advertise here

Search

ಪೋಷಕರ ವಿರೋಧದ ನಡುವೆ ಅಂತರ್ಧರ್ಮೀಯ ವಿವಾಹವಾದ ಕುಂಭಮೇಳದ ಮೊನಾಲಿಸಾ

monalisa bhosle marriage

2025ರ ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ಕೇವಲ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಾ, ತನ್ನ ಅಪ್ರತಿಮ ಸೌಂದರ್ಯದಿಂದಲೇ ಇಡೀ ದೇಶದ ಗಮನ ಸೆಳೆದಿದ್ದ ಮೊನಾಲಿಸಾ ಭೋಸ್ಲೆ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಬುಧವಾರ (ಮಾರ್ಚ್ 11, 2026) ಸಂಜೆ ಕೇರಳದ ತಿರುವನಂತಪುರಂ ಸಮೀಪದ ವಿಝಿಂಜಂನಲ್ಲಿರುವ ಅರುಮನೂರು ಶ್ರೀ ನೈನಾರ್ ದೇವಸ್ಥಾನದಲ್ಲಿ ಮೊನಾಲಿಸಾ ಅವರು ತಮ್ಮ ಪ್ರಿಯಕರ, ನಟ ಮೊಹಮ್ಮದ್ ಫರ್ಮಾನ್ ಖಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದಾರೆ.

ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾದ ಮೊನಾಲಿಸಾ ಮತ್ತು ಮಹಾರಾಷ್ಟ್ರ ಮೂಲದ ನಟ ಫರ್ಮಾನ್ ಖಾನ್ ಕಳೆದ ಆರು ತಿಂಗಳಿನಿಂದ ಪ್ರೀತಿಸುತ್ತಿದ್ದರು. ಇವರಿಬ್ಬರ ಭೇಟಿ ಒಂದು ಚಲನಚಿತ್ರದ ಚಿತ್ರೀಕರಣದ ಸೆಟ್‌ನಲ್ಲಿ ನಡೆದಿತ್ತು ಎನ್ನಲಾಗಿದೆ. ಆದರೆ, ಇವರದು ಅಂತರ್ಧರ್ಮೀಯ ಪ್ರೇಮವಾಗಿದ್ದರಿಂದ ಮೊನಾಲಿಸಾ ಅವರ ತಂದೆ ಜೈ ಸಿಂಗ್ ಭೋಸ್ಲೆ ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮೊನಾಲಿಸಾಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಲು ಪೋಷಕರು ಒತ್ತಡ ಹೇರುತ್ತಿದ್ದರು ಎಂದು ವರದಿಯಾಗಿದೆ.

ಪೊಲೀಸ್ ರಕ್ಷಣೆ ಮತ್ತು ಮದುವೆ:

ಮೊನಾಲಿಸಾ ಅವರು ಕೇರಳದ ಪೂವಾರ್‌ನಲ್ಲಿ ತಮ್ಮ ಚೊಚ್ಚಲ ಮಲಯಾಳಂ ಸಿನಿಮಾ ‘ನಾಗಮ್ಮ’ ಚಿತ್ರೀಕರಣದಲ್ಲಿದ್ದಾಗ, ಅವರ ತಂದೆ ಅಲ್ಲಿಗೆ ಬಂದು ಅವರನ್ನು ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಪ್ರೇಮಿಗಳಿಬ್ಬರೂ ತಿರುವನಂತಪುರಂನ ತಂಪಾನೂರು ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದರು. ತನಗೆ ಇಷ್ಟಬಂದವರನ್ನು ಮದುವೆಯಾಗುವ ಕಾನೂನುಬದ್ಧ ಹಕ್ಕು ಅವರಿಗಿದೆ ಎಂದು ಪೊಲೀಸರು ಮನವರಿಕೆ ಮಾಡಿಕೊಟ್ಟರು. ಬಳಿಕ ಈ ಜೋಡಿ ಕೇರಳವನ್ನು ‘ಸುರಕ್ಷಿತ ತಾಣ’ ಎಂದು ಆಯ್ದುಕೊಂಡು ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾದರು.

ALSO READ :  ಪಿಇಎಸ್ ವಿವಿಯಲ್ಲಿ ವಿದ್ಯಾರ್ಥಿಗೆ 'ಭಯೋತ್ಪಾದಕ' ಪಟ್ಟ: ಪ್ರೊಫೆಸರ್ ಅಮಾನತು!

ಇದನ್ನೂ ಓದಿ | ಮಂಡ್ಯದ ಪಿಎಸ್‌ಐ ಅಶ್ವತ್ಥಪ್ಪ ಸಾಗರ್ ಯುಪಿಎಸ್‌ಸಿ ಸಾಧನೆ

ವಿಶೇಷವೆಂದರೆ, ಈ ವಿವಾಹಕ್ಕೆ ಕೇರಳದ ಪ್ರಮುಖ ರಾಜಕೀಯ ನಾಯಕರು ಸಾಕ್ಷಿಯಾದರು. ಕೇರಳದ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಮತ್ತು ಸಂಸದ ಎ.ಎ.ರಹೀಮ್ ಅವರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು. ಸಚಿವ ಶಿವನ್ ಕುಟ್ಟಿ ಈ ಮದುವೆಯನ್ನು ‘ದಿ ರಿಯಲ್ ಕೇರಳ ಸ್ಟೋರಿ’ ಎಂದು ಬಣ್ಣಿಸಿ, ಕೇರಳವು ಜಾತಿ-ಧರ್ಮದ ಹಂಗಿಲ್ಲದ ಪ್ರೇಮಿಗಳಿಗೆ ಸುರಕ್ಷಿತ ನೆಲೆಯಾಗಿದೆ ಎಂದು ಹೇಳಿದ್ದಾರೆ.


Political News

ra.chinthan v/s mumtas nelyadka talkwar ರ.ಚಿಂತನ್‌ v/s ಮುಮ್ತಾಸ್ ನೆಲ್ಯಡ್ಕ “ಟಾಕ್‌ ವಾರ್‌”: ಯಾರು ಸರಿ..ಯಾರು ತಪ್ಪು..!?

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

Scroll to Top