ಸಾರಿಗೆ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘಟನೆಗಳ ಒತ್ತಾಯಕ್ಕೆ ಮಣಿದು ವರ್ಗಾವಣೆ.?!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ) ಗೆ ನೂತನ ಎಂಡಿಯಾಗಿ ಐಎಎಸ್ ಅಧಿಕಾರಿ ರಾಮಚಂದ್ರನ್ ನಿಯೋಜನೆಗೊಂಡಿದ್ದಾರೆ.

ರಾಜ್ಯ ಸರ್ಕಾರದಿಂ ಹೊರಟಿರುವ ವರ್ಗಾವಣೆ ಆದೇಶದಲ್ಲಿ ಹಾಲಿ ಎಂಡಿಯಾಗಿರುವ ಸತ್ಯವತಿ ಅವರನ್ನು ವರ್ಗಮಾಡಿ ರಾಮಚಂದ್ರನ್ ಅವರನ್ನು ನಿಯೋಜನೆ ಮಾಡಲಾಗಿದೆ.ಅಂದ್ಹಾಗೆ ಸತ್ಯವತಿ ಅವರಿಗೆ ಯಾವುದೇ ಜಾಗವನ್ನು ತೋರಿಸದೆ ವರ್ಗ ಮಾಡಲಾಗಿದೆ.

ಅಂದ್ಹಾಗೆ ರಾಮಚಂದ್ರನ್ ಅವರು ಬಿಬಿಎಂಪಿಯಲ್ಲಿ ಚುನಾವಣಾ ವಿಭಾಗದಲ್ಲಿ ವಿಶೇಷ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು.ಚುನಾವಣೆಯಲ್ಲಿ ಆಗಬೇಕಾದ ಸಾಕಷ್ಟು ಸುಧಾರಣೆಗಳ ಬಗ್ಗೆ ಹೆಚ್ಚಿನ ಮುತುವರ್ಜಿ ಕೆಲಸ ಮಾಡುತ್ತಿದ್ದರು.ಆದರೆ ಅವರ ಸೇವೆ ಇಲ್ಲಿಗಿಂತ ಬಿಎಂಟಿಸಿಗೆ ಹೆಚ್ಚಿನ ರೀತಿಯಲ್ಲಿ ಇದೆ ಎನ್ನುವ ಅಂಶವನ್ನು ಮನಗಂಡ ಸರ್ಕಾರ ಸತ್ಯವತಿ ಅವರನ್ನು ವರ್ಗ ಮಾಡಿ ಅವರ ಸ್ಥಾನಕ್ಕೆ ರಾಮಚಂದ್ರನ್ ಅವರನ್ನು ನಿಯೋಜಿಸಿದೆ.

ಅಂದ್ಹಾಗೆ ಸತ್ಯವತಿ ಅವರ ವಿರುದ್ಧ ಸಾಕಷ್ಟು ಗಂಭೀರ ಆಪಾದನೆಗಳಿದ್ದವು.ಅವರ ಕಾರ್ಯವೈಖರಿ ಸಾರಿಗೆ ನಿಗಮದಲ್ಲಿ ಸಾರಿಗೆ ಸಿಬ್ಬಂದಿ ವ್ಯಾಪ್ತಿಯಲ್ಲಿ ಖಂಡನೆಗೆ  ಗುರಿಯಾಗಿತ್ತು.ಸಾರಿಗೆ ಸಿಬ್ಬಂದಿಗೆ ಇಲಾಖೆಯ ಕಚೇರಿಯ ಬಾಗಿಲನ್ನೇ ಬಂದ್ ಮಾಡಿದ ಬಹುದೊಡ್ಡ ಆಪಾದನೆಯಿತ್ತು.ಇದಲ್ಲದೇ ಸಾರಿಗೆಯೂನಿಯನ್ ಗಳು ಕೂಡ ಸತ್ಯವತಿ ಅವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದರೆಂದು ಆಪಾದಿಸಿ ಅವರನ್ನು ವರ್ಗ ಮಾಡುವಂತೆ ಸರ್ಕಾರ ಹಾಗೂ ಸಾರಿಗೆಸಚಿವರಿಗೆ ಪತ್ರವನ್ನೂ ಬರೆದಿದ್ದವು.

ಬಹುಷಃ ಈ ಎಲ್ಲಾ ಅಂಶಗಳನ್ನು ಗಮನಿಸಿಯೇ ಸರ್ಕಾರ ಅಂತಿಮವಾಗಿ ಸತ್ಯವತಿ ಅವರನ್ನು ಬದಲಿಸಿರಬಹುದೆನ್ನುವ ಮಾತುಗಳು ಸಾರಿಗೆ ಇಲಾಖೆ ವಲಯದಲ್ಲಿ ಕೇಳಿಬರಲಾರಂಭಿಸಿದೆ.

ನೂತನ ಎಂಡಿಯಾಗಿ ನೇಮಕಗೊಂಡಿರುವ ರಾಮಚಂದ್ರನ್ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ.ಹಾಗೆಯೇ ಸಾರಿಗೆ ನಿಗಮಗಳಲ್ಲಿ ಸಾರಿಗೆ ಸಿಬ್ಬಂದಿ ಹಾಗೂ ಎಂಡಿ ನಡುವೆ ಇಲ್ಲವಾಗಿದ್ದ ಸಮನ್ವಯಕ್ಕೆ ಅವರು ನಾಂದಿ ಹಾಡುವಂತಾಗಲಿ..ಸಾರಿಗೆ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸುವಂತಾಗಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆ.

Spread the love

Leave a Reply

Your email address will not be published. Required fields are marked *