

ಬೆಂಗಳೂರು:ಇದು ನಿಜಕ್ಕೂ ಅನ್ಯಾಯದ ಹಾಗೂ ಅಮಾನವೀಯತೆಯ ಕೆಲಸವೇ ಸರಿ..ಯಾವ ಒಂದು ಯೋಜನೆ ನಿರ್ದಿಷ್ಟ ಸಮುದಾಯಕ್ಕೆ, ಅದರ ಬಳಕೆಗೆ , ಕಲ್ಯಾಣಕ್ಕೆ ಒದಗಿಬರ ಬೇಕಿತ್ತೋ… ಅದನ್ನೇ ಕಾಣೆಯಾಗುವಂತೆ ಮಾಡಲಾಗುತ್ತದೆ ಎಂದ್ರೆ ಅದು ಹಣದ ದುರುಪಯೋಗವಲ್ಲದೇ,ಯೋಜನೆಯೊಂದರ ಲಾಭ-ಪ್ರಯೋಜನದಿಂದ ಆ ಸಮುದಾಯವನ್ನು ವಂಚಿಸಿದಂತೆ ಅಲ್ಲವೇ..? ಅಂತದ್ದೊಂದು ಕೆಲಸ ಹಿಂದಿನ ಬಿಬಿಎಂಪಿ ಹಾಗೂ ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಂದ ನಡೆದಿದೆ..ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ಇಡೀ ವ್ಯವಸ್ಥೆಯನ್ನು ಸರಿ ಮಾಡಲು ಹೊರಟಂತಿರುವ ಐಎಎಸ್ ಅಧಿಕಾರಿ ಕೆ.ವಿ ರಾಜೇಂದ್ರನ್ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.


ಅಂದ್ಹಾಗೆ ಇಂತದ್ದೊಂದು ಅಮಾನವೀಯ, ಅವೈಜ್ನಾನಿಕ ಕೆಲಸ ನಡೆದಿರುವುದು ಪಶ್ಚಿಮ ಕಾರ್ಪೊರೇಷನ್ ಗೆ ಒಳಪಡುವ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದಲ್ಲಿ.ಶಾಸಕರು ಸನ್ಮಾನ್ಯ ಕೆ. ಗೋಪಾಲಯ್ಯ.ಅವರ ಗಮನಕ್ಕೆ ತಾರದೆ ಈ ಕೆಲಸ ಮಾಡಲಾಗಿದೆಯೋ ಅಥವಾ ಅವರ ಗಮನದಲ್ಲಿದ್ದುಕೊಂಡೇ ಇಂತದ್ದೊಂದು ಅಚಾತುರ್ಯವನ್ನು ಹಿಂದಿನ ಬಿಬಿಎಂಪಿ ಅವಧಿಯಲ್ಲಿ ಮಾಡಲಾ್ಗಿದೆಯೋ ಎನ್ನುವುದು ಸರಿಯಾದ ತನಿಖೆ ನಡೆಸಿದ್ರೆ ಗೊತ್ತಾಗಬಹುದೇನೋ..? ತಿಮ್ಮರಸು ಅವರಂಥ ಅಧಿಕಾರಿಗಳು ಕ್ಷೇತ್ರದ ಕಾರ್ಯಪಾಲಕ ಅಭಿಯಂತರೆರಾಗಿ ಅನೇಕ ವರ್ಷ ಕೆಲಸ ಮಾಡಿದಾಗಲೂ ಕ್ಷೇತ್ರದ ಶಾಸಕರ ಹೆಸರಿಗೆ ಕಳಂಕ ತರುವಂಥ ಕೆಲಸ ಮಾಡಿರಲಿಲ್ಲ.ಆದ್ರೆ ಹೇಮಂತ್ ಅನ್ನುವಂತ ಅಧಿಕಾರಿ ಯಾವಾಗ ಇಲ್ಲಿ ಬಂದು ವಕ್ಕರಿಸಿದ್ರೋ ಇಂಥಾ ಸಾಕಷ್ಟು ಬಾನಗಢಿಗಳು ನಡೆದಿವೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.ಇದಕ್ಕೆ ಗೋಪಾಲಯ್ಯ ಕಡಿವಾಣ ಹಾಕದಿದ್ದಲ್ಲಿ ಅವರ ಹೆಸರನ್ನೇ ಅಡವಿಟ್ಟುಕೊಂಡು ಈ ಅಧಿಕಾರಿ ಇನ್ನು ಏನೇನು ಮಾಡಿಯಾನಪ್ಪಾ ಎಂದು ಕ್ಷೇತ್ರದ ಮಂದಿ ಮಾತನಾಡಿಕೊಳ್ಳಲಾರಂಭಿಸಿರುವುದು ಕೂಡ ಅಷ್ಟೇ ಸತ್ಯ.


ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರವೊಂದರಲ್ಲಿ ಇಂತದ್ದೊಂದು ಕಣ್ಣಿಗೆ ರಾಚುವ ರೀತಿಯಲ್ಲಿ ಮಾಡಲಾಗಿದೆ ಎನ್ನಲಾಗುತ್ತಿರುವ ತಪ್ಪು ಕಂಡು ಅದ್ಹೇಕೆ ಶಾಸಕ ಗೋಪಾಲಯ್ಯ ಸುಮ್ಮನಿದ್ದಾರೋ ಗೊತ್ತಿಲ್ಲ( ಇಂಥಾ ಅವ್ಯವಸ್ಥೆ-ಯಡವಟ್ಟುಗಳನ್ನು ಅವರು ಸಹಿಸೊಲ್ಲ..ಹಾಗೆ ಮಾಡಿದವರನ್ನು ಕ್ಷೇತ್ರದಲ್ಲಿ ಒಂದ್ ಕ್ಷಣವೂ ಇಟ್ಟುಕೊಳ್ಳೊಲ್ಲ..ಎನ್ನುವ ಮಾತಿರುವಾಗ ಹೇಮಂತ್ ಕುಮಾರ್ ಅವರಂಥ ಅಧಿಕಾರಿ ಮಾಡಿದ್ದಾರೆ ಎನ್ನಲಾಗುತ್ತಿರುವ ಯಡವಟ್ಟನ್ನು ಹೇಗೆ ಸಹಿಸಿಕೊಂಡಿದ್ದಾರೋ ಗೊತ್ತಾಗುತ್ತಿಲ್ಲ..!?).ಏಕೆಂದರೆ ಇದು ಪರಿಶಿಷ್ಟ ಜಾತಿ./ಪರಿಶಿಷ್ಟ ವರ್ಗದ ಕಲ್ಯಾಣಕ್ಕೆಂದೆ ನಿರ್ದಿಷ್ಟವಾಗಿರುವ ಯೋಜನೆ ಮತ್ತು ಅವರ ಕಲ್ಯಾಣಕ್ಕೆಂದೇ ಮೀಸಲಿಟ್ಟ ಹಣದ ದುರ್ಬಳಕೆಯಂತ ಗಂಭೀರ ಪ್ರಕರಣ.ಮಾರೇನಹಳ್ಳಿ ವಾರ್ಡ್( ಈಗಿನ ರಾಜೀವ್ ನಗರ ವಾರ್ಡ್ ) ನ ಗೌತಮ್ ನಗರ ಸ್ಲಂ ನಲ್ಲಿ ರಸ್ತೆ ಅಭಿವೃದ್ದಿ, ಸುಧಾರಣೆ, ನಿರ್ವಹಣೆ ಮತ್ತು ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿತ್ತು.
ಪರಿಶಿಷ್ಟರಿಗಾಗಿ ಮಾಡಲಾಗುತ್ತಿರುವ ಕಲ್ಯಾಣ ಕಾರ್ಯಕ್ರಮವಾಗಿರುವುದರಿಂದ ಗುತ್ತಿಗೆಯನ್ನು ಕೂಡ ಪರಿಶಿಷ್ಟರಿಗೆ ಮೀಸಲಿಟ್ಟಿದ್ದರೆ ಚೆನ್ನಾಗಿತ್ತು.ಆದರೆ ಈ ಕಾಮಗಾರಿಯ ಗುತ್ತಿಗೆಯನ್ನು ಪರಿಶಿಷ್ಟ ಸಮುದಾಯದ ಗುತ್ತಿಗೆದಾರರಿಗೆ ಕೊಡದೆ ಸಾಮಾನ್ಯ ವರ್ಗದ ಗುತ್ತಿಗೆದಾರನಿಗೆ ಕೊಡಲಾಗಿತ್ತು ಎನ್ನುವ ಮಾತುಗಳಿವೆ. ಪರಿಶಿಷ್ಟ ಸಮುದಾಯದವರು ಹೆಚ್ಚಾಗಿರುವ ಗೌತಮ್ ನಗರ ಸ್ಲಂ ನಲ್ಲಿ ರಸ್ತೆ, ಚರಂಡಿ, ನೀರು, ಮೂಲಭೂತ ಸೌಕರ್ಯ ಕಲ್ಪಿಸಬೇಕಿದ್ದರೂ ಅತ್ಯಂತ ಕಳಪೆ ಮಟ್ಟದ ಕೆಲಸ ಮಾಡಲಾಗಿದೆ ಎನ್ನುವ ಆರೋಪ ಸ್ಥಳೀಯರಿಂದಲೇ ಕೇಳಿಬಂದಿದೆ.


046-25-000002 ಜಾಬ್ ಕೋಡ್ ಸಂಖ್ಯೆಯ ಕಾಮಗಾರಿಯಲ್ಲಿ( ಭಾಗ್ಯಜ್ಯೋತಿ,ಸೂರು,/ನೀರು ಯೋಜನೆ ಮತ್ತು ಇತರೆ)ರಸ್ತೆ, ಚರಂಡಿ ಮತ್ತು ಇತರೆ ಕೆಲಸಗಳನ್ನು ಮಾಡಬೇಕಿತ್ತು.ಈ ಕಾಮಗಾರಿಯ ಟೆಂಡರ್ ಕೂಡ ಸರಿಯಾಗಿ ನಡೆದಿಲ್ಲ ಎನ್ನುವ ಮಾತುಗಳಿವೆ.ಕ್ಷೇತ್ರದ ಇಇ ಹೇಮಂತ್ ಅವರು ಎಸ್ ಸಿ ಎಸ್ಟಿ ಗುತ್ತಿಗೆದಾರರಿಗೆ ಕಾಮಗಾರಿ ನೀಡದೆ ಅನ್ಯರಿಗೆ ಗುತ್ತಿಗೆ ಸಿಗುವಂತೆ ಮಾಡಿದ್ದರಂತೆ.ಇದಕ್ಕೆ ಋಣಸಂದಾಯ ಕೂಡ ಅವರಿಗಾಗಿದೆ ಎನ್ನುವ ಮಾತುಗಳಿವೆ.ಅದೇನೇ ಇರಲಿ, ಕಾಮಗಾರಿಯನ್ನಾದ್ರೂ ಸರಿಯಾಗಿ ಮಾಡಿದ್ದರಾ..? ಅದರ ಗುಣಮಟ್ಟ ಪರಿಶೀಲಿಸಲಾಗಿದೆಯೇ..? ಎಂದ್ರೆ ಇಲ್ಲ ಎನ್ನಲಾಗುತ್ತಿದೆ.ಗುತ್ತಿಗೆದಾರ ಮಾಡಿದ್ದೇ ಕಾಮಗಾರಿ ಎನ್ನುವಂತೆ ಅವಸರವಸರಾಗಿ ಬಿಲ್ ಮಾಡಲಾಗಿದೆ.ಕಾಮಗಾರಿ ಪೂರ್ಣಗೊಳ್ಳುವ ಮೊದಲೆ ಆತನ ಖಾತೆಗೆ ಆರ್ ಟಿಜಿಎಸ್ ಮಾಡಲಾಗಿದೆ ಎನ್ನುವ ಆಪಾದನೆ ಕೇಳಿಬಂದಿದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಸಮುದಾಯ ಭವನ ನಿರ್ಮಿಸಲು ಪಿಲ್ಲರ್ ಹಾಕಿದ್ರೂ ಅಲ್ಲಿ ಅದು ನಿರ್ಮಾಣವಾಗಿಯೇ ಇಲ್ಲ.ಹಾಗಾದರೆ ಅದಕ್ಕೆ ಮೀಸಲಾದ ಹಣ ಎಲ್ಲೋಯ್ತು ಎಂದು ಕೇಳಿದ್ರೆ ಅದಕ್ಕೆ ಅಪರಾತಪರ ಉತ್ತರ ನೀಡಲಾಗ್ತಿದೆ.ಇಇ ಹೇಮಂತ್ ಎಲ್ಲವು ಸರಿಯಾಗಿಯೇ ನಡೆದಿದೆ..ಅಕ್ರಮ ನಡೆಯುವ ಪ್ರಶ್ನೆಯೇ ಇಲ್ಲ ಎಂಬ ಉತ್ತರ ಕೊಡ್ತಾರೆ.ಜತೆಗೆ ಶಾಸಕ ಗೋಪಾಲಯ್ಯ ಅವರನ್ನೇ ಕೇಳಿ ಬೇಕಾದ್ರೆ ಎನ್ನುತ್ತಿದ್ದಾರಂತೆ.ಮಾದ್ಯಮಗಳು ಕೆ.ಗೋಪಾಲಯ್ಯ ಅವರನ್ನು ಕೇಳಿದ್ರೆ ಹೌದು..ಎಲ್ಲವೂ ಸರಿಯಾಗಿದೆ ಎಂದಿದ್ದಾರಂತೆ.ಅಲ್ಲಾ ಸಾರ್ ಸಮುದಾಯ ಭವನ ಎಲ್ಲಿ ಎಂದು ಕೇಳಿದ್ರೆ ಅದಕ್ಕೂ ಅವರಿಂದ ಸಮಂಜಸ ಉತ್ತರವಿಲ್ಲವಂತೆ. ಹಾಗಾಗಿನೇ ಕೆಲವು ಸಾಮಾಜಿಕ ಕಾರ್ಯಕರ್ತರು ಸಮುದಾಯ ಭವನ ಹುಡುಕಿಕೊಡಿ ಎಂದು ಬೆಂಗಳೂರು ನಗರ ಪಶ್ಚಿಮ ಕಾರ್ಪೊರೇಷನ್ ನ ಆಯುಕ್ತ ರಾಜೇಂದ್ರನ್ ಅವರಿಗೆ ಮನವಿ ಸಲ್ಲಿಸಲು ಸಿದ್ದವಾಗಿದ್ದಾರಂತೆ. ಹೇಮಂತ್ ಅವರು ಸಮುದಾಯ ಭವನ ತೋರಿಸುತ್ತೇನೆ ಎಂದಿದ್ದಾರಂತೆ.ಆದರೆ ಸ್ಥಳದಲ್ಲಿ ಇಲ್ಲದ ಸಮುದಾಯವ ಭವನವನ್ನು ಹೇಗೆ ದಿಡೀರ್ ನಿರ್ಮಾಣ ಮಾಡಿಸಿ ಮ್ಯಾಜಿಕ್ ತೋರಿಸ್ತಾರೋ ಗೊತ್ತಾಗ್ತಿಲ್ಲ.
ಕ್ಷೇತ್ರದ ಅಭಿವೃದ್ದಿ ವಿಷಯದಲ್ಲಿ ಯಾವತ್ತಿಗೂ ಕಾಂಪ್ರಮೈಸ್ ಆಗದ ಶಾಸಕ ಎನ್ನುವ ಖ್ಯಾತಿ ಹೊಂದಿರುವ ಕೆ.ಗೋಪಾಲಯ್ಯ ಅವರು ಪರಿಶಿಷ್ಟರ ಪ್ರದೇಶದಲ್ಲಿ ಅವರಿಗೆ ಸಿಗಬೇಕಿದ್ದ ಸಮುದಾಯ ಭವನ ನಿರ್ಮಿಸದಿರುವ ಬಗ್ಗೆ ಏಕೆ ಗುತ್ತಿಗೆದಾರ ಮತ್ತು ಬಿಲ್ ಪಾಸ್ ಮಾಡಿದ ಇಇ ಹೇಮಂತ್ ಕುಮಾರ್ ಅವರನ್ನು ಪ್ರಶ್ನೆ ಮಾಡಿ ಅವರ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲವೋ ಗೊತ್ತಾಗ್ತಿಲ್ಲ.ಅವರು ಕ್ಷೇತ್ರದಲ್ಲಿ ಉಳಿಸಿಕೊಂಡಿರುವ ಗೌರವದ ಸ್ಥಾನಮಾನಕ್ಕೆ ಹೇಮಂತ್ ಅವರಂಥ ಅಧಿಕಾರಿಗಳು ಕಳಂಕ ತರುವ ಕೆಲಸ ಮಾಡುತ್ತಿರುವ ಬಗ್ಗೆ ವ್ಯಾಪಕ ಆಪಾದನೆಗಳಿದ್ದರೂ ಏಕೆ ಅವರ ವಿರುದ್ಧ ಮೃಧುಧೋರಣೆ ತಳೆದಿದ್ದಾರೊ ಗೊತ್ತಾಗ್ತಿಲ್ಲ.ಇವರಿಂದ ಆಪತ್ತು ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳೋದು ಒಳ್ಳೇಯದೇನೋ ಎನ್ನಿಸುತ್ತೆ.