ಬೆಂಗಳೂರು:ಎಲ್ಲವೂ ಅಂದಾಜಿಸುತ್ತಿರುವ ರೀತಿಯೇ ಆದಲ್ಲಿ….ಹಾಕಲಾಗುತ್ತಿರುವ ಲೆಕ್ಕಾಚಾರಗಳ ಪ್ರಕಾರವೆ ನಡೆದರೆ…ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದೊಂದು ದೊಡ್ಡ ಸ್ಪೋಟಕ ಸುದ್ದಿಯಾಗೋದರಲ್ಲಿ ಅನುಮಾನವೇ ಇಲ್ಲ..ಏಕಂದ್ರೆ ಸುದ್ದಿಯ ಸ್ವರೂಪವೇ ಅಷ್ಟೊಂದು ಅಚ್ಚರಿ-ಗಾಬರಿ-ಸಂಶಯದ ಅಂಶಗಳನ್ನು ಒಳಗೊಂಡಿದೆ.ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು..ಆಗಿದೆ ಕೂಡ ಎನ್ನುವಂತ ಸನ್ನಿವೇಶದಲ್ಲಿ ಅಂದಾಜಿಸುತ್ತಿರುವ ರೀತಿಯಲ್ಲಿಯೇ ಎಲ್ಲಾ ನಡೆದರೂ ಅಚ್ಚರಿ ಪಡಬೇಕಿಲ್ಲವೇನೋ..?

ರಾಜಕೀಯವೇ ಹೀಗೆ…ಹಾಗೆ…ಯಾವ್ ಸನ್ನಿವೇಶದಲ್ಲಿ ಏನ್ ಆಗ್ತದೆನ್ನುವುದನ್ನು ಊಹಿಸಲಿಕ್ಕೆ ಆಗೊಲ್ಲ..ಹೀಗೆಯೇ ಆಗುತ್ತೆ ಎಂದು ಖಚಿತವಾಗಿ ಹೇಳಲಿಕ್ಕೂ ಬರೊಲ್ಲ..ಇಲ್ಲಿ ಎಲ್ಲವೂ ಆಕ್ಷಿಡೆಂಡಲ್.. ಅನಿರೀಕ್ಷಿತ..ಆದರೆ ಆಗೋದೆಲ್ಲದರ ಹಿಂದೆ ಪೂರ್ವಭಾವಿ ಸಿದ್ಧತೆ ಇದ್ದೇ ಇರುತ್ತದೆ.ಅದು ಸಾಮಾನ್ಯ ಜನರ ನಿರೀಕ್ಷೆಗೆ ನಿಲುಕಲ್ಲ ಅಷ್ಟೆ..ಸಧ್ಯದ ರಾಜಕೀಯವೂ ಹಾಗೆಯೇ ಇದೆ.. ಕಾಂಗ್ರೆಸ್ ನ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ, ಕೆಪಿಸಿಸಿ ಅಧ್ಯಕ್ಷ, ಬೆಂಗಳೂರು ಉಸ್ತುವಾರಿ ಸಚಿವ, ಸಿದ್ದರಾಮಯ್ಯ ಒಡಂಬಡಿಕೆಯಂತೆ 2ವರೆ ವರ್ಷಗಳ ನಂತರ ಸಿಎಂ ಸ್ಥಾನ ಬಿಟ್ಟುಕೊಟ್ಟರೆ ಅದಕ್ಕೆ ಪ್ರಶ್ಮಾತೀತವಾಗಿ ಭಾಜನವಾಗಬಲ್ಲ ಪವರ್ ಫುಲ್ ಪರ್ಸನಾಲಿಟಿ ಆಗಿರುವ ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷ ತೊರೆಯಲು ಸನ್ನದ್ಧರಾಗಿದ್ದಾರೆ.ಅವರು ಬಿಜೆಪಿಗೆ ಜಂಪ್ ಮಾಡಿ ಸಿಎಂ ಆಗಲಿದ್ದಾರೆ. ವಿಜಯೇಂದ್ರ ಜತೆಗೆ ಸತೀಶ್ ಜಾರಕಿಹೊಳಿ ಡಿಸಿಎಂ ಆಗಲಿದ್ದಾರೆ.ಇದಕ್ಕೆ ವೇದಿಕೆ ಸಜ್ಜಾಗಿದೆ. ಈಶಾ ಪೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಗೃಹಮಂತ್ರಿ ಅಮಿತ್ ಶಾ ಜತೆಗಿನ ಮಾತುಕತೆ ಅಂತಿಮವಾಗಿದೆ. ನವೆಂಬರ್ ನಲ್ಲಿ ಎಲ್ಲವೂ ನೆರವೇರಲಿದೆ ಎನ್ನುವ ರೀತಿಯಲ್ಲಿ ನಡೆಯುತ್ತಿರುವ ಚರ್ಚೆಗಳು ಎಷ್ಟರ ಮಟ್ಟಿಗೆ ನಂಬಲರ್ಹವೋ..?ಎನ್ನುವುದರ ಚರ್ಚೆಯನ್ನು ಒತ್ತಟ್ಟಿಗಿಟ್ಟು ನೋಡಿದರೆ ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಇಂತದ್ದೊಂದು ವಿದ್ಯಾಮಾನ ಬಿಸಿ ಬಿಸಿ ಚರ್ಚೆ ಹುಟ್ಟಾಕಿರುವುದಂತೂ ಸತ್ಯ.
ಕಾಂಗ್ರೆಸ್ ನ ಫೈರ್ ಬ್ರ್ಯಾಂಡ್..ಸಂಪನ್ಮೂಲದ ಬೆನ್ನೆಲುಬು..ಸಂಘಟನಾ ಚತುರ, ಪಕ್ಷದ ಶಿಸ್ತಿನ ಸಿಪಾಯಿ, ಗಾಂಧಿ ಕುಟುಂಬಕ್ಕೆ ಪರಮಾಪ್ತ..ಹೀಗೊಂದಿಷ್ಟು ನಾಮಾಂಕಿತ ಹೊಂದಿರುವ ಡಿ.ಕೆ ಶಿವಕುಮಾರ್ ಸುತ್ತ ಸಾಕಷ್ಟು ವಿದ್ಯಾಮಾನಗಳು ಹರಿದಾಡತೊಡಗಿವೆ.ಅವು ಸಾಮಾನ್ಯವಾದ ಸಂಗತಿಗಳಾ್ಗಿದ್ದರೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.ಡಿ.ಕೆ ಶಿವಕುಮಾರ್ ಕಾಂಗ್ರೆಸ್ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆನ್ನುವ ಅನುಮಾನಕ್ಕೆ ರೆಕ್ಕೆ ಪುಕ್ಕ ನೀಡುವಂಥ ವಿಚಾರಗಳಿರುವುದರಿಂದ ವಿಷಯ ಗಂಭೀರವಾಗಿದೆ.
ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಗೆ ನಿಜಕ್ಕೂ ಗುಡ್ ಬೈ ಹೇಳಲಿದ್ದಾರಾ..? ತನಗೆ ಬದುಕು-ಭವಿಷ್ಯ-ರಾಜಕೀಯ ನೆಲೆ ಕೊಟ್ಟ ಮಾತೃಪಕ್ಷವನ್ನು ತೊರೆದುಬಿಡುತ್ತಾರಾ..? ಕಾಂಗ್ರೆಸ್ ನಲ್ಲಿ ತನಗಾದ ಅನ್ಯಾಯಕ್ಕೆ ಬೇಸತ್ತು ಪಕ್ಷ ತೊರೆಯಲಿದ್ದಾರಾ..? ಪಕ್ಷ ತೊರೆಯುವ ಮೂಲಕ ಕಾಂಗ್ರೆಸ್ ಗೆ ಮರ್ಮಾಘಾತ ನೀಡಲಿದ್ದಾರಾ..? ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುವುದಕ್ಕೆ ಕಾರಣವಾಗಲಿದ್ದಾರಾ..? ಅಧಿಕಾರಕ್ಕೆ ಬರುವವರೆಗೂ ಒಂದ್ರೀತಿ ಇದ್ದು..ಅಧಿಕಾರ ಸಿಕ್ಕಾಕ್ಷಣ ಯೂ ಟರ್ನ್ ಹೊಡೆದು ಮೋಸ ಮಾಡಿದರೆನ್ನುವ ಸಿಟ್ಟಿಗೆ ಸಿದ್ದರಾಮಯ್ಯ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲಿದ್ದಾರಾ..? ಕಾಂಗ್ರೆಸ್ ಇನ್ನಿಲ್ಲದಂತೆ ಪಾತಾಳ ಸೇರುವಂತೆ ಮಾಡಲಿದ್ದಾರಾ..? ಹೀಗೊಂದಿಷ್ಟು ಪ್ರಶ್ನೆಗಳು ಡಿಕೆ ಶಿವಕುಮಾರ್ ಅವರ ಇತ್ತೀಚಿನ ನಡೆ-ನುಡಿ-ನಡುವಳಿಕೆಗಳಿಂದ ಮೂಡಲಾರಂಭಿಸಿವೆ.

ಡಿ.ಕೆ ಶಿವಕುಮಾರ್ ಅವರೇ ಹೇಳಿಕೊಂಡಂತೆ ನಾನು ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ. ತನ್ನ ಹಾಗೂ ಸಿದ್ದರಾಮಯ್ಯ ನಡುವೆ ತಲಾ 2ವರೆ ವರ್ಷಗಳ ಒಪ್ಪಂದವಾಗಿದೆ. ಸಿದ್ದರಾಮಯ್ಯ ಅವದಿ ಪೂರೈಸುತ್ತಿದ್ದಂತೆ ನಾನೇ ಸಿಎಂ ಎನ್ನುವುದನ್ನು ಅನೇಕ ವೇದಿಕೆಗಳಲ್ಲಿ ಪುನರುಚ್ಚರಿಸುತ್ತಲೇ ಬಂದಿದ್ದಾರೆ.ಸಿದ್ದರಾಮಯ್ಯ ಇದರ ಬಗ್ಗೆ ರಿಯಾಕ್ಟ್ ಮಾಡದಿದ್ದರೂ ಹೈಕಮಾಂಡ್ ತೀರ್ಮಾನವೇಫೈನಲ್ ಎನ್ನುವ ಲಹರಿಯಲ್ಲಿ ಮಾತನಾಡುತ್ತಲೇ ಬಂದಿದ್ದಾರೆ.ರಾಜಕೀಯದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿದೆ.ಅದರ ಪ್ರಕಾರ ಡಿಕೆಶಿವಕುಮಾರ್ ಗೆ ಬಿಜೆಪಿ ಹೈಕಮಾಂಡ್ ಟಾಸ್ಕ್ ಒಂದನ್ನು ನೀಡಿದೆಯಂತೆ.ಅದರ ಪ್ರಕಾರ 60 ಕಾಂಗ್ರೆಸ್ ಎಮ್ಮೆಲ್ಲೆಗಳನ್ನು ಆಪರೇಷನ್ ಮಾಡಿ ಬಿಜೆಪಿಗೆ ಕರೆತರಬೇಕಂತೆ.ಆ ಟಾಸ್ಕ್ ಗೆ ಡಿಕೆಶಿ ಕೂಡ ಒಪ್ಪಿಗೆ ಸೂಚಿಸಿ ಆಪರೇಷನ್ ನಲ್ಲಿ ನಿರತವಾಗಿದ್ದಾರಂತೆ.60 ಎಮ್ಮೆಲ್ಲೆಗಳನ್ನು ಮನವೊಲಿಸಿ ಪಕ್ಷ ಬಿಡುವಂತೆ ಮಾಡುವುದು ಸಧ್ಯದ ಮಟ್ಟಿಗೆ ಇಂಪಾಸಿಬಲ್ ಎನ್ನುವಂತಿದ್ರೂ ಅಸಾಧ್ಯವಾದುದನ್ನು ಮಾಡಬಲ್ಲ ಕೆಪಾಸಿಟಿ ಇರುವ ಡಿಕೆಶಿ ಹೈಕಮಾಂಡ್ ಕೊಟ್ಟ ಟಾಸ್ಕ್ ನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ,
60- ಶಾಸಕರ ಲೀಸ್ಟ್ ರೆಡಿ..40 ಶಾಸಕರು ಡಿಕೆಶಿ ಜತೆಗೆ ಬರಲು ಸಿದ್ದ..!? ಕಾಂಗ್ರೆಸ್ ನ 60 ಎಮ್ಮೆಲ್ಲೆಗಳ ಲೀಸ್ಟ್ ಕೂಡ ಡಿಕೆಶಿ ಮಾಡಿಟ್ಟುಕೊಂಡಿದ್ದಾರಂತೆ.ಆ 60 ಶಾಸಕರು ಯಾರು ಎನ್ನುವುದರ ಸುಳಿವು ಮಾತ್ರ ತಿಳಿಯುತ್ತಿಲ್ಲ.ಆ ಪೈಕಿ ಸುಮಾರು 40 ಶಾಸಕರ ಜತೆ ಡಿಕೆಶಿ ಮಾತುಕತೆಯನ್ನೂ ಫೈನಲ್ ಮಾಡಿದ್ದಾರಂತೆ.ಅವರೆಲ್ಲರು ಡಿಕೆಶಿ ಜತೆ ಬರಲು ಸಮ್ಮತಿ ಸೂಚಿಸಿದ್ದಾರಂತೆ.ಪಕ್ಷ ತೊರೆದರೆ ಆಗಬಹುದಾದ ಸಮಸ್ಯೆಗಳಿಗೆಲ್ಲಾ ಪರಿಹಾರ ಸೂತ್ರವನ್ನು ಕೂಡ ಡಿಕೆಶಿ ರೆಡಿ ಮಾಡಿ ಅದನ್ನು ಅವರಿಗೆ ಮನವರಿಕೆ ಕೂಡ ಮಾಡಿಕೊಟ್ಟಿದ್ದಾರಂತೆ. ಪಕ್ಷ ತೊರೆದರೆ ಆಗಬಹುದಾದ ಪಕ್ಷಾಂತರದ ಸಮಸ್ಯೆ. ಚುನಾವಣೆ ನಡೆದರೆ ಗೆಲ್ಲಲು ಬೇಕಾದ ಸಂಪನ್ಮೂಲ…ಎಲ್ಲವೂ ಅಂದುಕೊಂಡಂತೆಯಾದರೆ ಅವರಿಗೆ ರಾಜಕೀಯ ಸ್ಥಾನಮಾನ…ಹೀಗೆ ಶಾಸಕರು ವ್ಯಕ್ತಪಡಿಸಿದ್ದಾರೆನ್ನಲಾಗಿರುವ ಸಂಶಯಗಳಿಗೂ ಡಿಕೆಶಿ ಪರಿಹಾರ ಸೂಚಿಸಿದ್ದಾರಂತೆ.ಅದಕ್ಕೆ ಶಾಸಕರು ಕೂಡ ಒಪ್ಪಿಕೊಂಡಿದ್ದಾರಂತೆ.ಹೀಗೆ ನಾನಾ ಗಣಿತ-ಲೆಕ್ಕಾಚಾರಗಳು ಕೇಳಿಬರಲಾರಂಭಿಸಿವೆ.
ಹಾಗಾದ್ರೆ ಯಾವಾಗ ಪಕ್ಷ ಬಿಡುತ್ತಾರೆ..?! ಇದು ಇನ್ನೊಂದು ಹಂತದಲ್ಲಿ ಸೃಷ್ಟಿಯಾಗಿರುವ ಪ್ರಶ್ನೆ.ಬಿಜೆಪಿ ಹೈಕಮಾಂಡ್ ನೀಡಿರುವ ಟಾಸ್ಕ್ ನ್ನು ಸಕ್ಸೆಸ್ ಆಗಿ ಪೂರೈಸಿದ್ದೇ ಆದಲ್ಲಿ ಡಿಕೆಶಿ ತನ್ನ ಬೆಂಬಲಿಗರೊಂದಿಗೆ ಯಾವಾಗ ಬಿಜೆಪಿ ಸೇರುತ್ತಾರೆ ಎನ್ನುವ ಪ್ರಶ್ನೆ್ಗೆ ಕೇಳಿಬರುತ್ತಿರುವ ಉತ್ತರ ನವೆಂಬರ್..! ನವೆಂಬರ್ ಹೊತ್ತಿಗೆ ಡಿಕೆಶಿ ಕಾಂಗ್ರೆಸ್ ನ್ನು ಅಧೀಕೃತವಾಗಿ ತೊರೆಯಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಸಖ್ಯ ತೊರೆದು ಬಿಜೆಪಿ ತೆ್ಕ್ಕೆಗೆ ಜಾರಲಿದ್ದಾರಂತೆ.ಈ ಮೂಲಕ ದಶಕಗಳವರೆಗೆ ತಾಯಂತೆ ಪೊರೆದಿದ್ದ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರಂತೆ…ಈ ರೀತಿಯ ಮಾತುಗಳು ಕಾಂಗ್ರೆಸ್-ಬಿಜೆಪಿ ವಲಯದಲ್ಲಿ ಕೇಳಿಬರಲಾರಂಭಿಸಿದೆ.ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಕಾಲವೇ ನಿರ್ದರಿಸಬೇಕಿದೆ.
ಡಿಕೆಶಿವಕುಮಾರ್ ಬಿಜೆಪಿ ಹೈಕಮಾಂಡ್ ಮುಂದೆ ಒಡ್ಡಿರುವ ಕಂಡಿಷನ್ ಏನಿದೆ..?!

**ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆನ್ನುವ ಗುಸು ಗುಸುವಿನ ಮುಂದುವರೆದ ಭಾಗವಾಗಿ ಡಿಕೆಶಿ ಬಿಜೆಪಿ ಹೈಕಮಾಂಡ್ ಮುಂದೆ ಒಡ್ಡಿರುವ ಕಂಡಿಷನ್ಸ್ ಬಗ್ಗೆಯೂ ಕುತೂಹಲದ ಚರ್ಚೆ ಶುರುವಾಗಿದೆ. ಸಾಕಷ್ಟು ಮೂಲಗಳ ಪ್ರಕಾರ
**ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಮಾಡಬೇಕು..ಆ ಸ್ಥಾನ ಅಲುಗಾಡಿಸುವ ಮಟ್ಟದ ಬೆಳವಣಿಗೆಗೆ ಅವಕಾಶ ಕೊಡಬಾರದು.
ತಮ್ಮ ಮೇಲಿರುವ ಸಾಕಷ್ಟು ಕೇಸ್ ಗಳನ್ನು ವಾಪಸ್ ಪಡೆದು ತಮ್ಮನ್ನು ಅಪರಾಧಮುಕ್ತರನ್ನಾಗಿಸಬೇಕು.
**ತನ್ನನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸುವಂಥ ಯಾವುದೇ ರೀತಿಯ ಮಸಲತ್ತು-ಹುನ್ನಾರ ನಡೆಸಬಾರದು.
**ಪಕ್ಷಾಂತರಿ ಎಂದು ಬಿಜೆಪಿ ಪಕ್ಷದ ಮೂಲನಿವಾಸಿಗಳು ಲೇವಡಿ ಮಾಡಬಾರದು..ಅದನ್ನೇ ವಿವಾದದ ವಿಷಯವನ್ನಾಗಿಸಬಾರದು.
**ಅಧಿಕಾರ ಚಲಾಯಿಸುವ ವಿಚಾರದಲ್ಲಿ ಸ್ವತಂತ್ರ ನೀಡಬೇಕು..ಅಗತ್ಯವಾದ ವಿಚಾರಗಳನ್ನು ಬಿಟ್ಟರೆ ಪ್ರತಿ ವಿಚಾರದಲ್ಲಿ ಹೈಕಮಾಂಡ್ ಮೂಗು ತೂರಿಸಬಾರದು.
**ಪಕ್ಷದ ಹಿತ ಹಾಗೂ ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ತಾನು ತೆಗೆದುಕೊಳ್ಳುವ ನಿರ್ದಾರಗಳನ್ನು ಪ್ರಶ್ನಿಸಬಾರದು.
**ತನ್ನನ್ನು ನಂಬಿಕೊಂಡು ಬಂದ ನಿಷ್ಟಾವಂತರಿಗೆ ಅನ್ಯಾಯವಾಗಬಾರದು.
**ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅವರಿಗೆ ಆತಂಕ ಎದುರಾದಾಗ ಅವರ ಬೆನ್ನಿಗೆ ನಿಲ್ಲಬೇಕು
**ತನ್ನನ್ನು ನಂಬಿ ಬಂದ ನಿಷ್ಟಾವಂತ ಎಮ್ಮೆಲ್ಲೆಗಳಿಗೆ ಸೂಕ್ತಸ್ಥಾನ ಮಾನ ನೀಡಬೇಕು. ಅವರನ್ನು ಯಾವುದೇ ಕಾರಣಕ್ಕೂ ಮೂಲೆಗುಂಪು ಮಾಡಬಾರದು.
**ಪಕ್ಷದಲ್ಲಿರುವ ಟೀಕಾಕಾರರ ಬಾಯಿಗೆ ಬೀಗ ಹಾಕಿಸಬೇಕು.ತಮ್ಮನ್ನು ಟೀಕಿಸಲು ಪ್ರಜ್ನಾಪೂರ್ವಕವಾಗಿಯೇ ಕೆಲವರನ್ನು ಛೂ ಬಿಟ್ಟು ಮಜಾ ತೆಗೆದುಕೊಳ್ಳುವ ಮನಸ್ಥಿತಿ ಬದಲಾಗಬೇಕು.
**ಸರ್ಕಾರವನ್ನು ಯಾವುದೇ ಸಂದರ್ಭದಲ್ಲೂ ಅಸ್ಥಿರಗೊಳಿಸುವ ಕೆಲಸ ಬಿಜೆಪಿಗರಿಂದ ಆಗಲೇಬಾರದು.
**ವಿಜಯೇಂದ್ರ ಅವರನ್ನು ದೂರ ಇಡಬೇಕು..ಅವರಿಗೆ ನಿಗಧಿತ ಸ್ಥಾನಮಾನ ಕೊಟ್ಟು ಸುಮ್ಮನಿರಿಸಬೇಕು.ಪಕ್ಷದ ವಿಚಾರಗಳಲ್ಲಿ ಹೆಚ್ಚು ತಲೆ ಹಾಕದಂತೆ ನಿರ್ಬಂಧ ಹೇರಬೇಕು.
**ಪಕ್ಷವನ್ನು ಆಗಾಗ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಯತ್ನಾಳ್ ಅವರಂಥವರಿಗೆ ಕಿವಿ ಹಿಂಡುವ ಕೆಲಸ ನಡೆಯಬೇಕು
ಡಿಕೆಶಿ ಮುಖ್ಯಮಂತ್ರಿಯಾದರೆ ವಿಜಯೇಂದ್ರ ಡಿಸಿಎಮ್ಮಾ..?!ಇದು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿರುವ ಮತ್ತೊಂದು ವಿಚಾರ.ಒಂದು ವೇಳೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿಬಿಟ್ಟರು ಎಂದುಕೊಳ್ಳೋಣ.. ಡಿಸಿಎಂ ಆಗಿ ವಿಜಯೇಂದ್ರ ಅಧಿಕಾರ ಚಲಾಯಿಸು ತ್ತಾರಾ..? ಎನ್ನುವ ಪ್ರಶ್ನೆಗೆ ಸದ್ಯಕ್ಕೆ ದೊರಕಿರುವ ಉತ್ತರ..ಇಲ್ಲ..ಸಾಧ್ಯವೇ ಇಲ್ಲ..ಡಿಕೆಶಿ ಹಾಕಿದ್ದಾರೆನ್ನಲಾ ಗುತ್ತಿರುವ ಕಂಡೀಷನ್ ನಲ್ಲಿ ಪ್ರಮುಖವಾದಂತದ್ದೇ ಅದು. ಬಿಜೆಪಿಯನ್ನು ಒಡೆದ ಮನೆಯನ್ನಾಗಿಸಿದ ದೊಡ್ಡ ಮಟ್ಟದ ಆರೋಪ ಸಧ್ಯ ವಿಜಯೇಂದ್ರ ಅವರ ಮೇಲಿದೆ. ಬಿಜೆಪಿ ಇತಿಹಾಸದಲ್ಲಿ ಇಷ್ಟೊಂದು ಬಿನ್ನಾಭಿಪ್ರಾಯಗಳು ಬಿಜೆಪಿಯಲ್ಲಿ ಹಿಂದೆಂದೂ ಇರಲಿಲ್ಲ. ನಾಯಕತ್ವ ಬದಲಾವಣೆ ಮಾತು ಬಲವಾಗಿ ಕೇಳಿಬರುತ್ತಿರುವ ಸಂದರ್ಭದಲ್ಲಿ ಒಂದ್ವೇಳೆ ಡಿಕೆಶಿ ಸಿಎಮ್ಮಾದ್ರೆ ಡಿಸಿಎಂ ಸ್ಥಾನಕ್ಕೆ ವಿಜಯೇಂದ್ರ ನಿಯೋಜನೆಯಾಗುತ್ತಾರಾ..? ಎನ್ನುವ ಪ್ರಶ್ನೆಗೆ ಇದಕ್ಕೆ ಡಿಕೆಶಿ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗ್ತಿದೆಯಂತೆ. ವಿಜಯೇಂದ್ರ ಅವರನ್ನು ಎಲ್ಲದರಿಂದ ದೂರ ಇಟ್ಟು ಅವರನ್ನು ಕೇವಲ ಶಾಸಕರನ್ನಾಗುಳಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ತಂದು ಕೂರಿಸಬೇಕೆನ್ನುವ ಕಂಡೀಷನ್ ಹಾಕಿದ್ದಾರೆ ಎನ್ನಲಾಗುತ್ತಿದೆ.

ಆದರೆ ಹೈಕಮಾಂಡ್ ಜತೆಗೆ ಆತ್ಮೀಯವಾಗಿರುವ ವಿಜಯೇಂದ್ರ ಅವರ ವಿಚಾರದಲ್ಲಿ ಹೀಗೆ ಆಗುತ್ತಾ..ವಿಜಯೇಂದ್ರ ಅವರನ್ನು ಹೊರಗಿಟ್ಟು ರಾಜ್ಯದಲ್ಲಿ ಬಿಜೆಪಿ ಬದುಕಿರಲು ಸಾಧ್ಯವೇ,.? ವಿಜಯೇಂದ್ರ ಅವರಿಗೆ ಹೀಗಾಗಲು ಅವರ ತಂದೆ ಮಾಜಿ ಸಿಎಂ ಯಡಿಯೂರಪ್ಪ ಒಪ್ಪಿ ಬಿಡ್ತಾರಾ..? ಎನ್ನುವ ಪ್ರಶ್ನೆ ಕಾಡೋದು ಸಹಜ..ವಿಜಯೇಂದ್ರ ಅವರ ಪ್ರಭಾವ ಕಡಿಮೆ ಮಾಡುವ ಕೆಲಸವನ್ನು ಹೈಕಮಾಂಡ್ ಮಾಡಬಹುದೆ ವಿನಃ ವಿಜಯೇಂದ್ರ ಅವರನ್ನು ಸಂಪೂರ್ಣ ಸೈಡ್ ಲೈನ್ ಮಾಡುವ ವಿಚಾರಕ್ಕೆ ಗ್ರೀನ್ ಸಿಗ್ನಲ್ ಸಿಗೋದು ಕಷ್ಟಕಷ್ಟ,,ಹಾಗಾಗಿ ಈ ವಿಚಾರ ಕುತೂಹಲ ಹಿಡಿದಿಟ್ಟುಕೊಂಡಿದೆ.
ಒಂದ್ವೇಳೆ ಡಿಕೆಶಿ ಬಿಜೆಪಿ ಪಾಲಾದ್ರೆ ಬಿಜೆಪಿಗೆ ಲಾಭವೇನು,..? ಇದಕ್ಕೆ ಸಧ್ಯದ ವಿಶ್ಲೇಷಣೆ ಪ್ರಕಾರ. ಬಿಜೆಪಿಗೆ ಒಕ್ಕಲಿಗರ ಪ್ರಾಬಲ್ಯ ದೊರಕಿದಂತಾಗುತ್ತದೆ. ಒಕ್ಕಲಿಗ ಮತಗಳ ಕ್ರೋಢೀಕರಣ ಆಗುತ್ತದೆ.ನಮಗೊಬ್ಬ ಒಕ್ಕಲಿಗ ನಾಯಕ ಸಿಗುತ್ತಿಲ್ಲವಲ್ಲ ಎನ್ನುವ ಬಿಜೆಪಿಯಲ್ಲಿರುವ ಒಕ್ಕಲಿಗರ ಕೊರಗು ದೂರವಾಗಬಹುದು. ಒಕ್ಕಲಿಗ ಪ್ರಾಬಲ್ಯ ಬಿಜೆಪಿಗೆ ಸಿಕ್ಕಂತಾಗುತ್ತದೆ. ವೀರಶೈವ ಲಿಂಗಾಯಿತರು ತಾವು ಬಿಜೆಪಿಯ ಸಮರ್ಥಕರು ಎನ್ನುವುದನ್ನು ಈಗಾಗಲೇ ಪ್ರೂವ್ ಮಾಡಿದ್ದಾರೆ. ಬಿಜೆಪಿಗೆ ಬೇಕಿದ್ದುದು ಸಮರ್ಥ ಒಕ್ಕಲಿಗ ನಾಯಕ.ಅದನ್ನು ಅಶೋಕ್,ಅಶ್ವತ್ಥನಾರಾಯಣ ಅವರಂಥವರು ಪೂರೈಸಲು ಸಾಧ್ಯವಾಗಲೇ ಇಲ್ಲ.ಇಂಥಾ ಸನ್ನಿವೇಶದಲ್ಲಿ ಒಕ್ಕಲಿಗ ನಾಯಕತ್ವದ ನಿರ್ವಾತವನ್ನು ಡಿಕೆಶಿ ಅವರು ತುಂಬಬಲ್ಲರೇನೋ ಎನ್ನಿಸುತ್ತದೆ. ವಿಶ್ಲೇಷಣೆಗಳು ನಡೆಯುತ್ತಿರುವುದೇ ಹಾಗೆ..ಆದರೆ ಅಂದುಕೊಂಡಂತೆಯೇ ಎಲ್ಲಾ ನಡೆಯೊಲ್ಲ.ಏಕೆಂದರೆ ಒಕ್ಕಲಿಗ ಸಮುದಾಯ ಸಂಪೂರ್ಣವಾಗಿ ಡಿಕೆಶಿ ಅವರನ್ನು ಪಕ್ಷಾತೀತ ನಾಯಕ ಎಂದು ಒಪ್ಪಿಕೊಂಡಿಲ್ಲ.ಅದು ಸಧ್ಯಕ್ಕೆ ದೊಡ್ಡ ಗೌಡ್ರ ಬತ್ತಳಿಕೆಯಲ್ಲಿದೆ.ಅದನ್ನು ಕಸಿದುಕೊಳ್ಳುವುದು ಅಂದುಕೊಂಡಷ್ಟು ಸಲೀಸಲ್ಲ..ಆದರೆ ಒಂದಂತೂ ಸತ್ಯ..ಒಂದಷ್ಟುಒಕ್ಕಲಿಗ ಮತಗಳು ಬಿಜೆಪಿ ಕೇಂದ್ರಿಕೃತವಾಗಬಹುದೆನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಇದೆಲ್ಲಾ ಸಾಧ್ಯನಾ..? ಕಾಂಗ್ರೆಸ್ ಸಖ್ಯ ತೊರೆಯುವುದು ಅಷ್ಟೊಂದು ಸಲೀಸಾ.. ಎಲ್ಲಾ ಮರೆತು ಬಿಜೆಪಿಗರು ಅಪ್ಪಿಕೊಳ್ಳುತ್ತಾರಾ..?!ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದೆನ್ನುವ ಲೆಕ್ಕಾಚಾರಗಳ ದೃಷ್ಟಿಯಲ್ಲಿ ಡಿಕೆಶಿ ಕಾಂಗ್ರೆಸ್ ತೊರೆಯಲೂ ಬಹುದು..ಬಿಜೆಪಿಯನ್ನು ಸೇರಿಕೊಳ್ಳಬಹುದು..ಕಾಂಗ್ರೆಸ್ ನಲ್ಲಿ ಸಿಗದ ಮುಖ್ಯಮಂತ್ರಿ ಸ್ಥಾನವನ್ನೂ ಪಡೆಯಬಹುದು ಎಂದಿಟ್ಟುಕೊಳ್ಳೋಣ..ಆದ್ರೆ ವಾಸ್ತವದಲ್ಲಿ ಈ ಲೆಕ್ಕಾಚಾರಗಳು ನಿಜವಾಗ್ತಾವಾ ಎನ್ನುವುದೇ ಕುತೂಹಲ ಹಾಗೂ ಅನುಮಾನ.
ತಮ್ಮ ರಾಜಕೀಯ ಜೀವನದುದ್ದಕ್ಕೂ ಬಿಜೆಪಿಯನ್ನು ಶಪಿಸುತ್ತಲೇ ಬಂದವರು ಡಿಕೆಶಿ.ಸಿಎಂ ಸ್ಥಾನವೊಂದನ್ನು ನೀಡಿಲ್ಲ ಎನ್ನುವುದೊಂದನ್ನು ಬಿಟ್ಟರೆ ಎಲ್ಲಾ ರಾಜಕೀಯ ಸ್ಥಾನಮಾನ-ಅವಕಾಶ-ಸ್ವಾತಂತ್ರ್ಯ ನೀಡಿದೆ ಕಾಂಗ್ರೆಸ್.ಮುಖ್ಯಮಂತ್ರಿ ಮಾಡೋದೆ ಇಲ್ಲ ಎಂದೇನು ಹೈಕಮಾಂಡ್ ಕೂಡ ಹೇಳಿಲ್ಲ.ಕಾಯಿರಿ ಒಳ್ಳೆ ದಿನಗಳು ಬರುತ್ತವೆ ಎಂದ್ಹೇಳಿದೆಯಷ್ಟೆ..ಆದ್ರೆ ಅದನ್ನೇ ತಪ್ಪಾಗಿ ತಿಳಿದುಕೊಂಡು ಡಿಕೆಶಿ ಬಿಜೆಪಿಯವರು ನೀಡಿದ್ದಾರೆನ್ನಲಾಗುತ್ತಿರುವ ಸಿಎಂ ಸ್ಥಾನದ ಆಸೆಗೆ ತಮ್ಮ ರಾಜಕೀಯ ಭವಿಷ್ಯ-ಸಿದ್ದಾಂತ ಬಲಿಕೊಡುತ್ತಾರಾ..? ಅದ್ಹೇಕೋ ಕಷ್ಟ ಎನಿಸುತ್ತದೆ. ಆದ್ರೆ ರಾಜಕೀಯದಲ್ಲಿ ಏನ್ಹೇನೋ ಆಗಿರುವುದಕ್ಕೆ ಇತಿಹಾಸವೇ ಸಾಕ್ಷಿ ಇರುವಾಗ ಡಿಕೆಶಿ ವಿಚಾರದಲ್ಲಿ ಏನ್ ಬೇಕಾದ್ರೂ ಆಗಬಹುದೆನ್ನುವುದು ಕೂಡ ಅಷ್ಟೇ ಸತ್ಯ.
ಕಾಂಗ್ರೆಸ್ ಇದಕ್ಕೆ ಅವಕಾಶ ಕೊಡುತ್ತಾ..? ಖಂಡಿತಾ ಇಲ್ಲ..ಅದರಲ್ಲೂ ಸೋನಿಯಾ,ರಾಹುಲ್ ಅವರ ಮಾತಿಗೆ ಯಾವತ್ತು ಕೊಂಕಾಡಿಲ್ಲ ಡಿಕೆಶಿ. ನಾನು ಅವರ ಮನೆ ಮಗ ಎಂದೇ ಹೇಳಿಕೊಂಡು ಬಂದವರು.ಕೇವಲ ಸಿಎಂ ಸ್ಥಾನದ ಆಸೆಗೆ ಬಲಿಬಿದ್ದು ಗಾಂದಿ ಕುಟುಂಬದ ಎಲ್ಲಾ ಸಂಬಂಧಗಳನ್ನು ಕಳೆದುಕೊಂಡು ಬಿಡ್ತಾ್ರಾ..ತನಗೆ ರಾಜಕೀಯ ಜನ್ಮ ನೀಡಿದ ಕಾಂಗ್ರೆಸ್ ನ ಸಖ್ಯವನ್ನು ಶಾಶ್ವತವಾಗಿ ಕಳೆದುಕೊಂಡು ಬಿಡ್ತಾರಾ..? ಯಾಕೋ ಡೌಟ್ ಎನಿಸ್ತಿದೆ..

ಇನ್ನು ಇದೆಲ್ಲಾ ಮೀರಿ ಬಿಜೆಪಿಗರೇ ಇದಕ್ಕೆ ಒಪ್ಪುತ್ತಾರಾ..? ಎನ್ನುವುದನ್ನು ನೋಡಿದ್ರೆ ಅನುಮಾನ ಎನಿಸುತ್ತದೆ. ಬಿಜೆಪಿಯನ್ನು ಬೈಯ್ಯುತ್ತಲೇ ಬಂದ ಡಿಕೆಶಿಯನ್ನು ಸಿಎಂ ಸ್ಥಾನದಲ್ಲಿ ನೋಡುವುದು..ಅವರನ್ನು ತಮ್ಮ ನಾಯಕರೆಂದು ಒಪ್ಪಿಕೊಳ್ಳುವುದು..ಅವರ ಮುಂದಾಳತ್ವದಲ್ಲಿ ನಡೆಯುವುದನ್ನು ಪಕ್ಷದಲ್ಲಿರುವವರು ಒಪ್ಪಿಕೊಳ್ಳುತ್ತಾರಾ..? ಅನುಮಾನ ಎನಿಸುತ್ತದೆ.ಕೇವಲ ಯತ್ನಾಳ್..ರಮೇಶ್ ಜಾರಕಿಹೊಳಿ ಅವರಂಥವರಿಗೆ ಸೀಮಿತವಾಗಿರುವ ರಾಜಕೀಯ ಬಂಡಾಯ ಪಕ್ಷದೊಳಗೆ ದೊಡ್ಡ ಮಟ್ಟದಲ್ಲಿ ವ್ಯಾಪಿಸುವ ಆತಂಕವಂತೂ ಇದ್ದೇ ಇದೆ ಎನ್ನಲಾಗುತ್ತಿದೆ.
ಹಾಗಾದ್ರೆ ಇದೆಲ್ಲಾ ಡಿಕೆಶಿ ಡ್ರಾಮನಾ..? ಡಿಕೆಶಿ ಬಿಜೆಪಿಗೆ ಹೋಗುತ್ತಾರೆನ್ನುವುದು, ಒಂದಷ್ಟು ಶಾಸಕರನ್ನು ತಮ್ಮ ಜತೆ ಕೊಂಡೊಯ್ಯುತ್ತಾರೆನ್ನುವುದು, ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುತ್ತಾರೆನ್ನುವುದೆಲ್ಲಾ ನಿಜವೋ ಸುಳ್ಳೋ..ನಿಜವಾಗಿದ್ರೆ ಇದು ರಾಜ್ಯ ರಾಜಕೀಯವನ್ನೇ ಬುಡಮೇಲು ಮಾಡುವ ಸಂಗತಿ ಯಾಗೋದಂತೂ ಪಕ್ಕಾ..ಇಲ್ಲಾ ಅಂದ್ರೆ ಕಾಂಗ್ರೆಸ್ ಮತ್ತಷ್ಟು ಸುಭದ್ರವಾಗಿರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ..ಒಂದ್ವೇಳೆ ಈ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎನ್ನುವುದೇ ಆದಲ್ಲಿ ಅದನ್ನು ಖುದ್ದು ಡಿಕೆಶಿ ಅವರೇ ಮಾಡಿಸುತ್ತಿದ್ದಾರೆನ್ನುವುದಾದಲ್ಲಿ ಅದರಿಂದ ಡಿಕೆಶಿಗೆ ಲಾಭವೇನು ಎನ್ನುವ ಪ್ರಶ್ನೆ ಸೃಷ್ಟಿಯಾಗಬಹುದು..ಕೆಲವು ವಿಶ್ವಸನೀಯ ಮೂಲಗಳ ಪ್ರಕಾರ ತಮ್ಮನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಬೇಕು.ಇಲ್ಲವಾದಲ್ಲಿ ನಾನು ಏನ್ ಮಾಡಬಲ್ಲೆ ಎನ್ನುವುದನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುವುದು ಡಿಕೆಶಿ ಉದ್ದೇಶವಾಗಿರಬಹುದೇನೋ..? ಅಥವಾ ಸಿದ್ದರಾಮಯ್ಯ ಅವರಿಗೆ ನಿಮ್ಮಂತೆಯೇ ನನ್ನ ಹಿಂದೆಯೂ ಬೆಂಬಲಿಗ ಶಾಸಕರ ಪಡೆಯಿದೆ ಎನ್ನುವುದನ್ನು ತೋರಿಸುವ ಉದ್ದೇಶವೂ ಇರಬಹುದೇನೋ..? ಒಂದ್ರೀತಿ ಇದೊಂದು ಬ್ಲ್ಯಾಕ್ ಮೇಲ್ ತಂತ್ರಗಾರಿಕೆ ಎಂದು ವಿಶ್ಲೇಷಿಸಲ್ಪಟ್ಟರೂ ಸಧ್ಯಕ್ಕೆ ಡಿಕೆಶಿಗೆ ಹೀಗೆ ಮಾಡದೆ ಬೇರೆ ವಿಧಿಯಿಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷವನ್ನು ತೊರೆಯುವುದೇ ನಿಜವಾದಲ್ಲಿ ತನ್ನ ರಾಜಕೀಯ ಭವಿಷ್ಯ ಏನಾಗಬಹುದು..ಇದರಿಂದ ಏನೆಲ್ಲಾ ಪರಿಣಾಮಗಳಾಗಬಹುದೆನ್ನುವುದರ ಸ್ಪಷ್ಟ ಅರಿವೂ ಡಿಕೆ ಶಿವಕುಮಾರ್ ಅವರಿಗಿದೆ ಇದೆಯಂತೆ.ಎಲ್ಲವೂ ಗೊತ್ತಿದ್ದೇ ಡಿಕೆಶಿ ಬೋಲ್ಡ್ ಆದ ಸ್ಟೆಪ್ ತೆಗೆದುಕೊಳ್ಳೊಕ್ಕೆ ಮುಂದಾಗಿದ್ದಾರೆನ್ನುವುದು ರಾಜಕೀಯದಲ್ಲಿ ವಿಶ್ಲೇಷಣೆ ಆಗುತ್ತಿರುವ ಸಧ್ಯದ ವಿದ್ಯಾಮಾನ.
ಡಿ.ಕೆ ಶಿವಕುಮಾರ್ ಅವರ ಸುತ್ತ ಹೆಣೆದುಕೊಂಡಿರುವ ಸಂಗತಿಗಳು ರಾಜಕೀಯವಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.ಇದಕ್ಕೆ ತೆರೆ ಎಳೆಯುವ ಕೆಲಸ ಡಿ.ಕೆ ಶಿವಕುಮಾರ್ ಅವರಿಂದ ನಡೆಯುತ್ತಿದೆಯಾದರೂ ಯಾವುದೂ ಸ್ಪಷ್ಟವಾಗಿಲ್ಲ.ಇದು ಅನುಮಾನವನ್ನು ಮತ್ತಷ್ಟು ಬಲಗೊಳಿಸುತ್ತಿದೆ. ಕಾದುನೋಡಿ ಕಾಲವೆ ಎಲ್ಲಕ್ಕೂ ಉತ್ತರಿಸುತ್ತದೆ ಎನ್ನುವ ಮಾರ್ಮಿಕತೆಯು ಅರ್ಥವಾಗಿಲ್ಲ..ಇದೆಲ್ಲಕ್ಕೂ ಸ್ಪಷ್ಟತೆ-ಖಚಿತತೆ ಸಿಗಬೇಕೆಂದರೆ ಇನ್ನೊಂದಷ್ಟು ದಿನ ಕಾಯಬೇಕಿದೆಯೇನೋ ಅನ್ನಿಸುತ್ತೆ