EXCLUSIVE..”ಸೈಲೆಂಟ್” ಸುನೀಲ,”ರವಿಶಂಕರ್” ಗುರೂಜಿ ಭೇಟಿ ಮಾಡಿದ್ದೇಕೆ…ಆಶೀರ್ವಾದ ಪಡೆದಿದ್ದೇಕೆ…ಇಲ್ಲಿದೆ ಆ ಸೀಕ್ರೇಟ್..

ಶೀಘ್ರವೇ ರಾಜಕೀಯಕ್ಕೆ ಅಧೀಕೃತ ಎಂಟ್ರಿ…..ಜಿಬಿಎ ಎಲೆಕ್ಷನ್‌ ನಲ್ಲಿ ಸ್ಪರ್ದೆ ಖಚಿತ…..ಅಡಚಣೆ ಎದುರಾಗದಿರುವಂತೆ ಹರಿಸಿ ಆಶೀರ್ವದಿಸಿ ಎಂದು ಮನವಿ.. ಸೈಲೆಂಟ್‌ ಸುನೀಲ ಮತ್ತೆ ಸುದ್ದಿಯಲ್ಲಿದ್ದಾನೆ. ಬೆಂಗಳೂರು ಪಾತಕ ಜಗತ್ತು ಕಂಡ ಅತ್ಯಂತ ನಟೋರಿಯಸ್ ಹೆಸರು ಸುನೀಲನದು.ಯಾವ ವ್ಯಕ್ತಿಯ ಹೆಸರು ಕೇಳಿದ್ರೆ ಒಂದು ಕ್ಷಣ ಅಲರ್ಟ್‌ ಆಗ್ತಿತ್ತೋ ಅದೇ ಹೆಸರು ಇವತ್ತು ಮತ್ತೊಂದು ಮಗ್ಗಲು ಬದಲಿಸಲಿಕ್ಕೆ ಯತ್ನಿಸುತ್ತಿದೆ. ಈ ಕಾರಣಕ್ಕೆ ಸೈಲೆಂಟ್‌ ಸುನೀಲ ಮತ್ತೆ ಸುದ್ದಿಯಲ್ಲಿದ್ದಾನೆ. ಒಂದಷ್ಟು ಅವಧಿಯಿಂದ ಯಾವುದೇ ಆಕ್ಟಿವಿಟಿಸ್‌ ಇಲ್ಲದೆ  ಸೈಲೆಂಟ್‌ ಆಗಿದ್ದ ಸುನೀಲ ಸುದ್ದಿಯಾಗೊಕ್ಕೆ ಕಾರಣವೇ … Read more

ಪದ್ಮಶ್ರೀ ಪುರಸ್ಕೃತ ವೆಂಕಟೇಶ್ ಖಾತೆಗೆ ಕನ್ನ ಹಾಕಿದ ಸೈಬರ್ ಖದೀಮರು

Padmashree awardee Para Athlete K Y Venkatesh loses ninety thousand rupees in his account by cyber criminals

ಇತ್ತೀಚೆಗೆ ವೆಂಕಟೇಶ್ ಅವರಿಗೆ ಮಧ್ಯೆರಾತ್ರಿ 12 ಗಂಟೆಯ ಅವೇಳೆಯಲ್ಲಿ ನಿರಂತರವಾಗಿ ಒಟಿಪಿ ಬಂದಿತಂತೆ. ಹಾಗಾಗಿ ಮಾರನೆಯ ದಿನ ಬ್ಯಾಂಕಿಗೆ ಭೇಟಿ ನೀಡಿ, ವಿಚಾರಿಸಿದಾಗ ತಾವು ಮರಾಮೋಸ ಹೋಗಿರುವುದು ಅನುಭವಕ್ಕೆ ಬಂದಿದೆ. ತಮ್ಮ ಅಕೌಂಟ್‌ನಲ್ಲಿ ಬ್ಯಾಲೆನ್ಸ್‌ ಚೆಕ್ ಮಾಡಿದಾಗ ಹಣ ಕಳೆದುಕೊಂಡಿರೋದು ಸ್ಪಷ್ಟವಾಗಿದೆ. ಈ ಸಂಬಂಧ ವೆಂಕಟೇಶ್ ಅವರು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.