
ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಪತ್ರಕರ್ತರು ಭ್ರಷ್ಟಾಚಾರಿಗಳಾದ್ರೆ ಸಹಿಸಿಕೊಳ್ಳಬಹುದು( ಬಹುತೇಕ ನಡೆಯುತ್ತಿರುವುದು ಕೂಡ ಇದೇ ಬಿಡಿ)…ಆದರೆ ಅತ್ಯಾಚಾರಿಗಳಾ ಗುವುದನ್ನು..ನೈತಿಕ ಅಧಃಪತನ ವ್ಯಕ್ತಿತ್ವಹೀನವಾಗೋದನ್ನು ಮಾತ್ರ ಸಹಿಸಿಕೊಳ್ಳಲಾಗದು..ಅದನ್ನು ಸಹಿಸಿಕೊಳ್ಳಲೂಬಾರದು..ಅನ್ನ ಕೊಡುವ ಅಕ್ಷರವನ್ನು,ವೃತ್ತಿಯನ್ನು “ಹಾದರ” (ಯಾವತ್ತೂ ಬಳಸದ ಈ ಪದವನ್ನು ಈ ಸನ್ನಿವೇಶದಲ್ಲಿ ಬಳಸುತ್ತಿರುವುದಕ್ಕೆ ಸಮಸ್ತ ಮಾದ್ಯಮ ಮಿತ್ರರಲ್ಲಿ ಕ್ಷಮೆ ಕೋರುತ್ತೇನೆ). ದುರಂತದ ವಿಷಯ ಏನ್ ಗೊತ್ತಾ ಇವತ್ತು ಅನ್ನ ಕೊಡುವ ಅಕ್ಷರ ದುರ್ಬಳಕೆಯಾಗುತ್ತಿರುವುದೇ ಬಹುತೇಕ ಇಂಥಾ ಅನೈತಿಕ ವಿಚಾರಗಳಿ್ಗೆ.ಅಂತಹುದೇ ಒಂದು ವಿಕೃತ ಮನಸ್ಥಿತಿಗಳ ವಿಷವ್ಯೂಹವನ್ನು ಇವತ್ತು ಕನ್ನಡ ಫ್ಲ್ಯಾಶ್ ನ್ಯೂಸ್ ಬಟಾಬಯಲುಗೊಳಿಸುತ್ತದೆ.
ಎಚ್ಚರ..ಹನಿಟ್ರ್ಯಾಪ್ ಮಾಡುವ ಪತ್ರಕರ್ತರ ಗ್ಯಾಂಗ್ ಇದೆ..ನಿರೀಕ್ಷಿಸಿ.? ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕ್ತಿದ್ದಂಗೆ ಬಂದ ವಾಟ್ಸಪ್ ಕರೆ, ಮೆಸೇಜ್ ಗಳು ಒಂದಾ ಎರಡಾ ಅಬ್ಬಬ್ಬಾ.. ಹಾಗೆಯೇ, ಪೋಸ್ಟ್ ಹಾಕಿ ಸುಮ್ಮನಾಗಬೇಡಿ..ಹಾಗೇನಾದ್ರೂ ಆದ್ರೆ ಹನಿಟ್ರ್ಯಾಪ್ ಮಾಡಿರುವ ಆರೋಪ ಹೊತ್ತಿರುವ ಆ ಗ್ಯಾಂಗ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಆಪಾದನೆ ಬಂದ್ ಬಿಡ್ತದೆ ಎನ್ನುವ ಎಚ್ಚರಿಕೆ ಸಂದೇಶಗಳು ಒಂದುಕಡೆ..ಆದರೆ ನಿರ್ಭೀತ ಪತ್ರಿಕೋದ್ಯಮ ಮಾಡೊಕ್ಕೆ ಹೊರಟ ಕನ್ನಡ ಫ್ಲ್ಯಾಶ್ ನ್ಯೂಸ್ ನಿರ್ಭಿಡೆಯಿಂದಲೇ ಈವರೆಗೆ ಎಲ್ಲಾ ಹೇಳಿದೆ..ಈ ವಿಚಾರದಲ್ಲೂ ಕಾಂಪ್ರಮೈಸ್ ಇಲ್ಲ.( ಊರಲ್ಲಿ ಇರದಿದ್ದಕಾರಣಗಳಿಂದ ಈ ಬಗ್ಗೆ ಬರೆಯಲು ಆಗಲಿಲ್ಲ ಅಷ್ಟೇ..) ಕೊಟ್ಟ ಮಾತಿನಂತೆ ಆ ಗ್ಯಾಂಗ್ ನ ವಿವರಗಳನ್ನು ಬಿಚ್ಚಿಡುತ್ತಿದೆ ನಿಮ್ಮ ಕನ್ನಡ ಫ್ಲ್ಯಾಶ್ ನ್ಯೂಸ್.
ಅನ್ನ ಕೊಡುವ ಪತ್ರಿಕೋದ್ಯಮ ವೃತ್ತಿಯನ್ನು ಹೇಸಿಗೆ ತಿನ್ನುವ ಕೆಲಸಕ್ಕೆ ಬಳಸಿಕೊಂಡ ಆ ಹನಿಟ್ರ್ಯಾಪ್ ತಂಡದ ಸಂಪೂರ್ಣ ಮಾಹಿತಿ ಕನ್ನಡ ಪ್ಲ್ಯಾಶ್ ನ್ಯೂಸ್ ಬಳಿಯಿದೆ.ಆ ತಂಡ ಮಾಂಸದಂಧೆ ಮನೆಗಳನ್ನೇ ಅಡ್ಡೆ ಮಾಡಿಕೊಂಡು ಅಲ್ಲಿನ ಘರ್ ವಾಲಿಗಳನ್ನು ಅಡ್ಜೆಸ್ಟ್ ಮಾಡಿಕೊಂಡು ಉಳ್ಳವರು-ಅಧಿಕಾರಸ್ಥರ ನ್ನೇ ಖೆಡ್ಡಾಕ್ಕೆ ಬೀಳಿಸಿ ಹಸಿಹಸಿಯಾದ ದೃಶ್ಯಗಳನ್ನು ಶೂಟ್ ಮಾಡಿಕೊಂಡು ಹಲ್ಲೆ ನಂತರ ಹಲ್ಲೆ ಮಾಡಿರುವ ದೃಶ್ಯಗಳು ಕೂಡ ನಮ್ಮ ಬಳಿಯಿದೆ. ಬೇಡ ಸಾರ್.ನಮ್ಮನ್ನು ಬಿಟ್ಟುಬಿಡಿ ಎಂದು ಅಂಗಲಾಚುವ ಆ ಮಿಕಗಳ ಮೇಲೆ ಹಲ್ಲೆ ಮಾಡಿ,ಅವರ ಐಡೆಂಟಿಟಿ ಪ್ರೂಪ್ ಗಳನ್ನು ವಶಕ್ಕೆ ಪಡೆದು ಹಿಂಸೆ ಕೊಡುವ ಆ ದೃಶ್ಯಗಳನ್ನು ಗಮನಿಸಿದ್ರೆ ಆ ಮಿಕಗಳಿಂದ ಅಪಾರ ಮೊತ್ತದ ಹಣ ಪೀಕಿರುವ ಬಗ್ಗೆಯೂ ಅನುಮಾನ ಕಾಡುತ್ತದೆ.

ಆತನ ಬಗ್ಗೆ ಬರೆಯೊಕ್ಕೆ ನೂರು ವಿಷಯಗಳಿವೆ,,ಆದರೆ ಬೇಡ.. ಅಂದ್ಹಾಗೆ ಈ ಹನಿಟ್ರ್ಯಾಪ್ ಗ್ಯಾಂಗ್ ನ ಕಿಂಗ್ ಪಿನ್ ಬಗ್ಗೆ ಬರೆಯೊಕ್ಕೆ ನೂರು ವಿಷಯಗಳಿವೆ.ಆತ ಕೆಲಸ ಮಾಡಿದ ಸಂಸ್ಥೆಗಳಲ್ಲಿ ಆತನ ವಿರುದ್ದ ಕೇಳಿಬಂದ ಆರೋಪಗಳ ಬಗ್ಗೆ ಬರೆಯುತ್ತಾ ಹೋದ್ರೆ ಸಮಯವೇ ಸಾಕಾಗೊಲ್ಲ ಎನ್ನಿಸುತ್ತೆ.ಒಳ್ಳೆಯ ಪ್ರತಿಭೆ ಇದ್ದ ಹೊರತಾಗ್ಯೂ ತನ್ನ ಈ ಪ್ರವತ್ತಿಯಿಂದಲೇ ಎಲ್ಲರ ವಿಶ್ವಾಸ ಕಳೆದುಕೊಂಡನೆನ್ನುವುದು ದುರಾದೃಷ್ಟಕರ.ಆತ ಈ ಹಿಂದೆ ಕೆಲಸ ಮಾಡಿದ ಸಂಸ್ಥೆಗಳಲ್ಲಿಯೂ ಒಳ್ಳೆಯ ಹೆಸರು ಪಡೆದುಕೊಂಡವನಲ್ಲ.ಮಾಡಿಕೊಂಡ ಓವರ್ ಕಮಿಟ್ಮೆಂಟ್ ಗಾಗಿ ಹನಿಟ್ರ್ಯಾಪ್ ದಂಧೆಗೆ ತನ್ನ ತಂಡವನ್ನು ಇಳಿಸಿದ ಎನ್ನುವ ಮಾತಿ್ದೆ.ಇದನ್ನು ಆತನ ಜತೆಗಿದ್ದವರೇ ಹೇಳಿಕೊಂಡಿದ್ದಾರೆ. ಆತನನ್ನು ನಂಬಿ ಲಕ್ಷಾಂತರ ಹಣ ಕಳೆದುಕೊಂಡಿರುವವರು ಬಾಯ್ಬಿಟ್ಟ ಸತ್ಯಗಳನ್ನು ಅನಾವರಣ ಮಾಡಿದ್ರೆ ಆತನ ಬದುಕು ಬೀದಿಗೆ ಬೀಳುವುದರಲ್ಲಿ ಅನುಮಾನವೇ ಇಲ್ಲ.ಆ ಮಟ್ಟಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ಹೋಗುವುದಿಲ್ಲ ಎನ್ನುವುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ.
ಕ್ಷಮೆ ಇರಲಿ ಸ್ನೇಹಿತರೇ.. ಆ ಇಡೀ ಹನಿಟ್ರ್ಯಾಪ್ ತಂಡದ ಕಿಂಗ್ ಪಿನ್ ಎನಿಸಿಕೊಂಡವನ ಹೆಸರು ರಿವೀಲ್ ಮಾಡೋದು ನಮಗೆ ಕಷ್ಟವೇ ಅಲ್ಲ..ಆದ್ರೆ ಹೇಳಿದ್ರೆ ಎದೆ ಒಡೆದುಕೊಳ್ಳೋದು ಆತನ ನಿಷ್ಪಾಪಿ ಹೆಂಡತಿ.ಗಂಡ ಎನಿಸಿಕೊಂಡಾತ ಹಣಕ್ಕಾಗಿ ಇಂಥ ಹೀನಮಟ್ಟಕ್ಕೆ ಇಳಿದ್ನಾ ಎಂದು ಆಕೆ ಎಷ್ಟು ನೋವು-ಯಾತನೆ ಪಡಬಹುದು ಅಲ್ವಾ..ಹಾಗಾಗಿ ಆತನ ನಿಷ್ಪಾಪಿ ಹೆಂಡ್ತಿ,ಆಕೆ ಸಮಾಜದಲ್ಲಿ ಉಳಿಸಿಕೊಂಡಿರುವ ಘನತೆ-ಗೌರವ-ಪ್ರತಿಷ್ಟೆಗೆ ಧಕ್ಕೆ ಬರಬಾರದೆನ್ನುವ ಏಕೈಕ ಕಾರಣಕ್ಕೆ ಆತನ ಹೆಸರನ್ನು ನೇರವಾಗಿ ಹೇಳುತ್ತಿಲ್ಲ.ಆದರೆ ಸೂಕ್ಷ್ಮಗಳ ಮೂಲಕ ಆತ ಯಾರೆನ್ನುವುದು ತಿಳಿಯದೆ ಇರೊಲ್ಲ.
ಪ್ರತಿಷ್ಟಿತ ಚಾನೆಲ್ ಗಳಲ್ಲಿ ಕೆಲಸ ಮಾಡಿದ ಪದಪಂಡಿತ ಆತ. ಪ್ರತಿಭಾನ್ವಿತ ಎನ್ನುವುದರಲ್ಲಿ ಅನುಮಾನವೇ ಬೇಡ ( ಏಕೆಂದ್ರೆ ಗುಣಕ್ಕೆ ಮತ್ಸರವೇಕೆ..?) ಯಾವುದೇ ಬ್ರೇಕಿಂಗ್ ನ್ಯೂಸ್, ಎಕ್ಸ್ ಕ್ಲ್ಯೂಸಿವ್ ನ್ಯೂಸ್ ಗಳು ಆತನ ಅಕ್ಷರಗಳಿಂದ ಮೂಡಿದ್ರೆ ಅದು ಎಲ್ಲರ ಗಮನ ಸೆಳೆಯುತ್ತಿತ್ತು,ಚಾನೆಲ್ ಗಳಿಗೆ ಅಂತದ್ದೊಂದು ಕ್ರೆಡಿಬಿಲಿಟಿ ತಂದುಕೊಟ್ಟಿದ್ದ ಆತ. ಕೆಲಸಕ್ಕೆ ಕುಳಿತರೆ ರಣವಾಗಿ ತನ್ನ ಬುದ್ದಿಮತ್ತೆ-ಪ್ರತಿಭೆಗೆ ಸಾಣೆ ಹಿಡಿಯುತ್ತಿದ್ದ.ಆತನ ಪ್ರತಿಭೆ-ಸಾಮರ್ಥ್ಯ-ಅರ್ಹತೆ ಬಗ್ಗೆ ಹೇಳಬೇಕಿಲ್ಲ ಬಿಡಿ..ಆ ವಿಷಯದಲ್ಲಿ ಆತನ ಬಗ್ಗೆ ಗೌರವವಿದೆ..

ಆ ಪ್ರತಿಭೆ-ಬುದ್ದಿವಂತಿಕೆಯನ್ನು ನಿಜವಾಗೂ ಸರಿಯಾದ ರೀತಿಯಲ್ಲಿ ಬಳಸಿಕೊಂಡಿದಿದ್ದರೆ ಆತ ಎಲ್ಲೋ ಇರುತ್ತಿದ್ದನೇನೋ..? ಆದರೆ ದಿಡೀರ್ ಹಣ ಮಾಡುವ ದುರಾಲೋಚನೆಗೆ ಬಿದ್ದು ಅಡ್ಡಕಸುಬಿ ಕೆಲಸಕ್ಕೆ ಇಳಿದುಬಿಟ್ಟ ಎನ್ನೋದು ದುರಾದೃಷ್ಟಕರ.ರಾತ್ರೋರಾತ್ರಿ ದಿಢೀರ್ ಹಣ ಮಾಡಬೇಕೆನ್ನುವ ಕೆಟ್ಟ ಖಯಾಲಿಗೆ ಆತ ಸ್ಪಾ, ಮಸಾಜ್, ವೇಶ್ಯಾವಾಟಿಕೆ… ಅಡ್ಡೆಗಳನ್ನೇ ಟಾರ್ಗೆಟ್ ಮಾಡಿಕೊಂಡುಬಿಟ್ಟ.ಅದಕ್ಕೆ ಸಾಥ್ ಕೊಟ್ಟಿದ್ದು ಆತ ಈ ಹಿಂದೆ ಕೆಲಸ ಮಾಡಿದ ಚಾನೆಲ್ ಗಳಲ್ಲಿ ಆತನೊಂದಿಗೆ ಇದ್ದ ಮೂರ್ನಾಲ್ಕು ಮಂದಿ.
ಪ್ರಮುಖ ಚಾನೆಲ್ ನ್ನ ಬಿಟ್ಟು ಬೇರೊಂದು ಚಾನೆಲ್ ಗೆ ಹೋದ ಮೇಲೆ ಅದನ್ನೇ ಕಸುಬು ಮಾಡಿಕೊಂಡ ಈ ಮಹಾನ್ ಪತ್ರಕರ್ತ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಇದ್ದ ಕೆಲವು ವೇಶ್ಯಾವಾಟಿಕೆ ಅಡ್ಡೆಗಳ ಮಾಹಿತಿಯನ್ನು ಕೆಲವರ ಮೂಲಕ ಪಡೆದು ಅವರೊಂದಿಗೆ ವಿಶ್ವಾಸ ಬೆಳೆಸಿಕೊಂಡು ಅದರ ಘರ್ ವಾಲಿಗಳನ್ನೇ ಅಡ್ಜೆಸ್ಟ್ ಮಾಡಿಕೊಂಡು ಪರ್ಸಂಟೇಜ್ ಕುದುರಿಸಿಕೊಳ್ಳೊಕ್ಕೆ ಶುರುಮಾಡಿಬಿಟ್ಟ. ತನ್ನ ಗ್ಯಾಂಗನ್ನು ಆ ಕೆಲಸಕ್ಕೇನೆ ಆಕ್ಟೀವ್ ಆಗಿ ಬಳಸಿಕೊಂಡು ಕೆಲವು ಮಿಖಗಳನ್ನು ಖೆಡ್ಡಾಕ್ಕೆ ಬೀಳಿಸಿಕೊಂಡು ಬಿಟ್ಟ.ಆ ದೃಶ್ಯಾವಳಿಗಳಲ್ಲಿ ಈತ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳದಿದ್ದರೂ ಅವನ ಜತೆಗಿದ್ದ ಪಾರ್ಟ್ನರ್ ಗಳು ಸಖತ್ ಆಕ್ಟೀವ್ ಆಗಿರುವುದನ್ನು ಗಮನಿಸಿದ್ರೆ ಇದೆಲ್ಲದರ ಹಿಂದಿನ ನೆರಳು ಈತನೇ ಎನ್ನುವುದು ಸಲೀಸಾಗಿ ಅರ್ಥವಾಗುತ್ತದೆ.
ಈ ಹನಿಟ್ರ್ಯಾಪ್ ತಂಡ ಅದೆಷ್ಟು ಮಿಖಗಳನ್ನು ಖೆಡ್ಡಾಕ್ಕೆ ಬೀಳಿಸಿಕೊಂಡು ಎಷ್ಟು ಹಣ ಪೀಕಿದೆಯೋ ಗೊತ್ತಿಲ್ಲ.ಆದರೆ ಪತ್ರಿಕೋದ್ಯಮದಲ್ಲಿ ಆತನಿಗಿರುವ ಟ್ಯಾಲೆಂಟ್-ಬುದ್ದಿಶಕ್ತಿಗೆ ಅತ್ಯುದ್ಭುತ ಪತ್ರಕರ್ತನಾಗಿ ಬೆಳೆಯಬಲ್ಲ ಅವಕಾಶಗಳನ್ನು ದಿಢೀರ್ ಹಣ ಮಾಡ್ಲಿಕ್ಕಂತ ಬಳಸಿಕೊಂಡ ವಾಮಮಾರ್ಗಗಳ ಮೂಲಕ ಕಳೆದುಕೊಂಡನೆನ್ನುವುದು ದುರಾದೃಷ್ಟಕರ.ಆತನ ಬಗ್ಗೆ ಬೇಸರ-ಆಕ್ರೋಶವಿದ್ರೂ ಎಲ್ಲೋ ಒಂದೆಡೆ ಆತನ ಸ್ತಿತಿ ಬಗ್ಗೆ ವಿಚಿತ್ರವಾದ ಸಹಾನುಭೂತಿ-ಅನುಕಂಪೆ ಮೂಡುತ್ತೆ.ಕನ್ನಡ ಫ್ಲ್ಯಾಶ್ ನ್ಯೂಸ್ ಗೆ,ಆತನ ತಂಡ ದಾಳಿ ನಡೆಸಿ ಚಿತ್ರೀಕರಿಸಿದ ಆ ಹಸಿಬಿಸಿ ದೃಶ್ಯಗಳನ್ನು ಬಟಾಬಯಲು ಮಾಡಿ ಆತನನ್ನು ಬೆತ್ತಲು ಮಾಡೋದು ಕಷ್ಟ ಅಲ್ಲವೇ ಅಲ್ಲ..ಆದ್ರೆ ಹಾಗೆ ಮಾಡಿ ಆತನಂತೆ ನೈತಿಕವಾಗಿ ಕುಸಿಯಲು ನಾವು ಸಿದ್ದರಿಲ್ಲ.. ಇನ್ನಾದ್ರೂ ಆತ ಹಾಗೂ ಆತನ ಗ್ಯಾಂಗ್, ಹಣಕ್ಕಾಗಿ ಹನಿಟ್ರ್ಯಾಪ್ ಮಾಡಿ ಹಡಬೆ ಹಣ ಗಳಿಸಿ ಜೀವನ ಮಾಡುವಂಥ ನೀಚ ಕೆಲಸ ಬಿಟ್ಟು ನ್ಯಾಯಯುತವಾಗಿ ಬದುಕಿದ್ರೆ ಒಳ್ಳೇದು ಅನ್ನಿಸುತ್ತೆ.










