“ಕ್ರೈಸ್ತ-ಕನ್ನಡ”ಪರ ಹೋರಾಟಗಳ “ಸಾಕ್ಷಿಪ್ರಜ್ಞೆ”ರಫಾಯಲ್‌ ರಾಜ್‌ “ಕ್ರಿಸ್ತೈಕ್ಯ”

“ಕ್ರೈಸ್ತ-ಕನ್ನಡ”ಪರ ಹೋರಾಟಗಳ “ಸಾಕ್ಷಿಪ್ರಜ್ಞೆ”ರಫಾಯಲ್‌ ರಾಜ್‌ “ಕ್ರಿಸ್ತೈಕ್ಯ”

ಬೆಂಗಳೂರು: ಇದು ಕ್ರೈಸ್ತ ಸಮುದಾಯದ ಮಟ್ಟಿಗೆ ದೊಡ್ಡ ನಷ್ಟ ಹಾಗೂ ನೋವಿನ ಸಂಗತಿ.ಕ್ರೈಸ್ತಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು  ಹೋರಾಡುತ್ತಿದ್ದ, ಹೋರಾಟಗಳ ಸಾಕ್ಷಿಪ್ರಜ್ಞೆಯಂತಿದ್ದ   ಕ್ರೈಸ್ತ ಮುಖಂಡ, ಕನ್ನಡ ಪರ ಹೋರಾಟಗಾರ,ಕ್ರೈಸ್ತ ಸಮದಾಯದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ರಫಾಯಲ್‌ ರಾಜ್‌ ಇನ್ನಿಲ್ಲ.ತಮ್ಮ 65 ವರ್ಷ ವಯಸ್ಸಿನಲ್ಲಿ ಅಪಾರ ಸ್ನೇಹಿತರು,ಬಂಧುಬಳಗ.,ಕನ್ನಡಪರ ಮನಸುಗಳನ್ನು ತೊರೆದಿದ್ದಾರೆ.

ಕ್ರೈಸ್ತ ಪರವಾದ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಧರ್ಮ ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದ ರಫಾಯಲ್‌ ರಾಜ್‌ ಇಂದು ಬೆಳಗ್ಗೆ ತಮ್ಮ ಸ್ವಂತ ನಿವಾಸವಿರುವ ದೀಪಾಂಜಲಿನಗರದಲ್ಲಿ ಕೊನೆಯುಸಿರೆಳೆದಿದ್ದಾರೆ.ಮೃತರು ಪತ್ನಿ-ಪುತ್ರನನ್ನು ಅಗಲಿದ್ದಾರೆ.

ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ರಫಾಯಲ್‌ ರಾಜ್‌ ಅಲ್ಲಿಯೂ ಕೂಡ ಕನ್ನಡ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವರು.ಕನ್ನಡವನ್ನು ಕಟ್ಟುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲದೇ, ಕನ್ನಡದ ಅನುಷ್ಟಾನಕ್ಕೆ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು.

ಸಾಹಿತಿಗಳ ಜತೆ ನಿರಂತರ ಒಡನಾಟವಿಟ್ಟುಕೊಂಡಿದ್ದ ರಫಾಯಲ್‌ ರಾಜ್‌ ಕೆಲ ವರ್ಷಗಳ ಹಿಂದೆ ನಿವೃತ್ತರಾದರೂ ಕೂಡ ತಮ್ಮ ಕನ್ನಡ ಕಟ್ಟುವ ಕೆಲಸವನ್ನು ನಿಲ್ಲಿಸಿರಲಿಲ್ಲ.ಬಿಎಂಟಿಸಿ ಪತ್ತಿನ ಸಹಕಾರ ಸಂಘದಲ್ಲೂ ಕೆಲಸ ಮಾಡಿದ್ದ ಅವರು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದರು.

ಮೃತರ ಪಾರ್ಥಿವ ಶರೀರವನ್ನು ನಾಳೆ ಮಧ್ಯಾಹ್ನ ಚಾಮರಾಜಪೇಟೆಯ ಸೆಂಟ್‌ ಜೊಸೇಫ್‌ ಚರ್ಚ್‌ ನಲ್ಲಿ ಮದ್ಯಾಹ್ನ 3ರವೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿದ್ದು ಮೆರವಣಿಗೆ ನಂತರ ರಫಾಯಲ್‌ ಅವರ ಅಂತ್ಯಸಂಸ್ಕಾರ ಚಾಮರಾಜಪೇಟೆಯ ಕ್ರೈಸ್ತರ ಸಮಾಧಿ ಸೃಳದಲ್ಲಿ ನೆರವೇರಲಿದೆ ಎಂದು ರಪಾಯಲ್‌  ರಾಜ್‌ ಅವರ ಒಡನಾಡಿ, ಅವರ ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದ ಫಾದರ್‌ ಬರ್ತಲೋಮಿಯಾ ತಿಳಿಸಿದ್ದಾರೆ.

‌ಕನ್ನಡ ಹಾಗೂ ಕ್ರೈಸ್ತಪರ ಹೋರಾಟಗಳ ಸಾಕ್ಷಿಪ್ರಜ್ಞೆಯಾಗಿದ್ದ  ರಫಾಯಲ್‌ ರಾಜ್‌ ಅವರ ನಿಧನಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ತೀವ್ರ ಶೋಕ-ಸಂತಾಪ ವ್ಯಕ್ತಪಡಿಸುತ್ತಿದೆ.ಅವರ ಅಗಲಿಕೆಗೆ ಆತ್ಮೀಯರು ತೀವ್ರ ಸಂತಾಪ ಸೂಚಿಸದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *