ರಾಜ್ಯಪಾಲರು ತಮ್ಮ ವಿರುದ್ಧ ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಗೆ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 9ಕ್ಕೆ ಮುಂದೂಡಿಕೆಯಾಗಿದೆ.
ಸೋಮವಾರ ಸುದೀರ್ಘ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸೆಪ್ಟೆಂಬರ್ 12ರಂದು ಮಧ್ಯಂತರ ತೀರ್ಪು ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಅದಕ್ಕೂ ಮೊದಲು ಎರಡೂ ಕಡೆಯ ವಾದವನ್ನು ಪೂರ್ಣಗೊಳಿಸಲು ಸೂಚಿಸಿತು.
ರಾಜ್ಯಪಾಲರಿಗೆ ದೂರು ನೀಡಿದ್ದ ಸ್ನೇಹಮಯಿ ಪ್ರದೀಪ್ ಪರ ವಕೀಲ ರಾಘವನ್ ವಾದ ಮಂಡಿಸಿದರು. ರಾಘವನ್ ವಾದದ ಮೇಲೆ ಪ್ರತಿವಾದ ನಡೆಸಲು ಒಂದು ವಾರದ ಕಾಲವಕಾಶವನ್ನು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸಮಯಾವಕಾಶ ಕೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಪರ ವಾದ ಮಂಡಿಸಲಿರುವ ಅಭಿಷೇಕ್ ಮನು ಸಿಂಘ್ವಿ ಅಡ್ವೋಕೇಟ್ ಜನರಲ್ ವಾದ ಮಂಡಿಸಿದ ನಂತರ ವಾದ ಮಂಡಿಸಲು ನಮಗೆ ಸಮಯ ನಿಗದಿಪೆಇಸಬೇಕು ಎಂದು ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ವಾದ- ಪ್ರತಿವಾದ ಬೇಗ ಮುಗಿಸಿ ಈಗಾಗಲೇ ಸಮಯ ಹೆಚ್ಚು ಪಡೆದಿದೆ ಎಂದು ನ್ಯಾಯಮೂರ್ತಿ ಹೇಳಿದರು. ನಂತರ ಮನು ಸಿಂಘ್ವಿ ಅವರಿಗೆ ಸೆಪ್ಡೆಂಬರ್ 12ರಂದು ವಾದ ಮಂಡಿಸಲು ದಿನಾಂಕ ನಿಗದಿಪಡಿಸಿದರು.
ಸೆಪ್ಟೆಂಬರ್ 12ರಂದೇ ಮಧ್ಯಂತರ ಆದೇಶ ಹೊರಬೀಳುವ ಸಾಧ್ಯತೆ ಇದ್ದು, ಅಲ್ಲಿಯವರೆಗೆ ಸಿದ್ದರಾಮಯ್ಯಗೆ ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಅನುಮತಿ ಪ್ರಕರಣದಲ್ಲಿ ರಿಲೀಫ್ ಪಡೆದಿದ್ದಾರೆ ಎನ್ನಬಹುದು.