advertise here

Search

ಬಾಲಿವುಡ್ ನ ಖ್ಯಾತ ಹಾಸ್ಯನಟ  ಟಿಕು ತಲ್ಸಾನಿಯಾಗೆ ಹೃದಯಸ್ಥಂಭನ-ಸ್ಥಿತಿ ಗಂಭೀರ…


ಬಾಲಿವುಡ್ ಖ್ಯಾತ ಹಾಸ್ಯನಟ   ಟಿಕು ತಲ್ಸಾನಿಯಾ
ಬಾಲಿವುಡ್ ಖ್ಯಾತ ಹಾಸ್ಯನಟ   ಟಿಕು ತಲ್ಸಾನಿಯಾ

ನವದೆಹಲಿ: ಅಂದಾಜ್ ಅಪ್ನಾ ಅಪ್ನಾ..ದಿಲ್ ಹೈ ಕೆ ಮಂತಾ ನಹೀ, ಉಮರ್ 55 ಕಿ ದಿಲ್ ಬಚ್ಪನ್ ಕಾ, ಬೋಲ್ ರಾಧಾ ಬೋಲ್, ಅಂದಾಜ್ ಅಪ್ನಾ ಅಪ್ನಾ ಮತ್ತು ಮಿಸ್ಟರ್ ಬೆಚರಾ ,ವಕ್ತ್ ಹಮಾರಾ ಹೈ,ಇಷ್ಕ್, ಜೋಡಿ ನಂ.1 ಪಾರ್ಟ್ನರ್ ,ದೇವದಾಸ್ ನಂತ ಸೂಪರ್ ಹಿಟ್ ಚಿತ್ರಗಳಲ್ಲಿ ಕಾಮಿಡಿ ಪಾತ್ರದಿಂದ ಹಿಡಿದು ಗಂಭೀರ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ  70ರ ವಯಸ್ಸಿನ ಖ್ಯಾತ ನಟ  ಟಿಕು ತಲ್ಸಾನಿಯಾಗೆ ಭಾರಿ ಹೃದಯಾಘಾತವಾಗಿದೆ. ಜನವರಿ 10 ರ ಶುಕ್ರವಾರ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ .ಅವರ ಸ್ತಿತಿ  ಗಂಭೀರವಾಗಿದ್ದು,ಅವರನ್ನು  ಮುಂಬೈನ ಉಪನಗರ ಅಂಧೇರಿಯಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಿವುಡ್ ಖ್ಯಾತ ಹಾಸ್ಯನಟ   ಟಿಕು ತಲ್ಸಾನಿಯಾ
ಬಾಲಿವುಡ್ ಖ್ಯಾತ ಹಾಸ್ಯನಟ   ಟಿಕು ತಲ್ಸಾನಿಯಾ

ನಿನ್ನೆ ಅಂದರೆ ಶುಕ್ರವಾರ( ಜನವರಿ 10) ರಂದು  ಅಂಧೇರಿಯ ಪಿವಿಆರ್ ನಲ್ಲಿ ಗುಜರಾತಿ ಚಲನಚಿತ್ರವನ್ನು ವೀಕ್ಷಿಸುತ್ತಿದ್ದಾಗ ಅವರಿಗೆ ಅಸ್ವಸ್ಥತೆ ಉಂಟಾಯಿತು. ಪ್ರದರ್ಶನದ ಸಮಯದಲ್ಲಿ ಅವರು ತೀವ್ರವಾಗಿ ವಾಂತಿ ಮಾಡಲು ಪ್ರಾರಂಭಿಸಿದ ನಂತರ ಅವರ ಆರೋಗ್ಯವು ಹದಗೆಟ್ಟಿತು ಮತ್ತು ತಕ್ಷಣವೇ ಗಾಲಿಕುರ್ಚಿಯಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎನ್ನಲಾಗಿದೆ.

ಪ್ಯಾರ್ ಕೆ ದೋ ಪಾಲ್ ಚಿತ್ರದ ಮೂಲಕ ತಮ್ಮ  ವೃತ್ತಿಜೀವನ ಆರಂಭಿಸಿದ ತಲ್ಸಾನಿಯ,ಹೆಚ್ಚು ಪ್ರಸಿದ್ದಿ ಪಡೆದಿದ್ದು ಹಾಸ್ಯನಟನೆಯ ಮೂಲಕ.ಬಾಲಿವುಡ್ ಚಿತ್ರಗಳಿಂದ ಹಿಡಿದು ಅನೇಕ ಧಾರವಾಹಿಗಳಲ್ಲಿ ನಟಿಸಿ ಎಲ್ಲರ ಮನಸೂರೆಗೊಂಡಿದ್ದರು. ದಿಲ್ ಹೈ ಕೆ ಮಂತಾ ನಹೀ, ಉಮರ್ 55 ಕಿ ದಿಲ್ ಬಚ್ಪನ್ ಕಾ, ಬೋಲ್ ರಾಧಾ ಬೋಲ್, ಅಂದಾಜ್ ಅಪ್ನಾ ಅಪ್ನಾ ಮತ್ತು ಮಿಸ್ಟರ್ ಬೆಚರಾ ಚಿತ್ರಗಳಲ್ಲಿನ ಅವರ  ಹಾಸ್ಯನಟನ ಪಾತ್ರ ಇವತ್ತಿಗೂ ರಸದೌತಣ ನೀಡುವಂತಿದೆ. 1993 ರಲ್ಲಿ ತೆರೆ ಕಂಡು ಸೂಪರ್ ಹಿಟ್ ಆದ ಅಮೀರ್ ಖಾನ್,ಜೂಹಿ ಚಾವ್ಲಾ ನಟನೆಯ  ವಕ್ತ್ ಹಮಾರಾ ಹೈ ಚಿತ್ರದಲ್ಲಿನ ಪಾತ್ರ ತನ್ನಲ್ಲೊಬ್ಬ ಗಂಭೀರ ನಟನಿದ್ದಾನೆ ಎನ್ನುವುದನ್ನು ಪ್ರೂವ್ ಮಾಡಿತು.

ALSO READ :  ಪಿಯು ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರನ್ನೇ ದಾರಿ ತಪ್ಪಿಸುವ, ತಪ್ಪೆಸಗುವಂತೆ ಪ್ರಚೋದಿಸುವ ಹಿತಾಸಕ್ತಿಗಳಿವೆಯಾ?

1997 ರಲ್ಲಿ ತೆರೆ ಕಂಡ ಇಷ್ಕ್, 2001 ರಲ್ಲಿನ  ಜೋಡಿ ನಂ.1 ಮತ್ತು 2007 ರಲ್ಲಿ ಪಾರ್ಟ್ನರ್ ನಂತಹ  ಕಮರ್ಷಿಯಲ್ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡರು.ಅದರಲ್ಲೂ ಬಾಲಿವುಡ್ ಶೋ ಮ್ಯಾನ್  ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ತೆರೆ ಕಂಡು ಸೂಪರ್ ಡೂಪರ್ ಹಿಟ್ ಆದ  ದೇವದಾಸ್ ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದರು.

ಹಿರಿತೆರೆಯಲ್ಲಿ  ಮಾಡಿದ್ದಕ್ಕಿಂತ ಹೆಚ್ಚಿನ ಹೆಸರನ್ನು ಅವರು ಕಿರುತೆರೆಯಲ್ಲಿ ಮಾಡಿದ್ದು ವಿಶೇಷ. 1984 ರಲ್ಲಿ ಯೇ ಜೋ ಹೈ ಜಿಂದಗಿಯಿಂದ  ತಮ್ಮ ಕಿರುತೆರೆ ಜರ್ನಿ ಆರಂಭಿಸಿದ ಅವರು ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 1990 ರ ದಶಕದ ಜನಪ್ರಿಯ ಟಿವಿ  ಯೇ ದುನಿಯನ್ ಗಜಬ್ ಕಿ, ಜಮಾನಾ ಬಾದಲ್ ಗಯಾ ಮತ್ತು ಏಕ್ ಸೆ ಬಾದ್ ಕರ್ ಏಕ್,ಉತ್ತರನ್ ಸೇರಿದಂತೆ ಅನೇಕ ಯಶಸ್ವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸೋನಿ ಎಸ್ಎಬಿಯ ಸಿಟ್ಕಾಮ್ ಸಾಜನ್ ರೆ ಫಿರ್ ಜೂತ್ ಮ್ಯಾಟ್ ಬೋಲೋದಲ್ಲಿಯೂ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಟಿಕು ತಲ್ಸಾನಿಯ ಸ್ತಿತಿ ಸಧ್ಯ ಗಂಭೀರವಾಗಿದ್ದು ಅವರ ದೇಹಸ್ತಿತಿ ವೈದ್ಯರ ಚಿಕಿತ್ಸಗೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.ಈ ನಡುವೆ ಅವರ ಚೇತರಿಕೆಗೆ ಬಾಲಿವುಡ್ ಪ್ರಾರ್ಥನೆ ಮಾಡುತ್ತಿದೆ.


Political News

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Scroll to Top