.

ಪರಿಶ್ರಮ ಜೆಇಇ ಹಾಗೂ ನೀಟ್‌ ಅಕಾಡೆಮಿಗೆ ಪರ್ಮಿಷನ್‌ ಪಡೆದು ಆ ಸೆಂಟರ್‌ ಗಳಲ್ಲಿ ಅಕ್ರಮವಾಗಿ ಪಿಯು ಕಾಲೇಜ್‌ ( ಮಲ್ಲತ್ತಹಳ್ಳಿಯಲ್ಲಿ ಮಾತ್ರ ಪಿಯು ಕಾಲೇಜಿಗೆ ಅವಕಾಶ ನೀಡಿರುವದು, ಆದ್ರೆ ಪ್ರದೀಪ್‌ ಈಶ್ವರ್‌ ಮೂರು ಕಡೆ ಅನಧೀಕೃತವಾಗಿ ಕಾಲೇಜ್‌ ನಡೆಸುತ್ತಿದ್ದಾರೆನ್ನುವುದನ್ನು ತನಿಖಾ ವರದಿಯಲ್ಲೇ ಉಲ್ಲೇಖಿಸಲಾಗಿದೆ). ಕಾಲೇಜ್‌ ನಡೆಸುತ್ತಿರುವುದು ಸೇರಿದಂತೆ ಪರಿಶ್ರಮದ ಹೆಸರಲ್ಲಿ ನಡೆಸುತ್ತಿರುವ ಬಹುಕೋಟಿ ಮೊತ್ತದ ಶೈಕ್ಷಣಿಕ ಅಕ್ರಮವನ್ನು ಪಾಠಶಾಲೆ ಎಳೆ ಎಳೆಯಾಗಿ ನಾಳೆಯ ಸುದ್ದಿಗೋಷ್ಟಿಯಲ್ಲಿ ಅನಾರಣ ಮಾಡಲಿದ್ದಾರಂತೆ.

ನಾಳೆ ಬೆಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ಪಾಠಶಾಲೆ ಎನ್‌ ಜಿಓದ ಸಂಚಾಲಕ ಗಂಗಾಧರ್‌, ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ  ಪ್ರದೀಪ್‌ ಈಶ್ವರ್‌ ಅವರ ಮಾಲೀಕತ್ವದ  ಪರಿಶ್ರಮ  ನೀಟ್‌ ಮತ್ತು ಜೆಇಇ ಅಕಾಡೆಮಿ ಹೆಸರಿನಲ್ಲಿ ನಡೆಯುತ್ತಿರುವ ನೂರಾರು ಕೋಟಿ  ಶೈಕ್ಷಣಿಕ ದಂಧೆಯ  ಸ್ಪೋಟಕ ಮಾಹಿತಿಯನ್ನು ದಾಖಲೆಗಳ ಸಮೇತ ಬಿಡುಗಡೆಗೊಳಿಸಲಿರುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಚಿಕ್ಕಾಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅವರು ಪರಿಶ್ರಮ ಎನ್ನುವ ನೀಟ್/ಜೆಇಇ ತರಬೇತಿ ಅಕಾಡೆಮಿಯನ್ನು ಪ್ರಾರಂಭಿಸಿ ಮಕ್ಕಳಿಗೆ ಸ್ಪರ್ದಾತ್ಮಕವಾಗಿ ತರಬೇತುಗೊಳಿಸುವ ಕೆಲಸ ಮಾಡುತ್ತಿದ್ದಾರೆನ್ನುವುದು ತಮಗೆಲ್ಲರಿಗೂ ತಿಳಿದ ವಿಚಾರ. ಪ್ರದೀಪ್‌ ಈಶ್ವರ್‌ ಅವರು ಮಾದ್ಯಮಗಳ ಮುಂದೆಲ್ಲಾ ಕೆಲವೇ ಕೆಲವು ಸಾವಿರಗಳಲ್ಲಿ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಜೆಇಇ/ನೀಟ್‌ ತರಬೇರಿ ಕೊಟ್ಟು ಎಂಜಿನಿಯರ್‌/ವೈದ್ಯರುಗಳನ್ನಾಗಿ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ.ಆದರೆ ಅದೆಲ್ಲಾ ಹಸಿ…ಹಸಿ..ಹಸಿ ಸುಳ್ಳು ಎನ್ನುವುದು ಗಂಗಾಧರ್‌ ಮಾತು.

ALSO READ :  "eV ಬಸ್‌" ಡ್ರೈವರ್‌ ಗಳಿಗೆ "ಗೇಟ್‌ ಪಾಸ್"..! "ಕಿಲ್ಲರ್‌" ಕಳಂಕ ತೊಡೆದುಕೊಳ್ಳಲು "ಪ್ಲ್ಯಾನ್‌".!

ಏಕೆಂದರೆ ಅವರು ಶಿಕ್ಷಣ ಇಲಾಖೆಯಿಂದ ಪಡೆದಿರುವ ಅನುಮತಿಯೇ ಒಂದು.ಆದರೆ ನಡೆಸುತ್ತಿರುವುದೇ ಇನ್ನೊಂದು.ಶೈಕ್ಷಣಿಕವಾಗಿ ಅವರು ಮಾಡುತ್ತಾ ಬಂದಿರುವ ನೂರಾರು ಕೋಟಿ ಹಗರಣದ ಸ್ವರೂಪ ಎಂತದ್ದೆನ್ನುವುದನ್ನು ಶೈಕ್ಷಣಿಕ ಎನ್‌ ಜಿಓ ಆಗಿ ಕೆಲಸ ಮಾಡುತ್ತಿರುವ ಪಾಠಶಾಲೆ ಎಳೆ ಎಳೆಯಾಗಿ ಸಾಕ್ಷ್ಯಗಳ ಸಮೇತ ಕ್ರೋಢೀಕರಿಸಿಟ್ಟು ಕೊಂಡಿದೆ ಎಂದು ಅವರು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ತಿಳಿಸಿದ್ದಾರೆ.

ಸನ್ಮಾನ್ಯ ಪ್ರದೀಪ್‌ ಈಶ್ವರ್‌ ಎಂಬ ಶಾಸಕ ತನ್ನ ಅಧಿಕಾರ/ಸ್ಥಾನಮಾನವನ್ನು ಹೇಗೆಲ್ಲಾ ದುರುಪಯೋಗಪಡಿಸಿಕೊಂಡು ಸಾವಿರಾರು ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡಿದ್ದಾನೆ ಎನ್ನುವುದು ಸಾರ್ವಜನಿಕವಾಗಿ ಬಹಿರಂಗವಾಗಬೇಕಿದೆ.ಆತನ ಮುಖವಾಡ ಬಯಲಾಗಲೇಬೇಕಿದೆ.ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಂಕುಬೂದಿ ಎರಚುತ್ತಿರುವ ವಂಚನೆ ತಿಳಿಯಲೇಬೇಕಿದೆ.ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಾ ಗೊತ್ತಿದ್ದರೂ ಕ್ರಮ ಕೈಗೊಳ್ಳದೆ ಮೌನಿಯಾಗಿರುವ ಶಿಕ್ಷಣ ಸಚಿವ ಮಧುಬಂಗಾರಪ್ಪ ಹಾಗೂ ಅಧಿಕಾರಿಗಳಿಗೆ ವಾಸ್ತವ ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ.

ಈ ಎಲ್ಲಾ ಕಾರಣಗಳಿಂದಾಗಿ ಪಾಠಶಾಲೆ ಕಳೆದೊಂದು ವರ್ಷದಿಂದ ನಿರಂತರವಾಗಿ ಕಲೆ ಹಾಕಿಕೊಂಡು ಬಂದಿರುವ ಅಕ್ರಮದ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಲು ನಿರ್ದರಿಸಿದ್ದು ದಾಖಲೆಗಳ ಬಿಡುಗಡೆಯನ್ನು ತಮ್ಮ ಮಾದ್ಯಮಗಳ ಮುಂದೆ ಅನಾವರಣಗೊಳಿಸಲು ನಿರ್ದರಿಸಿದ್ದೇವೆ.ಯಾವುದೇ ವಿಷಯ ಸಾರ್ವಜನಿಕರಿಗೆ ತಿಳಿಯಬೇಕಾದರೆ ಸಮಾಜದ ಕಣ್ಣುಗಳಾಗಿ ಇರುವ ಮಾದ್ಯಮಗಳ ಪಾತ್ರ ದೊಡ್ಡದಿರುತ್ತೆ.ಹಾಗಾಗಿ ಮೇಲ್ಕಾಣಿಸಿದ ದಿನದಂದು   ದಯವಿಟ್ಟು ಪತ್ರಿಕಾಗೋಷ್ಟಿಗ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಟ್ಟು ಪರಿಶ್ರಮ ಅಕ್ರಮದ ಬಗ್ಗೆ ವರದಿಯನ್ನು ಮಾಡಬೇಕೆಂದು ಅವರು ಮಾದ್ಯಮಗಳಲ್ಲಿ ಮನವಿ ಮಾಡಿಕೊಂಡಿಡಿದ್ದಾರೆ. ಹಾಗಾಗಿ ನಾಳೆ ಮದ್ಯಾಹ್ನ ೧ ಗಂಟೆಗೆ ನಿಗಧಿಯಾಗಿರುವ ಸುದ್ದಿಗೋಷ್ಟಿ ಸಾಕಷ್ಟು ಕುತೂಹಲ ಮೂಡಿಸಿದೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top