ಬಿಡಿಭಾಗ ಖರೀದಿಯಲ್ಲಿ ಕೋಟ್ಯಾಂತರ ಗೋಲ್ಮಾಲ್‌,ಬಿಎಂಟಿಸಿಯ 8 ಕಳಂಕಿತ ಅಧಿಕಾರಿ-ಸಿಬ್ಬಂದಿ ಸಸ್ಪೆಂಡ್.

ಬೆಂಗಳೂರು: ಬಿಎಂಟಿಸಿಯಲ್ಲಿ ಮತ್ತೊಂದು ಬೃಹತ್‌ ಅಕ್ರಮ ಪತ್ತೆಯಾಗಿದೆ. ಬಿಡಿಭಾಗಗಳ ಖರೀದಿಯಲ್ಲಿ ಕೋಟ್ಯಾಂತರ ಅಕ್ರಮ ನಡೆದಿರುವುದು ದೃಢಪಟ್ಟಿರುವುದರಿಂದ ಉಗ್ರಾಣ ವಿಭಾಗದ 8 ಅಧಿಕಾರಿ-ಸಿಬ್ಬಂದಿ ಅಮಾನತ್ತು ಮಾಡಲಾಗಿದೆ. ಶಿಸ್ತುಪಾಲನಾಧಿಕಾರಿಯೂ ಆಗಿರುವ  ಕೆಎಸ್‌ ಆರ್‌ ಟಿಸಿ ಎಂಡಿ ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ. ಬಿಎಂಟಿಸಿಯಲ್ಲಿ ಕಣ್ಣಾಯಿಸಿದೆಡೆಯಲ್ಲೆಲ್ಲಾ ಅಕ್ರಮವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಸಾಲು ಸಾಲು ಅಕ್ರಮಗಳಲ್ಲಿ ಇಲ್ಲಿನ ಅಧಿಕಾರಿ ಸಿಬ್ಬಂದಿ ಶಾಮೀಲು ಆಗಿರುತ್ತಾರೆ.ಸುಳ್ಳು ಲೆಕ್ಕ ಕೊಟ್ಟು ನಿಗಮಕ್ಕೆ ಪಂಗನಾಮ ಹಾಕುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.ತಮ್ಮ  ವಂಚನೆಯಿಂದಲೇ ಕೋಟ್ಯಾಂತರ ಹಣ ಕಮಾಯಿಸುತ್ತಿದ್ದಾರೆ.ಇವರ ಅಕ್ರಮಗಳಿಂದ ನಷ್ಟದಲ್ಲಿರುವ ನಿಗಮಕ್ಕೆ … Read more

ಬಿಡಿಎ ಆರ್ಥಿಕ ಸದಸ್ಯ( FM ) ಡಾ.ಲೋಕೇಶ್ “ಖುರ್ಚಿ” ಅಲುಗಿಸುವ “ಧಮ್ಮು-ತಾಕತ್ತು” ಯಾರಿಗಿದೆ..?!

-ಬಿಡಿಎನಲ್ಲಿ ನಾಲ್ಕು ವರ್ಷಕ್ಕಿಂತ ಸುಧೀರ್ಘ ಅವಧಿಯಿಂದಲೂ ಖುರ್ಚಿಗೆ ಅಂಟಿಕೊಂಡಿದ್ದಾರಂತೆ ಡಾ.ಲೋಕೇಶ್‌ -ಎರಡು ಬಾರಿ ವರ್ಗಾವಣೆಯಾದಾಗ್ಲೂ ಸರ್ಕಾರವನ್ನೇ ಮ್ಯಾನೇಜ್‌ ಮಾಡಿ ರದ್ದುಮಾಡಿಸಿಕೊಂಡ ಆರೋಪ ಅವರ ಮೇಲಿದೆ ‌-ಇವತ್ತಿಗೆ  ಬಿಡಿಎನ ದಿ ಮೋಸ್ಟ್‌ ಪವರ್‌ ಫುಲ್‌ ಮ್ಯಾನ್‌ ಎಂದೇ ಹೆಸರಾಗಿದ್ದಾರಂತೆ ಡಾ.ಲೋಕೇಶ್ -ಅಧ್ಯಕ್ಷ ಹ್ಯಾರೀಸ್‌,ಕಮಿಷನರ್‌ ಮಣಿವಣ್ಣನ್‌ ವಿರುದ್ದವೇ ತೊಡೆ ತಟ್ಟಬಹುದಾದ ಕೆಪಾಸಿಟಿ ಇರುವ ಅಧಿಕಾರಿಯಂತೆ ಲೋಕೇಶ್‌ ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ದಿ ಮೋಸ್ಟ್‌ ಪವರ ಫುಲ್‌ ಪರ್ಸನ್‌ ಯಾರು ಎಂದು ಕೇಳಿದ್ರೆ ಅಧ್ಯಕ್ಷ ಎನ್‌ ಎ ಹ್ಯಾರೀಸ್‌ ಮತ್ತು … Read more

“ಚಿಂತಕರ ಚಾವಡಿ”(ವಿಧಾನಪರಿಷತ್‌) ಗೆ ಕ್ರೇಜಿಸ್ಟಾರ್‌ ರವಿಚಂದ್ರನ್‌..ಅಧಿಕಾರಕ್ಕೆ ಆಸೆಪಡದ “ಕನಸುಗಾರ”ನಿಗೆ MLC ಭಾಗ್ಯ..!

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ನಿರ್ದೇಶಕ ಹಾಗೂ ತಂತ್ರಜ್ಞ ವಿ. ರವಿಚಂದ್ರನ್ ಅವರಿಗೆ ವಿಧಾನ ಪರಿಷತ್ ಪ್ರವೇಶಿಸುವ ಅವಕಾಶಗಳು ದಟ್ಟವಾಗಿವೆ. ಕಾಂಗ್ರೆಸ್ ಹೈಕಮಾಂಡ್ ರವಿಚಂದ್ರನ್ ಅವರ ನಾಮನಿರ್ದೇಶನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಇದರ ಜೊತೆಗೆ ಇನ್ನಿಬ್ಬರಿಗೂ ವಿಧಾನ ಪರಿಷತ್ ಪ್ರವೇಶಿಸುವ ಅವಕಾಶ ಬಹುತೇಕ ನಿಕ್ಕಿಯಾಗಿದೆಯಂತೆ. ಇತ್ತೀಚೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರವಿಚಂದ್ರನ್ ಅವರ ನಡುವೆ ಒಂದಷ್ಟು ಸುತ್ತಿನ ಮಾತುಗಳು ಮಾತುಕತೆಗಳು ನಡೆದಿದ್ದರ ಇಂದಿನ ರಹಸ್ಯವೇನು ಎನ್ನುವುದು ಈ ನಾಮನಿರ್ದೇಶನದಿಂದ ಸ್ಪಷ್ಟವಾಗಿದೆ. … Read more

EXCLUSIVE.. ಸರ್ಕಾರಿ ಕಚೇರಿಯಲ್ಲೇ “ಪರಿಸರಾಧಿಕಾರಿ”ಯ ಭರ್ಜರಿ ಬಾಡೂಟ..!-ನಿವೃತ್ತಿ ವೇಳೆಯಲ್ಲೇ “ಕಂಟಕ” ಮೈಮೇಲೆ ಎಳೆದುಕೊಂಡ ಮಂಜುನಾಥ್..?

****ರಾಮನಗರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ  ಕಚೇರಿಯಲ್ಲಿಯೇ ಮಟ ಮಟವೇ ಮದ್ಯಾಹ್ನ ಭರ್ಜರಿ ಬಾಡೂಟ  ****ರಾಮನಗರ ಪರಿಸರಾಧಿಕಾರಿ ಮಂಜುನಾಥ್‌ ಅವರಿಗೆ ಸಿಬ್ಬಂದಿಗೆ ಮಾಂಸದೂಟ  ****ಸರ್ಕಾರಿ ಕಚೇರಿಯಲ್ಲಿ ಖಾಸಗಿ ಉದ್ದೇಶದ ಕಾರ್ಯಕ್ರಮ-ಸಂಭ್ರಮಾಚರಣೆಗೆ ಅವಕಾಶವಿಲ್ಲ ಎನ್ನುತ್ತೆ ಸರ್ಕಾರದ ಸುತ್ತೋಲೆ  ****ನಿಯಮ ಉಲ್ಲಂಘಿಸಿದ್ರೆ ಆಗುವ ದುಷ್ಪರಿಣಾಮಗಳ ಮಾಹಿತಿಯಿದ್ದಾಗ್ಯೂ ನಿರ್ಲಕ್ಷ್ಯ ವಹಿಸಿದ್ರಾ ಮಂಜುನಾಥ್‌ ****ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ “ಆಡಳಿತ”ವನ್ನೇ “ಮ್ಯಾನೇಜ್‌” ಮಾಡುವುದಾಗಿ ಆತ್ಮೀಯರ ಬಳಿ ಹೇಳಿಕೊಂಡಿದ್ದಾರಾ ಮಂಜುನಾಥ್‌..!?  ****ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆಯೇ  ದಕ್ಷ ಐಎಫ್‌ ಎಸ್‌ ಅಧಿಕಾರಿ ಗೋಕುಲ್‌     ಬೆಂಗಳೂರು(ರಾಮನಗರ): … Read more

BIG IMPACT:ಕನ್ನಡ ಫ್ಲ್ಯಾಶ್‌ ನ್ಯೂಸ್‌ ವರದಿ ಬೆನ್ನಲ್ಲಿ ನಾಲ್ಕು ಸಾರಿಗೆ ನಿಗಮಗಳಿಗೆ 1700ಕೋಟಿ ಬಿಡುಗಡೆ

ಬೆಂಗಳೂರು: ಇಂಪ್ಯಾಕ್ಟ್‌ ಅಂದ್ರೆ ಇದು.. ಕನ್ನಡ ಫ್ಲ್ಯಾಶ್‌ ನ್ಯೂಸ್‌ ವರದಿ ಬೆನ್ನಲ್ಲಿ ರಾಜ್ಯ ಸರ್ಕಾರ ನಾಲ್ಕು ನಿಗಮಗಳಿಗೆ ೧೭೦೦ ಕೋಟಿ ಹಣ ಬಿಡುಗಡೆ ಮಾಡಿದೆ.ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಉಚಿತ ಸಾರಿಗೆ ಸೇವೆ ನೀಡಿದ್ದರಿಂದ ನಾಲ್ಕು ವರ್ಷಗಳಲ್ಲಿ ನಾಲ್ಕು ಸಾರಿಗೆ ನಿಗಮಗಳಿಗೆ 5418 ಕೋಟಿ ಹೊರೆ ಆಗಿತ್ತು.ರಾಜ್ಯ ಸರ್ಕಾರದಿಂದ ನೆರವು ಕೋರಿದರೂ ಯಾವುದೇ ಸಹಾಯ ದೊರೆತಿರಲಿಲ್ಲ.ಈ ಹಿನ್ನಲೆಯಲ್ಲಿ ಕೆಎಸ್‌ ಆರ್‌ ಟಿಸಿ ಎಂಡಿ ಅವರು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಅನುದಾನ ಬಿಡುಗಡೆ … Read more

SUPER EXCLUSIVE: GBA ಅಂಗಳದಲ್ಲಿ ಸ್ಪೋಟಕ ಬೆಳವಣಿಗೆ.. ರದ್ದಾಗಲಿದೆಯೇ 5 ಪಾಲಿಕೆ.. 2 ಸಾಕೆನ್ನುತ್ತಿದೆಯೇ ಸಮಿತಿ..!?

ಬೆಂಗಳೂರು:ಇದು ಎಷ್ಟರ ಮಟ್ಟಿಗೆ ನಿಜನೋ ಗೊತ್ತಿಲ್ಲ..ಆದರೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ(GREATER BENGALURU AUTHORITY) ದ ಅಂಗಳದಲ್ಲಿ ಸ್ಪೋಟಕ ವಿದ್ಯಾಮಾನವೊಂದು ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆಡಳಿತಾತ್ಮಕವಾಗಿ ವ್ಯವಸ್ಥೆ ಸರಿ ಹೋಗಬೇಕೆನ್ನುವ ಉದ್ದೇಶದಲ್ಲಿ ಸರ್ಕಾರ ತೂಗಿ ಅಳೆದು ಅಖಂಡವಾಗಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು  ಐದು ಪಾಲಿಕೆಗಳನ್ನಾಗಿ ವಿಭಜಿಸಿತ್ತು.ಆದರೆ ಅದರಿಂದ ಸರಿ ಹೋಗಬೇಕಿದ್ದ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ ಎನ್ನುವ ವಿಚಾರ ಸರ್ಕಾರದ ನಿದ್ದೆಗೆಡಿಸಿದೆಯಂತೆ.ಹಾಗಾಗಿಯೇ ಐದು ಪಾಲಿಕೆಗಳ ವ್ಯವಸ್ಥೆಯನ್ನು ರದ್ದು ಮಾಡಿ ಎರಡು ಪಾಲಿಕೆಗಳನ್ನಾಗಿ ಮಾಡಿದರೆ ಹೇಗೆ ಎನ್ನುವ ನಿಟ್ಟಿನಲ್ಲಿ … Read more

EXCLUSIVE:”ಅಪ್ಪ” “ಕಾಂಗ್ರೆಸ್” ನಲ್ಲಿ……”ಮಗ” “ಬಿಜೆಪಿ”ಗೆ …ಪೊಲಿಟಿಕಲ್‌ ಗೇಮ್‌ ನಲ್ಲಿ ಆರ್‌.”ಅಶೋಕ್” ಸಕ್ಸೆಸ್..!

ರಾಜಕೀಯವೇ ಹಾಗೆ..ಇಲ್ಲಿ ಎಲ್ಲವೂ ಹೀಗೆಯೇ ನಡೆಯುತ್ತೆ ಎಂದು ಹೇಳೊಕ್ಕೆ ಸಾಧ್ಯವೇ ಇಲ್ಲ…ಈಗ ಇದ್ದ ಸ್ಥಿತಿ ಮರುಕ್ಷಣ ಇರೊಲ್ಲ..ಈಗಿನ ಶತೃ ಮರುಕ್ಷಣ ಮಿತ್ರನಾಗುತ್ತಾನೆ..ಮಿತ್ರ ಮರುಕ್ಷಣದಲ್ಲಿ ಶತೃವಾಗಿಬಿಡುತ್ತಾನೆ…ಶತೃವಿನ ಶತೃ..ಮಿತ್ರನಾಗಿಬಿಡ್ತಾನೆ..ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ರಾಜಕೀಯ ಪ್ರಹಸನ ಈ ಬಗ್ಗೆ ಬರೆಯುವಂತೆ ಮಾಡಿದೆ.ತನ್ನ ರಾಜಕೀಯ ಚಾಣಾಕ್ಷತನದಿಂದ ಆರ್.‌ಅಶೋಕ್‌ ತನ್ನ ರಾಜಕೀಯ ಭವಿಷ್ಯಕ್ಕೆ ಸವಾಲಾಗಬಹುದಾಗಿದ್ದ ಸಮಸ್ಯೆಯೊಂದನ್ನು ಅನಾಯಾಸವಾಗಿ ಬಗೆಹರಿಸಿಕೊಂಡಿದ್ದಾರೆ. ಅದ್ಹೇಗೆ ಅನ್ತೀರಾ.. ಅದರ ರೋಚಕ ಕಥಾನಕ ನೀವೇ ಓದ್ಬಿಡಿ.. ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪ್ರಹಸನ … Read more

EXCLUSIVE:”ಸಾರಿಗೆ ನಿಗಮ”ಗಳಿಗೆ ಸರ್ಕಾರವೇ “ಸಾಲಗಾರ”.. ಉಚಿತ ಪ್ರಯಾಣ ಸೇವೆ ನೀಡಿದ 4 ಸಾರಿಗೆ ನಿಗಮಗಳಿಗೆ ನೀಡಬೇಕಿರುವ “ಬಾಕಿ”ಯೇ 5418 ಕೋಟಿ…!

ಬೆಂಗಳೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಿಂದ ಕೋಟ್ಯಾಂತರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯೇನೋ ಆಗಿದೆ.ಆದರೆ ಆರ್ಥಿಕ ಹೊರೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.ಯೋಜನೆಗೆ ಅಗತ್ಯವಿರುವ ಅನುದಾನವನ್ನು ಕಾಲಕಾಲಕ್ಕೆ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಮಾತು ತಪ್ಪಿದೆ ಎನ್ನುವುದು ದಾಖಲೆಗಳಿಂದಲೇ ಬಯಲಾಗಿದೆ.ರಾಜ್ಯ ಸರ್ಕಾರದ ಮಾತು ಕೇಳಿ ಸೇವೆ ಒದಗಿಸಿದ್ದ ಸಾರಿಗೆ ನಿಗಮಗಳು ತಮ್ಮ ಮೇಲೆ ಸೃಷ್ಟಿಯಾಗಿರುವ ಆರ್ಥಿಕ ಹೊರೆ ಸಹಿಸಿಕೊಳ್ಳಲಿಕ್ಕಾಗದೆ ಕುಗ್ಗಿ ಹೋಗಿದೆ.ನೀವು ನಮಗೆ ಬರಬೇಕಿರುವ ಬಾಕಿಯನ್ನು ಪಾವತಿಸದಿದ್ದರೆ ಸೇವೆ ಮುಂದುವರೆಸುವುದು ಕಷ್ಟ ಎನ್ನುವ ದಾಟಿಯಲ್ಲಿ ಅನುದಾನಕ್ಕೆ ಮೊರೆ … Read more

ದುಡುಕಿಬಿಟ್ರಾ ಸಚಿವ ಭೈರತಿ ಸುರೇಶ್..?”ಉಗುರಿ”ನಲ್ಲಿ ಹೋಗೋದಕ್ಕೆ “ಕೊಡಲಿ” ತಗೊಂಡ್ ಬಿಟ್ರಾ..?

ಸಾರಿಗೆ ಸಚಿವ ಭೈರತಿ ಸುರೇಶ್‌(TRANSPORT MINISTER BYRATHI SURESH) ಗೆ ಇದಕ್ಕಿಂತ ದೊಡ್ಡ  ಮುಖಭಂಗ ಮತ್ತೊಂದಿಲ್ವೇನೋ..? ಅವರಿಗೆ ಕೊನೆಗೂ ನಮ್ಮ ಸಾರಿಗೆ ಸಿಬ್ಬಂದಿಯ ಅಸಲಿತನ ಅರಿವಾಯ್ತಲ್ಲ..ಸಾರಿಗೆ ನಿಗಮಗಳಲ್ಲಿ ಹೀಗೊಂದು ಅಭಿಪ್ರಾಯ ವ್ಯಕ್ತವಾಗ್ತಿದೆ. ಇಡೀ ಸಾರಿಗೆ ಇಲಾಖೆ(TRANSPORT DEPARTMENT)ಯೇ ನನ್ನ ಕುಟುಂಬವಿದ್ದಂತೆ ಎಂದು ಹೇಳಿಕೊಳ್ಳುವ ಸಚಿವರಿಗೆ, ತನ್ನ  ಕುಟುಂಬದ ಸದಸ್ಯರ ಬಗ್ಗೆ ಕನಿಷ್ಟ ಕಾಳಜಿ-ಮಾನವೀಯತೆ ಖಂಡಿತಾ ಇರಬೇಕಿತ್ತು.ಇದೀಗ ಆತ ನಿರಪರಾಧಿ ಸತ್ಯ ಮನವರಿಕೆ ಆದಂತಿದೆ.ಹಾಗಾಗಿ ಆತನ ಸಸ್ಪೆಂಡ್‌ ಆದೇಶ ವಾಪಸ್‌ ಪಡೆಯುವಂತೆ ಆದೇಶಿಸಿದ್ದಾರೆನ್ನುವುದು ವರ್ತಮಾನ.ಆದರೆ  ಈಗ ಚರ್ಚೆ ಆಗುತ್ತಿರುವ … Read more

ಮನುಷ್ಯತ್ವ..ಮಾನವ ಸಂಬಂಧ ಸಾವನ್ನೂ ಮೀರಿದ್ದು.. ಅದೇ ಸತ್ಯ..ಅದೇ ಅಂತಿಮ.

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮರ ಸಾವಿನಲ್ಲಿ ಪತ್ರಕರ್ತನಿಗೆ ಗೋಚರಿಸಿದ ಕಟು ಸತ್ಯ..! ಮನುಷ್ಯ ಹುಟ್ಟತ್ತಲೇ ಮಾನವತವಾದಿ. ಮನುಷ್ಯನಿಗೆ ಮನುಷ್ಯತ್ವ ಕಲಿಯಲು ಯಾವುದೇ ಧರ್ಮ ಗ್ರಂಥಗಳು ಬೇಕಿಲ್ಲ. ಅದು ಹುಟ್ಟತ್ತಲೇ ಸಿಗುವ ಮೂಲಗುಣ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಮನುಷ್ಯ ತನ್ನ ಸ್ವಾರ್ಥ ಗುಣಕ್ಕಾಗಿ ಮರಕ್ಕೆ ಬಳ್ಳಿಗಳು ಬೆಳದಂತೆ ಅಡ್ಡಾದಿಡ್ಡಿಯಾಗಿ ಯೋಚಿಸಲು ಆರಂಭವಿಸುವಲ್ಲಿ ನಾವು ಇವತ್ತು ಕೇಳುವ, ಓದುವ, ನೋಡುವ ವಾದಗಳು ಹುಟ್ಟಿಕೊಂಡಿದೆ. ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಅಟ್ರಾಸಿಟಿ ನಡೆದರೂ ಇನ್ನೆಲ್ಲೋ ಕೂತು ಅದಕ್ಕೆ ಮರುಕಪಡಬಹುದು. ಹಾಗೊಂದು ತೀವ್ರವಾದ … Read more