ಬೆಂಗಳೂರು: ರಜೆಯ ಮೂಡ್ ನಲ್ಲಿರುವ ವಿದ್ಯಾರ್ಥಿಗಳು ಮೇ ೨೯ ರಿಂದಲೇ ಶಾಲೆಗೆ ಮರಳಬೇಕಾಗಲಿದೆ.ಏಕೆಂದರೆ ಶಿಕ್ಷಣ ಇಲಾಖೆ ಮೇ 29 ರಿಂದಲೇ ಶಾಲೆಗಳನ್ನು ಆರಂಭಿಸುವಂತೆ ಸೂಚನೆ ನೀಡಿದೆ.೨೦೨೪-೨೫ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿರುವ ಶಿಕ್ಷಣ ಇಲಾಖೆ ಕರ್ತವ್ಯದ ದಿನಗಳು ಹಾಗೂ ರಜೆ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ.
ಮೇ,29 ರಿಂದ ಶಾಲೆ ಆರಂಭ ಆಗಲಿದ್ದು ೩೬೫ ದಿನಗಳ ಪೈಕಿ ಶಾಲೆಗಳು ೨೪೪ ದಿನಗಳಲ್ಲಿ ಕೆಲಸ ಮಾಡಲಿದೆ.ಉಳಿದಂತೆ 121 ದಿನ ರಜೆ ದೊರೆಯಲಿದೆ.ಇದರಲ್ಲಿ 18 ದಿನ ದಸರಾ ರಜೆ ಹಾಗೂ 24 ದಿನ ಬೇಸಿಗೆ ರಜೆ ನಿಗಧಿಯಾಗಲಿದೆ ಎಂದು ಶಿಕ್ಷಣ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
- 2024-25ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಟ
- ರಾಜ್ಯದ ಎಲ್ಲಾ ಶಾಲೆಗಳು ಮೇ. 29 ರಿಂದ ಪುನರಾರಂಭ
- ಮಕ್ಕಳು ಮತ್ತು ಶಿಕ್ಷಕರಿಗೆ ದಸರಾ ರಜೆ ಸೇರಿ ಒಟ್ಟು 121 ದಿನ ರಜೆ
- ಈ ಶೈಕ್ಷಣಿಕ ವರ್ಷದಲ್ಲಿ 18 ದಿನ ದಸರಾ ರಜೆ,
- 48 ದಿನ ಬೇಸಿಗೆ ರಜೆ,
- 244 ದಿನ ಶಾಲಾ ಕರ್ತವ್ಯದ ದಿನಗಳು ಎಂದು ನಿಗದಿ
- ಒಟ್ಟಾರೆ 121 ದಿನಗಳು ರಜೆ
- ಶಾಲಾ ಅವಧಿಯ 244 ದಿನಗಳಲ್ಲಿ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗೆ 180 ದಿನ,
- ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕೆ 26 ದಿನ,
- ಪಠ್ಯೇತರ ಚಟುವಟಿಕೆಗೆ 24 ದಿನ, ಫಲಿತಾಂಶ ವೀಕ್ಷಣೆಗಾಗಿ 10 ದಿನ ಮೀಸಲು
- ಉಳಿದ 4 ದಿನಗಳನ್ನು ಸ್ಥಳೀಯ ರಜೆಗಳಾಗಿ ಬಳಕೆ ಅನುಮತಿ
- ಮೇ 29 ರಿಂದ ಅಕ್ಟೋಬರ್ 2ರವರೆಗೆ 2024 -25 ನೇ ಸಾಲಿನ ಶೈಕ್ಷಣಿಕ ವರ್ಷದ ಮೊದಲ ಅವಧಿ
- ಅಕ್ಟೋಬರ್ 21ರಿಂದ ಏಪ್ರಿಲ್ 10ರವರೆಗೆ ಎರಡನೇ ಅವಧಿ ನಿಗದಿ
- ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು
- ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗುವಂತಹ ,
- 2024-2025ರ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ